ಮುಳ್ಳೇರಿಯ: ಕೇರಳ ವಿಧಾನಸಭೆ ಯಲ್ಲಿ ಬಿಜೆಪಿಯ ಮೂವರು ಶಾಸಕರು ಬ್ರಹ್ಮ,ವಿಷ್ಣು, ಮಹೇಶ್ವರರಂತೆ ಕಾರ್ಯಾ ಚರಿಸುತ್ತಿ ದ್ದಾರೆಂದು ಬಿಜೆಪಿ ರಾಷ್ಟ್ರೀಯ ಸಮಿತಿ ಸದಸ್ಯ ಸಿ.ಕೆ. ಪದ್ಮನಾಭನ್ ಅಭಿಪ್ರಾಯಪಟ್ಟಿದ್ದಾರೆ. ಮುಳ್ಳೇರಿಯ ಗಣೇಶ ಕಲಾ ಮಂದಿರದಲ್ಲಿ ನಡೆದ ಬಿಜೆಪಿ ಬದಿಯಡ್ಕ ಮಂಡಲ ಪ್ರಶಿಕ್ಷಣ್ ಮಹಾ ಅಭಿಯಾನ್ (ತರಬೇತಿ ಕಾರ್ಯಕ್ರಮ) ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಜನಸಂಘದ ಕಾಲದಿಂದಲೇ ಕಾರ್ಯ ಕರ್ತರಿಗಾಗಿ ತರಬೇತಿ ಶಿಬಿರಗಳನ್ನು ನಡೆಸಲಾಗುತ್ತಿದೆ. ಅದು ಈಗಲೂ ಮುಂದುವರಿಯುತ್ತಿದೆಯೆಂದು ಅವರು ತಿಳಿಸಿದರು. ಇಂದಿರಾಗಾಂಧಿ ಯವರ ಹತ್ಯೆಯ ಬಳಿಕ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಎರಡು ಸೀಟುಗಳು ಮಾತ್ರವೇ ಲಭಿಸಿತ್ತು. ಅನಂತರ ೫ ದಿನಗಳ ಅಧ್ಯಯನ ಶಿಬಿರ ನಡೆಸಿ ಮುಂದಿನ ಚುನಾವಣೆಗಳಿಗೆ ಚಟುವ ಟಿಕಾ ವರದಿ ಸಿದ್ಧಪಡಿಸಲಾ ಯಿತು. ಆ ರೀತಿಯ ತರಬೇತಿಗಳು ಹಾಗೂ ಕಾರ್ಯ ಕರ್ತರ ನಿರಂತರ ಕಠಿಣ ಪ್ರಯತ್ನದ ಫಲವಾಗಿ ಇಂದು ಬಿಜೆಪಿ ಒಂದು ಹೆಮ್ಮರವಾಗಿ ಬೆಳೆದು ನಿಂತಿದೆಯೆಂದು ಅವರು ತಿಳಿಸಿದರು. ಬಿಜೆಪಿ ಬದಿಯಡ್ಕ ಮಂಡಲ ಅಧ್ಯಕ್ಷ ಗೋಪಾಲಕೃಷ್ಣ ಎಂ ಅಧ್ಯಕ್ಷತೆ ವಹಿಸಿದರು. ಶಿಬಿರಾಧಿಕಾರಿ ಮಣಿಕಂಠ ರೈ, ಸುಧಾಮ ಗೋಸಾಡ, ಶಿವಕೃಷ್ಣ ಭಟ್, ಸುಕುಮಾರ ಕುದ್ರೆಪ್ಪಾಡಿ, ಹರೀಶ್ ನಾರಂಪಾಡಿ, ಶಂಕರ ಡಿ ಬದಿ ಯಡ್ಕ, ಜನನಿ ಕಾರಡ್ಕ, ಯಶೋಧಾ ಕುಂಬ್ಡಾಜೆ, ಮಾಲಿನಿ ಬೆಳ್ಳೂರು,ಅಶ್ವಿನಿ ಕೆ.ಎಂ, ವಸಂತ ಕೆ,ಮುರಳೀಧರ ಯಾದವ್ ಮೊದಲಾದವರು ಪಾಲ್ಗೊಂ ಡರು. ಮಂಡಲ ಪ್ರಧಾನ ಕಾರ್ಯದರ್ಶಿ ರವೀಂದ್ರ ರೈ ಸ್ವಾಗತಿಸಿ,ಕಾರ್ಯದರ್ಶಿ ಅವಿನಾಶ್ ವಿ ರೈ ವಂದಿಸಿದರು.






