ಬಾಲಕೃಷ್ಣನ್ ನಿಧನ

ಮುಳ್ಳೇರಿಯ: ಅಸೌಖ್ಯ ತಗಲಿ ಚಿಕಿತ್ಸೆಯಲ್ಲಿದ್ದ ಕಾರಡ್ಕ ಚಂದನಡ್ಕ ನಿವಾಸಿ ಆರ್.ಟಿ. ಬಾಲನ್ ಎಂದೇ ಕರೆಸಿಕೊಂಡಿದ್ದ ಬಾಲಕೃಷ್ಣನ್ (72) ನಿಧನ ಹೊಂದಿದರು. ಅಗ್ನಿಶಾಮಕದಳ ದಲ್ಲಿ ಪಾರ್ಟ್‌ಟೈಮ್ ನೌಕರನಾಗಿದ್ದರು. ಕಾರಡ್ಕ ಪರಿಸರದ ಸಾಂಸ್ಕೃತಿಕ ರಂಗದಲ್ಲಿ ಸಕ್ರಿಯರಾಗಿದ್ದ ಇವರು ಕಾಡಗಂ ಫ್ರೆಂಡ್ಸ್ ಕಂಬೈನ್ಸ್ ಎಂಬ ನಾಟಕ ತಂಡವನ್ನು ರೂಪೀಕರಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಮೃತರು ತಾಯಿ ಕುಂಬ, ಪತ್ನಿ ಸಿ.ಶಾಂತ, ಮಕ್ಕ ಳಾದ ಪ್ರಶಾಂತ್, ಪ್ರಸೀತ, ಸಹೋ ದರರಾದ ಅಂಬುಕ್ಕನ್ ಮುಳ್ಳೇರಿಯ, ಕಿಟ್ಟನ್ ಕೂಡ್ಲು, ನಾರಾಯಣನ್ ಪುದಿಯವಳಪ್, ಗೋಪಾಲನ್ ಕೋಡೋತ್, ಕುಂಞಿರಾಮನ್ …

ಬಿಜೆಪಿಯ ಮೂವರು ಶಾಸಕರು ವಿಧಾನಸಭೆಯಲ್ಲಿ ತ್ರಿಮೂರ್ತಿಗಳಂತೆ -ಸಿ.ಕೆ.ಪದ್ಮನಾಭನ್

ಮುಳ್ಳೇರಿಯ: ಕೇರಳ ವಿಧಾನಸಭೆ ಯಲ್ಲಿ ಬಿಜೆಪಿಯ ಮೂವರು ಶಾಸಕರು ಬ್ರಹ್ಮ,ವಿಷ್ಣು, ಮಹೇಶ್ವರರಂತೆ ಕಾರ್ಯಾ ಚರಿಸುತ್ತಿ ದ್ದಾರೆಂದು ಬಿಜೆಪಿ ರಾಷ್ಟ್ರೀಯ ಸಮಿತಿ ಸದಸ್ಯ ಸಿ.ಕೆ. ಪದ್ಮನಾಭನ್ ಅಭಿಪ್ರಾಯಪಟ್ಟಿದ್ದಾರೆ. ಮುಳ್ಳೇರಿಯ ಗಣೇಶ ಕಲಾ ಮಂದಿರದಲ್ಲಿ ನಡೆದ ಬಿಜೆಪಿ ಬದಿಯಡ್ಕ ಮಂಡಲ ಪ್ರಶಿಕ್ಷಣ್ ಮಹಾ ಅಭಿಯಾನ್ (ತರಬೇತಿ ಕಾರ್ಯಕ್ರಮ) ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಜನಸಂಘದ ಕಾಲದಿಂದಲೇ ಕಾರ್ಯ ಕರ್ತರಿಗಾಗಿ ತರಬೇತಿ ಶಿಬಿರಗಳನ್ನು ನಡೆಸಲಾಗುತ್ತಿದೆ. ಅದು ಈಗಲೂ ಮುಂದುವರಿಯುತ್ತಿದೆಯೆಂದು ಅವರು ತಿಳಿಸಿದರು.  ಇಂದಿರಾಗಾಂಧಿ ಯವರ ಹತ್ಯೆಯ ಬಳಿಕ ನಡೆದ ಲೋಕಸಭಾ …

ಬಿಎಂಎಸ್ ಕಾಸರಗೋಡು ನಗರಸಭಾ ಸಮಿತಿ ಸಮ್ಮೇಳನ

ಕಾಸರಗೋಡು: ಭಾರತೀಯ ಮಜ್ದೂರ್ ಸಂಘ್ ಕಾಸರಗೋಡು ನಗರಸಭಾ ಸಮಿತಿ ಸಮ್ಮೇಳನ ಕಾಸರಗೋಡು ನಗರಸಭಾ ಕಾನ್ಫರೆನ್ಸ್ ಸಭಾಂಗಣದಲ್ಲಿ ಜರಗಿದ್ದು, ಬಿಎಂಎಸ್ ವಲಯ ಅಧ್ಯಕ್ಷ ಬಾಲಕೃಷ್ಣ ನೆಲ್ಲಿಕುಂಜೆ ಉದ್ಘಾಟಿಸಿದರು. ಕೆ. ಕಮಲಾಕ್ಷ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಉಪಾಧ್ಯಕ್ಷ ಅನಿಲ್ ಬಿ. ನಾಯರ್ ಪ್ರಧಾನ ಭಾಷಣ ಮಾಡಿದರು.  ಮಧೂರು ಪಂ. ಸದಸ್ಯ ವಸಂತ, ನಗರಸಭಾ ಕೌನ್ಸಿಲರ್‌ಗಳಾದ ಕೆ.ಆರ್. ಹರೀಶ್, ಕೆ. ರೇಷ್ಮ ಶುಭ ಕೋರಿದರು. ಬಿಎಂಎಸ್ ನಗರಸಭಾ ಜೊತೆ ಕಾರ್ಯದರ್ಶಿ ಕೆ. ಸೌಮ್ಯ ವರದಿ ಮಂಡಿಸಿದರು.  ಕೆ. ಗುರುದಾಸ್ ಸಂಘಟನಾ ಚರ್ಚೆ …

ಜಲ್‌ಜೀವಜಲ್‌ಜೀವನ್: ಕೋಟ್ಯಂತರ ರೂ. ವೆಚ್ಚ ಮಾಡಿದರೂ ಕುಡಿಯುವ ನೀರಿಲ್ಲ; ಯೋಜನೆಯನ್ನು ಗುತ್ತಿಗೆದಾರರಿಗೆ ಸಮರ್ಪಿಸಿದ ಅಧಿಕಾರಿಗಳು

ಕಾಸರಗೋಡು: ಸಂಪೂರ್ಣ ಗ್ರಾಮೀಣ ಮನೆಗಳಿಗೂ ಕುಡಿಯುವ ನೀರು ತಲುಪಿಸಬೇಕು ಎಂಬ ಉದ್ದೇಶದೊಂದಿಗೆ ಕೇಂದ್ರ ಸರಕಾರ ಜ್ಯಾರಿಗೊಳಿಸಿದ ಜಲ್ ಜೀವನ್ ಯೋಜನೆ ರಾಜ್ಯದಲ್ಲಿ ಅಧಿಕಾರಿ ಗಳು ಗುತ್ತಿಗೆದಾರರಿಗೆ ಸಲ್ಲಿಸಿ ಕೈತೊಳೆದರು. ಕೋಟ್ಯಂತರ ರೂ. ವೆಚ್ಚ  ಮಾಡಿದ ಯೋಜನೆಯಲ್ಲಿ ನೀರು ಲಭಿಸುವುದಿಲ್ಲ. ಆದರೆ ಊರಿಡೀ ರಸ್ತೆಗಳನ್ನು ಅಗೆದು ಪೈಪ್ ಸ್ಥಾಪಿಸಲಾಗಿದೆ. ಶೌಚಾಲಯ ಗಳಿಗೂ ಅತ್ಯಾಧುನಿಕ ಟ್ಯಾಪ್‌ಗಳನ್ನು ಸ್ಥಾಪಿಸಲಾಗಿದೆ. ಆದರೆ ಪೈಪ್‌ನ ಮೂಲಕ ಹರಿದು ಟ್ಯಾಪ್‌ಗೆ ತಲುಪಲಿ ರುವ ನೀರಿನ ಮೂಲ ಮಾತ್ರ ಪತ್ತೆಹಚ್ಚಲು ಅಧಿಕಾರಿಗಳಿಗೆ ಸಮಯ ವಿಲ್ಲ ದಾಗಿದೆ ಎಂದು …