ಬದುಕಿನ ಸಮಸ್ಯೆಗಳಿಗೆ ಆತ್ಮಾವಲೋಕನವೊಂದೇ ಪರಿಹಾರ- ಒಡಿಯೂರು ಶ್ರೀ

ಕಾಸರಗೋಡು: ಬೆಳಕು ಹುಡುಕುವ ಕೆಲಸ ಅಂತರAಗದಲ್ಲಿ ಆಗಬೇಕು. ಭಾರತದ ಅಂತಃಸ್ಸತ್ವ ಆಧ್ಯಾತ್ಮಿಕ ಅಂತರAಗದಲ್ಲಿದೆ. ಅದು ಎಲ್ಲರನ್ನೂ ಬೆಳಗಿಸುವ ಬೆಳಕಾಗಿದೆ ಎಂದು ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದ ಶ್ರೀಗುರುದೇವಾನಂದ ಸ್ವಾಮೀಜಿ ಆಶೀರ್ವಚನದಲ್ಲಿ ತಿಳಿಸಿದರು.
ನುಳ್ಳಿಪ್ಪಾಡಿ ಶ್ರೀ ಅಯ್ಯಪ್ಪ ಸ್ವಾಮಿ ಕ್ಷೇತ್ರದ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿ ಮಾತನಾಡಿದರು. ಯೋಗ ಭಂಗಿಯಲ್ಲಿರುವ ಶ್ರೀಅಯ್ಯಪ್ಪ ಸ್ವಾಮಿ ಬದುಕಿನ ಮೌಲ್ಯಗಳ ಪ್ರತೀಕ. ರಾಜನಾದವನು ಯೋಗಿಯಂತೆ ಬದುಕಬೇಕೆಂಬುದನ್ನು ಶ್ರೀಸ್ವಾಮಿ ಸೂಚ್ಯವಾಗಿ ತಿಳಿಸಿದ್ದಾನೆ. ಕಠಿಣ ವ್ರತಧಾರಿಗಳಾಗಿ ಅನುಷ್ಠಾನಗಳಿಂದ ಅಯ್ಯಪ್ಪ ಸ್ವಾಮಿಯ ಭಕ್ತಿ ಬದುಕನ್ನು ಪರಿಪಕ್ವಗೊಳಿಸುತ್ತದೆ ಎಂದವರು ತಿಳಿಸಿದರು.
ಬ್ರಹ್ಮಕಲಶೋತ್ಸವ ಕಾರ್ಯದರ್ಶಿ ಕೆ.ಎನ್.ಬಾಲಕೃಷ್ಣನ್ ಚೆನ್ನಿಕೆರೆ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಖ್ಯಾತ ದೈವನರ್ತಕ, ಸಂಶೋಧಕ ಡಾ.ರವೀಶ್ ಪಡುಮಲೆ ಧಾರ್ಮಿಕ ಉಪನ್ಯಾಸ ನೀಡಿ, ಜಾತಿ, ಮತಗಳ ಭೇದಗಳಿಲ್ಲದ ಶಬರಿಮಲೆ ಸ್ವಾಮಿಯ ಸಂದೇಶ ಮನುಕುಲದ ಗತಿಯ ದ್ಯೋತಕ. ಪ್ರಭು ಶ್ರೀರಾಮಚಂದ್ರನ ಸಂದೇಶವೂ ಅದೇ ಆಗಿದೆ. ಸನಾತನ ನಂಬಿಕೆಯ ರಕ್ಷಣೆಗೆ ನಾವು ಒಂದಾಗಬೇಕು. ಆ ನಿಟ್ಟಿನಲ್ಲಿ ಅಯ್ಯಪ್ಪನಲ್ಲಿ ನಾವು ಐಕ್ಯರಾಗಬೇಕು. ನಮ್ಮ ಸಂಸ್ಕೃತಿ-ಪರAಪರೆಯನ್ನು ಉಳಿಸಿ ಬೆಳೆಸಿದಾಗ ಮುಂದಿನ ತಲೆಮಾರಿಗೆ ತಲುಪಿಸಲು ಸಾಧ್ಯ ಎಂದರು.
ಆರ್.ಎಸ್.ಎಸ್. ಜಿಲ್ಲಾ ಸಂಘ ಚಾಲಕ್ ಪ್ರಭಾಕರನ್ ಮಾಸ್ತರ್ ಮುಖ್ಯ ಅತಿಥಿಯÁಗಿ ಉಪಸ್ಥಿತರಿದ್ದರು. ನಗರಸಭೆ ಕೌನ್ಸಿಲರ್ ರಾಜೇಶ್ ಜಿ.ಅಮೈ, ಉದ್ಯಮಿ ವಿನೋದ್ ರಾಜ್ ಶೆಟ್ಟಿ, ಉದ್ಯಮಿ ಶ್ರೀಪತಿ ರಾವ್ ಕೋಟೆಕಣಿ, ಬ್ರಹ್ಮಕಲಶೋತ್ಸವ ಸಮಿತಿ ರಕ್ಷಾಧಿಕಾರಿ ಡಾ| ವೆಂಕಟಗಿರಿ, ಡಾ| ಸುರೇಶ್ ಬಾಬು, ಉದ್ಯಮಿ ವಿನೋದ್ ಕುಮಾರ್ ಕೆ., ಗೋಪಾಲ ಗುರುಸ್ವಾಮಿ, ನುಳ್ಳಿಪ್ಪಾಡಿ ಕ್ಷೇತ್ರದ ಗುರುಸ್ವಾಮಿ ನಾರಾಯಣ ಎ., ಕೃಷ್ಣ ಪ್ರಸಾದ್ ಕೋಟೆಕಣಿ, ಧನೇಶ್ ಪಡಿಬಾಗಿಲು ಉಪಸ್ಥಿತರಿದ್ದರು.
ವಿವಿಧ ವಲಯಗಳ ಸಾಧಕರಾದ ಅಚ್ಯುತ ಮೀಪುಗುರಿ, ಉಮೇಶ್ ಕೋಟೆಕಣಿ, ದಾಮೋದರ ಚೆನ್ನಿಕೆರೆ, ಮಹಾಲಿಂಗ ಕೋಟೆಕಣಿ, ಸುಶೀಲಾ ಚೆನ್ನೆಕೆರೆ ಅವರನ್ನು ಈ ಸಂದರ್ಭ ಗೌರವಿಸಲಾಯಿತು.
ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ರಾಮನ್ ಚೆನ್ನಿಕೆರೆ ಸ್ವಾಗತಿಸಿ, ಕೋಶಾಧಿಕಾರಿ ಕಿಶೋರ್ ಕುಮಾರ್ ವಂದಿಸಿದರು. ಗುರುಪ್ರಸಾದ್ ಕೋಟೆಕಣಿ ಹಾಗೂ ಜಗದೀಶ್ ಕೂಡ್ಲು ನಿರೂಪಿಸಿದರು.

RELATED NEWS

You cannot copy contents of this page