ಕಾಸರಗೋಡು ಸರಕಾರಿ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳ ಹಾಸ್ಟೆಲ್ ಮುಂದಿನ ತಿಂಗಳು ಕಾರ್ಯಾರಂಭ

ಕಾಸರಗೋಡು: ಕಾಸರಗೋಡು ಸರಕಾರಿ ಮೆಡಿಕಲ್ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಹಾಸ್ಟೆಲ್ ಮುಂದಿನ ತಿಂಗಳು ಚಟುವಟಿಕೆ ಆರಂಭಗೊಳ್ಳಲಿದೆ. ಮೂಲಭೂತ ಸೌಕರ್ಯಗಳನ್ನು ಪೂರ್ತಿಗೊಳಿಸಿ ವಿದ್ಯಾರ್ಥಿಗಳಿಗೆ ವಾಸ ಸೌಕರ್ಯ ಏರ್ಪಡಿಸಲು ಜಿಲ್ಲಾಧಿಕಾರಿ ಅರ್ಜುನ್ ಪಾಂಡ್ಯನ್ ನಿರ್ದೇಶ ನೀಡಿದರು. ಜಿಲ್ಲಾಧಿಕಾರಿಯವರ ನೇತೃತ್ವದಲ್ಲಿ ಉಕ್ಕಿನಡ್ಕದ ಸರಕಾರಿ ಮೆಡಿಕಲ್ ಕಾಲೇಜಿನಲ್ಲಿ ನಡೆಸಿದ ಪ್ರತಿ ತಿಂಗಳ ಅವಲೋಕನ ಸಭೆಯಲ್ಲಿ ಈ ತೀರ್ಮಾನ ಉಂಟಾಗಿದೆ. ಕಳೆದ ತಿಂಗಳು ನಡೆದ ಸಭೆಯ ತೀರ್ಮಾನ ಪ್ರಕಾರ ಹಾರ್ಬರ್ ಇಂಜಿನಿಯರಿಂಗ್ ಇಲಾಖೆಯ ನೇತೃತ್ವದಲ್ಲಿ ಮೆಡಿಕಲ್ ಕಾಲೇಜು ಕ್ಯಾಂಪಸ್‌ಗೆ ರಸ್ತೆ ನಿರ್ಮಾಣ ಕಾಮಗಾರಿಗಳನ್ನು ಆರಂಭಿಸಲಾಗಿದೆ. ಅಲ್ಲದೆ …

ತನ್ನನ್ನು ಹಾಗೂ ಪಕ್ಷವನ್ನು ಅವಮಾನಿಸಲು ಗೂಢ ತಂತ್ರ- ಎಂ.ಎಲ್. ಅಶ್ವಿನಿ

ಕಾಸರಗೋಡು: ಸುಳ್ಳು ವರದಿ ಪ್ರಕಟಿಸಿ ತನ್ನನ್ನು ಹಾಗೂ ಪಕ್ಷದ ಜಿಲ್ಲಾ ನಾಯಕತ್ವವನ್ನು ಅವಮಾನಿ ಸಲು ಗೂಢ ಪ್ರಯತ್ನ ನಡೆಯುತ್ತಿ ದೆಯೆಂದು ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಆರೋಪಿಸಿದ್ದಾರೆ. ನಡೆಯದ ಮಂಡಲ ಅವಲೋಕನ ಸಭೆಯಲ್ಲಿ  ಬಿಜೆಪಿ ಕಾಸರಗೋಡು ಜಿಲ್ಲಾ ನಾಯಕತ್ವ ಹಾಗೂ ತನ್ನ ವಿರುದ್ಧ ತೀವ್ರ ಟೀಕೆ ವ್ಯಕ್ತವಾಗಿದೆ ಎಂದು ಕೆಲವು ಮಾಧ್ಯಮಗಳು ವರದಿ ಪ್ರಕಟಿಸಿವೆ.  ಮತ ಸೇರಿಸಲು ಸೂಕ್ತ ಚಟುವಟಿಕೆ ನಡೆಸಿಲ್ಲವೆಂದೂ ಮಗನ ಮತ ಕೂಡಾ ಸೇರಿಸಿಲ್ಲವೆಂಬ ಆರೋಪ ಸತ್ಯಕ್ಕೆ ದೂರವಾದುದಾಗಿದೆ. ಮತ ಸೇರಿಸಲು ಬೇಕಾದ ಎಲ್ಲಾ …