ಆಶಾ ಕಾರ್ಯಕರ್ತೆಯರನ್ನು ಸರಕಾರಿ ನೌಕರರಾಗಿ ಅಂಗೀಕರಿಸಬೇಕು- ಸೋನಿ ಸತ್ಯನ್

ಕಾಸರಗೋಡು: ಕೇರಳ ಪ್ರದೇಶ್ ಆಶಾವರ್ಕರ್ಸ್ ಸಂಘ (ಬಿಎಂಎಸ್) ವಾರ್ಷಿಕ ಸಮ್ಮೇಳನ ಬಿಎಂಎಸ್ ಕಚೇರಿಯಲ್ಲಿ ನಡೆಯಿತು. ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಸೋನಿ ಸತ್ಯನ್ ಪತ್ತನಂತಿಟ್ಟ ಉದ್ಘಾಟಿಸಿದರು. ಅವರು ಮಾತನಾಡಿ, ಆರೋಗ್ಯವಲಯ ದಲ್ಲಿ ಅತ್ಯಂತ ಕೆಳ ಸ್ತರದಲ್ಲಿ ಕಾರ್ಯಾ ಚರಿಸುವ ಆಶಾ ಕಾರ್ಯಕರ್ತೆಯರಿಗೆ ಅವರಿಗೆ ಅರ್ಹತೆ ಇರುವ ವೇತನ ನೀಡಬೇಕೆಂದು, ಆಶಾ ಕಾರ್ಯಕರ್ತೆಯರನ್ನು ಸರಕಾರಿ ನೌಕರರಾಗಿ ಅಂಗೀಕರಿಸಬೇಕೆಂದು, ವೇತನ ನಿಗದಿಪಡಿಸಬೇಕೆಂದು ಆಗ್ರಹಿಸಿದರು. ಯೂನಿಯನ್ ಅಧ್ಯಕ್ಷೆ ಜಯಲಕ್ಷ್ಮಿ ಮೀಂಜ ಅಧ್ಯಕ್ಷತೆ ವಹಿಸಿದರು.

ಬಿಎಂಎಸ್ ಜಿಲ್ಲಾ ಜೊತೆ ಕಾರ್ಯದರ್ಶಿ ಯಶವಂತಿ ಮಂಜೇಶ್ವರ ಶುಭ ಕೋರಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೀತಾ ಬಾಲಕೃಷ್ಣನ್ ವರದಿ ಮಂಡಿಸಿದರು. ಬಿಎಂಎಸ್ ಜಿಲ್ಲಾ ಜೊತೆ ಕಾರ್ಯದರ್ಶಿ ದಿನೇಶ್ ಬಂಬ್ರಾಣ ನೂತನ ಪದಾಧಿಕಾರಿಗಳ ಆಯ್ಕೆ ಹಾಗೂ ಸಮಾರೋಪ ಭಾಷಣ ನಡೆಸಿದರು.   ಪ್ರಧಾನ ಕಾರ್ಯ ದರ್ಶಿಯಾಗಿ ಗೀತಾ ಬಾಲಕೃಷ್ಣನ್, ಅಧ್ಯಕ್ಷೆಯಾಗಿ ಜಯಲಕ್ಷ್ಮಿ ಮೀಂಜ, ಕೋಶಾಧಿಕಾರಿಯಾಗಿ ಸೌಮ್ಯಾ ನಾಯ್ಕ್ ಕಾಸರಗೋಡು ಆಯ್ಕೆಯಾದರು. ಶ್ರೀಜ ಮಧು ಮುಳಿಯಾರ್ ಸ್ವಾಗತಿಸಿ, ದಿವ್ಯಾ ಕಾಸರಗೋಡು ವಂದಿಸಿದರು.

RELATED NEWS

You cannot copy contents of this page