ಚೆರುವತ್ತೂರು ಮಟ್ಟಲಾಯಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿರುಕು: ತನಿಖೆಗೆ ಜಿಲ್ಲಾಧಿಕಾರಿ ಆದೇಶ

ಕಾಸರಗೋಡು: ಚೆರುವತ್ತೂರು ಮಟ್ಟಲಾಯಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿರುಕು ಸಂಬಂಧ ತುರ್ತು ತಪಾಸಣೆ ನಡೆಸಿ ವರದಿ ನೀಡಲು ಜಿಲ್ಲಾಧಿಕಾರಿ ಅರ್ಜುನ್ ಪಾಂಡ್ಯನ್ ಆದೇಶಿಸಿದರು. ಸ್ಥಳ ಪರಿಶೀಲನೆ ನಡೆಸಿ ತುರ್ತಾಗಿ ವರದಿ ನೀಡುವುದಕ್ಕೆ ತನಿಖಾ ತಂಡವನ್ನು ಜಿಲ್ಲಾಧಿಕಾರಿ ನೇಮಕಗೊಳಿಸಿದ್ದಾರೆ. ಕಾಞಂಗಾಡ್ ಆರ್‌ಡಿಒರ ನೇತೃತ್ವದಲ್ಲಿರುವ ತಂಡ ತಪಾಸಣೆ ನಡೆಸಲಿದೆ. ರೆವೆನ್ಯೂ ಡಿವಿಶನಲ್ ಆಫೀಸರ್ ಸಂಚಾಲಕರಾಗಿ, ತಹಶೀಲ್ದಾರ್, ಲೋಕೋಪಯೋಗಿ ರಸ್ತೆ ವಿಭಾಗ ಎಕ್ಸಿಕ್ಯೂಟಿವ್ ಇಂಜಿನಿಯರ್, ಆರ್‌ಟಿಒ, ಚೆರುವತ್ತೂರು ಪಂ. ಕಾರ್ಯದರ್ಶಿ, ಸೋಯಿಲ್ ಕನ್ಸರ್ವೇಟರ್, ಜಿಯೋಲಜಿಸ್ಟ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರೊಜೆಕ್ಟ್ ಡೈರೆಕ್ಟರ್, ಜಿಲ್ಲಾ …

ಕುಂಬಳೆ ಅಂಚೆ ಕಚೇರಿ ನಿರ್ಮಾಣ: ಶಾಲಾ ಮೈದಾನಕ್ಕಿರುವ  ದಾರಿ ಮುಚ್ಚಲು ಯತ್ನ; ಸ್ಥಳೀಯರಿಂದ ಪ್ರತಿಭಟನೆ

ಕುಂಬಳೆ: ಅಂಚೆ ಕಚೇರಿಗಾಗಿ ಕಟ್ಟಡ ನಿರ್ಮಿಸುವಾಗ ಸ್ಥಳೀಯರ ಸಂಚಾರ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟಾಗುತ್ತಿದೆ ಎಂದು ದೂರಲಾಗಿದೆ. ಅಂಚೆ ಇಲಾಖೆಯ ಅಧೀನದಲ್ಲಿರುವ ಕುಂಬಳೆ ಮೀನು ಮಾರುಕಟ್ಟೆ ಸಮೀಪದ ಸ್ಥಳದಲ್ಲಿ ಅಂಚೆ ಕಚೇರಿ ನಿರ್ಮಿಸುವುದ ರಂಗವಾಗಿ ಹಲವು ಕಾಲಗಳಿಂದ ಸ್ಥಳೀಯರು ಉಪಯೋಗಿಸುತ್ತಿದ್ದ ದಾರಿಯನ್ನು ಮುಚ್ಚಲಾಗಿದೆ ಎಂದು ದೂರಲಾಗಿದೆ. ಅಂಚೆ ಕಚೇರಿಗೆ ಆವರಣಗೋಡೆ ನಿರ್ಮಿಸುವ ಹೆಸರಲ್ಲಿ ಸ್ಥಳೀಯರ ದಾರಿಯನ್ನು ಮುಚ್ಚಲಾಗಿದೆ. ಕುಂಬಳೆಯ ಬಾಡಿಗೆ ಕಟ್ಟಡದಲ್ಲಿ ಕಾರ್ಯಾಚರಿಸುವ ಅಂಚೆ ಕಚೇರಿಗೆ ಸ್ವಂತವಾಗಿ ಕಟ್ಟಡ ನಿರ್ಮಿಸಲು ಅಂಚೆ ಇಲಾಖೆ ಯೋಜನೆ ಹಾಕಿತ್ತು. ಕಟ್ಟಡದ ಹೆಚ್ಚಿನ …