ಜಲ್‌ಜೀವಜಲ್‌ಜೀವನ್: ಕೋಟ್ಯಂತರ ರೂ. ವೆಚ್ಚ ಮಾಡಿದರೂ ಕುಡಿಯುವ ನೀರಿಲ್ಲ; ಯೋಜನೆಯನ್ನು ಗುತ್ತಿಗೆದಾರರಿಗೆ ಸಮರ್ಪಿಸಿದ ಅಧಿಕಾರಿಗಳು

ಕಾಸರಗೋಡು: ಸಂಪೂರ್ಣ ಗ್ರಾಮೀಣ ಮನೆಗಳಿಗೂ ಕುಡಿಯುವ ನೀರು ತಲುಪಿಸಬೇಕು ಎಂಬ ಉದ್ದೇಶದೊಂದಿಗೆ ಕೇಂದ್ರ ಸರಕಾರ ಜ್ಯಾರಿಗೊಳಿಸಿದ ಜಲ್ ಜೀವನ್ ಯೋಜನೆ ರಾಜ್ಯದಲ್ಲಿ ಅಧಿಕಾರಿ ಗಳು ಗುತ್ತಿಗೆದಾರರಿಗೆ ಸಲ್ಲಿಸಿ ಕೈತೊಳೆದರು. ಕೋಟ್ಯಂತರ ರೂ. ವೆಚ್ಚ  ಮಾಡಿದ ಯೋಜನೆಯಲ್ಲಿ ನೀರು ಲಭಿಸುವುದಿಲ್ಲ. ಆದರೆ ಊರಿಡೀ ರಸ್ತೆಗಳನ್ನು ಅಗೆದು ಪೈಪ್ ಸ್ಥಾಪಿಸಲಾಗಿದೆ. ಶೌಚಾಲಯ ಗಳಿಗೂ ಅತ್ಯಾಧುನಿಕ ಟ್ಯಾಪ್‌ಗಳನ್ನು ಸ್ಥಾಪಿಸಲಾಗಿದೆ. ಆದರೆ ಪೈಪ್‌ನ ಮೂಲಕ ಹರಿದು ಟ್ಯಾಪ್‌ಗೆ ತಲುಪಲಿ ರುವ ನೀರಿನ ಮೂಲ ಮಾತ್ರ ಪತ್ತೆಹಚ್ಚಲು ಅಧಿಕಾರಿಗಳಿಗೆ ಸಮಯ ವಿಲ್ಲ ದಾಗಿದೆ ಎಂದು ಆರೋಪ ವಿದೆ. ಯೋಜನೆ ನೀರಲ್ಲಿಟ್ಟ ಹೋಮದಂ ತಾಗಿದೆ. ಆದರೂ ೧೮,೬೪೩ ಕೋಟಿ ರೂ. ಜಲ್‌ಜೀವನ್ ಲೆಕ್ಕದಲ್ಲಿ ಕೇರಳ ವೆಚ್ಚ ಮಾಡಿದೆ. ಅದಕ್ಕೆ ಲೆಕ್ಕ ಬರೆದು ನೀಡಲಾಗಿದೆ. ನೌಕರರ ಉತ್ಸಾಹವನ್ನು ಮೇಲಧಿಕಾರಿಗಳು ಪ್ರಶಂಸಿಸಿದರು. ಇನ್ನೇನು ಬೇಕು? ನೀರಿನ ಮೂಲ ಪತ್ತೆಹಚ್ಚದೆ ನೀರು ಖಚಿತಪಡಿಸದೆ ಜಲ್‌ಜೀವನ್ ಯೋಜನೆ ಜ್ಯಾರಿಗೊಳಿ ಸುವ ಸೂತ್ರ ನೌಕರರು ಈ ಮೂಲಕ ಕೈಗೊಂಡಿದ್ದಾರೆಂದು ಹೇಳಲಾಗುತ್ತಿದೆ.

ಈ ಕಾಮಗಾರಿಯ ಮೂಲಕ ವಿವಿಧ ಜಿಲ್ಲೆಗಳಲ್ಲಿ ೪೦ರಿಂದ ೫೦ ಶೇಕಡಾವರೆಗೆ ಕಾಮಗಾರಿಗಳು ಪೂರ್ತಿಯಾಗಿದೆ ಎಂದು ಅಧಿಕಾರಿಗಳು ಹಕ್ಕು ಮಂಡಿಸಿದ್ದಾರೆ. ಆದರೆ ಅದು ಪೈಪ್ ಹಾಕಿದ ಕೆಲಸ ಮಾತ್ರವಾಗಿದೆ. ಕುಡಿಯುವ ನೀರು ಎಲ್ಲಿಂದ ಬರುತ್ತದೆ? ಎಲ್ಲಿದೆ? ಎಂದು ಅಧಿಕಾರಿಗಳಿಗೆ ಯಾವುದೇ ತಿಳುವಳಿಕೆ ಇಲ್ಲ. ಈ ಯೋಜನೆಗಾಗಿ ೧೮,೬೪೩ ಕೋಟಿ ರೂ. ಈಗಾಗಲೇ ವೆಚ್ಚ ಮಾಡಿರುವುದಾಗಿ ಸಿಎಜಿ ವರದಿಯಲ್ಲೂ ಹೇಳಲಾಗುತ್ತಿದೆ.

ಗುತ್ತಿಗೆದಾರರಿಗೆ ಹಣ ಮಾಡಿಕೊಡುವ ಉದ್ದೇಶವಲ್ಲದೆ  ಹನಿ ನೀರು ಕೂಡಾ ಇದು ವರೆಗೆ ಪೈಪ್ ಮೂಲಕ ಲಭಿಸಿಲ್ಲ. ೨೦೨೫ರಲ್ಲಿ ಪೂರ್ತಿಗೊಳ್ಳಬೇಕಾದ ಯೋಜನೆಯ ಕಾಲಾವಧಿಯನ್ನು ೨೦೨೮ ದಶಂಬರ್ ವರೆಗೆ ಕೇಂದ್ರ ಸರಕಾರ ಈಗ ವಿಸ್ತರಿಸಿದೆ. ಈ ಮಧ್ಯೆ ಮನೆಬಳಕೆ  ಸಂಪರ್ಕಕ್ಕೆ ಅಪರಿಮಿತ ದರ ಯೋಜನೆಯಲ್ಲಿ ಹೇಳ ಲಾಗುತ್ತಿದೆ. ಇದು ಈ ಯೋಜನೆಯಿಂದ ಫಲಾನುಭವಿಗಳನ್ನು ದೂರ ಮಾಡಿದೆ. ಪ್ರಜ್ಞಾ ಪೂರ್ವಕವಾಗಿ ಈ ರೀತಿ ಮಾಡಿರುವುದಾಗಿ ಆರೋಪವಿದೆ. ಸಂಪರ್ಕ ಪಡೆದುಕೊಂ ಡರೆ ನೀರು ವಿತರಿಸದಿದ್ದರೆ ಅದು ಮುಂದೆ ಸಮಸ್ಯೆಯಾಗ ಬಹುದು ಎಂದು ಆ ರೀತಿಯ ಸಮಸ್ಯೆಯನ್ನು ಹೊರತುಪಡಿಸ ಲುಬೇಕಾಗಿ ಸಂಪರ್ಕದ ಶುಲ್ಕವನ್ನು ಹೆಚ್ಚಿಸಲಾಗಿದೆ ಎಂದು ಕೆಲವರು ಅಭಿಪ್ರಾಯಪಡುತ್ತಾರೆ. ಕುಂಬಳೆಯಲ್ಲಿ ವಿವಿಧ ಅಂಗನವಾಡಿಗಳಲ್ಲಿ ಕೂಡಾ ಯೋಜನೆಯ ಹೆಸರಲ್ಲಿ ಟ್ಯಾಪ್ ಮೂಲಕ ಕುಡಿಯುವ ನೀರು ವಿತರಿಸುವುದಾಗಿ ಹೇಳಿ ಪೈಪ್‌ಲೈನ್ ಸ್ಥಾಪಿಸಲಾ ಗಿದೆ. ಇಲ್ಲಿಯೂ ಅಂಗನವಾಡಿ ನೌಕರರಲ್ಲಿ ಅಪರಿಮಿತ ಶುಲ್ಕ ಸಂಬಂಧಪಟ್ಟವರು ಸೂಚಿಸಿದ್ದಾ ರೆನ್ನಲಾಗಿದೆ. ಅಂಗನವಾಡಿಗಳು ಈ ಮೊತ್ತವನ್ನು ಹೇಗೆ ಒಟ್ಟುಗೂಡಿಸುವು ದೆಂದು ನೌಕರರು ಪರಸ್ಪರ ಪ್ರಶ್ನಿಸುತ್ತಿದ್ದಾರೆ. ಇದೇ ವೇಳೆ ಈಗ ಸ್ಥಾಪಿಸಿರುವ ಪೈಪ್‌ಗಳು ಕೆಲವು ಕಡೆ ನಾಪತ್ತೆಯಾಗಿ ರುವುದಾಗಿಯೂ ದೂರಲಾಗುತ್ತಿದೆ. ಕೆಲವು ಪೈಪ್‌ಗಳು ವಾಹನ ಗಳು ಹತ್ತಿ ಇಳಿದು ಹಾನಿಗೊಂಡಿರುವು ದಾಗಿಯೂ, ಇನ್ನೂ ಕೆಲವನ್ನು ಅಗತ್ಯದವರು ಕೊಂಡು ಹೋಗಿರುವುದಾಗಿಯೂ ಹೇಳಲಾ ಗುತ್ತಿದೆ. ಯೋಜನೆಯ ಲೋಪದೋಷಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಆಗ್ರಹಿಸಿ ವಿವಿಧ ಸಂಘಟನೆಗಳು ರಂಗಕ್ಕಿಳಿದಿವೆ.

You cannot copy contents of this page