ಕಣ್ಣೂರು ಬೇಬಿ ಮೆಮೋರಿಯಲ್ ಹಾಸ್ಪಿಟಲ್‌ನಲ್ಲಿ ಉತ್ತರ ಮಲಬಾರ್‌ನ ಮೊದಲ ಬರ್ತ್ ಸ್ಯೂಟ್‌ನ ಉದ್ಘಾಟನೆ

ಕಣ್ಣೂರು: ಬೇಬಿ ಮೆಮೋರಿ ಯಲ್ ಹಾಸ್ಪಿಟಲ್‌ನಲ್ಲಿ ಆರಂಭಿಸಿದ ನೂತನ ಬರ್ತ್ ಸ್ಯೂಟ್‌ನಲ್ಲಿ ಲೇಬರ್, ಡೆಲಿವರಿ, ರಿಕವರಿ, ಪೋಸ್ಟ್‌ಪಾರ್ಟಂ ಮೊದಲಾದವುಗಳನ್ನು ಒಂದೇ ಕೊಠಡಿಯಲ್ಲೇ ಕುಟುಂಬ ಸೌಹೃದ ಹಾಗೂ ಖಾಸಗಿತನವನ್ನು ಖಚಿತಪಡಿಸಿ ನಡೆಸಬಹುದಾದ ರೀತಿಯಲ್ಲಿ ಸಿದ್ಧಪಡಿ ಸಲಾಗಿದೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ. ಹೆರಿಗೆ ಸಂದರ್ಭಗಳಲ್ಲಿ ಸಂಬಂಧಪಟ್ಟವರು ಜತೆಗೆ ಇರಬಹುದು ಎಂಬುದಾಗಿದೆ ಬರ್ತ್ ಸ್ಯೂಟ್‌ರೂಂನ ಪ್ರಧಾನ ವಿಶೇಷತೆಗಳಲ್ಲಿ ಒಂದು 24 ಗಂಟೆಗಳ ಕಾಲ 1:1 ನರ್ಸಿಂಗ್ ಕೆಯರ್, ಕುಟುಂಬಕ್ಕಾಗಿ ಸಿದ್ಧಪಡಿಸಿದ ಪ್ರತ್ಯೇಕ ಆಡಂಬರ ಸೌಕರ್ಯಗಳೊಂ ದಿಗೆ ಸ್ವಾಗತಕೊಠಡಿ ಮೊದಲಾದವುಗಳು ಬರ್ತ್ ಸ್ಯೂಟ್‌ರೂಂನ ಇತರ ವಿಶೇಷತೆಗಳಾಗಿವೆ.

ಗೈನಕಾಲಜಿ, ನಿಯೋನಾಟೋ ಲಜಿ, ಪೀಡಿಯಾಟ್ರಿಕ್ ಕ್ರಿಟಿಕಲ್ ಕೆಯರ್, ಕ್ಲಿನಿಕಲ್ ಸೈಕಾಲಜಿ, ಡಯಟಿಕ್ಸ್ ವಿಭಾಗಗಳ ತಜ್ಞ ವೈದ್ಯರುಗಳ ನೇತೃತ್ವದಲ್ಲಿ ಬರ್ತ್ ಸ್ಯೂಟ್‌ನಲ್ಲಿ ನೇರವಾಗಿ ಪ್ರತ್ಯೇಕ ಪರಿಚರಣೆ ಲಭ್ಯವಿದೆ. ಇದರ ಪ್ರಧಾನ ಆಕರ್ಷಣೆಯಾಗಿ ಗರ್ಭಿಣಿಯರ ರ‍್ಯಾಂಪ್ ವಾಕ್ ನಡೆಸಲಾಯಿತು. ತಾಯಿಯಾಗಲಿರುವವರು ಆತ್ಮವಿಶ್ವಾಸದೊಂದಿಗೆ ಹಾಗೂ ಸಂತೋಷದೊಂದಿಗೆ ರ‍್ಯಾಂಪ್‌ನಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಹೆಚ್ಚಿನ ಮೆರುಗು ನೀಡಬಹುದು. ಉತ್ತರ ಮಲಬಾರ್ ಕ್ಲಸ್ಟರ್ ಸಿಇಒ ನಿರೂಪ್ ಮುಂಡಯಾಡನ್ ಇದರ ಉದ್ಘಾಟನೆ ನೆರವೇರಿಸಿ, ಮಾತನಾಡಿ ಮಾತೃತ್ವ ಪರಿಪಾಲನಾ ರಂಗದಲ್ಲಿ ಆಧುನಿಕ ಹಾಗೂ ಕ್ಷೇಮ ಸೇವೆಗಳನ್ನು ನೀಡುವುದರಲ್ಲಿ ಬೇಬಿ ಮೆಮೋರಿಯಲ್ ಹಾಸ್ಪಿಟಲ್‌ನ ಸಾಧನೆಯನ್ನು ತಿಳಿಸಿದರು. ಡ್ರಾ ಮೂಲಕ ಆಯ್ಕೆಗೊಂಡ ‘ಸೂಪರ್ ಮೋಂ’ಗೆ ಬೇಬಿ ಮೆಮೋರಿಯಲ್ ಹಾಸ್ಪಿಟಲ್‌ನ ಪ್ರತ್ಯೇಕ ಬಹುಮಾನವಾಗಿ ಉಚಿತ ಬರ್ತ್ ಸ್ಯೂಟ್ ಡೆಲಿವರಿ ಪ್ಯಾಕೇಜ್ ಹಸ್ತಾಂತರಿಸಲಾಯಿತು. ಮಾತೃತ್ವವನ್ನು ಆಚರಿಸಲು ಹಾಗೂ ಸ್ತ್ರೀ- ಶಿಶು ಆರೋಗ್ಯ ಪರಿಪಾಲನಾ ರಂಗದಲ್ಲಿ ಆಸ್ಪತ್ರೆಯ ಸೇವೆಯನ್ನು ಮತ್ತೊಮ್ಮೆ ಖಚಿತಪಡಿಸಿದ ಈ ಕಾರ್ಯಕ್ರಮ ಅವಿಸ್ಮರಣೀಯವಾಗಿ ಸಮಾಪ್ತಿಗೊಂಡಿತು.

You cannot copy contents of this page