ಕಯ್ಯಾರ ಕಿಂಞಣ್ಣರೈಯವರ 111ನೇ ಹುಟ್ಟು ಹಬ್ಬ ಆಚರಣೆ

ಬದಿಯಡ್ಕ: ನಾಡೋಜ ಕಯ್ಯಾರ ಕಿಂಞಣ್ಣ ರೈಯವರ 111ನೇ ಹುಟ್ಟುಹಬ್ಬವನ್ನು ಕವಿತಾ ಕುಟೀರದಲ್ಲಿ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿಯ ನೇತೃತ್ವದಲ್ಲಿ ಆಚರಿಸಲಾಯಿತು. ಶಾಸಕ ಮಾಹಿನ್ ಕಲ್ಲಟ್ರ ಪುಷ್ಪಾರ್ಚನೆ ನಡೆಸಿದರು. ಬದಿಯಡ್ಕ ಪಂ. ಅಧ್ಯಕ್ಷ ಶಂಕರ ಡಿ., ಕನ್ನಡ ಗಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಎ.ಆರ್. ಸುಬ್ಬಯ್ಯಕಟ್ಟೆ, ಪಂಚಾಯತ್ ಮಾಜಿ ಅಧ್ಯಕ್ಷ ಮಾಹಿನ್ ಕೇಳೋಟ್, ಅಖಿಲೇಶ್ ನಗುಮುಗಂ, ಚನಿಯಪ್ಪ ನಾಯ್ಕ್, ಮಹೇಶ್ ವಳಕುಂಜ, ಹರೀಶ್ ಗೋಸಾಡ, ನಿವೃತ್ತ ಪ್ರೊ. ಎ. ಶ್ರೀನಾಥ್, ಶಂಕರನಾರಾಯಣ ಭಟ್, ಗಂಗಾಧರ ತೆಕ್ಕೆಮೂಲೆ, ಆನಂದ ಮವ್ವಾರು, …

ಅಸೌಖ್ಯ: ಆರ್‌ಎಸ್‌ಎಸ್ ಕಾರ್ಯಕರ್ತ ನಿಧನ

ಉಪ್ಪಳ: ಅಸೌಖ್ಯ ತಗಲಿ ಚಿಕಿತ್ಸೆಯಲ್ಲಿದ್ದ ಉಪ್ಪಳ ಹನುಮಾನ್‌ನಗರ ನಿವಾಸಿ, ಮೀನು ಕಾರ್ಮಿಕ ಚಂದ್ರಶೇಖರ ಆರ್.ಐಲ್ (63) ನಿಧನ ಹೊಂದಿದರು. ದಿ| ರಾಮ ಸಾಲ್ಯಾನ್-ದಿ| ಸರ್ವಾಣಿ ದಂಪತಿ ಪುತ್ರರಾಗಿದ್ದು, ಇವರು ಆರ್.ಎಸ್.ಎಸ್‌ನ ಹಿರಿಯ ಸ್ವಯಂ ಸೇವಕರಾಗಿದ್ದರು. ಉಪ್ಪಳ ಶ್ರೀ ಅಯ್ಯಪ್ಪ ಮಂದಿರ ಸೇವಾ ಸಮಿತಿಯ ಹಿರಿಯ ಸದಸ್ಯರು, ಅಲ್ಲದೆ ಅಯೋಧೆ್ಯ ಕರಸೇವಕರಾಗಿದ್ದರು. ಮೃತರು ಪತ್ನಿ ಪುಷ್ಪ, ಮಕ್ಕಳಾದ ನಿಶಿತ, ನಿಖಿತ, ಕಾವ್ಯ, ಅಳಿಯ ನಾಗಪ್ರಸಾದ್, ಸಹೋದರಿಯರಾದ ಜಾನಕಿ, ನಾಗಮ್ಮ, ವಾರಿಜ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಮೃತರ ಮನೆಗೆ …