ಮೆಡಿಕಲ್ ಕಾಲೇಜು ಪೂರ್ಣ ಮಟ್ಟದಲ್ಲಿ ಆರಂಭಿಸಲು, ಕಾಸರಗೋಡಿಗೆ ಏಮ್ಸ್ ನೀಡಲು ಶಾಸಕ ಕಲ್ಲಟ್ರ ವಿಧಾನಸಭೆಯಲ್ಲಿ ಆಗ್ರಹ

ಕಾಸರಗೋಡು: ತನ್ನ ಚೊಚ್ಚಲ ಭಾಷಣದಲ್ಲಿ ಕಾಸರಗೋಡು ಮಂಡಲದ ಜನಪರ ಬೇಡಿಕೆಗಳ ಬಗ್ಗೆ ಶಾಸಕ ಕಲ್ಲಟ್ರ ಮಾಹಿನ್ ವಿಧಾನಸಭೆಯ ಗಮನ ಸೆಳೆದಿದ್ದಾರೆ. ಉಮ್ಮನ್ ಚಾಂಡಿ ಸರಕಾರ ಮಂಜೂರು ಗೊಳಿಸಿದ ಕಾಸರಗೋಡು ಮೆಡಿಕಲ್ ಕಾಲೇಜು ತುರ್ತಾಗಿ ಪೂರ್ಣಮಟ್ಟದಲ್ಲಿ ಸಾಕಾರಗೊಳಿಸಬೇಕೆಂದು, ನರ್ಸಿಂಗ್ ಕಾಲೇಜಿಗೆ ಹಾಸ್ಟೆಲ್ ಕಟ್ಟಡ, ಏಮ್ಸ್ ಕಾಸರಗೋಡಿಗೆ ಮಂಜೂರು ಮಾಡಬೇಕೆಂದು ಅವರು ಆಗ್ರಹಿಸಿದ್ದಾರೆ. ಆರೋಗ್ಯ ರಂಗದ ಹಿಂದುಳಿದಾವಸ್ಥೆ ಹಾಗೂ ಎಂಡೋಸಲ್ಫಾನ್ ಸಂತ್ರಸ್ತರ ಸಂಕಷ್ಟವನ್ನು ಗಣನೆಗೆ ತೆಗೆದು ಕೇರಳಕ್ಕೆ ಅರ್ಹವಾದ ಏಮ್ಸ್ ಕಾಸರಗೋಡಿನಲ್ಲೇ ಸ್ಥಾಪಿಸಲು ಕೇಂದ್ರಕ್ಕೆ ಒತ್ತಡ ಹಾಕಬೇಕೆಂದು ಅವರು ಆಗ್ರಹಿಸಿದರು. …

ಬ್ರಹ್ಮಕುಮಾರಿ ಕಾಸರಗೋಡು ಸೇವಾ ಕೇಂದ್ರದಲ್ಲಿ ಯೋಗ ದಿನಾಚರಣೆ

ಕಾರಸಗೋಡು: ಅಂತಾರಾಷ್ಟ್ರೀ ಯ ಯೋಗ ದಿನಾಚರಣೆಯ ಅಂಗವಾಗಿ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಕಾರಸಗೋಡು ಸೇವಾ ಕೇಂದ್ರದಲ್ಲಿ ಯೋಗ ದಿನಾಚರಣೆ ಆಯೋಜಿಸಲಾಯಿತು.ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಕಾಸರ ಗೋಡು ಸಂಚಾಲಕಿ ಬ್ರಹ್ಮಕುಮಾರಿ ವಿಜಯಲಕ್ಷ್ಮಿ ಅಧ್ಯಕ್ಷತೆ ವಹಿಸಿ ಮಾತ ನಾಡಿ, ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಸಂಸ್ಥೆಯಲ್ಲಿ ಪ್ರತಿನಿತ್ಯ ರಾಜಯೋಗ ಅಭ್ಯಸಿಸುವ ಮೂಲಕ ಜೀವನದಲ್ಲಿ ಯಶಸ್ವಿ ಪಾತ್ರವನ್ನು ಮುನ್ನಡೆಸಬಹುದು. ಇಂದಿನ ಜೀವನಶೈಲಿಯಲ್ಲಿ ಮಾನಸಿಕ ಶಾಂತಿ, ಆತ್ಮಬಲ ಮತ್ತು ಸಕಾರಾತ್ಮಕ ಚಿಂತನೆಗಾಗಿ ರಾಜಯೋಗ ಧ್ಯಾನದ ಮಹತ್ವ ಅತ್ಯಗತ್ಯವಾಗಿದ್ದು, ಅಂತಾರಾಷ್ಟ್ರೀಯ ಯೋಗ …

ಮರಬಿದ್ದು ಮನೆ ಹಾನಿಗೊಂಡು ಸಂಕಷ್ಟದಲ್ಲಿದ್ದ ದಂಪತಿಗೆ ಕಲ್ಕಿ ಮಂಜೇಶ್ವರ ಸಹಾಯಹಸ್ತ

ಮಂಜೇಶ್ವರ: ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ಹೊಸಂಗಡಿ ಬಳಿಯ ಮಜಿಬೈಲು ನಿವಾಸಿ ಕೇಶವ ಹಾಗೂ ಲಲಿತಾ ದಂಪತಿಯ ಹೆಂಚು ಹಾಸಿದ ಮನೆಯ ಮೇಲ್ಛಾವಣಿಗೆ ಮರ ಬಿದ್ದು ಹಾನಿಯುಂಟಾಗಿದ್ದು, ಈ ಸಂಕಷ್ಟದ ಸಂದರ್ಭದಲ್ಲಿ ಕಲ್ಕಿ ಮಂಜೇಶ್ವರ ತಂಡ ಸ್ಪಂದಿಸಿ ಮನೆ ದುರಸ್ತಿ ಕಾರ್ಯಕ್ಕೆ ನೆರವಾಗಿ ಮಾನವೀಯತೆ ಮೆರೆದಿದೆ. ಸುಮಾರು 7೦,೦೦೦ ರೂ. ವೆಚ್ಚದಲ್ಲಿ ದುರಸ್ತಿ ಕಾರ್ಯ ನೆರವೇರಿದ್ದು, ಈ ಮಹತ್ಕಾರ್ಯಕ್ಕೆ ಟೀಮ್‌ನ ಸಹೃದಯಿ ದಾನಿಗಳು ಹಾಗೂ ಚಕ್ರವರ್ತಿ ಹೊಸಂಗಡಿ ಸಂಸ್ಥೆ ಸಹಕರಿಸಿದೆ. ಈ ಸಹಾಯ ಕಾರ್ಯಕ್ಕೆ ಪ್ರೋತ್ಸಾಹ ನೀಡಿದ …

ನರೇಂದ್ರ ಮೋದಿ ಆಡಳಿತಕ್ಕೆ 12 ವರ್ಷ :ಬಿಜೆಪಿಯಿಂದ ‘ವಿಕಸಿತ ಭಾರತಂ’ ಸಮಾವೇಶ

ಕಾಸರಗೋಡು: ನರೇಂದ್ರ ಮೋದಿ ಸರಕಾರದ 12ನೇ ವಾರ್ಷಿಕಾಚರಣೆಯಂಗವಾಗಿ ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿಯ ಆಶ್ರಯದಲ್ಲಿ ನವಭಾರತ ಸದಸ್ ಎಂಬ ಹೆಸರಲ್ಲಿ ‘ವಿಕಸಿತ ಭಾರತಂ’ ಸಮಾವೇಶ ಆಯೋಜಿಸಲಾಯಿತು. ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಮಂದಿರದಲ್ಲಿ ನಡೆದ ಕಾರ್ಯಕ್ರಮವನ್ನು ಬಿಜೆಪಿ ಜಿಲ್ಲಾ ಅಧ್ಯಕ್ಷೆ ಅಶ್ವಿನಿ ಎಂ.ಎಲ್. ಉದ್ಘಾಟಿಸಿದರು. ವಿಶ್ವದ ೧೦ನೇ ಆರ್ಥಿಕ ಶಕ್ತಿಯಾಗಿದ್ದ ಭಾರತವನ್ನು ಕೇವಲ 12 ವರ್ಷಗಳಲ್ಲಿ ನಾಲ್ಕನೇ ಸ್ಥಾನಕ್ಕೆ ತಲುಪಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಸಾಧ್ಯವಾಗಿದೆ ಎಂದು ಅಶ್ವಿನಿ ಅಭಿಪ್ರಾಯಪಟ್ಟರು. ಭ್ರಷ್ಟಾಚಾರ, ಆಡಳಿತ ಪರವಾದ ಅಸ್ಥಿರತೆಗಳಿಂದ ಹಾನಿಗೊಂಡಿದ್ದ …

ಕಟ್ಟೆಬಜಾರ್ ತಿರುವಿನಲ್ಲಿ ಬಾಯ್ತೆರೆದ ಚರಂಡಿ: ವಾಹನ ಸವಾರರಲ್ಲಿ ಆತಂಕ

ಮಂಜೇಶ್ವರ: ಮಂಜೇಶ್ವರ ಪಂಚಾಯತ್ ವ್ಯಾಪ್ತಿಯ ಬಂಗ್ರಮAಜೇಶ್ವರ ರಸ್ತೆಯ ಕಟ್ಟೆಬಜಾರ್ ತಿರುವು ವಾಹನ ಸವಾರರಲ್ಲಿ ಆತಂಕವನ್ನು ಉಂಟುಮಾಡುತ್ತಿದೆ. ಈ ತಿರುವಿನ ಇಕ್ಕೆಡೆಗಳಲ್ಲಿ ರಸ್ತೆಗೆ ತಾಗಿಕೊಂಡು ತೆರೆದ ಸ್ಥಿತಿಯಲ್ಲಿರುವ ಚರಂಡಿ ವಾಹನ ಸವಾರರಿಗೆ ಅಪಾಯ ಒಡ್ಡುತ್ತಿದೆ. ಮಂಜೇಶ್ವರ ಭಾಗದಿಂದ ಹೊಸಂಗಡಿ ಕಡೆಗೆ ಸಂಚರಿಸುವಾಗ ಈ ತಿರುವಿನಲ್ಲಿ ಎದುರಿನಿಂದ ಬರುವ ವಾಹನಕ್ಕೆ ಸೈಡು ನೀಡುವ ವೇಳೆ ಚರಂಡಿಗೆ ಬಿದ್ದು ಅಪಘಾತಕ್ಕೆ ಕಾರಣವಾಗುತ್ತಿದ್ದು, ಕೆಲವರು ಕೂದಲೆಳೆ ಅಂತರದಿAದ ಪಾರಾಗಿದ್ದಾರೆ. ಈ ಪರಿಸರದಲ್ಲಿ ಚರಂಡಿಯಲ್ಲಿ ಗಿಡ, ಪೊದೆಗಳು ತುಂಬಿ ಚರಂಡಿ ಗಮನಕ್ಕೆ ಬಾರದೆ ಇನ್ನಷ್ಟು …