ನಾಡಿನಾದ್ಯಂತ ಬಕ್ರೀದ್ ಹಬ್ಬಾಚರಣೆ

ಮಂಜೇಶ್ವರ: ಬಕ್ರೀದ್ ಹಬ್ಬವನ್ನು ನಿನ್ನೆ ನಾಡಿನಾದ್ಯಂತ ಭಕ್ತಿ, ಸಂಭ್ರಮ, ಸಡಗರದಿಂದ ಆಚರಿಸಲಾಯಿತು. ಬೆಳಿಗ್ಗಿನಿಂದಲೇ ಮುಸ್ಲಿಂ ಬಾಂಧವರು ಮಸೀದಿಗಳಿಗೆ ತೆರಳಿ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡರು. ಪವಿತ್ರ ಈದ್ ನಮಾಜ್ ಸಲ್ಲಿಸಿದ ಬಳಿಕ ಪರಸ್ಪರ ಆಲಂಗಿಸಿಕೊಂಡು ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ಹಲವು ಮಸೀದಿಗಳಲ್ಲಿ ಮಹಿಳೆಯರಿಗೂ ಪ್ರಾರ್ಥನೆ ಸಲ್ಲಿಸಲು ಪ್ರತ್ಯೇಕ ವ್ಯವಸ್ಥೆಯನ್ನು ಏರ್ಪಡಿಸಲಾಗಿತ್ತು. ಮಂಜೇಶ್ವರ ತಾಲೂಕಿನ ವಿವಿಧ ಮಸೀದಿಗಳಲ್ಲಿ ಧಾರ್ಮಿಕ ವಿಧಿ ವಿಧಾನಗಳು, ವಿಶೇಷ ಪ್ರಾರ್ಥನೆ ನಡೆಯಿತು. ಪ್ರಮುಖವಾಗಿ ಉದ್ಯಾವರ, ಕುಂಜತ್ತೂರು, ಪೊಸೋಟು, ಬಂಗ್ರ ಮಂಜೇಶ್ವರ, ಉಪ್ಪಳ ಜುಮಾ ಮಸೀದಿಗಳಲ್ಲಿ …

ಕಣ್ಣೂರು ಬೇಬಿ ಮೆಮೋರಿಯಲ್ ಹಾಸ್ಪಿಟಲ್‌ನಲ್ಲಿ ಉತ್ತರ ಮಲಬಾರ್‌ನ ಮೊದಲ ಬರ್ತ್ ಸ್ಯೂಟ್‌ನ ಉದ್ಘಾಟನೆ

ಕಣ್ಣೂರು: ಬೇಬಿ ಮೆಮೋರಿ ಯಲ್ ಹಾಸ್ಪಿಟಲ್‌ನಲ್ಲಿ ಆರಂಭಿಸಿದ ನೂತನ ಬರ್ತ್ ಸ್ಯೂಟ್‌ನಲ್ಲಿ ಲೇಬರ್, ಡೆಲಿವರಿ, ರಿಕವರಿ, ಪೋಸ್ಟ್‌ಪಾರ್ಟಂ ಮೊದಲಾದವುಗಳನ್ನು ಒಂದೇ ಕೊಠಡಿಯಲ್ಲೇ ಕುಟುಂಬ ಸೌಹೃದ ಹಾಗೂ ಖಾಸಗಿತನವನ್ನು ಖಚಿತಪಡಿಸಿ ನಡೆಸಬಹುದಾದ ರೀತಿಯಲ್ಲಿ ಸಿದ್ಧಪಡಿ ಸಲಾಗಿದೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ. ಹೆರಿಗೆ ಸಂದರ್ಭಗಳಲ್ಲಿ ಸಂಬಂಧಪಟ್ಟವರು ಜತೆಗೆ ಇರಬಹುದು ಎಂಬುದಾಗಿದೆ ಬರ್ತ್ ಸ್ಯೂಟ್‌ರೂಂನ ಪ್ರಧಾನ ವಿಶೇಷತೆಗಳಲ್ಲಿ ಒಂದು 24 ಗಂಟೆಗಳ ಕಾಲ 1:1 ನರ್ಸಿಂಗ್ ಕೆಯರ್, ಕುಟುಂಬಕ್ಕಾಗಿ ಸಿದ್ಧಪಡಿಸಿದ ಪ್ರತ್ಯೇಕ ಆಡಂಬರ ಸೌಕರ್ಯಗಳೊಂ ದಿಗೆ ಸ್ವಾಗತಕೊಠಡಿ ಮೊದಲಾದವುಗಳು ಬರ್ತ್ ಸ್ಯೂಟ್‌ರೂಂನ …

ವಿದ್ಯುತ್ ತಂತಿಗೆ ಬಾಗಿದ ಮರ: ಸ್ಥಳೀಯರಲ್ಲಿ ಭೀತಿ

ಉಪ್ಪಳ: ವಿದ್ಯುತ್ ತಂತಿ ಮೇಲೆ ಅಕೇಶಿಯಾ ಮರ ಬಾಗಿಕೊಂಡಿದ್ದು, ಯಾವುದೇ ಕ್ಷಣದಲ್ಲಿ ಮುರಿದು ಬೀಳುವ ಆತಂಕದಿAದ ಸ್ಥಳೀಯರು ಭಯ ಭೀತರಾಗಿದ್ದಾರೆ. ಮಂಗಲ್ಪಾಡಿ ಪಂಚಾಯತ್‌ನ ೮ನೇ ವಾರ್ಡ್ ಬೇಕೂರು ಹಳೇ ಅಂಚೆ ಕಚೇರಿ ಬಳಿಯ ಉಬರ್ಲೆ ರಸ್ತೆಯಲ್ಲಿ ಈ ಆತಂಕದ ಸ್ಥಿತಿ ಉಂಟಾಗಿದೆ. ಈ ಪರಿಸರದಿಂದ ಹಾದು ಹೋದ ವಿದ್ಯುತ್ ತಂತಿ ಮೇಲ್ಭಾಗದಲ್ಲಿ ಬೃಹತ್ ಮರ ಬಾಗಿಕೊಂಡಿದ್ದು, ರೆಂಬೆಗಳು ಗಾಳಿಗೆ ತಂತಿಗೆ ಸ್ಪರ್ಶಿಸುತ್ತಿದೆ. ಇದರಿಂದ ವಿದ್ಯುತ್ ಮೊಟಕುಗೊಳ್ಳುತ್ತಿದೆ. ದಿನನಿತ್ಯ ಮಕ್ಕಳ ಸಹಿತ ಹಲವು ಮಂದಿ ಸಂಚರಿಸುವ ರಸ್ತೆ ಇದಾಗಿದೆ. …