ಆಶಾ ಕಾರ್ಯಕರ್ತೆಯರನ್ನು ಸರಕಾರಿ ನೌಕರರಾಗಿ ಅಂಗೀಕರಿಸಬೇಕು- ಸೋನಿ ಸತ್ಯನ್

ಕಾಸರಗೋಡು: ಕೇರಳ ಪ್ರದೇಶ್ ಆಶಾವರ್ಕರ್ಸ್ ಸಂಘ (ಬಿಎಂಎಸ್) ವಾರ್ಷಿಕ ಸಮ್ಮೇಳನ ಬಿಎಂಎಸ್ ಕಚೇರಿಯಲ್ಲಿ ನಡೆಯಿತು. ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಸೋನಿ ಸತ್ಯನ್ ಪತ್ತನಂತಿಟ್ಟ ಉದ್ಘಾಟಿಸಿದರು. ಅವರು ಮಾತನಾಡಿ, ಆರೋಗ್ಯವಲಯ ದಲ್ಲಿ ಅತ್ಯಂತ ಕೆಳ ಸ್ತರದಲ್ಲಿ ಕಾರ್ಯಾ ಚರಿಸುವ ಆಶಾ ಕಾರ್ಯಕರ್ತೆಯರಿಗೆ ಅವರಿಗೆ ಅರ್ಹತೆ ಇರುವ ವೇತನ ನೀಡಬೇಕೆಂದು, ಆಶಾ ಕಾರ್ಯಕರ್ತೆಯರನ್ನು ಸರಕಾರಿ ನೌಕರರಾಗಿ ಅಂಗೀಕರಿಸಬೇಕೆಂದು, ವೇತನ ನಿಗದಿಪಡಿಸಬೇಕೆಂದು ಆಗ್ರಹಿಸಿದರು. ಯೂನಿಯನ್ ಅಧ್ಯಕ್ಷೆ ಜಯಲಕ್ಷ್ಮಿ ಮೀಂಜ ಅಧ್ಯಕ್ಷತೆ ವಹಿಸಿದರು. ಬಿಎಂಎಸ್ ಜಿಲ್ಲಾ ಜೊತೆ ಕಾರ್ಯದರ್ಶಿ ಯಶವಂತಿ ಮಂಜೇಶ್ವರ …