ಮೊಗ್ರಾಲ್ ಹೊಳೆಯಲ್ಲಿ ಮುಳುಗಿಸಿಟ್ಟ ಆರು ದೋಣಿಗಳನ್ನು ನಾಶಗೊಳಿಸಿದ ಪೊಲೀಸ್: ಟಿಪ್ಪರ್ ಲಾರಿವಶ

ಕುಂಬಳೆ: ಹೊಳೆಯಿಂದ ಅನಧಿಕೃತವಾಗಿ ಹೊಯ್ಗೆ ಸಂಗ್ರಹಿಸಿ ಸಾಗಿಸುವ ದಂಧೆ ವಿರುದ್ಧ ಕುಂಬಳೆ ಪೊಲೀಸರು ಕಾರ್ಯಾಚರಣೆ ಇನ್ನಷ್ಟು ತೀವ್ರಗೊಳಿಸಿದ್ದಾರೆ. ನಿನ್ನೆ ರಾತ್ರಿ ಎಸ್ ಐಗಳಾದ  ಸಿ.ಸನಿತ್, ಅನಂತಕೃಷ್ಣನ್ ಆರ್ ಮೆನೋನ್ ನೇತೃತ್ವದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ  ಹೊಯ್ಗೆ ಸಂಗ್ರಹಿಸಲು ಬಳಸುವ ಆರು ದೋಣಿಗಳನ್ನು ವಶಕ್ಕೆ ತೆಗೆಯಲಾ ಗಿದೆ.  ಮೊಗ್ರಾಲ್ ಹೊಳೆಯಲ್ಲಿ ನೀರಿನಲ್ಲಿ ಮುಳುಗಿಸಿಟ್ಟ ಸ್ಥಿತಿಯಲ್ಲಿ ದೋಣಿಗಳು ಪತ್ತೆಯಾಗಿದ್ದು, ಅವುಗಳನ್ನು ಬಳಿಕ ಜೆಸಿಬಿ ಬಳಸಿ ನಾಶಗೊಳಿಸಲಾಗಿದೆ.  ಅದೇ ರೀತಿ ಆರಿಕ್ಕಾಡಿ ಕೆಪಿ ರೆಸೋ ರ್ಟ್ ಬಳಿಯ  ಹೊಳೆಯಿಂದ ಹೊಯ್ಗೆ ಸಾಗಿಸುತ್ತಿದ್ದ ಟಿಪ್ಪರ್ …

ಮಳ್ಳಂಗೈ ನಿವಾಸಿ ಸೌದಿ ಅರೇಬಿಯಾದಲ್ಲಿ ಕುಸಿದುಬಿದ್ದು ಮೃತ್ಯು

ಕುಂಬಳೆ: ಬಂದ್ಯೋಡು ಮಳ್ಳಂಗೈ ನಿವಾಸಿ ಸೌದಿ ಅರೇಬಿ ಯಾದಲ್ಲಿ ಕುಸಿದುಬಿದ್ದು ಮೃತಪಟ್ಟ ಘಟನೆ ನಡೆದಿದೆ. ಕಳೆದ 22 ವರ್ಷಗಳಿಂದ ಸೌದಿ ಅರೇಬಿಯಾದ ಅಬಹದಲ್ಲಿ ಕಫ್ತೀರಿಯ ನಡೆಸುತ್ತಿದ್ದ  ಮುಹಮ್ಮದ್ ಫಾರೂಕ್ (48) ಎಂಬವರು ಮೃತಪಟ್ಟ ವ್ಯಕ್ತಿಯಾಗಿ ದ್ದಾರೆ. ನಿನ್ನೆ ಸಂಜೆ ಕಫ್ತೀರಿಯದಲ್ಲಿ ಕುಸಿದುಬಿದ್ದು ಮೃತಪಟ್ಟಿರುವುದಾಗಿ ಮನೆಯವರಿಗೆ ಮಾಹಿತಿ ಲಭಿಸಿದೆ. ಮೃತದೇಹವನ್ನು  ಊರಿಗೆ ತರಲು ಸಿದ್ದತೆ ನಡೆಯುತ್ತಿದೆ.  ಇತ್ತೀಚೆಗೆ   ಊರಿಗೆ ಬಂದಿದ್ದ ಮುಹಮ್ಮದ್ ಫಾರೂಕ್ ಈದುಲ್ ಫಿತೃ ಹಬ್ಬದ ಬಳಿಕ ಮರಳಿದ್ದರು.  ದಿ|  ಮುಹಮ್ಮದ್ ಹಾಜಿ-ಆಯಿಷ ಹಜ್ಜುಮ್ಮ ದಂಪತಿಯ ಪುತ್ರನಾದ …

ಕಾಂಗ್ರೆಸ್ ಮುಖಂಡ ನಿಧನ

ಪೆರ್ಲ: ಹಿರಿಯ ಕಾಂಗ್ರೆಸ್ ಮುಖಂಡ, ನಲ್ಕ ವಾಗ್ದೇವಿ ಅನುದಾನಿತ ಪ್ರಾಥಮಿಕ ಶಾಲೆಯ ನಿಕಟಪೂರ್ವ ವ್ಯವಸ್ಥಾಪಕ ಶ್ರೀಕೃಷ್ಣ ಭಟ್ ವರ್ಮುಡಿ (78) ನಿಧನ ಹೊಂದಿದರು. ಎಣ್ಮಕಜೆ ಮಂಡಲ ಕಾಂಗ್ರೆಸ್ ಸಮಿತಿ ಕೋಶಾಧಿಕಾರಿ, ಯುಡಿಎಫ್ ಚುನಾವಣಾ ಸಮಿತಿ ಪದಾಧಿಕಾರಿಯಾಗಿ ಹಲವಾರು ದಶಕಗಳ ಕಾಲ ಸೇವೆ ಸಲ್ಲಿಸಿದ್ದರು.  ಎಣ್ಮಕಜೆ ಪಂಚಾಯತ್ ವ್ಯಾಪ್ತಿ ಯಲ್ಲಿ ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಬೆಳೆಸಲು ಇವರು ನೀಡಿದ ಕೊಡುಗೆ ಅನನ್ಯ ಎಂದು ಪಕ್ಷದ ಮುಖಂಡರು ತಿಳಿಸುತ್ತಿದ್ದು, ಇವರ ಅಗಲಿಕೆ ಪಕ್ಷಕ್ಕೆ ನಷ್ಟವುಂಟುಮಾಡಿರುವುದಾಗಿ ಜಿಲ್ಲಾ ಪಂಚಾಯತ್ ಸದಸ್ಯ ಸೋಮ …

ಕೋಟ್ಯಂತರ ರೂ.ಗಳ ವಂಚನೆ: ತಲೆಮರೆಸಿಕೊಂಡಿದ್ದ ಇಬ್ಬರ ಬಂಧನ

ಕಾಸರಗೋಡು:  ಕೋಟ್ಯಂತರ ರೂಪಾಯಿ ವಂಚನೆ ನಡೆಸಿದ  ಸಂಬಂಧ ಹಲವು ಪ್ರಕರಣಗಳಲ್ಲಿ ಆರೋಪಿಗಳಾಗಿ ತಲೆಮರೆಸಿಕೊಂಡಿದ್ದ ಇಬ್ಬರನ್ನು  ಬೇಡಗಂ ಪೊಲೀಸರು ಬಂಧಿಸಿದ್ದಾರೆ. ಬೇಡಗಂ ಪೊಲೀಸ್ ಠಾಣೆ,   ಕೇರಳ ಹಾಗೂ ಹೊರ ರಾಜ್ಯಗಳ  ಹಲವು ಪೊಲೀಸ್ ಠಾಣೆಗಳಲ್ಲಿ ಕೇಸು ದಾಖಲಾದ ಕುಳತ್ತುಪುಳ ನೆಲ್ಲಿಮೂಡ್ ಕಾಲಿಲ್ ವೀಟಿಲ್‌ನ ಶೀಬಾ ಎಸ್ (46) ಎಂಬಾಕೆಯನ್ನು ಕೊಲ್ಲಂ ಜಿಲ್ಲೆಯ ಪುನಲೂರು ವಿಲ್ಲೇಜ್‌ನ ಪತ್ತಡಿ ಎಂಬಲ್ಲಿಂದ, ವಿಸಾ ವಂಚನೆ ಸಹಿತ ಹಲವು ಪ್ರಕರಣಗಳಲ್ಲಿ ಆರೋಪಿಯಾಗಿ ತಲೆಮರೆಸಿಕೊಂಡಿದ್ದ ಕುರಿಯನ್ ಮ್ಯಾಥ್ಯೂ ಯಾನೆ ವಿಪಿ (37) ಎಂಬಾತನನ್ನು ಕೋಟ್ಟಯಂ ಜಿಲ್ಲೆಯ …

ರಸ್ತೆ ಬದಿ ನಿಲ್ಲಿಸಿದ್ದ ಟೋರಸ್ ಲಾರಿಯ ಬ್ಯಾಟರಿ ಕಳವು

ಕುಂಬಳೆ:  ರಸ್ತೆ ಬದಿ ನಿಲ್ಲಿಸಿದ್ದ ಟೋರಸ್ ಲಾರಿಯಿಂದ ಎರಡು ಬ್ಯಾಟರಿಗಳು ಕಳವಿಗೀಡಾದ ಬಗ್ಗೆ ದೂರಲಾಗಿದೆ.   ಕುಂಬಳೆ ಭಾಸ್ಕರನಗರದ ಗುರುಪ್ರಸಾದ್ ಎಂಬವರು ನೀಡಿದ ದೂರಿನಂತೆ ಕುಂಬಳೆ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.          ನಿನ್ನೆ ಸಂಜೆ ಮನೆ ಸಮೀಪದ ರಸ್ತೆ ಬದಿಯಲ್ಲಿ ಲಾರಿಯನ್ನು ನಿಲ್ಲಿಸಲಾಗಿತ್ತು ಇಂದು ಬೆಳಿಗ್ಗೆ ನೋಡಿದಾಗ  ಲಾರಿಯ ಎರಡು ಬ್ಯಾಟರಿಗಳು ಕಳವಿಗೀಡಾ ಗಿರುವುದು ಕಂಡುಬಂದಿದೆಯೆಂದು ಗುರುಪ್ರಸಾದ್ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಇದರಿಂದ 50 ಸಾವಿರ ರೂ.ಗಳ ನಷ್ಟ ಉಂಟಾಗಿರುವುದಾಗಿಯೂ ದೂರಿನಲ್ಲಿ ತಿಳಿಸಲಾಗಿದೆ. ಕಳ್ಳರನ್ನು ಪತ್ತೆಹಚ್ಚಲು ಈ …

ಕಳಾಯಿ ಹೊಳೆಯಿಂದ ಹೊಯ್ಗೆ ಸಾಗಾಟ: ಇಬ್ಬರ ಬಂಧನ; ಲಾರಿ ವಶಕ್ಕೆ

ಉಪ್ಪಳ: ಹೊಳೆಯಿಂದ ಅನಧಿಕೃತವಾಗಿ ಹೊಯ್ಗೆ ಸಾಗಿಸುತ್ತಿದ್ದ ಇಬ್ಬರನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ.  ಮೀಂಜ ಪಂಚಾಯತ್‌ನ ಅಮೆರಡ್ಕ ಕಳ್ಳಿಗೆ  ನಿವಾಸಿ ಸದಾನಂದ (5), ಲಾರಿ ಚಾಲಕ ಕನಿಲ ಬಡಾಜೆಯ ಜಾಕಿರ್ (31) ಎಂಬಿವರು ಬಂಧಿತ ವ್ಯಕ್ತಿಗಳಾಗಿದ್ದಾರೆ. ಇವರ ವಿರುದ್ಧ ಸಾರ್ವಜನಿಕ ಸೊತ್ತು ಕಳವು ಪ್ರಕರಣ ದಾಖಲಿಸಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ. ನಿನ್ನೆ ರಾತ್ರಿ ೧೨.೩೫ಕ್ಕೆ ಮೀಂಜ ಪಂಚಾಯತ್‌ನ ಕಳಾಯಿ ಹೊಳೆಯ ಅಮೆರಡ್ಕ ಕಳ್ಳಿಗೆ ಎಂಬಲ್ಲಿಂದ ಅನಧಿಕೃತವಾಗಿ ಹೊಯ್ಗೆ ಸಾಗಿಸುತ್ತಿದ್ದ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಇದರಂತೆ  ಮಂಜೇಶ್ವರ ಸಿಐ ಜಿಜೀಶ್ …

ತಂದೆಯನ್ನು ಕಡಿದು ಗಾಯಗೊಳಿಸಿದ ಪುತ್ರ: ಕೊಲೆಯತ್ನ ಪ್ರಕರಣ ದಾಖಲು; ಆರೋಪಿ ಕಸ್ಟಡಿಗೆ

ಕಾಸರಗೋಡು: ತಂದೆಯನ್ನು ಕತ್ತಿಯಿಂದ ಕಡಿದು ಗಾಯಗೊಳಿಸಿದ ದೂರಿನಂತೆ ಪುತ್ರನ ವಿರುದ್ಧ ವಿದ್ಯಾನಗರ ಪೊಲೀಸರು ಕೊಲೆಯತ್ನ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತೆಕ್ಕಿಲ್ ಗ್ರಾಮದ ಬೆಂಡಿಚ್ಚಾಲ್ ತಾಯಲ್ ಹೌಸ್‌ನ ಅಹಮ್ಮದ್ ಇರ್ಶಾದ್ (28) ಎಂಬಾತನ ವಿರುದ್ಧ ಈ ಪ್ರಕರಣ ದಾಖಲಿಸಿಕೊಂಡಿದ್ದು,  ಆರೋಪಿಯನ್ನು  ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.  ಬೆಂಡಿಚ್ಚಾಲ್  ತಾಯಲ್  ಹೌಸ್‌ನ ಮೊಹಮ್ಮದ್ ಕುಂಞಿ (55)ಯವರಿಗೆ  ಕಡಿದು ಗಂಭೀರ ಗಾಯಗೊಳಿಸಿದ ಬಗ್ಗೆ ಅವರು ನೀಡಿದ ದೂರಿನಂತೆ ಅಹಮ್ಮದ್ ಇರ್ಷಾದ್‌ನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಹಮ್ಮದ್ ಇರ್ಷಾದ್ ತಂದೆ ಮೊಹಮ್ಮದ್ ಕುಂಞಿಯಿಂದ ಪದೇ …

ತಾಯಿಯನ್ನು ಕುತ್ತಿಗೆ ಇರಿದು ಕೊಲೆಗೈದ ಪುತ್ರ: ಕೊಲೆಗೀಡಾಗಿರುವುದು ಮಹಿಳಾ ಮೋರ್ಛಾ ಜಿಲ್ಲಾ ಸಮಿತಿ ಸದಸ್ಯೆ; ಆರೋಪಿ ಪೊಲೀಸರ ಮುಂದೆ ಶರಣು

ಕಣ್ಣೂರು: ಸ್ವಂತ ತಾಯಿಯನ್ನು ಪುತ್ರ ಕುತ್ತಿಗೆ ಇರಿದು ಕೊಲೆಗೈದ ಭೀಕರ ಘಟನೆ  ನಡೆದಿದೆ. ಕೃತ್ಯದ ಬಳಿಕ ಆರೋಪಿ ಪುತ್ರ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ಕೇಳಗಂ ಕೊಳಕ್ಕಾಡ್ ತಾನಿಕುನ್ನು ವಿನ ಮಡತ್ತಿಪರಂಬಿಲ್ ತಂಗಚ್ಚನ್ ಎಂಬವರ ಪತ್ನಿ ಗೀತಮ್ಮ (50) ಕೊಲೆಗೀಡಾದ ಮಹಿಳೆಯಾಗಿದ್ದಾರೆ.   ಇವರನ್ನು ಪುತ್ರ ಕ್ರಿಸ್ಟಿ (25) ಕುತ್ತಿಗೆ ಇರಿದು ಕೊಲೆಗೈದಿರುವುದಾಗಿ ದೂರಲಾಗಿದೆ. ಕೊಲೆಗೀಡಾದ ಗೀತಮ್ಮ ಮಹಿಳಾ ಮೋರ್ಛಾ ಕಣ್ಣೂರು ಜಿಲ್ಲಾ ಸಮಿತಿ ಸದಸ್ಯೆಯಾಗಿದ್ದಾರೆ. ನಿನ್ನೆ ರಾತ್ರಿ 10.30ರ ವೇಳೆ ಈ ಕೊಲೆ ಕೃತ್ಯ ನಡೆದಿದೆ. ಗೀತಮ್ಮರೊಂದಿಗೆ …

ರಸ್ತೆ ತಿರುವಲ್ಲಿ ವಿದ್ಯುತ್ ಕಂಬಕ್ಕೆ ಅಳವಡಿಸಿದ ಆಧಾರ ತಂತಿಯಿಂದ ಸಂಚಾರ ಸಮಸ್ಯೆ

ಮಂಜೇಶ್ವರ: ಹೊಸಂಗಡಿ ಬಳಿಯ ಬಂಗ್ರಮAಜೇಶ್ವರ ರಸ್ತೆಯ ತಿರುವುವೊಂದರಲ್ಲಿ ವಿದ್ಯುತ್ ಕಂಬಕ್ಕೆ ಅಳವಡಿಸಿದ ಆಧಾರ ತಂತಿ ವಾಹನ ಸವಾರರಿಗೆ ಆತಂಕವನ್ನುAಟುಮಾಡು ತ್ತಿದೆ. ಈ ತಂತಿ ರಸ್ತೆ ಬದಿಯಲ್ಲಿ ಅಳವಡಿಸಲಾಗಿದ್ದು, ಹೊಸಂಗಡಿ ಭಾಗಕ್ಕೆ ಬರುವ ವಾಹನ ಸವಾರರ ಗಮನಕ್ಕೆ ಬಾರದೆ ಹಾಗೂ ಎದುರಿನಿಂದ ಬರುವ ವಾಹನಕ್ಕೆ ಸೈಡು ನೀಡುವ ವೇಳೆ ಕೂಡಾ ತಂತಿಗೆ ಬಡಿದು ಅಪಘಾತ ಉಂಟಾಗುವ ಭೀತಿ ಇದೆ. ಈ ದಾರಿಯಾಗಿ ಕಟ್ಟೆ ಬಜಾರ್, ಹೊಸಬೆಟ್ಟು, ತಲಪಾಡಿ ಮೊದಲಾದ ಭಾಗಗಳಿಂದ ಹೊಸಂಗಡಿ ಪೇಟೆಗೆ ದಿನನಿತ್ಯ ನೂರಾರು ವಾಹನಗಳು ಸಂಚಾರ …

ತೆಂಗಿನ ಮರದಿಂದ ಬಿದ್ದು ಚಿಕಿತ್ಸೆಯಲ್ಲಿದ್ದ ಯುವಕ ಇಲಿ ವಿಷ ಸೇವಿಸಿ ಆತ್ಮಹತ್ಯೆ

ಕಾಸರಗೋಡು: ಮನೆ ಯಂಗಳದ ತೆಂಗಿನಮರದಿಂದ ಬಿದ್ದು ಗಂಭೀರ ಗಾಯಗೊಂಡು  ೧೩ ವರ್ಷಗಳಿಂದ ಚಿಕಿತ್ಸೆಯಲ್ಲಿದ್ದ ಯುವಕ ಇಲಿವಿಷ ಸೇವಿಸಿ ಆತ್ಮಹತ್ಯೆಗೈದಿದ್ದಾರೆ. ವೆಳ್ಳರಿಕುಂಡ್ ಬಳಾಲ್ ಪಡಯಂಗಲ್ ನಿವಾಸಿ ಕುಂಞಿರಾಮನ್‌ರ ಪುತ್ರ ಕೆ. ಬೈಜು (೩೮) ಆತ್ಮಹತ್ಯೆಗೈದ ಯುವಕ. ಗುರುವಾರ ಅಪರಾಹ್ನ ಬೈಜು ವಿಷ ಸೇವಿಸಿ ಅಸ್ವಸ್ಥ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆ. ಕೂಡಲೇ ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ತಲುಪಿಸಲಾಯಿತಾದರೂ ನಿನ್ನೆ ಬೆಳಿಗ್ಗೆ ನಿಧನ ಸಂಭವಿಸಿದೆ. ೧೩ ವರ್ಷದ ಹಿಂದೆ ಮನೆಯಂಗಳದ ತೆಂಗಿನ ಮರಕ್ಕೆ ಹತ್ತಿದಾಗ ಬಿದ್ದು ಗಾಯಗೊಂಡಿದ್ದರು. ಆ ಬಳಿಕ …