ದೈವ ನೇಮದಲ್ಲಿ ಭಾಗವಹಿಸಿ ಹಿಂತಿರುಗುತ್ತಿದ್ದಾಗ ಅಪಘಾತ ಸ್ಕೂಟರ್ ಮಗುಚಿ ಯುವತಿಯರಿಬ್ಬರಿಗೆ ಗಾಯ
ಕಾಸರಗೋಡು: ದೈವನೇಮ ಕಂಡು ಹಿಂತಿರುಗುತ್ತಿದ್ದ ಯುವತಿಯರು ಸಂಚರಿಸಿದ ಸ್ಕೂಟರ್ ರಸ್ತೆ ಬದಿಯ ಹೊಂಡಕ್ಕೆ ಮಗುಚಿ ಇಬ್ಬರು ಗಾಯಗೊಂಡರು. ಪೆರುಂಬಳ ಚಿರವಾದುಕ್ಕಲ್ ನಿವಾಸಿ ಪ್ರಮೀಳ (45), ಸಂಬಂಧಿಕೆ ಶ್ರೀಕೃಷ್ಣ (25) ಗಾಯಗೊಂಡವರು. ಇವರನ್ನು ಇಂದಿರಾನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ನಿನ್ನೆ ಮುಂಜಾನೆ 5 ಗಂಟೆವೇಳೆ ಪೆರುಂಬಳ, ಚೆಲ್ಲುಞಿಯಲ್ಲಿ ಅಪಘಾತ ಸಂಭವಿಸಿದೆ. ಅಣಿಞ ತುಳಿಚ್ಚೇರಿ ತರವಾಡಿನಲ್ಲಿ ದೈವಕೋಲದಲ್ಲಿ ಭಾಗವಹಿಸಿ ಇವರಿಬ್ಬರು ಸ್ಕೂಟರ್‌ನಲ್ಲಿ ಹಿಂತಿರುಗುತ್ತಿದ್ದರು. ಚೆಲ್ಲುಞಿ ಇಳಿಜಾರಿಗೆ ತಲುಪಿದಾಗ ನಿಯಂತ್ರಣ ತಪ್ಪಿದ ಸ್ಕೂಟರ್ ರಸ್ತೆ ಬದಿಯ ಹೊಂಡಕ್ಕೆ ಮಗುಚಿ ಬಿದ್ದಿದೆ. ಇನ್ನೊಂದು …
Read more “ದೈವ ನೇಮದಲ್ಲಿ ಭಾಗವಹಿಸಿ ಹಿಂತಿರುಗುತ್ತಿದ್ದಾಗ ಅಪಘಾತ ಸ್ಕೂಟರ್ ಮಗುಚಿ ಯುವತಿಯರಿಬ್ಬರಿಗೆ ಗಾಯ”