ಪೆಟ್ರೋಲ್ ಬಂಕ್‌ನಲ್ಲಿ ಇಬ್ಬರ ಮೇಲೆ ಹಲ್ಲೆ: ಗ್ಲಾಸ್‌ಗೆ ಹಾನಿ

ಕುಂಬಳೆ: ಪೆಟ್ರೋಲ್ ಬಂಕ್‌ನಲ್ಲಿ ಬೈಕ್ ರೈಸ್ ಮಾಡಿದನ್ನು ಪ್ರಶ್ನಿಸಿದ ಇಬ್ಬರ ವಿರುದ್ಧ ಹಲ್ಲೆ ನಡೆಸಿ, ಹೆಲ್ಮೆಟ್ ನಿಂದ ಬಂಕ್‌ನ ಕಚೇರಿಯ ಗಾಜು ಒಡೆದು 5000 ರೂ. ನಷ್ಟ ಉಂಟುಮಾ ಡಿದ ದೂರಿನಂತೆ ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಅದಕ್ಕೆ ಸಂಬಂಧಿಸಿ ಇಬ್ಬರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಕೊಪಾಡಿ ಕಡಪ್ಪುರ ನಿವಾಸಿ ಹಾಗೂ ಪ್ರಸ್ತುತ ಪೆಟ್ರೋಲ್ ಬಂಕ್‌ನ ಕಾರ್ಮಿಕರೂ ಆಗಿರುವ ಅನೂಪ್ (22) ಮತ್ತು ಕೊಪಾಡಿಯ ಕಿಶೋರ್ (20) ಎಂಬವರ ಮೇಲೆ ಹಲ್ಲೆ ನಡೆಸಲಾಗಿದ್ದು, ಇದರಂತೆ ಅನೂಪ್ ನೀಡಿದ ದೂರಿನಂತೆ …

ದುರ್ನಾತ: ಅನಂತಪುರ ಉದ್ದಿಮೆ ಪಾರ್ಕ್‌ಗೆ ಕ್ರಿಯಾ ಸಮಿತಿಯಿಂದ ಮಾರ್ಚ್

ಕುಂಬಳೆ: ಅನಂತಪುರ ಉದ್ದಿಮೆ ಪಾರ್ಕ್‌ನ  ಫ್ಯಾಕ್ಟರಿಗಳಿಂದ ಹೊರ ಸೂಸುವ ದುರ್ನಾತಕ್ಕೆ ಪರಿಹಾರ ಕಾಣಲು  ತುರ್ತು ಕ್ರಮ ಕೈಗೊಳ್ಳಬೇಕು, ಜನರ ಜೀವ ಹಾಗೂ ಸೊತ್ತಿಗೆ ಬೆದರಿಕೆಯಾಗುವ ಕೈಗಾರಿ ಕೆಗಳನ್ನು ಮುಚ್ಚುಗಡೆಗೊಳಿಸ ಬೇಕೆಂದು ಒತ್ತಾಯಿಸಿ ಇಂದು ಬೆಳಿಗ್ಗೆ ಕ್ರಿಯಾ ಸಮಿತಿ ನೇತೃತ್ವದಲ್ಲಿ ಅನಂತಪುರ ಉದ್ದಿಮೆ ಪಾರ್ಕ್‌ಗೆ ಮಾರ್ಚ್ ನಡೆಸಲಾಯಿತು. ನೂರಾರು ಮಂದಿ ಭಾಗವಹಿಸಿದ ಮಾರ್ಚ್ ನಾಯ್ಕಾಪಿ ನಿಂದ ಆರಂಭಗೊಂಡಿತು. ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ಮಾರ್ಚ್ ಉದ್ಘಾಟಿಸಿದರು. ಕ್ರಿಯಾ ಸಮಿತಿ ಚೆಯರ್‌ಮೆನ್ ಶೆರೀಫ್ ಟಿ, ಕನ್ವೀನರ್ ಸುನಿಲ್ ಅನಂತಪುರ, ವೈಸ್ …

ಆಪರೇಶನ್ ತೂಫಾನ್ : ವಿವಿಧೆಡೆಗಳಿಂದ ಎಂಡಿಎಂಎ ವಶ: ಒಟ್ಟು 45 ಪ್ರಕರಣಗಳು ದಾಖಲು, 50 ಮಂದಿ ಸೆರೆ

ಕಾಸರಗೋಡು: ಮಾದಕದ್ರವ್ಯದ ಬೇಟೆಗಾಗಿ ಪೊಲೀಸರು ರಾಜ್ಯಾದ್ಯಂತ ಆರಂಭಿಸಿರುವ ಆಪರೇಶನ್ ತೂಫಾನ್ ಕಾರ್ಯಾಚರಣೆಯಂತೆ ಕಾಸರಗೋಡು ಪೊಲೀಸರು ನಿನ್ನೆ ರಾತ್ರಿ ನಗರದ ಪಳ್ಳಂನ ಮನೆಯೊಂದಕ್ಕೆ ನಡೆಸಿದ ದಾಳಿಯಲ್ಲಿ ಮಾದಕವಸ್ತುವಾದ ೪೭ ಗ್ರಾಂ ಎಂಡಿಎಂಎ ಪತ್ತೆಹಚ್ಚಿ ವಶಪಡಿಸಿಕೊಂ ಡಿದ್ದಾರೆ. ಇದಕ್ಕೆ ಸಂಬಂಧಿಸಿ ಬೈತುಲ್ ನೂರ್ ನಿವಾಸಿ ಅಬ್ದುಲ್ ನಸೀರ್ (40) ಎಂಬಾತ ನನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ಇದೇ ರೀತಿ ಬದಿಯಡ್ಕ, ಕುಂಬಳೆ ಮತ್ತು ಬೇಕಲ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಾಗಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಬದಿಯಡ್ಕ ಪೊಲೀಸ್ ಠಾಣೆಯ ಎಸ್‌ಐ ಟಿ. …

ಮನೆಯ ಅಡಿಪಾಯ ಸಮೀಪಗೋಡೆ  ಕುಸಿತ: ಅಪಾಯ ಭೀತಿ

ಕುಂಬಳೆ: ಇಂದು ಮುಂಜಾನೆ ಸುರಿದ ಮಳೆಗೆ ಮನೆಯೊಂದರ ಅಡಿಪಾಯಕ್ಕೆ ಹೊಂದಿಕೊಂಡಿರುವ ಗೋಡೆ ಕುಸಿದು    ಬಿದ್ದಿದೆ. ಇದರಿಂದ ಮನೆ ಅಪಾಯಭೀತಿಯನ್ನು ಎದುರಿಸುತ್ತಿದ್ದು ಕುಟುಂಬ ಆತಂಕಕ್ಕೀಡಾಗಿದೆ. ಕುಂಬಳೆ ಕಂಚಿಕಟ್ಟೆ ದುರ್ಗಾಂಬ ರಸ್ತೆಯ ನಿವಾಸಿ ಹಾವು ಹಿಡಿತಗಾರ ಸುರೇಶ್ ಕೆ.ವಿ ಎಂಬವರ ಮನೆ ಅಪಾಯ ಭೀತಿ ಎದುರಿಸುತ್ತಿದೆ. ರಸ್ತೆ ಬದಿ ಎತ್ತರದಲ್ಲಿ ಮನೆಯಿದ್ದು ಅಡಿಪಾಯಕ್ಕೆ ಕೆಂಪುಕಲ್ಲು ಕಟ್ಟಿ ಗೋಡೆ ನಿರ್ಮಿಸಲಾಗಿತ್ತು.  ಇಂದು ಮುಂಜಾನೆ ಸುರಿದ ಮಳೆ ವೇಳೆ ಗೋಡೆಯ ಕಲ್ಲುಗಳು ಕುಸಿದುಬಿದ್ದಿದೆ. ಮನೆಯ ಗೋಡೆಯೂ ಬಿರುಕುಬಿಟ್ಟಿದೆಯೆಂದು ಕೆ.ವಿ.ಸುರೇಶ್ ತಿಳಿಸಿದ್ದಾರೆ.

ಪೆರಡಾಲ ಬ್ಯಾಂಕ್ ನಿವೃತ್ತ ಕಾರ್ಯದರ್ಶಿ ನಿಧನ

ನೀರ್ಚಾಲು: ಪೆರಡಾಲ ಸೇವಾ ಸಹಕಾರಿ ಬ್ಯಾಂಕ್‌ನ ನಿವೃತ್ತ ಕಾರ್ಯದರ್ಶಿ ಪುದುಕೋಳಿ ನಿವಾಸಿ ಸುಬ್ರಹ್ಮಣ್ಯ ಭಟ್ (84) ನಿಧನಹೊಂದಿದರು. ಮೃತರು ಪತ್ನಿ ರುಕ್ಮಿಣಿ, ಮಕ್ಕಳಾದ ಶಂಕರ ಕುಮಾರ್, ಕೃಷ್ಣಮೂರ್ತಿ (ಜ್ಯೋತಿಷಿ), ಪ್ರೇಮಸುಧಾ, ಅಳಿಯ-ಸೊಸೆಯಂದಿರಾದ ಪುರುಷೋತ್ತಮ (ಮಿಂಚಿನಡ್ಕ), ದಿವ್ಯ, ಪ್ರತಿಭ,  ಸಹೋದರ-ಸಹೋದರಿಯರಾದ  ವಿಷ್ಣು ಶರ್ಮ, ಗಣಪತಿ ಭಟ್, ಶಿವಪ್ರಸಾದ್, ಸಾವಿತ್ರಿ, ಸತ್ಯಭಾಮ, ತಿರುಮಲೇಶ್ವರಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಅಡೂರಿನಲ್ಲಿ ಗೋಡೆ ಕುಸಿದು ಇಬ್ಬರು ಮಕ್ಕಳು, ಮಧೂರಿನಲ್ಲಿ ಹೊಂಡಕ್ಕೆ ಬಿದ್ದು ಓರ್ವ ಬಾಲಕನ ದುರ್ಮರಣ: ಭೀಕರ ದುರ್ಘಟನೆಯಿಂದ ನಾಡಿನಲ್ಲಿ ಶೋಕಸಾಗರ

ಮಧೂರು/ಅಡೂರು: ಅಡೂರು ಹಾಗೂ ಮಧೂರಿನಲ್ಲಿ ಮೊನ್ನೆ ಸಂಭವಿಸಿದ ಭೀಕರ ದುರ್ಘಟನೆಯಲ್ಲಿ ಒಟ್ಟು ಮೂವರು ಮಕ್ಕಳು ಸಾವಿಗೀಡಾಗಿರುವುದು ನಾಡಿನಲ್ಲಿ ಶೋಕಸಾಗರ ಸೃಷ್ಟಿಸಿದೆ. ದೇಲಂಪಾಡಿ ಪಂಚಾಯತ್‌ನ ಅಡೂರು ಸಂಜೆಕಡವು ಪೆಲಮರ್ವ ಎಂಬಲ್ಲಿ ಮೊನ್ನೆ ಸಂಜೆ ಸಂಭವಿಸಿದ ದುರ್ಘಟನೆಯಲ್ಲಿ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ. ಪೆಲಮರ್ವದ ಅಬೂಬಕರ್‌ರ ಮಕ್ಕಳಾದ ಪಿ. ಮುಸಮ್ಮಿಲ್ (14), ಪಿ.ಮುಹಮ್ಮದ್ ಮುನ್ಸೀರ್ (10) ಎಂಬಿವರು ಮೃತಪಟ್ಟ ದುರ್ದೈವಿಗಳಾ ಗಿದ್ದಾರೆ. ಇವರ ಜತೆಗಿದ್ದ ಮುಹಮ್ಮದ್ ವಾಹಿಶ್ (14) ಗಂಭೀರ ಗಾಯಗೊಂಡಿದ್ದು, ಈತನನ್ನು ಚೆಂಗಳ ಇಂದಿರಾನಗರದ ಖಾಸಗಿ ಆಸ್ಪತ್ರೆಯಲ್ಲಿ  ದಾಖಲಿಸಲಾಗಿದೆ.  ತಾತ್ಕಾಲಿಕವಾಗಿ …

ನಿವೃತ್ತ ಆರೋಗ್ಯ ಇಲಾಖೆ ನೌಕರನ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ಹೊಸದುರ್ಗ: ಜನವಾಸವಿಲ್ಲದ ತರವಾಡು ಮನೆಯಲ್ಲಿ ನಿವೃತ್ತ ಆರೋಗ್ಯ ಇಲಾಖೆ ನೌಕರನ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪಿಲಿಕೋಡ್ ಕಣ್ಣಂಗೈಯ ಕೆ.ವಿ. ರವೀಂದ್ರನ್ (65)ರ ಮೃತದೇಹ ನಿನ್ನೆ ಸಂಜೆ ತರವಾಡು ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಹಗ್ಗ ತುಂಡು ಮಾಡಿ ಕೂಡಲೇ ಆಸ್ಪತ್ರೆಗೆ ತಲುಪಿಸಲಾಯಿತಾದರೂ ಆ ವೇಳೆ ಮೃತಪಟ್ಟಿದ್ದರು. ಇವರ ಪುತ್ರ ವಿಪಿನ್ ಕೆಲವು ವರ್ಷಗಳ ಹಿಂದೆ ರೈಲಿನಿಂದ ಬಿದ್ದು ಮೃತಪಟ್ಟಿದ್ದರು. ಮೃತದೇಹವನ್ನು ಕಣ್ಣೂರು ಪರಿಯಾರಂ ಸರಕಾರಿ ಮೆಡಿಕಲ್ ಕಾಲೇಜು ಶವಾಗಾರದಲ್ಲಿರಿಸಲಾಗಿದೆ. ಮೃತರು ಪತ್ನಿ ಕೆ. …

ವಿದ್ಯುತ್ ಕಂಬ ಬಿದ್ದು ಮನೆಗೆ ಹಾನಿ  

ಪೈವಳಿಕೆ: ಶನಿವಾರ ಸಂಜೆ 3 ಗಂಟೆಗೆ ಸುರಿದ ಮಳೆ ಗಾಳಿಗೆ ಪೈವಳಿಕೆ ಪಂ.ನ ಕಡಂಕೋಡಿ ವಾರ್ಡಿಗೊಳಪಟ್ಟ ಕಳಾಯಿ ಕೊಮ್ಮಂಗಳ ದಾರಿಯಲ್ಲಿ ಕಳಾಯಿ ಪಾಡಿ ಎಂಬಲ್ಲಿರುವ ಅಬ್ದುಲ್ಲರ ಹೊಸ ಟೆರಸಿನ ಮನೆ ಮೇಲೆ ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬ ಬಿದ್ದು ಮನೆಗೆ ಹಾನಿಯಾಗಿದೆ. ಹೊಸ ತಾದ ವಿದ್ಯುತ್ ಕಂಬಕ್ಕೆ ಸಂಪರ್ಕ ಇಲ್ಲದಿರುವುದರಿಂದ ಅಪಾಯ ತಪ್ಪಿದೆ. ವಿದ್ಯುತ್ ಇಲಾಖೆಯವರ ನಿರ್ಲಕ್ಷ್ಯವೇ ಇದಕ್ಕೆ ಕಾರಣವೆನ್ನ ಲಾಗಿದೆ. ಪಂಚಾಯತ್ ಅದಿsಕಾರಿ ಗಳು ಸ್ಥಳಕ್ಕೆ ಭೇಟಿ ನೀಡಿ ದರು.

ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದಲ್ಲಿ ದೃಢಕಲಶ ನಾಳೆ

ಬದಿಯಡ್ಕ: ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಇತ್ತೀಚೆಗೆ ಜರಗಿದ್ದು, ಕ್ಷೇತ್ರದಲ್ಲಿ ದೃಢಕಲಶ ನಾಳೆ ನಡೆಯಲಿದೆ. ಇಂದು ಸಂಜೆ 7 ಗಂಟೆಗೆ ಪುಣ್ಯಾಹ ವಾಚನ, ರಾಕ್ಷೋಘ್ನ ಹೋಮ, ವಾಸ್ತುಬಲಿ ಮೊದಲಾದ ವೈದಿಕ ಕಾರ್ಯಕ್ರಮಗಳು ಜರಗಲಿದೆ. ನಾಳೆ ಬೆಳಿಗ್ಗೆ ೭ಕ್ಕೆ ಗಣಪತಿ ಹವನ, ಕಲಶ ಪೂಜೆ, ಕಲಶಾಭಿಷೇಕ,9.30ಕ್ಕೆ ಮಹಾ ರುದ್ರಯಾಗ ಆರಂಭ, ಮಧ್ಯಾಹ್ನ ಮಹಾಪೂಜೆ, ಅನ್ನ ಸಂತರ್ಪಣೆ, ಅಪರಾಹ್ನ 2.30ರಿಂದ ಅಭಿನಂದನಾ ಸಮಾರಂಭ ಜರಗಲಿದೆ.  ಸಭೆಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಬಿ. ವಸಂತ ಪೈ ಅಧ್ಯಕ್ಷತೆ ವಹಿಸುವರು. ಆಡಳಿತ …

ಸಂತಡ್ಕ ಶ್ರೀ ಅರಸು ಸಂಕಲ ದೈವಕ್ಷೇತ್ರ ಮಾಡದಲ್ಲಿ ಗಿರಿಜಾ ಕಲ್ಯಾಣೋತ್ಸವ ಸಮಾಪ್ತಿ

ಉಪ್ಪಳ: ಸನಾತನ ಧರ್ಮ ಹೇಗೆ ಇರಬೇಕು ಎನ್ನುವುದನ್ನು ನೋಡುವುದಕ್ಕೆ ಸಾಕ್ಷಿ ಸಂತಡ್ಕ. ಗಿರಿಜಾ ಕಲ್ಯಾಣ ವೆಂದರೆ ಲೋಕ ಕಲ್ಯಾಣ. ಹಿರಿಯರನ್ನು ಮರೆತರೆ ನಮ್ಮತನವನ್ನು ಮರೆತಂತೆ ಎಂದು ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಕುಳೂರು ಸಂತಡ್ಕ ಶ್ರೀ ಅರಸು ಸಂಕಲ ದೈವಕ್ಷೇತ್ರ ಮಾಡದ ಭೋಜನ ಶಾಲೆಯ ಉದ್ಘಾಟನಾ ಸಮಾರಂಭದAಗವಾಗಿ ಹಮ್ಮಿಕೊಂಡ ರುದ್ರಯಾಗ ಹಾಗೂ ಗಿರಿಜಾ ಕಲ್ಯಾಣ ಮಹೋತ್ಸವದ ಸಭಾ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿದರು. ಹೃದಯದಲ್ಲಿ ಶ್ರದ್ಧೆ ಮತ್ತು ಭಕ್ತಿಯ ಬೀಜವನ್ನು ಬಿತ್ತಿದರೆ ಹೃದಯದಲ್ಲಿ ಮನ:ಶಾಂತಿಯ ಫಲ …