ಕುಂಬಳೆಯಲ್ಲಿ ಆಗಾಗ ವಿದ್ಯುತ್ ಮೊಟಕು:ಮುಸ್ಲಿಂ ಲೀಗ್‌ನಿಂದ ವಿದ್ಯುತ್ ಕಚೇರಿ ದಿಗ್ಬಂಧನ

ಕುಂಬಳೆ: ಆಗಾಗ ಉಂಟಾಗುತ್ತಿರುವ ಅಘೋಷಿತ ವಿದ್ಯುತ್ ಪವರ್‌ಕಟ್‌ಗೆ ಕೂಡಲೇ ಪರಿಹಾರ ಕಾಣಬೇಕೆಂದು ಆಗ್ರಹಿಸಿ ಕುಂಬಳೆಯಲ್ಲಿ ಮುಸ್ಲಿಂ ಲೀಗ್ ಜನಪ್ರತಿನಿಧಿಗಳು ಕೆಎಸ್‌ಇಬಿ ಕಚೇರಿ ದಿಗ್ಬಂಧನ ನಡೆಸಿದರು. ಮುಸ್ಲಿಂ ಲೀಗ್ ಪಂಚಾಯತ್ ಸಮಿತಿಯ ನೇತೃತ್ವದಲ್ಲಿ ದಿಗ್ಬಂಧನ ನಡೆಸಲಾಗಿದೆ. ಪಂಚಾಯತ್ ಸಮಿತಿ ಅಧ್ಯಕ್ಷ ವಿ.ಪಿ. ಅಬ್ದುಲ್ ಖಾದರ್ ಹಾಜಿ, ಜಿಲ್ಲಾ ಪಂಚಾಯತ್ ಸದಸ್ಯ ಅಸೀಸ್ ಕಳತ್ತೂರು, ಸ್ಥಾಯಿ ಸಮಿತಿ ಅಧ್ಯಕ್ಷರಾದ ಎಂ.ಪಿ. ಖಾಲಿದ್, ಇನಾಸ್ ಪವಾಸ್, ಸದಸ್ಯರಾದ ಫಲ್ಸರ್, ಸಾಬುರ ನೇತೃತ್ವ ನೀಡಿದರು.  ಬಿ.ಎನ್. ಮೊಹಮ್ಮದಾಲಿ ಅಧ್ಯಕ್ಷತೆ ವಹಿಸಿದರು. ಎ.ಕೆ. ಆರೀಫ್ …

ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದಲ್ಲಿ  ಸಹಸ್ರ ಕಲಶಾಭಿಷೇಕ-ಬ್ರಹ್ಮಕಲಶಾಭಿಷೇಕ ನಾಳೆ

ಬದಿಯಡ್ಕ: ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದಲ್ಲಿ  ಸಹಸ್ರ ಕಲಶಾಭಿಷೇಕ-ಬ್ರಹ್ಮಕಲಶಾಭಿಷೇಕ ನಾಳೆ ನಡೆಯಲಿರುವುದು.  ನಾಳೆ ಮುಂಜಾನೆ ೫ರಿಂದ ಗಣಪತಿಹೋಮ, ಕವಾಟೋ ದ್ಘಾಟನೆ, ಶಾಂತಿ, ಪ್ರಾಯಶ್ಚಿತ್ತ ಮತ್ತು ತತ್ವಹೋಮಗಳ ಕಲಶಾಭಿಷೇಕ ನಡೆಯಲಿದೆ. ಅನಂತರ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಶ್ರೀ ದೇವರಿಗೆ ಸಹಸ್ರ ಕಲಶಾಭಿಷೇಕ, ಬ್ರಹ್ಮಕಲಶಾಭಿಷೇಕ, ಅವಭೃತ ಪ್ರೋಕ್ಷಣೆ, ಮಹಾಪೂಜೆ, ಮಂಗಲಮಂತ್ರಾಕ್ಷತೆ, ರಾತ್ರಿ ೭ರಿಂದ ಶ್ರೀ ದೇವರ ಉತ್ಸವಬಲಿ, ರಾತ್ರಿ ಪೂಜೆ ನಡೆಯಲಿದೆ. ಬೆಳಿಗ್ಗೆ ೧೧.೩೦ಕ್ಕೆ ಶ್ರೀ ಸಂಸ್ಥಾನ ಗೋಕರ್ಣ  ಶ್ರೀರಾಮಚಂದ್ರಾಪುರ ಮಠದ ಪರಮಪೂಜ್ಯ  …

ಹೊಳೆಗಳು, ಜಲಮೂಲಗಳು ಬತ್ತಿಬರಡು :ಕುಡಿಯುವ ನೀರಿಗೆ ತೀವ್ರ ಕ್ಷಾಮ

ಕಾಸರಗೋಡು: ಬೇಸಿಗೆ ಮಳೆ ತೀವ್ರಗೊಳ್ಳದ ಹಿನ್ನೆಲೆಯಲ್ಲಿ ಹೊಳೆಗಳು, ಜಲಮೂಲಗಳು ಬತ್ತಿ ಬರಡಾಗಿದ್ದು, ಜಿಲ್ಲೆ ತೀವ್ರ ಬರ ಎದುರಿಸುವ ಹಾಗೂ ಕುಡಿ ಯುವ ನೀರು ಕ್ಷಾಮಕ್ಕೆ ತುತ್ತಾಗುವ ಸಾಧ್ಯತೆ ಕಂಡುಬರುತ್ತಿದೆ. ಬೇಸಿಗೆಯ ಬಿಸಿ ಅತೀವ ಅಸಹನೀಯವಾಗಿ ಮುಂದುವರಿ ಯುತ್ತಿದೆ. ಜನರು ಬೇಯುತ್ತಿದ್ದು, ಕುಡಿ ಯುವ ನೀರು ಕ್ಷಾಮ ಕೂಡ ಎದುರಿ ಸುತ್ತಿರುವುದರಿಂದ ಅತ್ಯಂತ ಸಂಕಷ್ಟ ಉಂಟಾಗಿದೆ. ಕೃಷಿಗೆ ಅಗತ್ಯವಾಗಿರುವ ನೀರು ಲಭಿಸದ ಹಿನ್ನೆಲೆಯಲ್ಲಿ ಕೃಷಿಕರು ಸಂದಿಗ್ಧತೆಯಲ್ಲಿದ್ದಾರೆ. ಹೊಳೆಗಳು ಬತ್ತಿ ಬರಡಾದ ಕಾರಣ ಕೃಷಿಗಾಗಿ ಇಲ್ಲಿಂದ ಉಪಯೋಗಿಸುತ್ತಿದ್ದ ನೀರು ಇಲ್ಲದಂತಾಗಿದೆ. …