ಕಾಸರಗೋಡು ಸರಕಾರಿ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳ ಹಾಸ್ಟೆಲ್ ಮುಂದಿನ ತಿಂಗಳು ಕಾರ್ಯಾರಂಭ

ಕಾಸರಗೋಡು: ಕಾಸರಗೋಡು ಸರಕಾರಿ ಮೆಡಿಕಲ್ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಹಾಸ್ಟೆಲ್ ಮುಂದಿನ ತಿಂಗಳು ಚಟುವಟಿಕೆ ಆರಂಭಗೊಳ್ಳಲಿದೆ. ಮೂಲಭೂತ ಸೌಕರ್ಯಗಳನ್ನು ಪೂರ್ತಿಗೊಳಿಸಿ ವಿದ್ಯಾರ್ಥಿಗಳಿಗೆ ವಾಸ ಸೌಕರ್ಯ ಏರ್ಪಡಿಸಲು ಜಿಲ್ಲಾಧಿಕಾರಿ ಅರ್ಜುನ್ ಪಾಂಡ್ಯನ್ ನಿರ್ದೇಶ ನೀಡಿದರು. ಜಿಲ್ಲಾಧಿಕಾರಿಯವರ ನೇತೃತ್ವದಲ್ಲಿ ಉಕ್ಕಿನಡ್ಕದ ಸರಕಾರಿ ಮೆಡಿಕಲ್ ಕಾಲೇಜಿನಲ್ಲಿ ನಡೆಸಿದ ಪ್ರತಿ ತಿಂಗಳ ಅವಲೋಕನ ಸಭೆಯಲ್ಲಿ ಈ ತೀರ್ಮಾನ ಉಂಟಾಗಿದೆ. ಕಳೆದ ತಿಂಗಳು ನಡೆದ ಸಭೆಯ ತೀರ್ಮಾನ ಪ್ರಕಾರ ಹಾರ್ಬರ್ ಇಂಜಿನಿಯರಿಂಗ್ ಇಲಾಖೆಯ ನೇತೃತ್ವದಲ್ಲಿ ಮೆಡಿಕಲ್ ಕಾಲೇಜು ಕ್ಯಾಂಪಸ್‌ಗೆ ರಸ್ತೆ ನಿರ್ಮಾಣ ಕಾಮಗಾರಿಗಳನ್ನು ಆರಂಭಿಸಲಾಗಿದೆ. ಅಲ್ಲದೆ ಅರ್ಧದಲ್ಲೇ ಮೊಟಕುಗೊಂಡಿದ್ದ ಆಸ್ಪತ್ರೆ ಕಟ್ಟಡದ ನಿರ್ಮಾಣ ಪುನರಾರಂಭಗೊಂಡಿದೆ. ಹಾಸ್ಟೆಲ್‌ಗಳ ವಯರಿಂಗ್ ಕೆಲಸಗಳು ಪೂರ್ತಿಯಾ ಯಿತು. ಮೆಡಿಕಲ್ ಕಾಲೇಜಿಗೆ ಆವರಣಗೋಡೆ ನಿರ್ಮಾಣಕ್ಕಿರುವ ಕ್ರಮಗಳನ್ನು ವೇಗದಲ್ಲಿ ಮುಗಿಸಲು ಜಿಲ್ಲಾಧಿಕಾರಿ ನಿರ್ದೇಶಿಸಿದರು. ಇದೇ ವೇಳೆ ಮೆಡಿಕಲ್ ಕಾಲೇಜಿನ ಲ್ಯಾಬ್ ಚಟುವಟಿಕೆ ಶೀಘ್ರ ಆರಂಭಿಸಲು, ಮುಂದಿನ ತಿಂಗಳಲ್ಲಿ ಆಂಬುಲೆನ್ಸ್ ಸೇವೆ ಆರಂಭಿಸಲು ತೀರ್ಮಾನಿಸಲಾಯಿತು.

ಕ್ಯಾಂಟೀನ್, ಮೋರ್ಚರಿ, ತ್ಯಾಜ್ಯ ಸಂಸ್ಕರಣಾ ಪ್ಲಾಂಟ್, ಪ್ಲೇಗ್ರೌಂಡ್, ಇಂಡೋರ್ ಕೋರ್ಟ್ ಮೊದಲಾದವುಗಳ ನಿರ್ಮಾಣಕ್ಕಿರುವ ಕ್ರಮಗಳನ್ನು ಕೂಡಾ ವೇಗದಲ್ಲಿ ಪೂರ್ತಿಗೊಳಿಸಲು ಜಿಲ್ಲಾಧಿಕಾರಿ ನಿರ್ದೇಶಿಸಿದರು. ವಿವಿಧ ವಿಭಾಗಗಳ ಉನ್ನತ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದರು.

RELATED NEWS

You cannot copy contents of this page