ಅಂತಃಕರಣ ಶುದ್ಧವಾಗಿದ್ದರೆ ನೋಡುವ ದೃಷ್ಟಿ ಬದಲಾಗುತ್ತದೆ- ಕೊಂಡೆವೂರು ಶ್ರೀ

ಬದಿಯಡ್ಕ: ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ೩ನೇ ದಿನ ನಡೆದ ಧಾರ್ಮಿಕ ಸಭೆಯಲ್ಲಿ ಶ್ರೀ ಯೋಗಾ ನಂದ ಸರಸ್ವತೀ ಸ್ವಾಮೀಜಿ ಕೊಂಡೆವೂರು ಇವರು ಆಶೀರ್ವಚನ ನೀಡಿ, ಸನಾತನ ಸಂಸ್ಕೃತಿಯ ಕೇಂದ್ರ ಬಿಂದು ಧಾರ್ಮಿಕ ಕೇಂದ್ರಗಳು. ಒಂದು ದೇವಸ್ಥಾನವು ಆ ಗ್ರಾಮದ ಅಳತೆಗೋಲು ಎಂದರೆ ತಪ್ಪಾಗಲಾ ರದು. ಅಂತಃಕರಣ ಶುದ್ಧವಾಗಿದ್ದರೆ ಲೋಕವನ್ನು ನೋಡುವ ದೃಷ್ಟಿ ಬದಲಾಗುತ್ತದೆ. ಪ್ರಾಚೀನ ಗ್ರಂಥಗಳು ನಮ್ಮ ಜೀವನಕ್ಕೆ ಅದೆಷ್ಟೋ ಒಳ್ಳೆಯ ಸಂದೇಶಗಳನ್ನು ನೀಡಿದೆ. ನಮ್ಮಲ್ಲಿರುವ ಒಳ್ಳೆಯತನ, ಉತ್ತಮ ಭಾವವನ್ನು ಜಾಗೃತಗೊಳಿಸಬೇಕು. ದೇವರು ಬಿಂಬವಾದರೆ …

ಬದುಕಿನ ಸಮಸ್ಯೆಗಳಿಗೆ ಆತ್ಮಾವಲೋಕನವೊಂದೇ ಪರಿಹಾರ- ಒಡಿಯೂರು ಶ್ರೀ

ಕಾಸರಗೋಡು: ಬೆಳಕು ಹುಡುಕುವ ಕೆಲಸ ಅಂತರAಗದಲ್ಲಿ ಆಗಬೇಕು. ಭಾರತದ ಅಂತಃಸ್ಸತ್ವ ಆಧ್ಯಾತ್ಮಿಕ ಅಂತರAಗದಲ್ಲಿದೆ. ಅದು ಎಲ್ಲರನ್ನೂ ಬೆಳಗಿಸುವ ಬೆಳಕಾಗಿದೆ ಎಂದು ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದ ಶ್ರೀಗುರುದೇವಾನಂದ ಸ್ವಾಮೀಜಿ ಆಶೀರ್ವಚನದಲ್ಲಿ ತಿಳಿಸಿದರು.ನುಳ್ಳಿಪ್ಪಾಡಿ ಶ್ರೀ ಅಯ್ಯಪ್ಪ ಸ್ವಾಮಿ ಕ್ಷೇತ್ರದ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿ ಮಾತನಾಡಿದರು. ಯೋಗ ಭಂಗಿಯಲ್ಲಿರುವ ಶ್ರೀಅಯ್ಯಪ್ಪ ಸ್ವಾಮಿ ಬದುಕಿನ ಮೌಲ್ಯಗಳ ಪ್ರತೀಕ. ರಾಜನಾದವನು ಯೋಗಿಯಂತೆ ಬದುಕಬೇಕೆಂಬುದನ್ನು ಶ್ರೀಸ್ವಾಮಿ ಸೂಚ್ಯವಾಗಿ ತಿಳಿಸಿದ್ದಾನೆ. ಕಠಿಣ ವ್ರತಧಾರಿಗಳಾಗಿ ಅನುಷ್ಠಾನಗಳಿಂದ ಅಯ್ಯಪ್ಪ ಸ್ವಾಮಿಯ ಭಕ್ತಿ ಬದುಕನ್ನು ಪರಿಪಕ್ವಗೊಳಿಸುತ್ತದೆ ಎಂದವರು …