ನಾಪತ್ತೆಯಾದ ಬಳಿಕ ಹೊಳೆಯಲ್ಲಿ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾದ ಬಿಎಲ್‌ಒ ಮೃತ್ಯು

ಕಾಸರಗೋಡು: ಇಂದು ಬೆಳಿಗ್ಗೆ ಮನೆಯಿಂದ ನಾಪತ್ತೆಯಾಗಿ ಬಳಿಕ  ಮೊಗ್ರಾಲ್ ಕಡವತ್ ಹೊಳೆಯಲ್ಲಿ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾದ ಬಿಎಲ್‌ಒ (ಬೂತ್ ಲೆವೆಲ್ ಆಫೀಸರ್) ಮೃತಪಟ್ಟ ಘಟನೆ ನಡೆದಿದೆ. ಮೊಗ್ರಾಲ್ ಪುತ್ತೂರು ನಿವಾಸಿ ಶಾಫಿ ಎಂಬವರ ಪುತ್ರನೂ ,   ಚೆರ್ಕಳ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಅಧ್ಯಾಪಕನಾದ ಸವಾದ್ (32) ಎಂಬವರು ಮೃತಪಟ್ಟ ವ್ಯಕ್ತಿ.  ಇವರು ಮೊಗ್ರಾಲ್ ಪುತ್ತೂರು ಒಂದನೇ ಬೂತ್‌ನ ಬಿಎಲ್‌ಒ ಆಗಿದ್ದರು. ಇಂದು ಬೆಳಿಗ್ಗೆ 7 ಗಂಟೆಗೆ ಸವಾದ್ ಮನೆಯಿಂದ ನಾಪತ್ತೆಯಾಗಿ ದ್ದರು. ಬಳಿಕ ಮನೆಯವರು ಹಾಗೂ …

ಯುವಕ ಮನೆಯೊಳಗೆ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಮಂಜೇಶ್ವರ: ಯುವಕನೋರ್ವ ಮನೆಯೊಳಗೆ ನೇಣುಬಿಗಿದು ಸಾವಿಗೀ ಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಮಂಜೇಶ್ವರ ನ್ಯೂಮಜಲ್ ನಿವಾಸಿ ಉದ್ಯಾವರ ಮಾಡದಲ್ಲಿ ವ್ಯಾಪಾರಿಯಾಗಿರುವ ಮುಹಮ್ಮದ್ ಅಶ್ರಫ್‌ರ ಪುತ್ರ ಮುಹಮ್ಮದ್ ತಾಹ (22) ಮೃತಪಟ್ಟ ಯುವಕನಾಗಿದ್ದಾನೆ. ನಿನ್ನೆ ರಾತ್ರಿ 9.45ರ ವೇಳೆ ಈತ ಮನೆಯೊಳಗೆ ಬೆಡ್‌ರೂಂನಲ್ಲಿ ಫ್ಯಾನ್‌ಗೆ ನೇಣು ಬಿಗಿದು ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದನು. ಕೂಡಲೇ ಮಂಗಲ್ಪಾಡಿಯ ಆಸ್ಪತ್ರೆಗೆ ಈತನನ್ನು ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ.  ನಿನ್ನೆ ಸಂಜೆ ತಂದೆ ಪೇಟೆಗೆ, ತಾಯಿ ಹಾಗೂ ಸಹೋದರಿಯರು ಉದ್ಯಾವರ ಮಾಡದಲ್ಲಿರುವ ಸಂಬಂಧಿಕರ ಮನೆಗೆ ತೆರಳಿದ್ದರು. ಈ …

ಬಸ್ ಕಂಡಕ್ಟರ್ ನಿಧನ

ಉಪ್ಪಳ: ಅಸೌಖ್ಯ ಬಾಧಿಸಿ ಮನೆಯಲ್ಲಿ ಚಿಕಿತ್ಸೆಯಲ್ಲಿದ್ದ ಬಸ್ ಕಂಡಕ್ಟರ್ ಮೃತಪಟ್ಟರು.  ವರ್ಕಾಡಿ ಧರ್ಮನಗರ ನಿವಾಸಿ  ಬಾಬು ಪೂಜಾರಿ-ದಿ| ಕೃಷ್ಣಮ್ಮ ದಂಪತಿಯ  ಪುತ್ರ ಸುಕುಮಾರ (51) ಮೃತಪಟ್ಟ ವ್ಯಕ್ತಿಯಾಗಿದ್ದಾರೆ.  ಇವರು ತಲಪ್ಪಾಡಿ-ಆನೆಕಲ್ಲು, ಉಪ್ಪಳ-ಕನ್ಯಾನ-ಬಾಯಾರು ರೂಟ್‌ನಲ್ಲಿ ಸಂಚರಿಸುವ  ದುರ್ಗಾಪ್ರಸಾದ್ ಬಸ್‌ನಲ್ಲಿ ಹಲವು ವರ್ಷಗಳಿಂದ ಕಂಡಕ್ಟರ್ ಆಗಿದ್ದರು. ಇತ್ತೀಚೆಗಿನಿಂದ ಇವರಿಗೆ ಅಸೌಖ್ಯ ಬಾಧಿಸಿದ್ದು, ಇದರಿಂದ ಮನೆಯಲ್ಲಿ  ಚಿಕಿತ್ಸೆಯಲ್ಲಿದ್ದರು. ನಿನ್ನೆ ರಾತ್ರಿ ನಿಧನ ಸಂಭವಿಸಿದೆ. ಮೃತರು ಪತ್ನಿ ಯಶೋಧ, ಪುತ್ರಿ ಶಾನ್ವಿ, ಸಹೋದರಿಯರಾದ ಸುಜಾತ, ಅನಿತ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ನಿಧನಕ್ಕೆ …

ಗೃಹಪ್ರವೇಶದ ಗಂಟೆಗಳ ಮುಂಚೆ ಹೃದಯಾಘಾತದಿಂದ ಮನೆಯೊಡೆಯ ನಿಧನ

ಪುತ್ತಿಗೆ:  ನೂತನ ಮನೆಯ ಗೃಹ ಪ್ರವೇಶಕ್ಕೆ ಕೆಲವೇ ಗಂಟೆಗಳ ಮುಂಚೆ   ಮನೆಯೊಡೆಯ ಹೃದಯಾಘಾತ ದಿಂದ ಮೃತಪಟ್ಟ ಘಟನೆ ನಡೆದಿದೆ.  ಮುಗು ಉರ್ಮಿ ಜುಮಾ ಮಸೀದಿ ಸಮೀಪದ ದಿ|  ಕುಂಞಿಮಾಹಿನ್ ಕುಟ್ಟಿ-ಬೀಫಾತಿಮ ದಂಪತಿಯ ಪುತ್ರ ಮುಹಮ್ಮದ್ ಯಾನೆ ಮೋಣು (50) ಮೃತಪಟ್ಟ ವ್ಯಕ್ತಿ.  ಇವರು ಎgಡು ವಾರಗಳ ಹಿಂದೆ ಗಲ್ಫ್‌ನಿಂದ ಮನೆಗೆ ಆಗಮಿಸಿದ್ದರು. ಮುಗುವಿನಲ್ಲಿ ನಿರ್ಮಿಸಿದ ಹೊಸ ಮನೆಯ ಗೃಹಪ್ರವೇಶ ಕಾರ್ಯಕ್ರಮ ನಿನ್ನೆ ಬೆಳಿಗ್ಗೆ ನಡೆಸಲು ತೀರ್ಮಾನಿಸಲಾ ಗಿತ್ತು.  ಈ ಹಿನ್ನೆಲೆಯಲ್ಲಿ ಸ್ವಂತ ಮನೆಯಲ್ಲಿದ್ದ ಪತ್ನಿಯನ್ನು ಕರೆದುಕೊಂಡು ನಿನ್ನೆ …

ಕಾರು -ಬೈಕ್ ಢಿಕ್ಕಿ: ಹೆದ್ದಾರಿಯಿಂದ ಸರ್ವೀಸ್ ರಸ್ತೆಗೆ ಬಿದ್ದು ಗಾಯಗೊಂಡ ವಿದ್ಯಾರ್ಥಿ ಮೃತ್ಯು

ಕಾಸರಗೋಡು: ರಾಷ್ಟ್ರೀಯ ಹೆದ್ದಾರಿಯ ಚಟ್ಟಂಚಾಲ್ ಮೇಲ್ಸೇತುವೆಯಲ್ಲಿ ಬೈಕ್‌ಗೆ ಕಾರು ಢಿಕ್ಕಿ ಹೊಡೆದ ಪರಿಣಾಮ ಸರ್ವೀಸ್ ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡು ಚಿಕಿತ್ಸೆಯಲ್ಲಿದ್ದ ವಿದ್ಯಾರ್ಥಿ ಮೃತಪಟ್ಟನು. ವಿದ್ಯಾನಗರ ಉದಯಗಿರಿ ನಿವಾಸಿ ಬಿ. ದಿನೇಶ-ರತ್ನಾವತಿ ದಂಪತಿಯ ಏಕ ಪುತ್ರ, ಪೆರಿಯ ಸರಕಾರಿ ಪಾಲಿಟೆಕ್ನಿಕ್‌ನ ತೃತೀಯ ವರ್ಷ ಕಂಪ್ಯೂಟರ್ ವಿದ್ಯಾರ್ಥಿ ರಕ್ಷಿತ್ ಎನ್ (19) ಸಾವನ್ನಪ್ಪಿದ ದುರ್ದೈವಿ. ಕಳೆದ ಗುರುವಾರ ಸಂಜೆ  ಅಪಘಾತ ಸಂಭವಿಸಿದೆ.  ಸಹಪಾಠಿ ಕಾಸರಗೋಡು ಕೊಲ್ಲಂಪಾಡಿ ಬೈತುಲ್ ಸಯ್ಯಿದ್ ಹೌಸ್‌ನ ಕೆ.ಎ. ಸೈದ್ (19) ಬೈಕ್  ಚಲಾಯಿಸುತ್ತಿದ್ದನು.  ರಕ್ಷಿತ್  …

ಕಾಸರಗೋಡಿನಲ್ಲಿ ಎಲ್‌ಡಿಎಫ್ ಅಭ್ಯರ್ಥಿ ಇಂದು ಘೋಷಣೆ: ಬಿಜೆಪಿ, ಮುಸ್ಲಿಂ ಲೀಗ್ ಅಭ್ಯರ್ಥಿಗಳಿಂದ ಪ್ರಚಾರ ಸಕ್ರಿಯ

ಕಾಸರಗೋಡು: ಕಾಸರಗೋಡು ವಿಧಾನಭಾ ಕ್ಷೇತ್ರದಲ್ಲಿ ಎಡರಂಗ ಅಭ್ಯರ್ಥಿಯಾಗಿ ಜಿಲ್ಲಾ ಪಂಚಾಯತ್‌ನ ಮಾಜಿ ಉಪಾಧ್ಯಕ್ಷ ಶಾನವಾಸ್ ಪಾದೂರು ಅವರನ್ನು ಕಣಕ್ಕಿಳಿಸಲು ತೀರ್ಮಾನಿಸಲಾಗಿದೆ.  ಇವರ ಹೆಸರನ್ನು ಎಡರಂಗ ಇಂದು ವಿದ್ಯುಕ್ತವಾಗಿ ಪ್ರಕಟಿಸಲಿದೆ. ಕಾಸರಗೋಡು ವಿಧಾನಸಭಾ ಕ್ಷೇತ್ರವನ್ನು  ಎಡರಂಗದ ಘಟಕ ಪಕ್ಷವಾದ ಐಎನ್‌ಎಲ್‌ಗೆ ಬಿಟ್ಟು ಕೊಟ್ಟಿದ್ದರೂ    ಇಲ್ಲಿ ಐಎನ್‌ಎಲ್ ಸ್ಪರ್ಧಿಸದೇ ಇರಲು ತೀರ್ಮಾನಿಸಿದ ಹಿನ್ನೆಲೆಯಲ್ಲಿ   ಶಾನವಾಸ್ ಪಾದೂರುರನ್ನು ಕಣಕ್ಕಿಳಿಸಲು  ಸಿಪಿಎಂ ಮುಂದಾಗಿದೆ. ಶಾನವಾಸ್ ಪಾದೂರು ಬೇವಿಂಜೆ ಸಮೀಪದ ಪಾದೂರು ನಿವಾಸಿಯಾಗಿದ್ದಾರೆ. ಆ ಮೂಲಕ ಕಾಸರಗೋಡು ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಎಡರಂಗ, …

ಗಡಿನಾಡಿನ ವಿವಿಧ ಕಡೆ ಸಂಭ್ರಮದ ಈದುಲ್ ಫಿತೃ ಆಚರಣೆ

ಕಾಸರಗೋಡು: ರಂಜಾನ್ ಎಂಬ ತರಬೇತಿ ಕಳರಿಯಲ್ಲಿ ಗಳಿಸಿಕೊಂಡ ಆತ್ಮಸಂಸ್ಕಾರದ, ಸಹನೆಯ ಸಂದೇಶವನ್ನು ಪಾಲಿಸಿಕೊಂಡು ಜೀವನವನ್ನು ಕ್ರಮಪಡಿಸಲು ಎಲ್ಲರೂ ಸಿದ್ಧರಾಗಬೇಕೆಂದು, ಸಾಹೋದರ್ಯದ ಹಾಗೂ ಮಾನವಿಕತೆಯ ಮೌಲ್ಯಗಳನ್ನು ಜೀವನದ ಉದ್ದಕ್ಕೂ ಎತ್ತಿ ಹಿಡಿಯಬೇಕೆಂದು ಆಫಿದ್ ಕೆ.ಟಿ. ಸಿರಾಜ್ ಆಹ್ವಾನ ನೀಡಿದರು. ವಿಸ್ಡಂ ದ ಅಹ್ವ ಸೆಂಟರ್ ಆಯೋಜಿಸಿದ ಕಾಸರಗೋಡು ಟೌನ್ ಈದ್ಗಾಹ್‌ನಲ್ಲಿ ಈದುಲ್ ಫಿತೃ ಖುತ್ಬಾ ನಿರ್ವಹಿಸಿ ಅವರು ಮಾತನಾಡಿದರು. ಜಿಲ್ಲೆಯ ವಿವಿಧ ಕಡೆಗಳಲ್ಲಿ ಈದ್ಗಾಹ್‌ಗಳನ್ನು ಆಯೋಜಿಸಲಾಯಿತು. ಉಪ್ಪಳ ಪ್ಲೇಆಫ್ ಟರ್ಫ್‌ನಲ್ಲಿ ನಡೆದ ಈದ್ಗಾಹ್‌ಗೆ ಅಸ್ಬಕ್ ಅಲ್ ಹಿಕಮಿ ನೇತೃತ್ವ …

ಪೈವಳಿಕೆಯಲ್ಲಿ ಕೆ. ಸುರೇಂದ್ರನ್‌ರಿಂದ ರೋಡ್‌ಶೋ

ಉಪ್ಪಳ: ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಸುರೇಂದ್ರನ್‌ರ ಚುನಾವಣಾ ಪ್ರಚಾರಾರ್ಥವಾಗಿ ರೋಡ್ ಶೋ ನಿನ್ನೆ ಸಂಜೆ ನಡೆಯಿತು. ಬಾಯಿಕಟ್ಟೆಯಿಂದ ಆರಂಭಗೊAಡು ಪೈವಳಿಕೆ ನಗರದಲ್ಲಿ ಸಮಾಪ್ತಿಗೊಂಡಿತು. ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಭರತ್ ಶೆಟ್ಟಿ, ದಕ್ಷಿಣ ಕನ್ನಡ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ, ಜಿಲ್ಲಾಧ್ಯಕ್ಷೆ ಅಶ್ವಿನಿ ಎಂ.ಎಲ್, ಅಭ್ಯರ್ಥಿ ಕೆ.ಸುರೇಂದ್ರನ್, ಬಿಜೆಪಿ ರಾಜ್ಯ ಸಮಿತಿ ಸದಸ್ಯರಾದ ವಿ.ರವೀಂದ್ರನ್, ಸುರೇಶ್ ಕುಮಾರ್ …

ಯುಡಿಎಫ್ ಅಭ್ಯರ್ಥಿ ಎಕೆಎಂ ಅಶ್ರಫ್‌ರಿಂದ ಪರ್ಯಟನೆ ಆರಂಭ

ಉಪ್ಪಳ: ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಕೆಲವೇ ದಿನಗಳು ಬಾಕಿ ಉಳಿದಿರುವಂತೆ ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಎಡರಂಗದ ಕೆ.ಆರ್ ಜಯಾನಂದ, ಬಿಜೆಪಿಯ ಕೆ.ಸುರೇಂದ್ರನ್, ಯುಡಿಎಫ್ ಅಭ್ಯರ್ಥಿ ಎ.ಕೆ.ಎಂ ಅಶ್ರಫ್ ಸ್ಪರ್ಧಾಕಣದಲ್ಲಿದ್ದಾರೆ. ಈಗಾಗಲೇ ಎಡರಂಗ, ಬಿಜೆಪಿ ಪಕ್ಷಗಳ ಪ್ರಚಾರ ಕಾರ್ಯಗಳು ಭರದಿಂದ ನಡೆಯುತ್ತಿರುವಂತೆ ಯು.ಡಿ.ಎಫ್ ಅಭ್ಯರ್ಥಿ ಎ.ಕೆ.ಎಂ ಅಶ್ರಫ್‌ರವರ ಪರ್ಯಟನೆ ಆರಂಭಗೊAಡಿತು. ಮಜೀರ್ಪಳ್ಳದಿಂದ ಆರಂಭಗೊAಡು ಸೀತಾಂಗೋಳಿ, ಪೆರ್ಲ ಮೊದಲಾದ ಕಡೆಗಳಲ್ಲಿ ಸಾಗಿ ಹೊಸಂಗಡಿಯಲ್ಲಿ ಸಮಾಪ್ತಿಗೊಂಡಿತು. ನೇತಾರರು, ಕಾರ್ಯಕರ್ತರು ಪಾಲ್ಗೊಂಡರು.

ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನ ಬ್ರಹ್ಮಕಲಶೋತ್ಸವಕ್ಕೆ ಎಡನೀರು ಶ್ರೀಗಳಿಂದ ಚಪ್ಪರ ಮುಹೂರ್ತ

ಬದಿಯಡ್ಕ: ದೇವಾಲಯಗಳ ರೀತಿ ರಿವಾಜುಗಳನ್ನು ಕಾಪಾಡಿಕೊಂಡು ಬರುವುದು ನಮ್ಮ ಆದ್ಯ ಕರ್ತವ್ಯ. ವ್ಯವಸ್ಥೆಗೆ ಧಕ್ಕೆಯಾಗದಂತೆ ನಡೆದುಕೊಳ್ಳಬೇಕು. ಉದನೇಶ್ವರನ ಅನುಗ್ರಹದಿಂದ ಪೆರಡಾಲ ಕ್ಷೇತ್ರವು ಜೀರ್ಣೋದ್ಧಾರಗೊಂಡು ಬ್ರಹ್ಮಕಲ ಶೋತ್ಸವಕ್ಕೆ ಅಣಿಯಾಗಿದೆ ಎಂದು ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ನುಡಿದರು. ಕ್ಷೇತ್ರದಲ್ಲಿ ನಡೆದ ಚಪ್ಪರ ಮುಹೂರ್ತ ನೆರವೇರಿಸಿ ಅವರು ಆಶೀರ್ವಚನ ನೀಡಿದರು. ನೂತನ ಪರಾಭವ ಸಂವತ್ಸರ ಆರಂಭವಾಗಿದ್ದು, ಈ ಹಿನ್ನೆಲೆಯಲ್ಲಿ ಧರ್ಮಕ್ಕೆ ವಿರುದ್ಧವಾಗಿರುವ ಶಕ್ತಿಗಳಿಗೆ ಪರಾಭವ ಉಂಟಾಗಲಿ ಎಂದು ಅವರು ನುಡಿದರು. ಪ್ರಧಾನ ಅರ್ಚಕ ವೇ| ಮೂ| ಶಿವರಾಮ ಭಟ್ …