ಎಡರಂಗದಿಂದ ಹೊಸಂಗಡಿಯಲ್ಲಿ ಪ್ರತಿಭಟನೆ

ಮಂಜೇಶ್ವರ: ಕೇಂದ್ರ ಸರಕಾರದ ತಪ್ಪಾದ ನಿರ್ಧಾರದಿಂದ ದೇಶದಲ್ಲಿ ಅಡುಗೆ ಅನಿಲ ಕ್ಷಾಮ ಉಂಟಾಗಿದೆ. ಇದರಿಂದ ನಗರ, ಗ್ರಾಮ ಪ್ರದೇಶದ ಜನತೆ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಹಲವಾರು ಹೋಟೆಲ್ ಮುಚ್ಚಿದರಿಂದ ಆಹಾರ ಸಿಗದೆ ಜನರು ಪರದಾಡುವ ಪರಿಸ್ಥಿತಿ ಬಂದಿದೆ. ಇದಕ್ಕೆದುರಾಗಿ ಜನತೆ ಬೀದಿಗಿಳಿದು ಪ್ರತಿಭಟಿಸಬೇಕೆಂದು ಸಿಪಿಎಂ ಜಿಲ್ಲಾ ಸಮಿತಿ ಸದಸ್ಯೆ ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಕರೆ ನೀಡಿದ್ದಾರೆ. ಅಡುಗೆ ಅನಿಲ ಕ್ಷಾಮದ ಹಿನ್ನೆಲೆಯಲ್ಲಿ ಹೊಸಂಗಡಿಯಲ್ಲಿ ನಡೆದ ಪ್ರತಿಭಟನೆ ಉದ್ಘಾಟಿಸಿ ಅವರು ಮಾತನಾಡಿದರು. ಅಡುಗೆ ಅನಿಲ …

ಹೊಯ್ಗೆ ಸಾಗಾಟ ಮಾಹಿತಿ ಪೊಲೀಸರಿಗೆ ನೀಡಿದ ಆರೋಪ: ಯುವಕನನ್ನು ಮನೆಗೆ ನುಗ್ಗಿ ಕೊಲೆಗೈಯ್ಯಲೆತ್ನ: ಮೂವರ ಸೆರೆ

ಕುಂಬಳೆ: ಅನಧಿಕೃತವಾಗಿ ಹೊಳೆಯಿಂದ ಹೊಯ್ಗೆ ಸಾಗಿಸುವ ಮಾಹಿತಿಯನ್ನು ಪೊಲೀಸರಿಗೆ ತಿಳಿಸಲಾಯಿತೆಂದು ಆರೋಪಿಸಿ  ಮೊಗ್ರಾಲ್‌ನಲ್ಲಿ  ಮನೆಗೆ ಅತಿಕ್ರಮಿಸಿ ನುಗ್ಗಿ ಯುವಕನನ್ನು ಕೊಲೆಗೈಯ್ಯಲೆತ್ನಿಸ ಲಾಯಿತೆಂಬ ಪ್ರಕರಣದಲ್ಲಿ ಮೂರು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮೊಗ್ರಾಲ್ ಕೆ.ಕೆ.  ಪುರಂ ನಿವಾಸಿಗಳಾದ ಸನದ್ (31), ಗಫೂರ್ (34), ತನ್ಸೀಫ್ (27) ಎಂಬಿವರನ್ನು ಕುಂಬಳೆ ಪೊಲೀಸ್ ಇನ್‌ಸ್ಪೆಕ್ಟರ್ ಬೈಜು ಕೆ ಥೋಮಸ್‌ರ ನಿರ್ದೇಶ ಪ್ರಕಾರ ಎಸ್‌ಐ ಅನಂತಕೃಷ್ಣನ್ ಆರ್. ಮೆನೋನ್ ನೇತೃತ್ವದ ತಂಡ ಬಂಧಿಸಿದೆ. ಆರೋಪಿಗಳು ವಯ ನಾಡ್‌ನ ಸುಲ್ತಾನ್ ಬತ್ತೇರಿಯಲ್ಲಿ ತಲೆಮರೆಸಿ ಕೊಂಡು …

ಕಳವುಗೈದ ಸ್ಕೂಟರ್‌ನಲ್ಲಿ ತಿರುಗಾಟ: ಯುವಕನ ಬಂಧನ

ಕಾಸರಗೋಡು:  ಕಳವುಗೈದ ಸ್ಕೂಟರ್‌ನಲ್ಲಿ ಸುತ್ತಾಡುತ್ತಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಕಾಸರಗೋಡು ನಾಯಮ್ಮಾರ ಮೂಲೆಯ ಕ್ವಾರ್ಟ ರ್ಸ್‌ನಲ್ಲಿ ವಾಸಿಸುವ ಕೋಟ್ಟಯಂ ಕಾಂಞಿರಪ್ಪಳ್ಳಿ ಪುನ್ನತ್ತಾನದ ಇಸಾಮಾಮುಲ್‌ಹಕ್ (29) ಎಂಬಾತ ಬಂಧಿತ ಆರೋಪಿಯಾಗಿದ್ದಾನೆ.  ಕಣ್ಣೂರು ಸಿಟಿ ಪೊಲೀಸ್‌ನ ಎಸ್‌ಐ ಬಿ. ಜಿಷ್ಣು ನೇತೃತ್ವದ ಪೊಲೀಸರು ಪಾರಕಂಡಿಯಲ್ಲಿ ವಾಹನ ತಪಾಸಣೆ ನಡೆಸಿತ್ತಿದ್ದ ವೇಳೆ ಕಳವು ಆರೋಪಿ ಸಿಕ್ಕಿಬಿದ್ದಿದ್ದಾನೆ. ವಾಹನದ ದಾಖಲೆಗಳನ್ನು ಪೊಲೀಸರು ಕೇಳಿದಾಗ  ಯುವಕ ತದ್ವಿರುದ್ಧ ಹೇಳಿಕೆ ನೀಡಿದ್ದಾನೆ. ಇದರಿಂದ ಈ-ಫೋಸ್ ಮೆಶಿನ್ ಉಪಯೋಗಿಸಿ ವಾಹನದ ಮಾಹಿತಿ ಗಳನ್ನು ಸಂಗ್ರಹಿಸಿದಾಗ ಸ್ಕೂಟರ್ ಎಡಕ್ಕಾಡ್ …

ಪಟಾಕಿ ಸಿಡಿಸಿದಾಗ ಮದುವೆ ಮನೆಯ ಚಪ್ಪರಕ್ಕೆ ಹತ್ತಿಕೊಂಡ ಬೆಂಕಿ: ತಪ್ಪಿದ ಭಾರೀ ದುರಂತ

ಕಾಸರಗೋಡು: ವರನ ಸಹಿತ ಮದುವೆ ತಂಡ ತಲುಪಿದಾಗ  ಸಿಡಿಸಿದ ಪಟಾಕಿಯಿಂದ ಬೆಂಕಿ ಹತ್ತಿಕೊಂಡು ವಧುವಿನ ಮನೆಯಲ್ಲಿ ನಿರ್ಮಿಸಿದ ಚಪ್ಪರ  ಉರಿದು ನಾಶಗೊಂಡ ಘಟನೆ ನಡೆದಿದೆ. ಚಪ್ಪರದ ಒಂದು ಭಾಗ ಹಾಗೂ ಅಲಂಕಾರ ಸಾಮಗ್ರಿಗಳು ಉರಿದು ನಾಶಗೊಂಡಿದೆ. ಕೂಡಲೇ ಮನೆಯಲ್ಲಿದ್ದವರು ನೀರೆರೆದು  ಬೆಂಕಿ ನಂದಿಸಿದುದರಿಂದ ಭಾರೀ ದುರಂತ ತಪ್ಪಿಹೋಗಿದೆ. ಬೇಕಲ ಪೊಲೀಸ್ ಠಾಣೆ ವ್ಯಾಪ್ತಿಯ ಮವ್ವಲ್‌ನಲ್ಲಿ ಕಳೆದ ದಿನ ರಾತ್ರಿ ಈ ಘಟನೆ ನಡೆದಿದೆ. ವರ ಹಾಗೂ ತಂಡ ತಲುಪಿದಾಗ ಸಿಡಿಸಿದ ಪಟಾಕಿಯಿಂದ ಹಾರಿದ ಬೆಂಕಿಕಿಡಿ ಚಪ್ಪರಕ್ಕೆ ಹತ್ತಿಕೊಂಡಿರುವುದಾಗಿ …

ಮನೆಯಿಂದ ಯುವಕ ನಾಪತ್ತೆ-ದೂರು

ಮಂಜೇಶ್ವರ: ಮನೆಯಿಂದ ಯುವಕನೋರ್ವ ನಾಪತ್ತೆಯಾದ ಬಗ್ಗೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿದ್ದಾರೆ. ಶ್ರೀ ಅನಂತೇಶ್ವರ ಕ್ಷೇತ್ರ ಬಳಿಯ ಮಂಜೇಶ್ವರ ಪೊಲೀಸ್ ಠಾಣಾ ಪರಿಸರ ನಿವಾಸಿ ಅಶೋಕ್ ಶೆಣೈ (46) ಎಂಬವರು ನಾಪತ್ತೆಯಾಗಿದ್ದಾರೆ. ಈ ತಿಂಗಳ 22ರಂದು ಮುಂಜಾನೆ 6 ಗಂಟೆ ವೇಳೆ ಮನೆಯಿಂದ ನಾಪತ್ತೆಯಾಗಿದ್ದು, ವಿವಿಧ ಕಡೆ ಹುಡುಕಾಡಿದರೂ ಪತ್ತೆಯಾಗಲಿಲ್ಲ. ಹೊಸಂಗಡಿ ಕಟ್ಟದವೊಂದರ ಸಿಸಿ ಕ್ಯಾಮರಾ ಪರಿಶೀಲಿಸಿದಾಗ ಬೆಳಿಗ್ಗೆ 6.20ರ ವೇಳೆ ಹೊಸಂಗಡಿಯಲ್ಲಿರುವ ದೃಶ್ಯ ಕಂಡು ಬಂದಿರುವುದಾಗಿ ಮನೆಯವರು ತಿಳಿಸಿದ್ದಾರೆ. ಇವರ ಸಹೋದರ ಅಶ್ವಿನ್ ಕೆ. ಶೆಣೈ …

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಇಂದು ಮುಕ್ತಾಯ: ಮೌಲ್ಯ ಮಾಪನ ಎ.16ರಿಂದ

ತಿರುವನಂತಪುರ: ಮಾರ್ಚ್ 5ರಂದು ಆರಂಭಗೊಂಡ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಇಂದು ಕೊನೆಗೊಳ್ಳಲಿದೆ. ಉತ್ತರ ಪತ್ರಿಕೆಗಳ ಮೌಲ್ಯಮಾಪನ ಎಪ್ರಿಲ್ 16ರಂದು ಆರಂಭಗೊಳ್ಳಲಿದೆ. ಆದರೆ ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಈ ಬಾರಿ ಫಲಿತಾಂಶ ಪ್ರಕಟಗೊಳ್ಳುವಲ್ಲಿ ಅಲ್ಪ ವಿಳಂಬವಾಗುವ ಸಾಧ್ಯತೆ ಇದೆ. ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ  ರಾಜ್ಯದಲ್ಲಿ 13 ಲಕ್ಷಕ್ಕಿಂತಲೂ ಅಧಿಕ ವಿದ್ಯಾರ್ಥಿಗಳು ಬರೆದಿದ್ದಾರೆ. ರಾಜ್ಯದಲ್ಲಿ 3.031 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆದಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಜತೆಗೆ ಮಾರ್ಚ್ ೫ರಂದು ಹೈಯರ್ ಸೆಕೆಂಡರಿ ಮತ್ತು ವೊಕೇಷನಲ್ ಹೈಯರ್ ಸೆಕೆಂಡರಿ ಪರೀಕ್ಷೆಗಳೂ ಆರಂಭಗೊಂಡಿತ್ತು.

65ರ ಹರೆಯದ ವ್ಯಕ್ತಿ ನಾಪತ್ತೆ

ಕುಂಬಳೆ: ಮನೆಯಿಂದ ಹೋದ 65ರ ಹರೆಯದ ವ್ಯಕ್ತಿ ಬಳಿಕ ನಾಪತ್ತೆಯಾದ ಬಗ್ಗೆ ಕುಂಬಳೆ ಪೊಲೀಸರಿಗೆ ದೂರು ನೀಡಲಾಗಿದೆ. ಕುಂಬಳೆ ಕೊಪಾಡಿ ಶಾಂತಿಪಳ್ಳದ ಚಿದಾನ್ವಿ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿರುವ ಮೂಲತಃ ಪೈವಳಿಕೆ ಚಿಪ್ಪಾರು ಕುರುವೇರಿ ಅಮ್ಮ ನಿಲಯದ ಈಶ್ವರ ಮೂಲ್ಯ (65) ಎಂಬವರು ಮಾರ್ಚ್ 24ರಂದು ಮಧ್ಯಾಹ್ನ ಮನೆಯಿಂದ ಹೊರ ಹೋದವರು ನಂತರ ಮನೆಗೆ ಹಿಂತಿರುಗದೆ ನಾಪತ್ತೆಯಾಗಿರುವುದಾಗಿ ಅವರ ಪುತ್ರಿ ಅಕ್ಷತಾ ಕೆ. ಕುಂಬಳೆ ಪೊಲೀಸರಿಗೆ ದೂರು ನೀಡಿದ್ದು, ಅದರಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ಕಾಸರಗೋಡು ನಗರದ ಆಟೋ ಚಾಲಕ ಹೃದಯಾಘಾತದಿಂದ ನಿಧನ

ಕಾಸರಗೋಡು:  ಕಾಸರಗೋಡು ಡಿನಲ್ಲಿ ಆಟೋ ಚಾಲಕನಾದ ಅಡೂರು ನಿವಾಸಿ ಬಿಎಂಎಸ್ ಕಾರ್ಯಕರ್ತ ಪಿ. ನಾಗೇಶ್ (50) ಹೃದಯಾಘಾತದಿಂದ ನಿಧನಹೊಂ ದಿದರು. ಶನಿವಾರ ಮುಂಜಾನೆ   ಮಳೆ ಸುರಿದ ಹಿನ್ನೆಲೆಯಲ್ಲಿ ಮನೆಯ ಮೇಲೆ ಒಣಗಲು ಹಾಕಿದ್ದ ಅಡಿಕೆಯನ್ನು ತೆಗೆದ ಬಳಿಕ ಮನೆಯೊಳಗೆ  ಕುಳಿತಿದ್ದ ನಾಗೇಶರಿಗೆ ಹೃದಯಾಘಾತ ವುಂಟಾಗಿತ್ತೆನ್ನಲಾಗಿದೆ. ಕೂಡಲೇ ಮನೆಯವರು ಅವರನ್ನು ಮುಳ್ಳೇರಿ ಯದ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಮೃತದೇಹವನ್ನು   ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ  ಸ್ವ-ಗೃಹಕ್ಕೆ ಕೊಂಡೊಯ್ದು ಅಂತ್ಯಸಂಸ್ಕಾರ ನಡೆಸಲಾಯಿತು. ಕಾಸರಗೋಡು ಕೆಎಸ್‌ಆರ್‌ಟಿಸಿ …

ಐಎಪಿಯಿಂದ ಶಿಶುರೋಗ ತಜ್ಞರಿಗಾಗಿ ರಾಷ್ಟ್ರೀಯ ಮಟ್ಟದ ಕಾರ್ಯಾಗಾರ

ಕಾಸರಗೋಡು: ಐಎಪಿ ಕಾಸರಗೋಡು ಶಾಖೆಯ ನೇತೃತ್ವದಲ್ಲಿ ಶಿಶು ರೋಗ ತಜ್ಞರಿಗಾಗಿ ‘ಫ್ಯೂಯೆಲ್’ ಎಂಬ ಹೆಸರಲ್ಲಿ  ರಾಷ್ಟ್ರೀಯ ಮಟ್ಟದ ಕಾರ್ಯಾಗಾರ ನಡೆಯಿತು. ಕಾಸರಗೋಡು ಸಿಟಿ ಟವರ್ ಹೋಟೆಲ್‌ನಲ್ಲಿ ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಶಿಶು ರೋಗ ತಜ್ಞರು, ಫಿಸೀಶಿಯನ್‌ಗಳು, ಜನರಲ್ ಪ್ರಾಕ್ಟೀಶನರ್‌ಗಳು ಹಾಗೂ ಮಂಗಳೂರಿನ ಪೀಡ್ರಿಯಾಟಿಕ್ಸ್ ಪೋಸ್ಟ್ ಗ್ರಾಜ್ಯುವೆಟ್ ವಿದ್ಯಾರ್ಥಿಗಳು ಪಾಲ್ಗೊಂಡರು. ಐಎಪಿ ಕಾಸರಗೋಡು ಘಟಕ ಅಧ್ಯಕ್ಷ ಡಾ| ಮಾಹಿನ್ ಪಿ. ಅಬ್ದುಲ್ಲ ಸ್ವಾಗತಿಸಿದರು.  ಹಿರಿಯ ಶಿಶುರೋಗ ತಜ್ಞ ಡಾ| ನಾರಾಯಣ ನಾಯ್ಕ್ ರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. …

ಕನ್ನಡ ಮಾಧ್ಯಮ ಅಧ್ಯಾಪಕರಿಗೆ ವಿದಾಯಕೂಟ ಸಮಾರಂಭ

ಕಾಸರಗೋಡು: ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ವತಿಯಿಂದ 2025-26ನೇ ಸಾಲಿನಲ್ಲಿ ನಿವೃತ್ತಿ ಹೊಂದುತ್ತಿರುವ ಕನ್ನಡ ಮಾಧ್ಯಮ ಶಾಲೆಗಳ ಶಿಕ್ಷಕ ಶಿಕ್ಷಕಿಯರಿಗೆ ವಿದಾಯ ಕೂಟ ಸಮಾರಂಭ ಬೀರಂತಬೈಲಿನಲ್ಲಿರುವ ಕನ್ನಡ ಅಧ್ಯಾಪಕ ಭವನದಲ್ಲಿ ನಡೆಯಿತು.ಕಾರ್ಯಕ್ರಮವನ್ನು ಕಾಸರಗೋಡು ಸರಕಾರಿ ಕಾಲೇಜು ನಿವೃತ್ತ ಕನ್ನಡ ಪ್ರಾಧ್ಯಾಪಿಕೆ ಯು ಮಹೇಶ್ವರಿ ಉದ್ಘಾಟಿಸಿ, ನಮ್ಮ ಹಿರಿಯರು ಕನ್ನಡವನ್ನು ಉಳಿಸಿ ಬೆಳೆಸಲು ತುಂಬಾ ಪ್ರಯತ್ನಪಟ್ಟಿದ್ದಾರೆ. ಅವರ ಶ್ರಮದ ಫಲವನ್ನು ನಾವು ಅನುಭವಿಸುತ್ತಿದ್ದೇವೆ. ನಾವು ಕೂಡಾ ಹಿರಿಯರು ಮಾಡಿದ ಸಾಧನೆ ಕೆಲಸಗಳನ್ನು ಮಾಡಬೇಕು. ಕನ್ನಡಕ್ಕಾಗಿ ಹೋರಾಡಿದಂತಹ …