ವೃದ್ಧೆಯನ್ನು ಕೊಠಡಿಯೊಳಗೆ ಕೂಡಿಹಾಕಿ ಚಾಕು ತೋರಿಸಿ ಬೆದರಿಸಿ 10 ಸಾವಿರ ರೂ., ಬೆಂಡೋಲೆ ದರೋಡೆ

ಕಾಸರಗೋಡು: ಹಾಡಹಗಲೇ ಮನೆಗೆ ಅತಿಕ್ರಮಿಸಿ ನುಗ್ಗಿದ ದುಷ್ಕರ್ಮಿಯೋರ್ವ  ವೃದ್ಧೆಯನ್ನು ಕೊಠಡಿಯೊಳಗೆ ಕೂಡಿ ಹಾಕಿ ಚಾಕು ತೋರಿಸಿ ಬೆದರಿಕೆಯೊಡ್ಡಿ ಹಣ ಹಾಗೂ ಚಿನ್ನಾಭರಣವನ್ನು ದರೋಡೆಗೈದ ಘಟನೆ ನಡೆದಿದೆ. ಚೀಮೇನಿ ಪೊಲೀಸ್ ಠಾಣೆ ವ್ಯಾಪ್ತಿಯ ಪಟ್ಟೋಳಿ ತೊಡುವಳಂ ಮಾಟ್ರಾಡನ್ ಹೌಸ್‌ನ ಎಂ. ನಾರಾಯಣಿ (73) ಎಂಬವರಿಗೆ ಬೆದರಿಕೆಯೊಡ್ಡಿ  ಹಣ ಹಾಗೂ ಚಿನ್ನ ದೋಚಲಾಗಿದೆ.  ನಿನ್ನೆ ಮಧ್ಯಾಹ್ನ 2.45ರ ವೇಳೆ  ನಾಡನ್ನು ಬೆಚ್ಚಿಬೀಳಿಸಿದ ಈ  ಘಟನೆ ನಡೆದಿದೆ. ನಾರಾಯಣಿ ಮಗಳ ಮನೆಗೆ ಬಂದಿದ್ದರು. ಈ ವೇಳೆ ಮನೆಗೆ ಅತಿಕ್ರಮಿಸಿ ನುಗ್ಗಿದ ದುಷ್ಕರ್ಮಿ …

ಹೊಳೆಯಿಂದ ಅನಧಿಕೃತ ಹೊಯ್ಗೆ ಸಾಗಾಟ: ಮೂರು ಮಂದಿ ಸೆರೆ

ಕುಂಬಳೆ: ಹೊಳೆಗಳಿಂದ ಅನಧಿಕೃತ ವಾಗಿ ಹೊಯ್ಗೆ ಸಾಗಾಟ ನಡೆಸಿದ ಪ್ರಕರ ಣಕ್ಕೆ ಸಂಬಂಧಿಸಿ ಮೂರು ಮಂದಿ ಯನ್ನು ಪೊಲೀಸರು ಸೆರೆಹಿಡಿದಿದ್ದಾರೆ. ಇಚ್ಲಂಗೋಡು ಇಶಾನ ಮಂಜಿಲ್‌ನ ಮೊಹಮ್ಮದ್ ಫಾರೂಕ್ (52), ಇಚ್ಲಂಗೋಡಿನ ಅಬ್ದುಲ್ ಬಶೀರ್ (48), ಕುಡಾಲ್‌ಮೇರ್ಕಳದ ಮೊಹಮ್ಮದ್ ಅಲಿ (47) ಎಂಬಿವರನ್ನು ಕುಂಬಳೆ ಇನ್‌ಸ್ಪೆಕ್ಟರ್ ಬೈಜು ಕೆ. ಜೋಸ್, ಎಸ್‌ಐಗಳಾದ ಕೆ. ಸನಿತ್, ಅನಂತಕೃಷ್ಣನ್ ಆರ್ ಮೆನೋನ್ ನೇತೃತ್ವದಲ್ಲಿ ಸೆರೆಹಿಡಿಯಲಾಗಿದೆ. ಶಿರಿಯ ಹೊಳೆ ಇಚ್ಲಂಗೋಡಿ ನಿಂದ ಇತ್ತೀಚೆಗೆ ಅನಧಿಕೃತವಾಗಿ ಹೊಯ್ಗೆ ಸಾಗಿಸಿದ ಪ್ರಕರಣದಲ್ಲಿ ಲಾರಿ ಚಾಲಕನ ಸಹಿತ …

ಮುಂದಿನ 10 ದಿನ ರಾಜ್ಯದಲ್ಲಿ ಅತೀ ತೀವ್ರ ಉಷ್ಣತೆ

ತಿರುವನಂತಪುರ: ರಾಜ್ಯದಲ್ಲಿ ಮುಂದಿನ ಹತ್ತು ದಿನ ಅತೀ ತೀವ್ರ ಉಷ್ಣತೆ ಅನುಭವಕ್ಕೆ ಬರಲಿದೆ ಯೆಂದು ಹವಾಮಾನ ಇಲಾಖೆ ತಿಳಿಸಿದೆ.  ಈ ದಿನಗಳಲ್ಲಿ ತೀವ್ರ  ಮಳೆ ಸುರಿ ಯುವ ಸಾಧ್ಯತೆ ಇಲ್ಲ.  ಇದರಿಂದ ಉಷ್ಣತೆ ಎಂದಿಗಿಂ ತಲೂ ಹೆಚ್ಚಾಗಿರಲಿದೆ.ಆದರೆ ಉಷ್ಣ ಅಲೆಯ ಸಾಧ್ಯತೆ ಇಲ್ಲವೆಂದು ತಿಳಿಸಲಾಗಿದೆ. ನಿನ್ನೆ ಅತೀ ತೀವ್ರ ಉಷ್ಣತೆ ಪಾಲಕ್ಕಾಡ್ (39.2)ನಲ್ಲಿ ದಾಖಲಾಗಿದೆ. ನಾಳೆವರೆಗೆ ಕಾಸರ ಗೋಡು, ಕಲ್ಲಿಕೋಟೆ, ಪಾಲ ಕ್ಕಾಡ್, ಕೊಲ್ಲಂ ಜಿಲ್ಲೆಗಳಲ್ಲಿ ಉಷ್ಣತೆ ಮಟ್ಟ ೩೮ ಡಿಗ್ರಿ ವರೆಗೆ  ಏರಲಿದೆ. ಉಳಿದಂತೆ ಕಣ್ಣೂರು, …

ಕಾಳಸಂತೆಯಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳ ಮಾರಾಟ :ರಾಜ್ಯಾದ್ಯಂತ ದಾಳಿ: 600ಕ್ಕೂ ಹೆಚ್ಚು ಸಿಲಿಂಡರ್ ಪತ್ತೆ

ಕಾಸರಗೋಡು: ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧದ ವಾತಾ ವರಣ ಇನ್ನೂ ಮುಂದುವರಿಯುತ್ತಿರುವ ವೇಳೆಯಲ್ಲೇ ಅದರ ಮರೆಯಲ್ಲಿ ಕೇರಳದಾದ್ಯಂತ ಕಾಳಸಂತೆಯಲ್ಲಿ ಎಲ್‌ಪಿಜಿ ಅಡುಗೆ ಅನಿಲ ಸಿಲಿಂಡರ್  ಮಾರಾಟ,  ಅವುಗಳ ಅಕ್ರಮ ದಾಸ್ತಾನು ಮಾತ್ರವಲ್ಲದೆ ಗೃಹ ಬಳಕೆ ಮತ್ತು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಗಳ ಅವ್ಯವಹಾರ ಇತ್ಯಾದಿ ಕಾನೂನು ಬಾಹಿರ ಚಟುವಟಿಕೆಗಳು  ನಡೆಯು ತ್ತಿರುವುದು ಸರಕಾರದ ಗಮನಕ್ಕೆ ಬಂದಿದೆ. ಇದರಿಂದ ಇಂತಹ ಅಕ್ರಮ ಚಟು ವಟಿಕೆಗಳನ್ನು ತಡೆಗಟ್ಟಲು ರಾಜ್ಯದಲ್ಲಿ ಎನ್‌ಫೋರ್ಸ್ ಮೆಂಟ್ ಕ್ರಮಗಳನ್ನು ಇನ್ನಷ್ಟು ಬಿಗಿಗೊಳಿಸಲಾಗಿದೆ. ಅಲ್ಲದೆ ಸಾರ್ವಜನಿಕ …

ಫೋನ್ ಮೂಲಕ ಪರಿಚಯಗೊಂಡ ಬಾಲಕಿಯಲ್ಲಿ ವಿವಾಹ ವಿನಂತಿ ಉಪಟಳ: ಯುವಕನ ವಿರುದ್ಧ ಪೋಕ್ಸೋ ಕೇಸು

ಅಡೂರು: ದೂರವಾಣಿ ಮೂಲಕ ಪರಿಚಯಗೊಂಡ 17ರ ಹರೆಯದ ಬಾಲಕಿಯಲ್ಲಿ ನಿತ್ಯವೂ  ವಿವಾಹ ವಿನಂತಿ ನಡೆಸಿ ಉಪಟಳ ನೀಡಿರುವುದಾಗಿ ದೂರಿದ ಹಿನ್ನೆಲೆಯಲ್ಲಿ ಅಡೂರು ನಿವಾಸಿ ವಿರುದ್ಧ ಪೊಲೀಸರು ಪೋಕ್ಸೋ ಪ್ರಕಾರ ಕೇಸು ದಾಖಲಿಸಿದ್ದಾರೆ. ಆದೂರು ಪೊಲೀಸ್ ಸ್ಟೇಷನ್ ವ್ಯಾಪ್ತಿಯ ನಿವಾಸಿಯಾದ ಬಾಲಕಿಯ ದೂರಿನಂತೆ 23ರ ಹರೆಯದ ಯುವಕನ ವಿರುದ್ಧ ಕೇಸು ದಾಖಲಿಸಲಾಗಿದೆ. ಫೋನ್ ಮೂಲಕ ಬಾಲಕಿಯನ್ನು ಯುವಕ ಪರಿಚಯಗೊಂಡಿದ್ದನು ಎಂದು ಹೇಳಲಾಗಿದೆ. ಬಳಿಕ ಪ್ರತಿದಿನ ಬೆಳಿಗ್ಗೆ ಶುಭ ಮುಂಜಾನೆ, ರಾತ್ರಿ ಶುಭರಾತ್ರಿ ಸಂದೇಶಗಳನ್ನು ಕಳುಹಿಸುತ್ತಿದ್ದನೆನ್ನಲಾಗಿದೆ. ಆ ಬಳಿಕ ಸಂದೇಶದ …

ಏಕಾಂಗಿಯಾಗಿ ವಾಸಿಸುತ್ತಿದ್ದ ವ್ಯಕ್ತಿಯ ಮೃತದೇಹ ಜೀರ್ಣಗೊಂಡ ಸ್ಥಿತಿಯಲ್ಲಿ ಮನೆಯೊಳಗೆ ಪತ್ತೆ

ಮಂಜೇಶ್ವರ: ಏಕಾಂಗಿಯಾಗಿ ವಾಸಿಸುತ್ತಿದ್ದ ವ್ಯಕ್ತಿಯೋರ್ವ  ಮನೆಯೊಳಗೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೀಂಜ ಪಂಚಾಯತ್ ವ್ಯಾಪ್ತಿಯ ಮೀಯಪದವು ಪೊಳ್ಳಕಜೆ ನಿವಾಸಿ ದಿ| ಧೂಮ ಮೂಲ್ಯರ ಪುತ್ರ ವಿಶ್ವನಾಥ (45) ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ಮೂರು ದಿನಗಳ ಹಿಂದೆ ಮೃತಪಟ್ಟಿರಬೇಕೆಂದು ಶಂಕಿಸಲಾಗಿದೆ. ಅಸೌಖ್ಯದಿಂದ ಬಳಸುತ್ತಿದ್ದ ಇವರು ಹಲವು ವರ್ಷಗಳಿಂದ ಏಕಾಂಗಿಯಾಗಿ ವಾಸಿಸುತ್ತಿದ್ದರೆನ್ನಲಾಗಿದೆ. ಶನಿವಾರ ಮಧ್ಯಾಹ್ನ ಮನೆಯಿಂದ ದುರ್ವಾಸನೆ ಬೀರುತ್ತಿದ್ದ ಹಿನ್ನೆಲೆಯಲ್ಲಿ ಪರಿಸರ ನಿವಾಸಿಗಳು ತೆರಳಿ ನೋಡಿದಾಗ ಜೀರ್ಣಾವಸ್ಥೆಯಲ್ಲಿ ಮೃತದೇಹ ಪತ್ತೆಯಾಗಿದೆ. ಸ್ಥಳೀಯರು ನೀಡಿದ ಮಾಹಿತಿಯಂತೆ ಮಂಜೇಶ್ವರ ಪೊಲೀಸರು ಸ್ಥಳಕ್ಕೆ ತಲುಪಿ ಮೃತದೇಹದ …

ಹಿರಿಯ ಸೀಮೆನ್ ಕುಸಿದುಬಿದ್ದು ಮೃತ್ಯು

ಕುಂಬಳೆ: ಮುಂಜಾನೆ ವೇಳೆ ನಮಾಜು ನಡೆಸಿ ಕುಳಿತಿದ್ದ  ಹಿರಿಯ ಸೀಮೆನ್ ಕುಸಿದುಬಿದ್ದು ಮೃತಪಟ್ಟ ಘಟನೆ ನಡೆದಿದೆ. ಬಂದ್ಯೋಡು ಪಾಚಾಣಿ ಪಾಚಿವಳಪ್ಪ್ ನಿವಾಸಿ ಮೊಯ್ದೀನ್ ಕುಟ್ಟಿ (32) ಮೃತಪಟ್ಟ ವ್ಯಕ್ತಿ. ಮೃತರು ಪತ್ನಿ ನಫೀಸ, ಮಕ್ಕಳಾದ ಆಮಿನ, ಸುಹರಾ, ಸುಬೈದ, ಲತೀಫ್, ಅಬ್ದುಲ್ ರಹ್ಮಾನ್, ಅಶ್ರಫ್, ಮುತ್ತಲೀಬ್, ಅಳಿಯ-ಸೊಸೆಯಂದಿರಾದ ಸತ್ತಾರ್, ಇಬ್ರಾಹಿಂ, ಅಸೀಸ್, ನಿಸ, ಹುಸೈಬ, ಆಶಿಫ, ಅನೀಸ, ಸಹೋದರ-ಸಹೋದರಿಯರಾದ ಮೊಹಮ್ಮದ್ ಅಲಿ, ಖದೀಜ, ಆಯಿಶಾಬಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಕುರುಮುಜ್ಜಿಕಟ್ಟೆ ಶ್ರೀ ಧರ್ಮಶಾಸ್ತಾ ಭಜನಾ ಮಂದಿರದಲ್ಲಿ ಶ್ರೀಮದ್ ಭಾಗವತ ಸಪ್ತಾಹ ಆರಂಭ

ಕುಂಬ್ಡಾಜೆ: ಕುರುಮುಜ್ಜಿಕಟ್ಟೆ ಶ್ರೀ ಧರ್ಮಶಾಸ್ತಾ ಭಜನ ಮಂದಿರದಲ್ಲಿ ಜರಗುತ್ತಿರುವ ಶ್ರೀಮದ್ ಭಾಗವತ ಸಪ್ತಾಹದ ಅಂಗವಾಗಿ ದ್ವಿತೀಯ ದಿನ ಯಜ್ಞಾಚಾರ್ಯ ಬ್ರಹ್ಮಶ್ರೀ ಶಂಕರನ್ ನಂಬೂದಿರಿ ಚೇದಮಂಗಲA ಪಯ್ಯ ನ್ನೂರು ಪ್ರವಚನ ನಡೆಸಿಕೊಟ್ಟರು. ಮನಸ್ಸು ವ್ಯಾಕುಲತೆಯಲ್ಲಿರುವಾಗ ಯಾವುದೇ ದಿಟ್ಟ ನಿರ್ಧಾರವನ್ನು ತೆಗೆದುಕೊಳ್ಳಬಾರದು ಎಂದು ಅವರು ತಿಳಿಸಿದರು. ಕಪಿಲಾವತಾರ, ನರನಾರಾಯಣ ಅವತಾರ, ದಕ್ಷಯಾಗ, ಧ್ರುವಚರಿತೆ, ಪುರಂಜನೋಪಖ್ಯಾನ, ಋಷಭಾವತಾರ, ಭಾರತ ಕಥೆ, ಭದ್ರಕಾಳಿ ಆವಿರ್ಭಾವ ಕಥಾಭಾಗವನ್ನು ಆಯ್ದುಕೊಂಡು ಪಾರಾಯಣ ಪ್ರವಚನ ನಡೆಯಿತು. ಪ್ರಾತಃಕಾಲ ಗಣಪತಿ ಹೋಮ ನಡೆಯಿತು. ಗೋಸಾಡ ಮಹಿಷಮರ್ದಿನಿ ಮಾತೃಸಮಿತಿಯ ಅಧ್ಯಕ್ಷೆ …

ಅಗಲಿದ ಗಾನಕೋಗಿಲೆ ಆಶಾ ಭೋಸ್ಲೆಗೆ ಇಂದು ಸಂಜೆ ಸರಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ: ಪ್ರಧಾನಿ ಸೇರಿ ಹಲವರು ಗಣ್ಯರಿಂದ ಕಂಬನಿ

ಮುಂಬೈ: ಭಾರತೀಯ ಚಲನಚಿತ್ರರಂಗದ ಅಪ್ರತಿಮ ಗಾಯಕಿ, ಸಾವಿರಾರು ಸುಮಧುರ ಗೀತೆಗಳ ಮೂಲಕ ಕೋಟ್ಯಂತರ ಜನರ ಹೃದಯ ಗೆದ್ದಿದ್ದ ಪದ್ಮಭೂಷಣ ಆಶಾ ಭೋಸ್ಲೆ (92) ಅಂತ್ಯಕ್ರಿಯೆ ಇಂದು ಸಂಜೆ  ೪ ಗಂಟೆಗೆ ಮುಂಬೈಯ ಐತಿಹಾಸಿಕ ಶಿವಾಜಿ ಪಾರ್ಕ್ ಸ್ಮಶಾನದಲ್ಲಿ ಸಕಲ ಸರಕಾರಿ ಗೌರವಗಳೊಂದಿಗೆ ಅಂತಿಮ ವಿಧಿವಿಧಾನಗಳ ಸಹಿತ ನೆರವೇರಲಿದೆ.  ಈ ಮಹಾನ್ ಚೇತನದ ಅಗಲಿಕೆಗೆ ಪ್ರಧಾನಮಂತ್ರಿ ನರೇಂದ್ರಮೋದಿ ಸೇರಿದಂತೆ ಹಲವು ಗಣ್ಯಾತೀತರು ಕಂಬನಿ ಮಿಡಿದಿದ್ದಾರೆ. ಆಶಾ ಭೋಸ್ಲೆಯವರ ಪಾರ್ಥೀವ ಶರೀರವನ್ನು ಸಾರ್ವಜನಿಕ ದರ್ಶ ಕ್ಕಾಗಿ ಇಂದು ಬೆಳಿಗ್ಗೆಯಿಂದ ಮುಂಬೈನ …

ಬಾವಿ ಕೆಲಸದ ಮಧ್ಯೆ ಹಗ್ಗ ತುಂಡಾಗಿ ಬಿದ್ದು ಗಾಯಗೊಂಡಿದ್ದ ವ್ಯಕ್ತಿ ನಿಧನ

ಕಾಸರಗೋಡು: ಬಾವಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಮಧ್ಯೆ ಹಗ್ಗ ತುಂಡಾಗಿ ಬಿದ್ದು ಗಾಯಗೊಂಡ ಕಾರ್ಮಿಕ ಮೃತಪಟ್ಟರು. ಅಂಬಲತ್ತರ ಪೊಲೀಸ್ ಠಾಣೆ ವ್ಯಾಪ್ತಿಯ ಆನಪೆಟ್ಟಿ, ಕಾವಿಲ್ ಮನೆಯ ಚಂದ್ರನ್ ನಾಯರ್‌ರ ಪುತ್ರ ರಾಜನ್ (64) ಮೃತಪಟ್ಟವರು. ನಿನ್ನೆ ವಾಯುನ್ನೋರಡಿ ಮೇನಿಕೋಟ್‌ನಲ್ಲಿ ದುರಂತ ಸಂಭವಿಸಿದೆ. ಕೆಲಸದ ಮಧ್ಯೆ ಬಿದ್ದು ಕಾಲು ತುಂಡಾದ ಸ್ಥಿತಿಯಲ್ಲಿ ಇವರನ್ನು ನೋರ್ತ್ ಕೋಟಚ್ಚೇರಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ  ಬಳಿಕ ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ಯುವ ಸಿದ್ಧತೆ ಮಧ್ಯೆ ಸಾವು ಸಂಭವಿಸಿದೆ. ಹೃದಯಾಘಾತ ಮರಣಕ್ಕೆ …