ಕಾಸರಗೋಡು: ಮಹಿಳಾ ಮೀಸಲಾತಿ ಮಸೂದೆಯನ್ನು ವಿರೋಧಿ ಸುವ ಮೂಲಕ ಹೆಚ್ಚು ಜನಪ್ರತಿ ನಿಧಿಗಳು ಲಭಿಸಬಹುದಾಗಿದ್ದ ದಕ್ಷಿಣ ಭಾರತದ ರಾಜ್ಯಗಳ ಜನರನ್ನು ವಂಚಿಸಲಾಗಿದೆ ಎಂದು, ಆದರೆ ಈ ಮಸೂದೆಯನ್ನು ಎಲ್ಲಾ ಕಾಲದಲ್ಲೂ ಕಾಂಗ್ರೆಸ್ ಸಹಿತದ ವಿಪಕ್ಷಗಳಿಗೆ ತಡೆಹಿಡಿಯಲು ಸಾಧ್ಯವಿಲ್ಲವೆಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಕೆ. ರಂಜಿತ್ ನುಡಿದರು. ಮಹಿಳಾ ಮೀಸಲಾತಿ ಮಸೂದೆಯನ್ನು ಸೋಲಿಸಲು ನೇತೃತ್ವ ನೀಡಿದ ಕಾಂಗ್ರೆಸ್ ಸಹಿತ ವಿಪಕ್ಷಗಳ ವಿರುದ್ಧ ಬಿಜೆಪಿ ಜಿಲ್ಲಾ ಸಮಿತಿ ಹೊಸ ಬಸ್ ನಿಲ್ದಾಣ ಪರಿಸರ ದಲ್ಲಿ ಆಯೋಜಿಸಿದ ಪ್ರತಿಭಟನಾ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಈ ಮಸೂದೆ ಜ್ಯಾರಿಯಾಗಿದ್ದರೆ ರಾಜ್ಯಕ್ಕೆ 30 ಲೋಕಸಭಾ ಸದಸ್ಯರು ಲಭಿಸುತ್ತಿದ್ದರು. ಮಹಿಳಾ ಮೀಸಲಾತಿ ಮಸೂದೆ ಸಂಸತ್ತಿನಲ್ಲಿ ಮಂಡಿಸಿರುವುದ ರಲ್ಲಿ ರಾಜಕೀಯ ಆಸಕ್ತಿ ಇಲ್ಲ. 2026ರಲ್ಲಿ ಸಮೀಕ್ಷೆ ಪೂರ್ತಿಗೊಂಡರೆ ಅದರ ಆಧಾರದಲ್ಲಿ ಮಂಡಲ ಪುನರ್ ನಿರ್ಣಯ ನಡೆಯಬೇಕಾಗಿದೆ. ಅದರ ಬಳಿಕ ಮಹಿಳಾ ಮೀಸಲಾತಿ ಕ್ರಮ ಆರಂಭಿಸಿದರೆ ಮುಂದಿನ ಲೋಕಸಭಾ ಚುನಾವಣೆಯಲ್ಲೂ 33ಶೇ. ಮೀಸಲಾತಿ ಜ್ಯಾರಿ ಸಾಧ್ಯವಾಗುತ್ತಿರಲಿಲ್ಲ. ಆದುದ ರಿಂದ ಈ ಮಸೂದೆ ವಿಳಂಬ ಮಾಡದೆ ಸಂಸತ್ತಿನಲ್ಲಿ ಮಂಡಿಸಲಾಗಿದೆ ಎಂದವರು ನುಡಿದರು. ಇದಕ್ಕೂ ಮೊದಲು ಶಾಬಾನು ಪ್ರಕರಣ, ಮುತ್ತಲಾಖ್‌ನಲ್ಲೂ ಕಾಂಗ್ರೆಸ್ ಸಹಿತದ ಪಕ್ಷಗಳು ಮಹಿಳಾ ವಿರುದ್ಧ ನಿಲುವು ಹೊಂದಿದ್ದವು ಎಂದು ಅವರು ಆರೋಪಿಸಿದರು. ಆರ್ಟಿಕಲ್ 370ರದ್ದು, ತೆರಿಗೆ ಪರಿಷ್ಕರಣೆ ಜ್ಯಾರಿ ಸಹಿತದ ಐತಿಹಾಸಿಕ ಪರಿಷ್ಕಾರಗಳ ಜೊತೆಗೆ ಸ್ಥಾನ ಪಡೆಯಬಹುದಾಗಿದ್ದ ಮಸೂದೆಯನ್ನು ವಿಪಕ್ಷಗಳು ಪರಾಜಯ ಗೊಳಿಸಿವೆ ಎಂದು ಅವರು ನುಡಿದರು. ಜಿಲ್ಲಾ ಅಧ್ಯಕ್ಷೆ ಎಂ.ಎಲ್. ಅಶ್ವಿನಿ ಅಧ್ಯಕ್ಷತೆ ವಹಿಸಿದರು. ಬಿಜೆಪಿ ರಾಜಕೀಯ ಕೌನ್ಸಿಲ್ ಸದಸ್ಯೆ ಪ್ರಮೀಳ ಸಿ. ನಾಯ್ಕ್, ರಾಜ್ಯ ಸಮಿತಿ ಸದಸ್ಯರಾದ ಸವಿತ ಟೀಚರ್, ಸತೀಶ್ಚಂದ್ರ ಭಂಡಾರಿ, ಜಿಲ್ಲಾ ಉಪಾಧ್ಯಕ್ಷೆ ಎಚ್.ಆರ್. ಸುಕನ್ಯ, ಕಾರ್ಯದರ್ಶಿಗಳಾದ ಪುಷ್ಪಾ ಗೋಪಾಲನ್, ಪ್ರಮೀಳ ಮಜಲ್, ಅಶ್ವಿನಿ ಕೆ.ಎಂ, ಮಧೂರು ಪಂ. ಅಧ್ಯಕ್ಷೆ ಸುಜ್ಞಾನಿ ಶ್ಯಾನುಭೋಗ್, ಬೆಳ್ಳೂರು ಪಂ. ಅಧ್ಯಕ್ಷೆ ಮಾಲಿನಿ, ಮಹಿಳಾ ಮೋರ್ಚಾ ಜಿಲ್ಲಾ ಅಧ್ಯಕ್ಷೆ ಕೆ.ಎಸ್. ರಮಣಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಳಾದ ಅನಿತ ಆರ್. ನಾಯ್ಕ್, ಪ್ರೇಮ ಲತಾ ಎಸ್. ಜಯಂತಿ ಶೆಟ್ಟಿ ಮಾತನಾ ಡಿದರು. ತಾಳಿಪಡ್ಪು ಮೈದಾನದಿಂದ ಆರಂಭಿಸಿದ ಪ್ರತಿಭಟನಾ ಮಾರ್ಚ್‌ನಲ್ಲಿ ನೂರಾರು ಮಹಿಳೆಯರು ಭಾಗವಹಿಸಿದರು.






