ಗುತ್ಯಡ್ಕದಲ್ಲಿ ಚಿರತೆ ಆತಂಕ : ಸಾಕುನಾಯಿಗಳೆರಡು ನಿಗೂಢ ನಾಪತ್ತೆ

ಬೆಳ್ಳೂರು: ಕರ್ನಾಟಕ- ಕೇರಳ ಗಡಿ ಪ್ರದೇಶವಾದ ಗುತ್ಯಡ್ಕದಲ್ಲಿ ಮನೆ ಸಮೀಪ ಕಟ್ಟಿಹಾಕಿದ್ದ ಎರಡು ಸಾಕುನಾಯಿಗಳು ನಿಗೂಢವಾಗಿ ನಾಪತ್ತೆಯಾಗಿದ್ದು, ಸ್ಥಳೀಯರಲ್ಲಿ ಚಿರತೆ ಭೀತಿ ತಲೆಯೆತ್ತಿದೆ. ಬೆಳ್ಳೂರು ಪಂಚಾಯತ್‌ನ ಕಾಯರ್‌ಪದವು ಮೂಲಕ ಕರ್ನಾಟಕದ ಈಶ್ವರಮಂ ಗಲವನ್ನು ಸಂಪರ್ಕಿಸುವ ಗಡಿ ಭಾಗದಲ್ಲಿ ಈ ಘಟನೆ ನಡೆದಿದ್ದು, ನಿನ್ನೆ ಬೆಳಿಗ್ಗೆ ಮನೆಯವರು ನೋಡಿದಾಗ ಕಟ್ಟಿ ಹಾಕಿದ ನಾಯಿಗಳು ನಾಪತ್ತೆಯಾಗಿರುವುದು ಕಂಡು ಬಂದಿದೆ. ಆದರೆ ಜಾಗದಲ್ಲಿ ಯಾವುದೇ ರಕ್ತದ ಕಲೆ ಅಥವಾ ಕಾಡುಪ್ರಾಣಿ ದಾಳಿಯ ಕುರುಹು ಕಂಡು ಬಂದಿಲ್ಲ. ಅಲ್ಲದೆ ಈ ಪರಿಸರದಲ್ಲೆಲ್ಲೂ ನಾಯಿಗಳ …

ಸೀತಾಂಗೋಳಿಯಿಂದ ಯುವತಿ ನಾಪತ್ತೆ

ಸೀತಾಂಗೋಳಿ: ಸೀತಾಂಗೋಳಿ  ಕ್ವಾರ್ಟರ್ಸ್‌ನಿಂದ ಯುವತಿ ಯೋರ್ವೆ ನಾಪತ್ತೆಯಾದ ಬಗ್ಗೆ ದೂರಲಾಗಿದೆ. ಇಲ್ಲಿನ ಬಿವರೇಜಸ್ ಮದ್ಯದಂಗಡಿ ಬಳಿಯ ಕ್ವಾರ್ಟರ್ಸ್ ನಲ್ಲಿ ವಾಸಿಸುತ್ತಿದ್ದ ಜುನು ನರ್ಸಾರಿ (23) ಎಂಬಾಕೆ ನಾಪತ್ತೆಯಾಗಿ ದ್ದಾಳೆ. ನಿನ್ನೆ ಬೆಳಿಗ್ಗೆ 10.30ರ ವೇಳೆ ಕ್ವಾರ್ಟರ್ಸ್‌ನಿಂದ ಈಕೆ ತೆರಳಿದ್ದಳು. ಆದರೆ ಮರಳಿ ಬಂದಿಲ್ಲವೆನ್ನಲಾಗಿದೆ. ಇದರಿಂದ ವಿವಿಧೆಡೆ ಹುಡುಕಿದರೂ ಪತ್ತೆಯಾಗದ ಹಿನ್ನೆಲೆಯಲ್ಲಿ ಪತಿ ನಿಖಿಲ್ ನರ್ಸಾರಿ ಕುಂಬಳೆ ಪೊಲೀಸರಿಗೆ ದೂರು ನೀಡಿದ್ದಾರೆ.  ಇದರಂತೆ ಪೊಲೀಸರು ಕೇಸು ದಾಖಲಿಸಿ ಶೋಧ ಆರಂಭಿಸಿದ್ದಾರೆ. ಇದೇ ವೇಳೆ ಜುನು ಕ್ವಾರ್ಟರ್ಸ್‌ನಿಂದ ಹಣ ಕೊಂಡೊಯ್ದಿರುವುದಾಗಿ …

ತಿರುವನಂತಪುರ ಕಾರ್ಪೋರೇಶನ್‌ನ 20 ಬಿಜೆಪಿ ಕೌನ್ಸಿಲರ್‌ಗಳ ಪ್ರಮಾಣವಚನ ಅಸಿಂಧುಗೊಳಿಸಿದ ಹೈಕೋರ್ಟ್

ತಿರುವನಂತಪುರ: ತಿರುವನಂತಪುರ ಕಾರ್ಪೋರೇಶನ್‌ನಲ್ಲಿ ಕೇರಳದ ಇತಿಹಾಸದಲ್ಲೇ ಪ್ರಥಮವಾಗಿ ಅಧಿಕಾರಕ್ಕೇರಿದ ಬಿಜೆಪಿ ನೇತೃತ್ವದ ಆಡಳಿತ ಸಮಿತಿ  ಕೌನ್ಸಿಲರ್‌ಗಳ ಪೈಕಿ  ಬಲಿದಾನಿಗಳ ಹಾಗೂ ದೇವರುಗಳ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ 20 ಕೌನ್ಸಿಲರ್‌ಗಳ ಪ್ರಮಾಣವಚನ ವನ್ನು ಹೈಕೋರ್ಟ್ ಅಸಿಂಧುಗೊಳಿಸಿ ಇಂದು ತೀರ್ಪು ನೀಡಿದೆ. ಅಲ್ಲದ  ಈ 20 ಸದಸ್ಯರು ಮುಂದಿನ 4 ವಾರದೊಳಗಾಗಿ  ಮರು ಪ್ರಮಾಣವಚನ ಸ್ವೀಕರಿಸಬೇಕೆಂದು ಹೈಕೋರ್ಟ್ ನಿರ್ದೇಶ ನೀಡಿದೆ.  ಬಿಜೆಪಿಯ 20 ಕೌನ್ಸಿಲರ್‌ಗಳು ಬಲಿದಾನಿಗಳ ಹಾಗೂ  ವಿವಿಧ ದೇವರುಗಳ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿ ಸ್ಥಾನ ವಹಿಸಿಕೊಂಡಿದ್ದರು.  ಪ್ರಮಾಣವಚನ ಸ್ವೀಕರಿಸಿದ …

ದುಬಾಯಿಗೆ ಹೋಗುವುದಾಗಿ ತಿಳಿಸಿ ಮನೆಯಿಂದ ಹೊರಟ ಯುವಕ ನಾಪತ್ತೆ

ಕಾಸರಗೋಡು: ದುಬಾಯಿಗೆ ಹೋಗಲೆಂದು ಮನೆಯಿಂದ ಹೊರಟ ಯುವಕ ನಾಪತ್ತೆಯಾಗಿರುವುದಾಗಿ ದೂರಲಾಗಿದೆ. ವಿದ್ಯಾನಗರ ಬೆದಿರ ಖಲೀಲ್ ಹೌಸ್‌ನ ಎ.ಎ. ಉಬೈಸ್ (26) ನಾಪತ್ತೆಯಾದ ಯುವಕ. ಈ ಬಗ್ಗೆ ತಾಯಿ ನೀಡಿದ ದೂರಿನಂತೆ ಕಾಸರಗೋಡು ನಗರಠಾಣೆ ಪೊಲೀಸರು  ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ದುಬಾಯಿಗೆ ಹೋಗಲೆಂದು ಜೂನ್ 22ರಂದು ಸಂಜೆ 4 ಗಂಟೆಗೆ ಉಬೈಸ್ ಮನೆಯಿಂದ ಹೊರಟಿದ್ದರು. ಮಂಗಳೂರು ವಿಮಾನ ನಿಲ್ದಾಣದಿಂದ ಪ್ರಯಾಣಿಸುವುದಾಗಿ ಉಬೈಸ್ ಮನೆಯವರಲ್ಲಿ ತಿಳಿಸಿದ್ದರು. ಆದರೆ ಅವರಿಂದ ಉಬೈಸ್‌ನ ಕುರಿತು ಯಾವುದೇ ಮಾಹಿತಿ ಇಲ್ಲವೆಂದು ಪೊಲೀಸರು ದಾಖಲಿಸಿಕೊಂಡ …

ಕಣಜದ ಹುಳುಗಳ ದಾಳಿಗೆ ವೃದ್ಧೆ ಬಲಿ

ಬೋವಿಕ್ಕಾನ: ಕಣಜದ ಹುಳುಗಳ ದಾಳಿಗೊಳಗಾಗಿ ವೃದ್ಧೆ ಸಾವನ್ನಪ್ಪಿದ ಘಟನೆ ನಡೆದಿದೆ. ಎರಿಂಞಿಪುಳ ಮಾಲಾಂಕಡಪ್ಪಿನ ಟಿ. ನಾರಾಯಣಿ (77) ಸಾವನ್ನಪ್ಪಿದ ದುರ್ದೈವಿ. ಕಳೆದ ಶುಕ್ರವಾರ ಇವರು ತಮ್ಮ ಹಿತ್ತಿಲಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕಣಜದ ಹುಳುಗಳು ಅವರ ಮೇಲೆ ದಾಳಿ ನಡೆಸಿವೆ. ಇದರಿಂದ ಗಂಭೀರ ಗಾಯಗೊಂಡ ಅವರನ್ನು ಕಾಸರಗೋಡು  ಜನರಲ್ ಆಸ್ಪತ್ರೆಗೆ  ತಲುಪಿಸಿ ಚಿಕಿತ್ಸೆ ನೀಡಿ ನಂತರ ಕಣ್ಣೂರು ವೈದ್ಯಕೀಯ ಕಾಲೇಜು ಆಸ್ಪತ್ರೆಂiiಲ್ಲಿ ದಾಖಲಿಸಿ ಉನ್ನತಮ ಟ್ಟದ ಚಿಕಿತ್ಸೆ ನೀಡಲಾಯಿ ತಾದರೂ ಫಲಕಾರಿಯಾಗದೆ ಅವರು ಸಾವನ್ನಪ್ಪಿದರು. ಇವರು ಕೃಷಿ …

ತಲಪಾಡಿಯಲ್ಲಿ ಸರಣಿ ಅಪಘಾತ : ಹಲವರಿಗೆ ಗಾಯ; ರಿಕ್ಷಾ ಚಾಲಕನಿಗೆ ಗಂಭೀರ

ಮಂಜೇಶ್ವರ: ತಲಪಾಡಿಯಲ್ಲಿ ಸಂಭವಿಸಿದ ಸರಣಿ ಅಪಘಾತದಲ್ಲಿ ಆಟೋ ರಿಕ್ಷಾ ಚಾಲಕನೊಬ್ಬ ಗಂಭೀರ ವಾಗಿ ಗಾಯಗೊಂಡಿದ್ದು, ಆಟೋ ದಲ್ಲಿದ್ದ ಇಬ್ಬರು ಮತ್ತು ಕಾರುಗಳಲ್ಲಿ ದ್ದವರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ನಿನ್ನೆ ಸಂಜೆ 6.15ರ ಸುಮಾರಿಗೆ ಅಪಘಾತ ಸಂಭವಿಸಿದೆ. ಕಾಸರಗೋಡು ಕಡೆಯಿಂದ ಮಂ ಗಳೂರಿನತ್ತ ತೆರಳುತ್ತಿದ್ದ ಕಂಟೈನರ್ ಲಾರಿ ಆಟೋ ರಿಕ್ಷಾಕ್ಕೆ ಡಿsಕ್ಕಿಯÁಗು ವುದನ್ನು ತಪ್ಪಿಸಲು ಚಾಲಕ ಬಲ ಭಾಗಕ್ಕೆ ತಿರುಗಿಸಿದಾಗ ಎದುರಿನಿಂದ ಬರುತ್ತಿದ್ದ ಮತ್ತೊಂದು ಲಾರಿ ಹಾಗೂ ಮೂರು ಕಾರು, ಆಟೋ ರಿಕ್ಷಾಕ್ಕೆ ಡಿsಕ್ಕಿ ಹೊಡೆದಿದೆ. ಡಿsಕ್ಕಿಯ ರಭಸಕ್ಕೆ …

16ರ  ಬಾಲಕಿಯನ್ನು ಹೋಮ್‌ಸ್ಟೇಗೆ ಕರೆದೊಯ್ದು ಕಿರುಕುಳ: ಆರೋಪಿಗಾಗಿ ಶೋಧ

ಕಾಸರಗೋಡು: 16ರ ಹರೆಯದ ಬಾಲಕಿಯನ್ನು ಹೋಮ್ ಸ್ಟೇಗೆ ಕರೆದೊಯ್ದು ಕಿರುಕುಳ ನೀಡಿದ ಪ್ರಕರಣದಲ್ಲಿ ಆರೋಪಿಯಾದ ಯುವಕನಿಗಾಗಿ ಪೊಲೀಸರು ಶೋಧ  ನಡೆಸುತ್ತಿದ್ದಾರೆ. ಬಾಲಕಿಗೆ ಕಿರುಕುಳ ನೀಡಿದ ಆರೋಪದಂತೆ 23ರ ಹರೆಯದ ಅರ್ಜುನ್ ಎಂಬಾತನ ವಿರುದ್ಧ ಅಂಬಲತ್ತರ  ಪೊಲೀಸರು ಪೋಕ್ಸೋ ಕೇಸು ದಾಖಲಿಸಿಕೊಂ ಡಿದ್ದರು. ಆದರೆ ಘಟನೆ ನಡೆದಿರುವುದು ರಾಜಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಾದುದರಿಂದ ಪ್ರಕರಣವನ್ನು ಅಲ್ಲಿಗೆ ಸ್ಥಳಾಂತರಿ ಸಲಾಗಿದೆ. ಬಾಲಕಿಯೊಂದಿಗೆ ಯುವಕ ಸ್ನೇಹದಲ್ಲಿದ್ದನೆನ್ನಲಾಗಿದೆ. ಇದರ ನೆಪದಲ್ಲಿ  ಬಾಲಕಿಯನ್ನು ಆತ ಹೋಮ್ ಸ್ಟೇಗೆ ಕರೆದೊಯ್ದು ಕಿರುಕುಳ ನೀಡಿರವುದಾಗಿ ದೂರಲಾಗಿದ.

ಆಪರೇಶನ್ ತೂಫಾನ್ ಕಾರ್ಯಾಚರಣೆ: ಮೈಲಾಟಿಯಲ್ಲಿ ಪಾನ್ ಮಸಾಲೆ ನಿರ್ಮಾಣ ಘಟಕ ಪತ್ತೆ: ಇಬ್ಬರ ಸೆರೆ

ಕಾಸರಗೋಡು: ಆಪರೇಶನ್ ತೂಫಾನ್ ದಿ ನರ್ಕೋ ಹಂಟ್‌ನಂತೆ ಮೈಲಾಟಿ220 ಕೆವಿ ವಿದ್ಯುತ್ ಸಬ್ ಸ್ಟೇಶನ್ ಪಕ್ಕದ ರಾಷ್ಟ್ರೀಯ ಹೆದ್ದಾರಿ ಬಳಿಯ ಕಟ್ಟಡವೊಂದರಲ್ಲಿ  ಮೇಲ್ಪ ರಂಬ ಪೊಲೀಸರು ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ಕೇರಳದಲ್ಲಿ ನಿಷೇಧ ಹೇರಲಾಗಿರುವ ತಂಬಾಕು ಉತ್ಪನ್ನಗಳ ನಿರ್ಮಾಣ ಘಟಕವನ್ನು ಪತ್ತೆಹಚ್ಚಿದ್ದಾರೆ. ಇದಕ್ಕೆ ಸಂಬಂಧಿಸಿ ಕೂಡ್ಲು ಮೀಪುಗುರಿಯ ಸಿ.ಎಂ. ಜಾಫರ್ (32) ಮತ್ತು ಬದಿಯಡ್ಕದ ಮೊಹಮ್ಮ ದ್ ಹಾರೀಸ್ (29) ಎಂಬಿಬ್ಬರನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೇಲ್ಪರಂಬ   ಠಾಣೆಯ ಇನ್‌ಸ್ಪೆಕ್ಟರ್ ಎನ್.ಪಿ. ರಾಘವನ್ ನೇತೃತ್ವದ ತಂಡ …

ಕುಂಬಳೆ ಪ್ರೆಸ್ ಫಾರಂಗೆ ಪದಾಧಿಕಾರಿಗಳ ಆಯ್ಕೆ

ಕುಂಬಳೆ: ಕುಂಬಳೆ ಪ್ರೆಸ್ ಫಾರಂಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಈ ಬಗ್ಗೆ ನಡೆದ ಮಹಾಸಭೆಯಲ್ಲಿ ಉಪಾಧ್ಯಕ್ಷ ಪುರುಷೋತ್ತಮ ಭಟ್ ಅಧ್ಯಕ್ಷತೆ ವಹಿಸಿದರು. ಕಾರ್ಯದರ್ಶಿ ಅಬ್ದುಲ್ ಲತೀಫ್ ಉಳುವಾರು ಸ್ವಾಗತಿಸಿದರು. ಕೆ.ಎಂ.ಎ. ಸತ್ತಾರ್, ಅಬ್ದುಲ್ಲ ಕುಂಬಳೆ ಮಾತನಾಡಿದರು.  ನೂತನ ಪದಾಧಿಕಾರಿಗಳಾಗಿ ಅಬ್ದುಲ್ಲ ಕುಂಬಳೆ (ಕಾರವಲ್- ಅಧ್ಯಕ್ಷ), ಐ. ಮುಹಮ್ಮದ್ ರಫೀಕ್ (ಕಾರ್ಯದರ್ಶಿ),  ಅಬ್ದುಲ್ ಲತೀಫ್ (ಕೋಶಾಧಿಕಾರಿ), ಉಪಾಧ್ಯಕ್ಷರಾಗಿ ಪುರುಷೋತ್ತಮ ಭಟ್, ಅಬ್ದುಲ್ ಲತೀಫ್, ಜೊತೆಕಾರ್ಯದರ್ಶಿಗಳಾಗಿ ಅಬ್ದುಲ್ ಲತೀಫ್ ಉಳುವಾರು, ಅಬ್ದುಲ್ ರಶೀದ್ ಆಯ್ಕೆಯಾದರು.