ಅಧಿವೇಶನ ರಾಜ್ಯಪಾಲರ ಭಾಷಣದೊಂದಿಗೆ ಚಾಲನೆ: ಕಲ್ಯಾಣ ಪಿಂಚಣಿ 3000 ರೂ.ಗೇರಿಕೆ ; ವಿದ್ಯಾರ್ಥಿನಿಯರಿಗ ಮೂರು ದಿನ ಋತುಚಕ್ರ ರಜೆ
ತಿರುವನಂತಪುರ: 16ನೇ ವಿಧಾನಸಭೆಯ ಮೊದಲ ನೀತಿಗಳನ್ನು ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಭಾಷಣದ ಮೂಲಕ ಘೋಷಿಸುವುದರೊಂದಿಗೆ ವಿಧಾ ನಸಭಾ ಅಧಿವೇಶನ ಇಂದು ಬೆಳಿಗ್ಗೆ ಪುನರಾರಂಭಗೊಂಡಿತು. ಕೇರಳದ ವಿಧಾನಸಭೆಯ ಇತಿಹಾಸದಲ್ಲೇ ಇದೇ ಮೊದಲ ಬಾರಿ ಎಂಬಂತೆ ವಂದೇ ಮಾತರಂ ಗೀತೆಯ ಆಲಾಪನೆಯೊಂದಿಗೆ ಆರಂಭಗೊಡ ವಿಧಾನಸಭಾ ಅಧಿವೇಶನ ಇದಾಗಿದೆಯೆಂಬ ವಿಶೇಷತೆಯೂ ಇಂದಿನ ಅಧಿವೇಶನ ಹೊಂದಿದೆ. ಆದರೆ ವಂದೇ ಮಾತರಂ ಗೀತೆಯ ಪೂರ್ಣ ಆಲಾಪನೆ ನಡೆಸದೆ ಮೊದಲ ಸಾಲನ್ನು ಮಾತ್ರವೇ ಆಲಾಪಿಸಲಾಯಿತು. ರಾಜ್ಯದ ಎಲ್ಲಾ ಕುಟುಂಬದವರಿಗೂ ತಲಾ 25 ಲಕ್ಷ ರೂ.ಗಳ …