ನಿಲ್ಲಿಸಿದ್ದ ಲಾರಿಗಳಿಂದ ಬ್ಯಾಟರಿ ಕಳವು: ಆರೋಪಿಗಳ ಪೈಕಿ ಓರ್ವ ಬಂಧನ ; ಇತರ ಮೂವರಿಗಾಗಿ ಶೋಧ, ಬ್ಯಾಟರಿ ಕಾಣೆಯಾದದ್ದು 9 ಲಾರಿಗಳಿಂದ
ಕುಂಬಳೆ: ನಿಲ್ಲಿಸಿದ್ದ ಲಾರಿ ಗಳಿಂದ ಬ್ಯಾಟರಿ ಕಳವು ನಡೆಸಿದ ಪ್ರಕರಣದಲ್ಲಿ ಓರ್ವ ಆರೋಪಿ ಯನ್ನು ಕುಂಬಳೆ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಬಂಧಿಸಲಾಗಿದೆ. ಇತರ ಮೂವರು ಆರೋಪಿಗಳಿಗಾಗಿ ಶೋಧ ನಡೆಯುತ್ತಿದೆ. ಆಲಂಪಾಡಿ ತೈವಳಪ್ಪು ನಿವಾಸಿಯಾದ ಶಮೀರ್ ಯಾನೆ ತೈವಳಪ್ಪು ಶಮೀರ್ (50) ಎಂಬಾತ ಬಂಧಿತ ಆರೋಪಿ ಯಾಗಿದ್ದಾನೆ. ಇತರ ಆರೋಪಿಗಳಾದ ಚೆರ್ಕಳ ಮಜೀದ್, ಪವಾಸ್, ಫಾರೂಕ್ ಎಂಬಿವರಿಗಾಗಿ ಶೋಧ ನಡೆಸುತ್ತಿರುವುದಾಗಿ ಕುಂಬಳೆ ಪೊಲೀಸ್ ಇನ್ಸ್‌ಪೆಕ್ಟರ್ ಬೈಜು ಕೆ. ಜೋಸ್ ತಿಳಿಸಿದ್ದಾರೆ. ಕಳೆದ ಹಲವು ತಿಂಗಳುಗಳಿಂದ ಕುಂಬಳೆ ಪೊಲೀಸ್ ಠಾಣೆ …