ಬಾಲಕಿಗೆ ಲೈಂಗಿಕ ಕಿರುಕುಳ: ಆರೋಪಿ ಬಂಧನ

ಮಂಜೇಶ್ವರ: ಹನ್ನೊಂದರ ಹರೆಯದ ಬಾಲಕಿಗೆ  ಲೈಂಗಿಕ ಕಿರುಕುಳ ನೀಡಿದ ಆರೋಪದಂತೆ  ಆರೋಪಿಯನ್ನು  ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ.  ಬಂಟ್ವಾಳ ತಾಲೂಕು ಸಜಿಪಮೂಡು ಜಡಕೋಡಿ ಎಂಬಲ್ಲಿನ ಅಬ್ದುಲ್ ರಹಿಮಾನ್ (26) ಎಂಬಾತನನ್ನು ನಿನ್ನೆ ತಲಪ್ಪಾಡಿಯಿಂದ ಮಂಜೇಶ್ವರ ಸಿಐ ಜಿಜೀಶ್ ನೇತೃತ್ವದಲ್ಲಿ ಬಂಧಿಸಲಾಗಿದೆ.   ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ 11ರ ಹರೆಯದ ಬಾಲಕಿಗೆ ಕಳೆದ ಆದಿತ್ಯವಾರ ಅಬ್ದುಲ್ ರಹಿಮಾನ್ ಕಿರುಕುಳ ನೀಡಿರುವುದಾಗಿ ದೂರಲಾಗಿದೆ. ಇದರಂತೆ ಈತನ ವಿರುದ್ಧ ಪೊಲೀಸರು ಪೋಕ್ಸೋ ಕೇಸು ದಾಖಲಿಸಿಕೊಂಡಿದ್ದರು.

ಕಟ್ಟಡದ ಸ್ಲ್ಯಾಬ್ ಮೈಮೇಲೆ ಬಿದ್ದು ಸಾರಣೆ ಕಾರ್ಮಿಕ ಮೃತ್ಯು

ಉಪ್ಪಳ:  ಕಟ್ಟಡದ  ಸ್ಲ್ಯಾಬ್ ತುಂಡಾಗಿ ಮೈಮೇಲೆ ಬಿದ್ದು ಸಾರಣೆ ಕಾರ್ಮಿಕ ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ. ಮೀಂಜ ಪಂಚಾಯತ್ ವ್ಯಾಪ್ತಿಯ ಜೋಡುಕಲ್ಲು ನವೋದಯನಗರ ನಿವಾಸಿ  ಕೇಶವ ಎಂಬವರ ಪುತ್ರ ಶಂಕರ (25) ಮೃತಪಟ್ಟ ದುರ್ದೈವಿಯಾಗಿದ್ದಾರೆ. ನಿನ್ನೆ ಮಧ್ಯಾಹ್ನ ವೇಳೆ ಉಪ್ಪಳ ಮಣಿಮುಂಡದಲ್ಲಿ ದುರ್ಘಟನೆ ಸಂಭವಿಸಿದೆ. ಶಂಕರ ಕಟ್ಟಡಕ್ಕೆ ಸಾರಣೆ ನಡೆಸುತ್ತಿದ್ದಂತೆ ಸ್ಲ್ಯಾಬ್ ತುಂಡಾಗಿ ಅವರ ಮೈಮೇಲೆ ಬಿದ್ದಿದೆ.  ಇದರಿಂದ ಗಂಭೀರ ಗಾಯಗೊಂಡ ಇವರನ್ನು ಜೊತೆಗಿದ್ದವರು ಕೂಡಲೇ ಉಪ್ಪಳದ ಆಸ್ಪತ್ರೆಗೂ ಬಳಿಕ ದೇರಳಕಟ್ಟೆ ಆಸ್ಪತ್ರೆಗೆ ತಲುಪಿಸಿ ದಾಖಲಿಸಲಾಗಿತ್ತು. ಆದರೆ …

ಪ್ರಿಯತಮೆ ಉಪೇಕ್ಷಿಸಿದ ದುಃಖ: ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಕಲ್ಲೆಸೆತ: ಯುವಕ ಸೆರೆ

ಕೊಚ್ಚಿ: ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಕಲ್ಲೆಸೆತ ನಡೆಸಿದ 18ರ ಹರೆಯದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಮಾರ್ಚ್ 7ರಂದು ರಾತ್ರಿ ಈತ ಕಲ್ಲೆಸೆದಿದ್ದನು. ಘಟನೆಯ ಬಳಿಕ ಪೊಲೀಸರು ನಡೆಸಿದ ತನಿಖೆಯಲ್ಲಿ ಎರಡು ವಾರಗಳ ಬಳಿಕ ಆರೋಪಿಯನ್ನು ಸೆರೆ ಹಿಡಿಯಲಾಗಿದೆ. ತಿರುವನಂತಪುರ- ಮಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ವಿರುದ್ಧ ಕಲ್ಲೆಸೆತ ಉಂಟಾಯಿತು. ಆಲುವಾ ಹಾಗೂ ಅಂಗಮಾಲಿ ಮಧ್ಯೆ ನೆಡುಂಬಾಶೇರಿ ವಿಮಾನ ನಿಲ್ದಾಣಕ್ಕೆ ಸಮೀಪ ಕಲ್ಲೆಸೆತವುಂಟಾಗಿತ್ತು. ಇದರಿಂದ ರೈಲಿನ ಸಿ೯ ಕೋಚ್‌ನ ಕಿಟಕಿಯ ಲ್ಯಾಮಿನೇಟೆಡ್ ಗಾಜಿಗೆ ಹಾನಿ ಉಂಟಾಗಿತ್ತು. ಘಟನೆಯ …

ಪತ್ನಿಯ ನಿಧನದಿಂದ ಮನನೊಂದಿದ್ದ ಪತಿ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ಪತ್ನಿ ನಿಧನ ಹೊಂದಿದುದರಿಂದ ಮನನೊಂದಿದ್ದ ಪತಿ ಮನೆಯೊಳಗೆ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾ ಗಿದ್ದಾರೆ.  ಪನತ್ತಡಿ ಕೋಳಿಚ್ಚಾಲ್ ಪ್ರಾಂದರ್ಕಾವ್ ಒನಿಯನ್ ಹೌಸ್‌ನ ಸಜೀವನ್ (60) ಮೃತಪಟ್ಟ ವ್ಯಕ್ತಿ.  ಘಟನೆಗೆ ಸಂಬಂಧಿಸಿ ರಾಜಪುರಂ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಜೀವನ್‌ರ ಪತ್ನಿ ಬಿ.ವಿ. ಶೋಭನ (53) ಫೆ. 3ರಂದು ನಿಧನಹೊಂದಿದ್ದರು.  ಜನವರಿ 28ರಂದು ರಾತ್ರಿ ಮನೆಯಲ್ಲಿ ಇಲಿಯನ್ನು ಕೊಲ್ಲಲು ವಿಷವಿರಿಸುತ್ತಿದ್ದಾಗ  ಅಕಸ್ಮಾತ್ ಗ್ಲಾಸ್‌ಗೆ ಸ್ವಲ್ಪ ವಿಷ ಬಿದ್ದಿದ್ದು ಅದನ್ನು ತಿಳಿಯದೆ ಗ್ಲಾಸ್‌ನಲ್ಲಿದ್ದ ನೀರನ್ನು ಅವರು ಕುಡಿದಿದ್ದರು.  …

ಕೂತುಪರಂಬ: ಪೊಲೀಸ್ ಗುಪ್ತಚರ ವಿಭಾಗದ ಅಧಿಕಾರಿ ಮನೆಗೆ ಬಾಂಬೆಸೆತ

ಕಣ್ಣೂರು: ಪೊಲೀಸ್ ಗುಪ್ತಚರ ವಿಭಾಗದ ಅಧಿಕಾರಿಯ ಮನೆಗೆ ರಾತ್ರಿ ಮರೆಯಲ್ಲಿ ದುಷ್ಕರ್ಮಿಗಳು ಅತ್ಯುಘ್ರ ಸ್ಫೋಟ ಸಾಮರ್ಥ್ಯ ಹೊಂದಿದ್ದ ಸ್ಟೀಲ್ ಬಾಂಬ್ ಎಸೆದ ಘಟನೆ ನಿನ್ನೆ ರಾತ್ರಿ ಕೂತುಪರಂಬ ಬಳಿ ನಡೆದಿದೆ. ಕಣ್ಣೂರು ಕಣ್ಣವಂ ಪೊಲೀಸ್ ಠಾಣೆ  ಗುಪ್ತಚರ ವಿಭಾಗದ ಅಧಿಕಾರಿ ಯು.ಪಿ ಅರ್ಜುನ್‌ರ  ಕೂತುಪರಂಬ ಸಮೀಪದ ಚೆರುವಾಂಚೇರಿಯಲ್ಲಿರುವ ಮನೆಗೆ ನಿನ್ನೆ ರಾತ್ರಿ ಸುಮಾರು ೧೨.೪೫ರ ವೇಳೆಗೆ ದುಷ್ಕರ್ಮಿಗಳು ಬಾಂಬೆಸೆದಿದ್ದಾರೆ. ಆದರೆ ಅದೃಷ್ಟವಶಾತ್  ಬಾಂಬ್ ಸಿಡಿಯಲಿಲ್ಲ. ಇದರಿಂದಾಗಿ ಸಂಭಾವ್ಯ ಭಾರೀ ದೊಡ್ಡ ದುರಂತ ತಪ್ಪಿಹೋಗಿದೆ. ಬಾಂಬೆಸೆಯುವ ವೇಳೆ ಆ …

ಕಳತ್ತೂರಿನ ಮನೆಯಿಂದ ನಗ-ನಗದು ಕಳವು : ರಿಮಾಂಡ್‌ನಲ್ಲಿದ್ದ ಇಬ್ಬರು ಆರೋಪಿಗಳನ್ನು ಕಸ್ಟಡಿಗೆ ತೆಗೆದು ಸಮಗ್ರ ತನಿಖೆ

ಕುಂಬಳೆ:  ಕಳತ್ತೂರು ಪಂಜಿಕಲ್ಲಿನ ಯೂಸಫ್ ಎಂಬವರ ಮನೆಯಿಂದ ೯ ಪವನ್ ಚಿನ್ನಾಭರಣ ಹಾಗೂ  ಒಂದು ಲಕ್ಷರೂ. ಕಳವುಗೈದ ಪ್ರಕರಣದಲ್ಲಿ ಸೆರೆಗೀಡಾಗಿ ರಿಮಾಂ ಡ್‌ನಲ್ಲಿದ್ದ ಇಬ್ಬರು  ಆರೋಪಿಗಳನ್ನು ಕುಂಬಳೆ ಪೊಲೀಸರು ಒಂದು ದಿನಕ್ಕೆ ತಮ್ಮ ಕಸ್ಟಡಿಗೆ ತೆಗೆದುಕೊಂಡು ಸಮಗ್ರ ತನಿಖೆ ನಡೆಸುತ್ತಿದ್ದಾರೆ.  ಪಾಲಕ್ಕಾಡ್ ಚಿಟ್ಟೂರು ಆಯಿರೂರ್ ಕೊಳಕ್ಕೆಪರಂಬಿಲ್‌ನ ಜಲೀಲ್ ಯಾನೆ ಶಟರ್ ಜಲೀಲ್ (36), ಕಾಸರಗೋಡು ಆಲಂಪಾಡಿಯ  ಅಬ್ದುಲ್ ಲತೀಫ್ (46) ಎಂಬಿವರನ್ನು ಪೊಲೀಸರು ಕಸ್ಟಡಿಗೆ ತೆಗೆದು ತನಿಖೆಗೊಳಪಡಿಸುತ್ತಿದ್ದಾರೆ. ಇತ್ತೀಚೆಗೆ  ಈ ಇಬ್ಬರು ಆರೋಪಿಗಳನ್ನು  ಬೇಕಲ ಡಿವೈಎಸ್ಪಿ ಎಂ.ಪಿ. …

ಅಪಾಯಕಾರಿಯಾಗಿ ಬದಲಾದ ಮೀಪುಗುರಿ ಜಂಕ್ಷನ್: ಕಾರು-ಆಟೋ ರಿಕ್ಷಾ ಢಿಕ್ಕಿ; ಪ್ರಯಾಣಿಕರು ಅದೃಷ್ಟವಶಾತ್ ಪಾರು

ಕಾಸರಗೋಡು: ಕಾಸರಗೋಡು-ಮಧೂರು ರಸ್ತೆಯಲ್ಲಿ ೨ಮೀಪುಗುರಿ ಅಪಾಯಕಾರಿ ಪ್ರದೇಶವಾಗಿ ಬದಲಾಗಿದೆ.  ಇಲ್ಲಿ ಪದೇ ಪದೇ ವಾಹನಗಳು ಅಪಘಾತಕ್ಕೀಡಾಗುತ್ತಿರುವುದಾಗಿ ಸ್ಥಳೀಯರು ತಿಳಿಸುತ್ತಿದ್ದಾರೆ. ನಿನ್ನೆ ಸಂಜೆ   ಜಿಲ್ಲಾ ಪೊಲೀಸ್ ಕೇಂದ್ರಕ್ಕೆ ತಿರುಗುವ ರಸ್ತೆಯಲ್ಲಿ ಕಾರು ಹಾಗೂ ಆಟೋ ರಿಕ್ಷಾ ಢಿಕ್ಕಿ ಹೊಡೆದು ಎರಡು ವಾಹನಗಳು  ಹಾನಿಗೀಡಾಗಿವೆ. ಅದೃಷ್ಟವಶಾತ್  ಆ ವಾಹನಗಳಲ್ಲಿದ್ದ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಕಾಸರಗೋಡು-ಮಧೂರು ರಸ್ತೆ  ಇಕ್ಕಟ್ಟಾಗಿದ್ದರೂ ಇದರಲ್ಲಿ   ವಾಹನಗಳು ಅಪರಿಮಿತ ವೇಗದಲ್ಲಿ ಸಂಚರಿಸುತ್ತಿರುವುದೇ ಅಪಘಾತಗಳಿಗೆ ಕಾರಣವಾಗುತ್ತಿದೆ. ಇದರಿಂದ ಪಾರಕಟ್ಟೆ ರಸ್ತೆಯಲ್ಲಿ ಬರುವ ವಾಹನಗಳು  ಮೂರು ರಸ್ತೆಗಳು …

ಎಂಡಿಎಂಎ ಪ್ರಕರಣದ ಆರೋಪಿಗೆ ಕಠಿಣ ಸಜೆ, ಜುಲ್ಮಾನೆ

ಕಾಸರಗೋಡು: ಎಂಡಿಎಂಎ ಪ್ರಕರಣದ ಆರೋಪಿಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (ದ್ವಿತೀಯ)ದ ನ್ಯಾಯಾಧೀಶರಾದ ರಾಮು ರಮೇಶ್ ಚಂದ್ರಭಾನು ಅವರು ಎರಡು ವರ್ಷ ಕಠಿಣ ಸಜೆ ಹಾಗೂ 20,000 ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ. ಉಪ್ಪಳ ಮಣಿಮುಂಡ ಬದರ್ ಮಂಜಿಲ್‌ನ ಶಮೀರ್ (41) ಎಂಬಾತನಿಗೆ ಈ ಶಿಕ್ಷೆ ವಿಧಿಸಲಾಗಿದೆ. ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿ ಎರಡು ತಿಂಗಳು ಹೆಚ್ಚುವರಿ ಸಜೆ ಅನುಭವಿಸಬೇಕಾಗಿದೆ ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ. ಉಪ್ಪಳ ಪೇಟೆಯಲ್ಲಿ 2021 ಆಗಸ್ಟ್‌ನಲ್ಲಿ ಅಂದು ಪೊಲೀಸ್ ಠಾಣೆಯ ಎಸ್‌ಐ …

ಜಿಲ್ಲೆಯ 5 ಮಂಡಲಗಳಲ್ಲೂ ಅಭ್ಯರ್ಥಿಗಳ ಚಿತ್ರ ಸ್ಪಷ್ಟ: ಇನ್ನು ಹೋರಾಟದ ದಿನಗಳು

ಕಾಸರಗೋಡು: ಉದುಮ, ತೃಕರಿಪುರ ವಿಧಾನಸಭಾ ಮಂಡಲಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಆಯ್ಕೆ ಮಾಡಿರುವುದರೊಂದಿಗೆ ಜಿಲ್ಲೆಯ ಅಭ್ಯರ್ಥಿಗಳ ಸ್ಪಷ್ಟ ಚಿತ್ರಣ ಲಭಿಸಿದೆ. ಮಂಜೇಶ್ವರದಲ್ಲಿ ಎನ್‌ಡಿಎ ಅಭ್ಯರ್ಥಿಯಾಗಿ ಕೆ. ಸುರೇಂದ್ರನ್, ಯುಡಿಎಫ್ ಅಭ್ಯರ್ಥಿಯಾಗಿ ಮುಸ್ಲಿಂ ಲೀಗ್‌ನ ಎಕೆಎಂ ಅಶ್ರಫ್, ಎಡರಂಗ ಅಭ್ಯರ್ಥಿಯಾಗಿ ಕೆ.ಆರ್. ಜಯಾನಂದ ಈಗಾಗಲೇ ರಂಗಕ್ಕಿಳಿದಿದ್ದಾರೆ. ಕಾಸರಗೋಡು ವಿಧಾನಸಭಾ ಮಂಡಲದಲ್ಲಿ ಅನಿಶ್ಚಿತತೆಯ ಕೊನೆಯಲ್ಲಿ ಲೀಗ್ ಅಭ್ಯರ್ಥಿಯಾಗಿ ಜಿಲ್ಲಾಧ್ಯಕ್ಷ ಕಲ್ಲಟ್ರ ಮಾಹಿನ್ ಹಾಜಿಯನ್ನು ಆಯ್ಕೆ ಮಾಡಲಾಗಿದೆ. ಆದರೆ ಬಿಜೆಪಿ, ಎಡರಂಗದ ಅಭ್ಯರ್ಥಿಗಳನ್ನು ಇನ್ನಷ್ಟೇ ಘೋಷಿಸಬೇಕಾಗಿದೆ. ಉದುಮದಲ್ಲಿ ಎಡರಂಗದ ಅಭ್ಯರ್ಥಿ ಸಿ.ಎಚ್. ಕುಂಞಂಬು …

ಮಂಜೇಶ್ವರ ಮಂಡಲದಲ್ಲಿ ಬಿಜೆಪಿ ಚುನಾವಣಾ ಪ್ರಚಾರ ಬಿರುಸು ಕುಂಬಳೆ ಭಾಸ್ಕರನಗರದಲ್ಲಿ ಕೆ.ಸುರೇಂದ್ರನ್‌ರಿಗೆ ಅದ್ದೂರಿಯ ಸ್ವಾಗತ

ಕುಂಬಳೆ: ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ. ಸುರೇಂದ್ರನ್‌ರ  ಚುನಾವಣಾ ಪ್ರಚಾರ ಕಾರ್ಯ ಬಿರುಸುಗೊಂಡಿದೆ. ಕುಂಬಳೆ ಭಾಸ್ಕರ ನಗರದಲ್ಲಿ ನಿನ್ನೆ ನಡೆದ ಸ್ವಾಗತ ಕಾರ್ಯಕ್ರಮದಲ್ಲಿ ಮಾತನಾಡಿದ ಕೆ. ಸುರೇಂದ್ರನ್ ಕಾಸರಗೋಡು ಹಾಗೂ ಮಂಜೇಶ್ವರ ಮಂಡಲಗಳು ಎದುರಿಸುತ್ತಿರುವ ಅಭಿವೃದ್ಧಿ ಕುಂಠಿತವನ್ನು  ಮತದಾರರಿಗೆ ತಿಳಿಸಿದರು. ರಾಜ್ಯ ರೂಪೀಕರಿಸಿ 70 ವರ್ಷ ಕಳೆದರೂ  ಈ ಎರಡು ಮಂಡಲಗಳು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿ ರುವುದಾಗಿ ಅವರು ಆರೋಪಿಸಿದರು. ರಸ್ತೆ, ರೈಲು ಸಾರಿಗೆ ವಲಯದಲ್ಲಿ ನಡೆದಿರುವ ಅಭಿವೃದ್ಧಿ ಕೇಂದ್ರದಲ್ಲಿ ಆಡಳಿತ ನಡೆಸುವ ನರೇಂದ್ರ …