ಚಿನ್ನದ ಬೆಲೆಯಲ್ಲಿ ಒಮ್ಮೆಲೆ 10,200 ರೂ. ಏರಿಕೆ: ಆಭರಣಪ್ರಿಯರಿಗೆ ಭಾರೀ ಶಾಕ್

ಕಾಸರಗೋಡು: ರಾಜ್ಯದಲ್ಲಿ ಚಿನ್ನದ ಬೆಲೆಯಲ್ಲಿ ಒಂದೇ ಬಾರಿಗೆ 10,200 ರೂಪಾಯಿಗಳ ಹೆಚ್ಚಳ ಉಂಟಾಗಿದೆ. ಗ್ರಾಂಗೆ ಇಂದು 10,200 ರೂ.ಗಳ ಹೆಚ್ಚಳವಾಗಿದ್ದು, ಇದರಿಂದ ಒಂದು ಪವನ್ ಚಿನ್ನದ ದರ 1,23,120 ರೂಪಾಯಿ ಗೇರಿದೆ.  ಇದೇ ವೇಳೆ ಚಿನ್ನದ ಬೆಲೆ ಮತ್ತಷ್ಟು ಹೆಚ್ಚಿರುವುದು  ಗ್ರಾಹಕರಿಗೆ ಹಾಗೂ  ಚಿನ್ನ ವ್ಯಾಪಾರಿ ಗಳಿಗೆ ಸಂದಿಗ್ಧತೆ ಉಂಟುಮಾಡಿದೆ.  ಚಿನ್ನದ ಆಮದು ಸುಂಕವನ್ನು ಕೇಂದ್ರ ಸರಕಾರ ೬ರಿಂದ ೧೫ ಶೇಕಡಾಕ್ಕೇರಿಸಿದೆ. ಇಂದಿನಿಂದ ಈ ಹೊಸ ತೀರ್ಮಾನ ಜ್ಯಾರಿಗೆ ಬಂದಿದೆ. 2024ರಲ್ಲಿ ಆಮದು ಸುಂಕ 15 ಶೇಕಡಾವಾಗಿತ್ತು. …

ಕಿಸಾನ್ ಸೇನೆ ನೇತಾರ ಶುಕೂರ್ ಕಾನಾಜೆ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ: ಡೆತ್ ನೋಟ್ ಪತ್ತೆ

ಕುಂಬಳೆ:  ಮಾಜಿ ಕಾಂಗ್ರೆಸ್ ಕಾರ್ಯಕರ್ತ, ಕಿಸಾನ್ ಸೇನೆಯ ರಾಜ್ಯ, ಜಿಲ್ಲಾ ನೇತಾರನಾದ ಶುಕೂರ್ ಕಾನಾಜೆ (55) ತರವಾಡು ಮನೆಯೊಳಗೆ ನೇಣುಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಎಂದಿನಂತೆ ನಿನ್ನೆ ಬಳಿಗ್ಗೆ ಪುತ್ತಿಗೆ ಕಟ್ಟತ್ತಡ್ಕದ ಮನೆಯಿಂದ ಕಾನಾಜೆಯಲ್ಲಿರುವ ತೋಟಕ್ಕೆ ತೆರಳಿದ್ದರು. ದೀರ್ಘ ಹೊತ್ತು ಕಳೆದರೂ ಅವರು ಮರಳಿ ಬಾರದ ಹಿನ್ನೆಲೆಯಲ್ಲಿ ಮನೆಯವರು ಅವರ ಫೋನ್‌ಗೆ ಕರೆಮಾಡಿದರೂ ಪ್ರತಿಕ್ರಿಯೆ ಲಭಿಸಿಲ್ಲ.  ಸಂಬಂಧಿಕರು, ನಾಗರಿಕರು ಹಾಗೂ ಸ್ನೇಹಿತರು ಕೂಡಾ ಫೋನ್ ಕರೆಮಾಡಿದರೂ ಕರೆ ಸ್ವೀಕರಿಸಲಿಲ್ಲ. ಈ ಹಿನ್ನೆಲೆಯಲ್ಲಿ ಸಂಬಂಧಿಕರು ಕಾನಾಜೆಯ ತೋಟ ಸಮೀಪದಲ್ಲಿರುವ …

ಸಿಡಿಲು ಬಡಿದು ಮನೆಗೆ ಬೆಂಕಿ: ಮನೆಯೊಡತಿ ಅದೃಷ್ಟವಶಾತ್ ಅಪಾಯದಿಂದ ಪಾರು

ಕಾಸರಗೋಡು: ಸಿಡಿಲು ಬಡಿದ ಪರಿಣಾಮ ಮನೆಗೆ ಬೆಂಕಿ ತಗಲಿದ ಘಟನೆ ನಗರದ ಕಸಬಾ ಕಡಪ್ಪುರದಲ್ಲಿ ನಿನ್ನೆ ರಾತ್ರಿ ನಡೆದಿದೆ. ಕಸಬಾ ಕಡಪ್ಪುರದ ಮೀನಾಕ್ಷಿ ಎಂಬವರ ಮಾಲಕತ್ವದಲ್ಲ್ಲಿರುವ ಹೆಂಚು ಹಾಸಿದ ಮನೆಗೆ ಸಿಡಿಲು ಬಡಿದಿದೆ.  ಮನೆಯೊಳಗಿನ ಫ್ರಿಡ್ ನಿಂದ ಮೊದಲು ಬೆಂಕಿ ಕಾಣಿಸಿಕೊಂಡಿದೆ. ಅನಂತರ ಟಿವಿ, ಫ್ಯಾನ್, ಹಾಸಿಗೆ ಬಟ್ಟೆಬರೆಗಳಿಗೂ ಬೆಂಕಿ ಹರಡಿದೆ.  ಈ ವೇಳೆ ಮನೆ ಮಾಲಕಿ ಹೊರಕ್ಕೆ ಓಡಿದುದರಿಂದ ಸಂಭಾವ್ಯ ಅಪಾಯದಿಂದ ಪಾರಾಗಿ ದ್ದಾರೆ. ಈ ಬಗ್ಗೆ ಲಭಿಸಿದ ಮಾಹಿತಿ ಯಂತೆ ಸೀನಿಯರ್ ಫಯರ್ ಆಂಡ್ …

ಸಂಚರಿಸುತ್ತಿದ್ದ ಕಾರಿನ ಮೇಲೆ  ಬಿದ್ದ ಮರ : ವೈದ್ಯ ಅದೃಷ್ಟವಶಾತ್ ಅಪಾಯದಿಂದ ಪಾರು

ಪೆರ್ಲ: ಸಂಚರಿಸುತ್ತಿದ್ದ ಕಾರಿನ ಮೇಲೆ ಬೃಹತ್ ಮರ ಬುಡ ಸಹಿತ ಮಗುಚಿ ಬಿದ್ದಿದ್ದು ಪ್ರಯಾಣಿಕ  ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ. ಕಾರು ಪ್ರಯಾಣಿಕ ನಾದ  ಪೆರ್ಲ ಬಳಿಯ ಬರೆಕೆರೆ ನಿವಾಸಿ ಡಾ| ವಿಷ್ಣು ಪ್ರಸಾದ್ ಎಂಬವರು ಯಾವುದೇ ಗಾಯಗಳಿಲ್ಲದೆ ಅಪಾಯದಿಂದ ಪಾರಾ ಗಿದ್ದಾರೆ. ಪೆರ್ಲ ಬಳಿಯ ಮಣಿಯಂ ಪಾರೆಯಲ್ಲಿ ನಿನ್ನೆ ಸಂಜೆ 6 ಗಂಟೆ ವೇಳೆ ಈ ದುರ್ಘಟನೆ ಸಂಭವಿಸಿದೆ.  ಕಾರು ಪೂರ್ಣವಾಗಿ ಹಾನಿಗೀಡಾಗಿದೆ. ಇದೇ ವೇಳೆ ವಿದ್ಯುತ್ ಕಂಬ, ತಂತಿಗಳು ಹಾಗೂ ಮರ ರಸ್ತೆ ಮೇಲೆ ಅಪ್ಪಳಿಸಿದೆ. …

ಬೆದ್ರಂಪಳ್ಳ ಬನ- ಬಲ್ತಕಲ್ಲು- ಪಾಟ್ಲದಳ ರಸ್ತೆ ಕಳಪೆ ಕಾಮಗಾರಿ ತಡೆದ ಸ್ಥಳೀಯರು: ಅಧಿಕಾರಿಗಳಿಂದ ಪರಿಹಾರ ಭರವಸೆ

ಪೆರ್ಲ: ಸರಕಾರಿ ಹಣವನ್ನು ಸೂಕ್ತ ರೀತಿಯಲ್ಲಿ ಉಪಯೋಗಿಸದಿರುವುದರ ಪ್ರತ್ಯಕ್ಷ ಉದಾಹರಣೆಯಾಗಿ ಎಣ್ಮಕಜೆ ಪಂಚಾಯತ್‌ನ 16ನೇ ವಾರ್ಡ್ ಬೆದ್ರಂಪಳ್ಳ ಬನ ರಸ್ತೆ ಕಂಡು ಬರುತ್ತಿದೆ. ಸುಮಾರು 2.800 ಕಿಲೋ ಮೀಟರ್ ರಸ್ತೆಯ ಅಭಿವೃದ್ಧಿಗಾಗಿ 2023-24 ನೇ ವರ್ಷದ ಮುಂಗಡ ಪತ್ರದಲ್ಲಿ 70 ಲಕ್ಷ ರೂ. ಮೀಸಲಿಡಲಾಗಿತ್ತು. ಹಲವಾರು ವರ್ಷಗಳಿಂದ ಸಂಚಾರ ದುಸ್ತರಗೊಂಡ ಬೆದ್ರಂಪಳ್ಳ ಬನ- ಬಲ್ತಕಲ್ಲು- ಪಾಟ್ಲದಳ ಸಂಪರ್ಕ ರಸ್ತೆಯನ್ನು ದುರಸ್ತಿಗೊಳಿಸಬೇಕೆಂಬ ಜನರ ಬೇಡಿಕೆಯಂತೆ ಶಾಸಕ  ಎಕೆಎಂ ಅಶ್ರಫ್‌ರ ಒತ್ತಡದಿಂದ ಮೊತ್ತ ಮಂಜೂರಾಗಿತ್ತು. 2025 ಜೂನ್ 23ರಂದು ರಸ್ತೆ …

ಕಳಿಯಾಟ ನೋಡಲೆಂದು ಹೋದ ಸಮಯದಲ್ಲಿ ಮನೆಯಲ್ಲಿ ಕಳವು: ಕಳಿಯಾಟ ನೋಡಲೆಂದು ಹೋದ ಸಮಯದಲ್ಲಿ ಮನೆಯಲ್ಲಿ ಕಳವು; ಇನ್ನೋರ್ವ ಆರೋಪಿಬಸ್ ಪ್ರಯಾಣ ಮಧ್ಯೆ ಸೆರೆ

ಕಾಸರಗೋಡು:  ಚೀಮೇನಿಯಲ್ಲಿ ನಡೆದ ಕಳಿಯಾಟಂಗೆ ಕುಟುಂಬ ತೆರಳಿದ ಸಮಯದಲ್ಲಿ ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳನ್ನು ಕಳವುಗೈದ ಪ್ರಕರಣದ ದ್ವಿತೀಯ ಆರೋಪಿಯನ್ನು ಬಸ್ ಪ್ರಯಾಣ ಮಧ್ಯೆ ಪೊಲೀಸರು ಸೆರೆ ಹಿಡಿದಿದ್ದಾರೆ. ತೈತಪ್ರಂ ಪಾಣತ್ತನಡಿಯ ಎ.ಪಿ. ಹರಿದಾಸ್ (42)ನನ್ನು ಚೀಮೇನಿ ಪೊಲೀಸರು ಅರಮಂಙತ್‌ನಲ್ಲಿ ಸೆರೆ ಹಿಡಿದಿದ್ದಾರೆ. ತಲೆಮರೆಸಿಕೊಂಡಿದ್ದ ಹರಿದಾಸ್ ಬಸ್‌ನಲ್ಲಿ ಪ್ರಯಾಣಿಸು ತ್ತಿದ್ದಾನೆಂಬ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ದಾವಿಸಿ ಸೆರೆ ಹಿಡಿದ್ದಾರೆ. ಪ್ರಕರಣದ ಪ್ರಧಾನ ಆರೋಪಿಯಾದ ಕಾನಾಯಿ ತಂಬಾನ್ ಇತ್ತೀಚೆಗೆ ಸೆರೆಯಾಗಿದ್ದನು. ಚೀಮೇನಿ ಪೇಟೆಯ ಚೇತನ …

ಶ್ರೀ ಶಂಕರ ಭಗವತ್ಪಾದರು ತೋರಿಸಿದ ಮಾರ್ಗದಲ್ಲಿ ಮುನ್ನಡೆಯಬೇಕು- ಎಡನೀರು ಮಠದಲ್ಲಿ ಶೃಂಗೇರಿಶ್ರೀ

ಎಡನೀರು: ಶ್ರೀಶಂಕರ ಭಗವತ್ಪಾದರ ತತ್ವಗಳ ಪಾಲನೆ ಆತ್ಮೋದ್ಧಾರದೊಂದಿಗೆ ಸಕಲ ಸಂಕಷ್ಟಗಳಿಗೆ ಪರಿಹಾರ ನೀಡುತ್ತದೆ ಎಂದು ಶೃಂಗೇರಿ ದಕ್ಷಿಣಾಮ್ನಾಯ ಶ್ರೀ ಶಾರದಾಪೀಠದ ಜಗದ್ಗುರು ಶ್ರೀ ವಿಧುಶೇಖರಭಾರತೀ ಸ್ವಾಮೀಜಿ ನುಡಿದರು. ಎಡನೀರು ಮಠದಲ್ಲಿ ನೂತನವಾಗಿ ನಿರ್ಮಿಸಿದ ಶಿಲಾಮಯ ಮಂಟಪದಲ್ಲಿ ಜಗದ್ಗುರು ಶ್ರೀ ಶಂಕರ ಭಗವತ್ಪಾದಾಚಾರ್ಯರ ಪಂಚಲೋಹದ ಪ್ರತಿಮೆಯ ಪ್ರತಿಷ್ಠಾಪನೆ ನೆರವೇರಿಸಿ ಅವರು ಆಶೀರ್ವಚನ ನೀಡಿದರು. ನಮಗೆ ಭಾರತದೊಳಗೆ ಸನಾತನ ಧರ್ಮದ ಐಕ್ಯಮತ್ಯವೇ ಪ್ರಧಾನ. ಆಚಾರಾನುಷ್ಠಾನಗಳ ಹೆಸರಲ್ಲಿ ಉತ್ತರಭಾರತ- ದಕ್ಷಿಣ ಭಾರತ ಎಂಬ ವಿಭಜನೆ ಸಲ್ಲದು ಎಂದರು. ದೇಶದ ಚತುರಾಮ್ನಾಯ ಪೀಠ …

ಬೈಕ್ ಕಂದಕಕ್ಕೆ ಬಿದ್ದು ಸವಾರ ಮೃತ್ಯು

ಕಾಸರಗೋಡು: ಬೈಕ್ ನಿಯಂತ್ರಣ ತಪ್ಪಿ ಕಂದಕಕ್ಕೆ ಬಿದ್ದು ಸವಾರ ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ. ನೀಲೇಶ್ವರಕ್ಕೆ ಸಮೀಪದ ಚಾತಮತ್ತ್ ಚುಳ್ಳಿಕ್ಕಾಡ್  ನಿವಾಸಿ ರಾಘವನ್ ಕೆ.ವಿ- ವಸುಮತಿ ದಂಪತಿ ಪುತ್ರ ಕೆ.ವಿ. ಶಿನೋಯ್ (41) ಸಾವಾನಪ್ಪಿದ ದುರ್ದೈವಿ. ಈ ಹಿಂದೆ ಗಲ್ಫ್‌ನಲ್ಲಿ ದುಡಿಯುತ್ತಿದ್ದ ಇವರು ಇತ್ತೀಚೆಗಷ್ಟೇ ಊರಿಗೆ ಹಿಂತಿರುಗಿ ಇಲ್ಲೇ ದುಡಿಯುತ್ತಿದ್ದರು. ಶಿನೋಯ್ ನಿನ್ನೆ ಮಧ್ಯಾಹ್ನ ಬೈಕ್‌ನಲ್ಲಿ ಹೋಗುತ್ತಿದ್ದ ದಾರಿ ಮಧ್ಯೆ ನೀಲೇಶ್ವರ ಕರುವಂತಲ ರಸ್ತೆಯ ಚಾತಮತ್‌ನಲ್ಲಿ ಬೈಕ್ ನಿಯಂತ್ರಣ ತಪ್ಪಿ ಕಂದಕಕ್ಕೆ ಬಿದ್ದು, ದುರ್ಘಟನೆ ನಡೆದಿದೆ. ಅಪಘಾತದ …

ಮಟ್ಟಲಾಯಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿರುಕು ಅಧಿಕಾರಿಗಳ ತಂಡದಿಂದ ಸ್ಥಳ ಪರಿಶೀಲನೆ

ಹೊಸದುರ್ಗ: ಚೆರುವತ್ತೂರು ಮಟ್ಟಲಾಯಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿರುಕು ಕಂಡು ಬಂದಿರುವುದಕ್ಕೆ ಸಂಬಂಧಿಸಿ ತನಿಖಾವರದಿ ಸಲ್ಲಿಸುವುದಕ್ಕಾಗಿ ಜಿಲ್ಲಾಧಿಕಾರಿ ನೇಮಕಗೊಳಿಸಿದ ಅಧಿಕಾರಿಗಳ ತಂಡ ಸ್ಥಳ ಪರಿಶೀಲನೆ ನಡೆಸಿದೆ. ಕಾಞಂಗಾಡ್ ಆರ್‌ಡಿಒರ ಪ್ರತಿನಿಧಿ ಸೀನಿಯರ್ ಸುಪರಿಂಟೆಂಡೆಂಟ್ ಇ.ಎಂ. ಬಿಜು, ಹೊಸದುರ್ಗ ತಹಶೀಲ್ದಾರ್ ಪಿ.ಕೆ. ಪ್ರೇಮಾನಂದ್ ಸಹಿತ ಹಲವು ಉನ್ನತ ಅಧಿಕಾರಿಗಳು ತಂಡದಲ್ಲಿದ್ದರು.  ಪಿಲಿಕ್ಕೋಡ್ ಪಂಚಾಯತ್ ಅಧ್ಯಕ್ಷ ಇ. ಕುಂಞಿರಾಮನ್ ಸಮಸ್ಯೆಗಳ ಬಗ್ಗೆ ವಿವರಿಸಿದರು. ಜನಪ್ರತಿನಿಧಿಗಳು, ಕಂಪೆನಿ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಹೊಂಡಗಳಿಂದ ತುಂಬಿದ ನಾಯಕ್ಸ್ ರಸ್ತೆಯಲ್ಲಿ ಸಂಚಾರ ತಡೆ

ಕಾಸರಗೋಡು: ಎಂಜಿ ರಸ್ತೆ ಹಾಗೂ ಬ್ಯಾಂಕ್‌ರಸ್ತೆಯನ್ನು ಜೋಡಿಸುವ ನಾಯಕ್ಸ್ ರಸ್ತೆ ಹೊಂಡ ಗುಂಡಿಗಳಿಂದ ತುಂಬಿಕೊಂಡು ಸಂಚಾರಕ್ಕೆ ಅಯೋಗ್ಯವಾಗಿ ರಸ್ತೆ ತಡೆಗೆ ಕಾರಣವಾಗುತ್ತಿದೆ ಎಂದು ದೂರಲಾಗಿದೆ. ಬ್ಯಾಂಕ್ ರಸ್ತೆಯಿಂದ ನಾಯಕ್ಸ್ ರಸ್ತೆಗೆ ಪ್ರವೇಶಿಸುವ್ಗ ಸಿನಿಮಾ ಥಿಯೇಟರ್ ವರೆಗೆ ರಸ್ತೆ ಪೂರ್ಣವಾಗಿ ಹಾನಿಗೊಂಡಿದೆ. ನಾಯಕ್ಸ್ ರಸ್ತೆಯಿಂದ ಕಾಸರಗೋಡು ಬ್ಲೋಕ್ ಪಂಚಾಯತ್ ಕಚೇರಿಗೆ ತೆರಳುವ ರಸ್ತೆಯ ಸಮೀಪದಲ್ಲಿ ಚರಂಡಿಗೆ ಸ್ಲ್ಯಾಬ್ ಇಲ್ಲದ ಕಾರಣ ಅಪಘಾತ ಬೆದರಿಕೆ ಉಂಟಾಗಿದೆ. ಬ್ಯಾಂಕ್ ರಸ್ತೆಯಿಂದ ನಾಯಕ್ಸ್ ರಸ್ತೆಗೆ ಪ್ರವೇಶಿಸುವ ಸ್ಥಳದಿಂದ ರಸ್ತೆ ಕೊನೆಗೊಳ್ಳುವ ಚಂದ್ರಗಿರಿ ಜಂಕ್ಷನ್‌ವರೆಗೆ …