ಬಂದ್ಯೋಡು ಅಡ್ಕದಲ್ಲಿ ಮೂರು ಮನೆಗಳಿಂದ ಕಳವಿಗೆತ್ನ: ಕಳ್ಳನ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ; ತನಿಖೆ ತೀವ್ರಗೊಳಿಸಿದ ಪೊಲೀಸ್

ಕುಂಬಳೆ: ಬಂದ್ಯೋಡು ಅಡ್ಕ ಎಂಬಲ್ಲಿನ 3 ಮನೆಗಳಲ್ಲಿ ನಡೆದ ಕಳವು ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು  ಪ್ರಕರಣ ದಾಖಲಿಸಿ ತನಿಖೆ ತೀವ್ರಗೊಳಿಸಿದ್ದಾರೆ.  ಅಡ್ಕ ಚುಕ್ರಿಯಡ್ಕದ ಹನೀಫ, ನೆರೆಮನೆ ನಿವಾಸಿಗಳಾದ ಮುಹಮ್ಮದ್, ಅಬ್ದುಲ್ಲ ಎಂಬಿವರ ಮನೆಗಳಿಂದ ಕಳವಿಗೆತ್ನ ನಡೆದಿದೆ. ನಿನ್ನೆ ಮುಂಜಾನೆ 4 ಗಂಟೆ ವೇಳೆ ಹನೀಫರ ಮನೆಗೆ ಕಳ್ಳ ನುಗ್ಗಿದ್ದಾನೆ. ಅಡುಗೆಕೋಣೆ ಭಾಗದ ಬಾಗಿಲನ್ನು ತೆರೆದು ಒಳನುಗ್ಗಿದ ಕಳ್ಳ ಮೇಲಂತಸ್ತಿನ ಕೊಠಡಿಗೆ ತಲುಪಿದ್ದನು. ಅಲ್ಲಿದ್ದ ಕಪಾಟುಗಳನ್ನು ತೆರೆದು ಬಟ್ಟೆಬರೆಗಳನ್ನೆಲ್ಲ ಚೆಲ್ಲಾಪಿಲ್ಲಿಗೊಳಿಸಿ ದ್ದಾನೆ. ಬಳಿಕ ಹನೀಫ ಹಾಗೂ ಪತ್ನಿ ನಿದ್ರಿಸಿದ್ದ …

ಕುಂಬಳೆಯಲ್ಲಿ ಯುವಕನನ್ನು ಕೊಲೆಗೈಯ್ಯಲೆತ್ನಿಸಿದ ಪ್ರಕರಣ: ವಿದೇಶಕ್ಕೆ ಪರಾರಿಯಾಗಲೆತ್ನಿಸುತ್ತಿದ್ದಾಗ ಬೋವಿಕ್ಕಾನ ನಿವಾಸಿ ಚೆನ್ನೈಯಲ್ಲಿ ಬಂಧನ

ಕುಂಬಳೆ: ಯುವತಿಯೋರ್ವೆ ಯೊಂದಿಗಿನ ಪ್ರೇಮದ ವಿಷಯಕ್ಕೆ ಸಂಬಂಧಿಸಿ ಯುವಕನನ್ನು ಕೊಲೆಗೈಯ್ಯಲೆತ್ನಿಸಿದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಚೆನ್ನೈ ವಿಮಾನ ನಿಲ್ದಾಣದಲ್ಲಿ ಸೆರೆಗೀಡಾಗಿದ್ದಾನೆ. ಆದೂರು ಪೊಲೀಸ್ ಠಾಣೆ ವ್ಯಾಪ್ತಿಯ ಬೋವಿ ಕ್ಕಾನದ ಅಮೀನ್ ಸಫ್ವಾನ್ ಎಂಬಾತ ಸೆರೆಗೀಡಾದ ಆರೋಪಿಯಾಗಿದ್ದಾನೆ. ವಿದೇಶಕ್ಕೆ ಪರಾರಿಯಾಗಲು ಯತ್ನಿಸುತ್ತಿ ದ್ದಾಗ ಈತನನ್ನು ಸೆರೆಹಿಡಿಯಲಾಗಿದೆ. ಪೊಲೀಸರು ಬಹಿರಂಗಗೊಳಿಸಿದ ನೋಟೀಸ್‌ನ ಪ್ರಕಾರ ಯುವಕನನ್ನು ಗುರುತುಹಚ್ಚಿದ ವಿಮಾನ ನಿಲ್ದಾಣ ಅಧಿಕಾರಿಗಳು ಆರೋಪಿಯನ್ನು ತಡೆದು ನಿಲ್ಲಿಸಿದ್ದರು. ಈ ಬಗ್ಗೆ ಮಾಹಿತಿ ಲಭಿಸಿದ ಕುಂಬಳೆ ಪೊಲೀಸರು ಚೆನ್ನೈಗೆ ತೆರಳಿದ್ದಾರೆ. ಮಾರ್ಚ್ 30ರಂದು ರಾತ್ರಿ …

ಮನೆಯಿಂದ ಹೊರ ಹೋದ ವ್ಯಕ್ತಿ ನಾಪತ್ತೆ

ವರ್ಕಾಡಿ: ಮನೆಯಿಂದ ಹೊರ ಹೋದ ವ್ಯಕ್ತಿ ನಾಪತ್ತೆಯಾದ ಬಗ್ಗೆ ಮಂಜೇಶ್ವರ ಪೊಲೀಸರಿಗೆ ದೂರು ನೀಡಲಾಗಿದೆ. ಕೊಡ್ಲಮೊಗರು ಜೋಗಿಬೆಟ್ಟು ನಿವಾಸಿ ಲಿಂಗಪ್ಪ ಪೂಜಾರಿಯವರ ಪುತ್ರ ಕೋಟಿ ಜೆ. (39) ನಾಪತ್ತೆಯಾದವರು. ಈ ತಿಂಗಳ 10ರಂದು ಸಂಜೆ 6.30ಕ್ಕೆ ಮನೆಯಿಂದ ಹೊರ ಹೋಗಿದ್ದ ಇವರು ಆ ಬಳಿಕ ಮರಳದೆ ನಾಪತ್ತೆಯಾಗಿದ್ದಾರೆ. ಸಂಬಂಧಿಕರು  ವಿವಿಧ ಕಡೆಗಳಲ್ಲಿ ಹುಡುಕಾಡಿದರೂ ಪತ್ತೆಯಾಗದ ಹಿನ್ನೆಲೆಯಲ್ಲಿ ಸಹೋದರ ಚೆನ್ನಯ್ಯ ಜೋಗಿಬೆಟ್ಟು ಮಂಜೇಶ್ವರ ಪೊಲೀಸರಿಗೆ ದೂರು ನೀಡಿದ್ದಾರೆ. ಕೇಸು ದಾಖಲಿಸಿದ ಪೊಲೀಸರು ತನಿಖೆ ಆರಂಭಿಸಿದ್ದು, ಇವರು ಪತ್ತೆಯಾದರೆ ಮಂಜೇಶ್ವರ …

ಕೊಂಡೆವೂರು ಆಶ್ರಮಕ್ಕೆ ಬಂದ ಯುವತಿ ನಾಪತ್ತೆ

ಉಪ್ಪಳ: ಕೊಂಡೆವೂರು ಆಶ್ರಮಕ್ಕೆ ಬಂದಿದ್ದ ಕರ್ನಾಟಕ ನಿವಾಸಿಯಾದ ಯುವತಿ ದಿಢೀರ್ ನಾಪತ್ತೆಯಾದ ಘಟನೆ ನಡೆದಿದೆ. ಹಾಸನ ಜಿಲ್ಲೆಯ ಜಕ್ಕನಹಳ್ಳಿ ನಿವಾಸಿ  ಅಕ್ಷಿತಾ (19) ನಾಪತ್ತೆಯಾಗಿ ದ್ದಾಳೆಂದು ದೂರಲಾಗಿದೆ.   ಅಕ್ಷಿತಾ ತಾಯಿ ಯಶೋಧ, ಸಹೋದರಿ ಭೂಮಿಕ ಹಾಗೂ ಓರ್ವ ಸಹೋ ದರನೊಂದಿಗೆ  ನಿನ್ನೆ ಬೆಳಿಗ್ಗೆ 9.30ರ ವೇಳೆ ಕೊಂಡೆವೂರು ಆಶ್ರಮಕ್ಕೆ ತಲುಪಿದ್ದರು.  ಬಳಿಕ 10.30ರ ವೇಳೆ ಅಕ್ಷಿತಾ ಅಲ್ಲಿಂದ ನಾಪತ್ತೆಯಾಗಿ ರುವುದಾಗಿ ಹೇಳಲಾಗುತ್ತಿದೆ.  ಇದರಿಂದ ಆ ಪರಿಸರದಲ್ಲಿ ಹುಡುಕಿದರೂ ಅಕ್ಷಿತಾ ಪತ್ತೆಯಾಗದ ಹಿನ್ನೆಲೆಯಲ್ಲಿ ಸಹೋದರಿ ಭೂಮಿಕ ಮಂಜೇಶ್ವರ ಪೊಲೀಸರಿಗೆ …

ವ್ಯಕ್ತಿ ಮನೆಯೊಳಗೆ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಪೆರ್ಲ:  ವ್ಯಕ್ತಿಯೊಬ್ಬರು ಮನೆಯ ಅಡುಗೆ ಕೋಣೆಯಲ್ಲಿ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪಡ್ರೆ ವಾಣೀನಗರ ಅಜೆಕ್ಕಳಮೂಲೆ ಪೊಯ್ಯೆ ನಿವಾಸಿ ಕುಂಞಿರಾಮ ಮಣಿಯಾಣಿಯವರ ಪುತ್ರ ಸುರೇಶ್ ಮಣಿಯಾಣಿ (60) ಮೃತಪಟ್ಟ ವ್ಯಕ್ತಿ. ಶನಿವಾರ ಬೆಳಿಗ್ಗೆ 11 ಗಂಟೆಯಿಂದ ಸಂಜೆ 6 ಗಂಟೆ ಮಧ್ಯೆ ಇವರು ಸಾವಿಗೀಡಾಗಿರುವುದಾಗಿ ಅಂ ದಾಜಿಸಲಾಗಿದೆ. ಇವರು ನೇಣುಬಿಗಿದು ಸಾವಿಗೆ ಶರಣಾಗಲು ಕಾರಣವೇನೆಂದು ತಿಳಿದುಬಂದಿಲ್ಲ. ಘಟನೆ ಬಗ್ಗೆ ಬದಿಯಡ್ಕ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತರು ಪತ್ನಿ ಸೀತಮ್ಮ, ಮಕ್ಕಳಾದ ರಾಜೇಶ್ವರಿ,ಸುಚಿತ್ರ, ಕೃಷ್ಣ ಕುಮಾರ್, …

ಯುವಕನಿಗೆ ಹಲ್ಲೆಗೈದು ಕೊಲೆ ಬೆದರಿಕೆ: ನಾಲ್ವರ ಬಂಧನ

ಉಪ್ಪಳ: ವರ್ಕಾಡಿ ಕಳಿಯೂರು ಪಡ್ಪಿನಕೆರೆಯ ರಾಕೇಶ್ (37) ಎಂಬವರಿಗೆ ಹಲ್ಲೆಗೈದು ಕೊಲೆಬೆದರಿಕೆ ಯೊಡ್ಡಿದ ಪ್ರಕರಣದಲ್ಲಿ ಆರೋಪಿಗ ಳಾದ ನಾಲ್ಕು ಮಂದಿಯನ್ನು ಮಂಜೇ ಶ್ವರ ಪೊಲೀಸರು ಬಂಧಿಸಿದ್ದಾರೆ.  ಕಳಿಯೂರು ನಿವಾಸಿಗಳಾದ ಅಶ್ವಿನ್ ಕುಮಾರ್ ಕೆ (26),  ಅಭಿಷೇಕ್ (23), ಮನೋಜ್ ಕುಮಾರ್ ಕೆ (27), ಅನಿಲ್ ಕುಮಾರ್ ಕೆ (29) ಎಂಬಿವರು ಬಂಧಿತ ಆರೋಪಿಗಳಾಗಿದ್ದಾರೆ. ಇವರನ್ನು ಪೊಲೀಸರು ನ್ಯಾಯಾ ಲಯದಲ್ಲಿ ಹಾಜರುಪಡಿಸಿದ್ದು, ಈ ವೇಳೆ ಇವರಿಗೆ ನ್ಯಾಯಾಲಯ ರಿಮಾಂಡ್ ವಿಧಿಸಿದೆ. ಈ ತಿಂಗಳ 11ರಂದು ರಾತ್ರಿ 9 ಗಂಟೆಗೆ  …

ಕರ್ನಾಟಕದಲ್ಲಿ ಜೀತದಾಳುಗಳ ರೀತಿಯಲ್ಲಿ ದುಡಿಯುತ್ತಿದ್ದ ಪುತ್ತಿಗೆಯ ಯುವಕ ಸೇರಿದಂತೆ 18 ಮಂದಿಯನ್ನು ರಕ್ಷಿಸಿದ ಪೊಲೀಸರು

ಕಾಸರಗೋಡು: ಕರ್ನಾಟಕದ ಹಾಸನದಲ್ಲಿ ಜೀತದಾಳುಗಳ ರೀತಿಯಲ್ಲಿ  ದುಡಿಸುತ್ತಿದ್ದ ಕಾಸರಗೋಡು ಪುತ್ತಿಗೆ ನಿವಾಸಿ ಸೇರಿದಂತೆ 18 ಮಂದಿಯನ್ನು ಕರ್ನಾಟಕ ಪೊಲೀಸರು ಹಾಗೂ ಕಂದಾಯ ಇಲಾಖೆಯವರು ಸೇರಿ ನಡೆಸಿದ ಕಾರ್ಯಾಚರಣೆಯಲ್ಲಿ ರಕ್ಷಿಸಿದ ಘಟನೆ ನಡೆದಿದೆ. ಪುತ್ತಿಗೆ ವಿಕಾಸ್‌ನಗರದ ನಿವಾಸಿ ಉದಯ (37) ಹಾಗೂ ಕೊಲ್ಲಂ ನಿವಾಸಿಗಳೂ ಸೇರಿದಂತೆ ಒಟ್ಟು 18 ಮಂದಿ ಕಾರ್ಮಿಕರನ್ನು ರಕ್ಷಿಸಲಾಗಿದೆ. ಈ ಪೈಕಿ ಉದಯರನ್ನು ಕರ್ನಾಟಕದ ಸಂಬಂಧಪಟ್ಟ ಅಧಿಕಾರಿಗಳು ಕಾಸರಗೋಡಿಗೆ ಕರೆತಂದು ಅವರನ್ನು ಜಿಲ್ಲಾ ಹೆಚ್ಚುವರಿ ಮೆಜಿಸ್ಟ್ರೇಟ್ (ಎಡಿಎಂ) ಕೆ.ವಿ.ಶ್ರುತಿಯವರ ಸಾನಿಧ್ಯದಲ್ಲಿ ಕುಟುಂಬದವರಿಗೆ ಹಸ್ತಾಂತರಿಸಿದ್ದಾರೆ. ಹಾಸನ …

ಮದ್ಯದಮಲಿನಲ್ಲಿ ವಾಗ್ವಾದ: ಅಳಿಯ ಪೆಟ್ಟಿಗೆ ಮಾವ ಮೃತ್ಯು

ಪಾಲಕ್ಕಾಡ್: ಆಹಾರ ವಿತರಿಸುವುದಕ್ಕೆ ಸಂಬಂಧಿಸಿದ ವಿವಾದದ ಮಧ್ಯೆ ಮದ್ಯದಮಲಿನಲ್ಲಿ ಅಳಿಯನ ಹೊಡೆತದಿಂದ ಮಾವ ಮೃತಪಟ್ಟರು. ವಡಗರಪದಿ ವಯಲಪ್ಪದಿ ಕುಪ್ಪಾಂಡ ಕೌಂಡನ್ನೂರು ನಿವಾಸಿ ಶೆಂದಿಲ್ ಕುಮಾರ್ (45) ಮೃತಪಟ್ಟ ವ್ಯಕ್ತಿ. ಘಟನೆಯಲ್ಲಿ ಇವರ ಸಹೋದರಿಯ ಪುತ್ರ ಪ್ರಭಾಕರ (33)ನನ್ನು ಕೊಯಿಂಞಂಬಾರ ಪೊಲೀಸರು ಕಸ್ಟಡಿಗೆ ತೆಗೆದಿದ್ದಾರೆ. ನಿನ್ನೆ ರಾತ್ರಿ ಘಟನೆ ನಡೆದಿದೆ. ವಿವಾದದ ಮಧ್ಯೆ  ಪ್ರಭಾಕರ ಕಬ್ಬಿಣದ ಸರಳು ಉಪ ಯೋಗಿಸಿ ಶೆಂದಿಲ್ ಕುಮಾರ್‌ಗೆ ಹೊಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಬೊಬ್ಬೆ ಕೇಳಿ ತಲುಪಿದ ನೆರೆಮನೆ ನಿವಾಸಿಗಳು ಶೆಂದಿಲ್ ಕುಮಾರ್‌ನನ್ನು ಆಸ್ಪತ್ರೆಗೆ …

ಏಷ್ಯನ್ ಫೆಸಿಫಿಕ್ ರ‍್ಯಾಲಿ ಚಾಂಪಿಯನ್‌ಶಿಪ್ ದ್ವಿತೀಯ ರೌಂಡ್ ಮೂಸಾ ಶರೀಫ್ ತಂಡಕ್ಕೆ ದ್ವಿತೀಯ ಸ್ಥಾನ

ಕಾಸರಗೋಡು: ಚೆನ್ನೈಯಲ್ಲಿ ನಡೆದ 49ನೇ ದಕ್ಷಿಣ ಭಾರತ ರ‍್ಯಾಲಿಯಲ್ಲಿ ಸ್ಪರ್ಧೆಗಿಳಿದಿರುವುದರೊಂದಿಗೆ 350ನೇ ರ‍್ಯಾಲಿ ಎಂಬ ಇತಿಹಾಸ ಸಾಧನೆಗೆ ಮೂಸಾ ಶರೀಫ್ ಕಾಲಿರಿಸಿದ್ದಾರೆ. ನಿನ್ನೆ ಮದ್ರಾಸ್ ಮೋಟಾರ್ ಸ್ಪೋರ್ಟ್ಸ್ ಕ್ಲಬ್ ಮದ್ರಾಸ್ ಇಂಟರ್‌ನ್ಯಾಶನಲ್ ಸರ್ಕ್ಯೂಟ್ ನಲ್ಲಿ ಆಯೋಜಿಸಿದ ಏಷ್ಯನ್ ಫೆಸಿಫಿಕ್ ರ‍್ಯಾಲಿ ಚಾಂಪಿಯನ್‌ಶಿಪ್‌ನಲ್ಲಿ 2ನೇ ರೌಂಡ್ ಆಗಿರುವ ರ‍್ಯಾಲಿಯಲ್ಲಿ ಮೂಸಾ ಶರೀಫ್ ಹೈದರಾಬಾದ್‌ನ ಜೀತ್ ಜಬಕ ತಂಡ ದ್ವಿತೀಯ ಸ್ಥಾನ ಗಳಿಸಿದೆ. ಏಷ್ಯನ್ ಫೆಸಿಫಿಕ್ ರ‍್ಯಾಲಿ ಚಾಂಪಿಯನ್‌ಶಿಪ್‌ನ ೩ನೇ ಹಂತದ ಸ್ಪರ್ಧೆ ಆಗಸ್ಟ್ 7ರಿಂದ 9ರವರೆಗೆ ಇಂಡೋನೇಷ್ಯಾದಲ್ಲೂ, ಕೊನೆಯ …

ಅಂತಾರಾಷ್ಟ್ರ ಕರಾಟೆ ಸ್ಪರ್ಧೆ: ಕುಂಬಳೆ ಜೆಎಸ್‌ಕೆಎ ಉನ್ನತ ಸಾಧನೆ

ಕಾಸರಗೋಡು: ತೃಶೂರು ಟೆನ್ನಿಸ್ ಕ್ಲಬ್‌ನಲ್ಲಿ ನಡೆದ ೪೮ನೇ ಅಂತಾರಾಷ್ಟ್ರೀಯ ಶೋಟೊ ಕಾನ್ ಕರಾಟೆ ಸ್ಪರ್ಧೆಯಲ್ಲಿ ಕುಂಬಳೆ ಜೆಎಸ್‌ಕೆಎಯ ವಿದ್ಯಾರ್ಥಿಗಳು ೭ ಚಿನ್ನ ಸಹಿತ ೧೭ ಪದಕಗಳ ಸಾಧನೆ ಮಾಡಿದ್ದಾರೆ. ಕಾತ, ಕುಮಿತೆ ವಿಭಾಗಗಳಲ್ಲಿ  9 ಸ್ಪರ್ಧಾಳುಗಳನ್ನು ಸ್ಪರ್ಧೆಗಿಳಿಸಿ ಜೆಎಸ್‌ಕೆಎ ಈ ಸಾಧನೆ ಮಾಡಿದೆ. ಗ್ರೀನ್, ಬ್ರೌನ್ ಬೆಲ್ಟ್ ಮಕ್ಕಳ ಸ್ಪರ್ಧೆಯಲ್ಲಿ ಚರಿತ್ (6), ಮುಹಮ್ಮದ್ ಸಯಾನ್ ಇಸ್ಮಾಯಿಲ್ (12) ಎಂಬಿವರು ಎರಡು ವಿಭಾಗಳಲ್ಲಿ ಚಿನ್ನ ಗಳಿಸಿದ್ದಾರೆ. ಬ್ರೌನ್ ಬೆಲ್ಟ್ ಅಕುಲ್‌ರಾಜ್ (11)ಗೆ ಒಂದು ಚಿನ್ನ, ಒಂದು ಬೆಳ್ಳಿ …