ತ್ಯಾಜ್ಯ ತೆರವು ಕ್ರಮಕ್ಕೆ ಆಗ್ರಹ: ಮಣ್ಣಂಗುಳಿ ಅಂಗನವಾಡಿ ಪರಿಸರದಲ್ಲಿ ದುರ್ವಾಸನೆಯಿಂದ ಉಸಿರುಕಟ್ಟುವ ಸ್ಥಿತಿ 

ಉಪ್ಪಳ: ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ಮಣ್ಣಂಗುಳಿ ಮೈದಾನ ರಸ್ತೆ ಹಾಗೂ ಪರಿಸರದ ಅಂಗನವಾಡಿ ಬಳಿ ತ್ಯಾಜ್ಯ ರಾಶಿ ದುರ್ವಾಸನೆ ಬೀರುತ್ತಿರುವ ಹಿನ್ನೆಲೆ ಯಲ್ಲಿ ಸಾರ್ವಜನಿಕರು ಹಾಗೂ ಮಕ್ಕಳು ಸಮಸ್ಯೆ ಅನುಭವಿಸುವಂ ತಾಗಿದೆ ಎಂದು ದೂರಲಾಗಿದೆ. ಕಳೆದ ಹಲವಾರು ತಿಂಗಳುಗಳಿAದ ಮಣ್ಣಂಗುಳಿ ಮೈದಾನ ಪರಿಸರದ ವಿವಿಧ ರಸ್ತೆಗಳಲ್ಲಿ ಹಾಗೂ ಅಂಗನವಾಡಿ ಸಮೀಪದಲ್ಲೇ ಭಾರೀ ಪ್ರಮಾಣದ ತ್ಯಾಜ್ಯ ದುರ್ವಾಸನೆ ಬೀರುತ್ತಿದ್ದರೂ ತೆರವುಗೊಳಿಸಲು ಕ್ರಮಕೈಗೊಳ್ಳದಿರುವುದರಿಂದ ಮೂಗಿಗೆ ಕೈ ಹಿಡಿದು ತೆರಳುವ ಪರಿಸ್ಥಿತಿ ಉಂಟಾಗಿ ರುವುದಾಗಿ ಪರಿಸರ ನಿವಾಸಿಗಳು ದೂರಿದ್ದಾರೆ. ಅಲ್ಲದೆ ಅಂಗನವಾಡಿಯ …

ವಿವಿಧ ಬೇಡಿಕೆ ಮುಂದಿರಿಸಿ ಆಟೋರಿಕ್ಷಾ ಕಾರ್ಮಿಕರಿಂದ ತಾಲೂಕು ಕಚೇರಿ ಮಾರ್ಚ್

ಕಾಸರಗೋಡು: ಆಟೋರಿಕ್ಷಾ ಪ್ರಯಾಣದರ ಹೆಚ್ಚಿಸಬೇಕು, ಪೆಟ್ರೋಲ್ ಉತ್ಪನ್ನಗಳನ್ನು ಸಬ್ಸಿಡಿ ದರದಲ್ಲಿ ಆಟೋ ಕಾರ್ಮಿಕರಿಗೆ ವಿತರಿಸಬೇಕು, ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್‌ಟಿಯಲ್ಲಿ ಸೇರಿಸಲು ಕೇರಳ ಶಿಫಾರಸು ಮಾಡಬೇಕು, ಪೆಟ್ರೋಲಿಯಂ ಉತ್ಪನ್ನಗಳಿಗೆ ರಾಜ್ಯ ಹೇರಿದ ಹೆಚ್ಚುವರಿ ತೆರಿಗೆಯನ್ನು ಕಡಿತಗೊಳಿಸಬೇಕು ಮೊದಲಾದ ಬೇಡಿಕೆಗಳನ್ನು ಮುಂದಿರಿಸಿ ಕಾಸರಗೋಡು ಜಿಲ್ಲಾ ಆಟೋರಿಕ್ಷಾ ಮಜ್ದೂರ್ ಸಂಘ್ (ಬಿಎಂಎಸ್) ಜಿಲ್ಲಾ ಸಮಿತಿ ನೇತೃತ್ವದಲ್ಲಿ ಕಾಸರಗೋಡು ತಾಲೂಕು ಕಚೇರಿಗೆ ಮಾರ್ಚ್ ಹಾಗೂ ಧರಣಿ ನಡೆಸಲಾಯಿತು. ಯೂನಿಯನ್ ಜಿಲ್ಲಾ ಅಧ್ಯಕ್ಷ ಶಿವರಾಮರ ಅಧ್ಯಕ್ಷತೆಯಲ್ಲಿ ನಡೆದ ಧರಣಿಯನ್ನು  ಆಟೋರಿಕ್ಷಾ ಮಜ್ದೂರ್ ಸಂಘ್‌ನ ಜಿಲ್ಲಾ …