ಬೆಳಿಂಜಗುತ್ತು ಪುನರ್ ಪ್ರತಿಷ್ಠೆ, ಧರ್ಮ ನೇಮೋತ್ಸವ

ಕುಂಬ್ಡಾಜೆ: ಬೆಳಿಂಜಗುತ್ತು ಪುನರ್ ಪ್ರತಿಷ್ಠೆ ಮತ್ತು ತರವಾಡು ಮನೆಯ ಪ್ರವೇಶೋತ್ಸವ, ಬ್ರಹ್ಮಕಲಶದಂಗವಾಗಿ ನಡೆದ ಧಾರ್ಮಿಕ ಸಭೆಯನ್ನು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಉದ್ಘಾಟಿಸಿ ಆಶೀರ್ವಚನ ನೀಡಿದರು. ಬಾಲಕೃಷ್ಣ ಆಳ್ವ ಅರಂಬೂರು ಅಧ್ಯಕ್ಷತೆ ವಹಿಸಿದರು. ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ ಧಾರ್ಮಿಕ ಭಾಷಣ ಮಾಡಿದರು. ಬಂಟರ ಸಂಘ ಜಿಲ್ಲಾಧ್ಯಕ್ಷ ನ್ಯಾಯವಾದಿ ಸುಬ್ಬಯ್ಯ ರೈ, ಕುಂಬ್ಡಾಜೆ ಪಂಚಾಯತ್ ಉಪಾಧ್ಯಕ್ಷ ರವೀಂದ್ರ ರೈ, ಬ್ರಹ್ಮಕಲಶ ಸಮಿತಿ ಅಧ್ಯಕ್ಷ ರಾಮಣ್ಣ ಶೆಟ್ಟಿ, ಉದ್ಯಮಿ ಹರಿಪ್ರಸಾದ್ ರೈ ಪುತ್ರಕಳ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ತರವಾಡಿಗೆ …

ಮಹಿಳಾ ಮೀಸಲಾತಿ ಮಸೂದೆ ವಿರೋಧದ ಮೂಲಕ ದ. ಭಾರತ ರಾಜ್ಯಗಳ ಜನರಿಗೆ ವಿಪಕ್ಷಗಳಿಂದ ವಂಚನೆ- ಕೆ. ರಂಜಿತ್

ಕಾಸರಗೋಡು: ಮಹಿಳಾ ಮೀಸಲಾತಿ ಮಸೂದೆಯನ್ನು ವಿರೋಧಿ ಸುವ ಮೂಲಕ  ಹೆಚ್ಚು ಜನಪ್ರತಿ ನಿಧಿಗಳು ಲಭಿಸಬಹುದಾಗಿದ್ದ ದಕ್ಷಿಣ ಭಾರತದ ರಾಜ್ಯಗಳ ಜನರನ್ನು ವಂಚಿಸಲಾಗಿದೆ ಎಂದು, ಆದರೆ ಈ ಮಸೂದೆಯನ್ನು ಎಲ್ಲಾ ಕಾಲದಲ್ಲೂ ಕಾಂಗ್ರೆಸ್ ಸಹಿತದ ವಿಪಕ್ಷಗಳಿಗೆ  ತಡೆಹಿಡಿಯಲು ಸಾಧ್ಯವಿಲ್ಲವೆಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಕೆ. ರಂಜಿತ್ ನುಡಿದರು. ಮಹಿಳಾ ಮೀಸಲಾತಿ ಮಸೂದೆಯನ್ನು ಸೋಲಿಸಲು ನೇತೃತ್ವ ನೀಡಿದ ಕಾಂಗ್ರೆಸ್ ಸಹಿತ ವಿಪಕ್ಷಗಳ ವಿರುದ್ಧ ಬಿಜೆಪಿ ಜಿಲ್ಲಾ ಸಮಿತಿ ಹೊಸ ಬಸ್ ನಿಲ್ದಾಣ ಪರಿಸರ ದಲ್ಲಿ ಆಯೋಜಿಸಿದ ಪ್ರತಿಭಟನಾ ಸಭೆಯನ್ನು ಉದ್ಘಾಟಿಸಿ …