ಉಪ್ಪಳ: ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ಮಣ್ಣಂಗುಳಿ ಮೈದಾನ ರಸ್ತೆ ಹಾಗೂ ಪರಿಸರದ ಅಂಗನವಾಡಿ ಬಳಿ ತ್ಯಾಜ್ಯ ರಾಶಿ ದುರ್ವಾಸನೆ ಬೀರುತ್ತಿರುವ ಹಿನ್ನೆಲೆ ಯಲ್ಲಿ ಸಾರ್ವಜನಿಕರು ಹಾಗೂ ಮಕ್ಕಳು ಸಮಸ್ಯೆ ಅನುಭವಿಸುವಂ ತಾಗಿದೆ ಎಂದು ದೂರಲಾಗಿದೆ. ಕಳೆದ ಹಲವಾರು ತಿಂಗಳುಗಳಿAದ ಮಣ್ಣಂಗುಳಿ ಮೈದಾನ ಪರಿಸರದ ವಿವಿಧ ರಸ್ತೆಗಳಲ್ಲಿ ಹಾಗೂ ಅಂಗನವಾಡಿ ಸಮೀಪದಲ್ಲೇ ಭಾರೀ ಪ್ರಮಾಣದ ತ್ಯಾಜ್ಯ ದುರ್ವಾಸನೆ ಬೀರುತ್ತಿದ್ದರೂ ತೆರವುಗೊಳಿಸಲು ಕ್ರಮಕೈಗೊಳ್ಳದಿರುವುದರಿಂದ ಮೂಗಿಗೆ ಕೈ ಹಿಡಿದು ತೆರಳುವ ಪರಿಸ್ಥಿತಿ ಉಂಟಾಗಿ ರುವುದಾಗಿ ಪರಿಸರ ನಿವಾಸಿಗಳು ದೂರಿದ್ದಾರೆ. ಅಲ್ಲದೆ ಅಂಗನವಾಡಿಯ ಮಕ್ಕಳಿಗೆ ಆರೋಗ್ಯ ಸಮಸ್ಯೆ ಉಂಟಾಗುವ ಭೀತಿ ಹೆತ್ತವರನ್ನು ಆತಂಕP್ಕೆÆಳಪಡಿಸಿದೆ.
ಬಾವಿಯ ನೀರು ಕಲುಷಿತಗೊಳ್ಳುವ ಸಾಧ್ಯತೆ ಇದೆ. ರಾತ್ರಿ ಹೊತ್ತಲ್ಲಿ ವಿವಿಧ ಪ್ರದೇಶಗಳಿಂದ ತ್ಯಾಜ್ಯ ತಂದು ಉಪೇಕ್ಷಿಸುವುದಾಗಿ ಹೇಳಲಾಗುತ್ತಿದೆ. ಆದರೆ ತ್ಯಾಜ್ಯ ತೆರವುಗೊಳಿಸಲು ಪಂಚಾಯತ್ ಅಧಿಕಾರಿಗಳು ಕ್ರಮಕೈಗೊಳ್ಳದಿರುವುದು ಸಾರ್ವಜನಿಕರಲ್ಲಿ ಆಕ್ರೋಶಕ್ಕೆ ಕಾರಣವಾಗುತ್ತಿದೆ. ಈ ಹಿಂದೆ ಈ ಪರಿಸರದಲ್ಲಿ ಶುಚೀಕರಣಗೊಳಿಸಲಾಗಿತ್ತಾದರೂ ಮತ್ತೆ ಮೊದಲಿನ ಸ್ಥಿತಿಗೆ ತಲುಪಿದೆ. ಈ ಭಾರೀ ಪಂಚಾಯತ್‌ನ ಬಜೆಟ್‌ನಲ್ಲಿ ತ್ಯಾಜ್ಯ ನಿರ್ಮೂಲನೆಗೆ ಯೋಜನೆ ಹಾಕಲಾಗಿದ್ದು, ಈ ಯೋಜನೆಯನ್ನು ಕೂಡಲೇ ಕಾರ್ಯರೂಪಕ್ಕೆ ತರಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಪಂಚಾಯತ್ ವ್ಯಾಪ್ತಿಯ ಒಳ ರಸ್ತೆಯಲ್ಲಿ ಹಾಗೂ ಕೈಕಂಬ, ಉಪ್ಪಳ ಗೇಟ್ ಸರ್ವೀಸ್ ರಸ್ತೆಯ ಫುಟ್‌ಪಾತ್‌ನಲ್ಲಿ ತ್ಯಾಜ್ಯ ಕಂಡುಬರುತ್ತಿದ್ದು, ಉಪೇಕ್ಷಿಸುವ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಕ್ರಮಕ್ಕೆ ಮುಂದಾಗಬೇಕು, ತೆರವುಗೊಳಿಸಿ ಶುಚೀಕರಣ ನಡೆಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.







