ಹೊಸ ಬಸ್ ನಿಲ್ದಾಣದ ತ್ಯಾಜ್ಯ ಸಮಸ್ಯೆಯಲ್ಲಿ ಅಧಿಕೃತರ ಅನಾಸ್ಥೆ ವಿರುದ್ಧ ಪ್ರತಿಭಟನೆ

ಕಾಸರಗೋಡು: ನಗರದ ಪ್ರಧಾನ ಪ್ರಯಾಣ ಕೇಂದ್ರವಾದ ಹೊಸ ಬಸ್ ನಿಲ್ದಾಣದಲ್ಲಿ ಶೌಚಾಲಯದ ತ್ಯಾಜ್ಯ ವನ್ನು ಸಾರ್ವಜನಿಕ ಸ್ಥಳಕ್ಕೆ ಹರಿಯ ಬಿಡುತ್ತಿದ್ದು, ಹಲವು ಕಾಲಗಳಿಂದ ಮುಂದುವರಿಯುತ್ತಿರುವ ಸಂಕಷ್ಟಕ್ಕೆ  ಕೊನೆಗಾಣಿಸಬೇಕೆಂದು ಆಗ್ರಹಿಸಿ ತೀವ್ರ ಪ್ರತಿಭಟನೆ ನಡೆಸಲಾಗಿದೆ. ಸಾವಿರಾರು ಪ್ರಯಾಣಿಕರು, ವಿವಿಧ ಸಂಸ್ಥೆಗಳ ನೌಕ ರರು ನಿತ್ಯವೂ ಬಂದು ಸೇರುವ ಇಲ್ಲಿ ಶೌಚಾಲಯದ ತ್ಯಾಜ್ಯ ಟ್ಯಾಂಕ್ ಬ್ಲಾಕ್ ಆದ ಹಿನ್ನೆಲೆಯಲ್ಲಿ  ಮಲಿನ ಜಲ ಬಹಿರಂಗಸ್ಥಳಕ್ಕೆ ಹರಿಯುತ್ತಿದ್ದು, ಬಹಳ ದೊಡ್ಡ ಮಟ್ಟಿನ ಆರೋಗ್ಯ ಸಮಸ್ಯೆಗಳಿಗೆ, ದುರ್ವಾಸನೆಗೆ ಕಾರಣವಾಗುತ್ತಿದೆ. ಸತತ ದೂರುಗಳ ಹಿನ್ನೆಲೆಯಲ್ಲಿ ಬಿಎಂಎಸ್ …

ಉಪಯೋಗಕ್ಕಿಲ್ಲದ ತಂಗುದಾಣ: ದೂರದಲ್ಲಿ ನಿಲ್ಲಿಸುವ ಬಸ್‌ಗಳಿಂದ ಪ್ರಯಾಣಿಕರಿಗೆ ಸಮಸ್ಯೆ

ಉಪ್ಪಳ: ಹೆದ್ದಾರಿ ಅಭಿವೃದ್ದಿ ಗೊಂಡು ಸರ್ವೀಸ್ ರಸ್ತೆಯಲ್ಲಿ ಬಸ್ ತಂಗುದಾಣ ನಿರ್ಮಿಸಿದರೂ ಅಲ್ಲಿ ಬಸ್‌ಗಳನ್ನು ನಿಲ್ಲಿಸದೆ ಅಲ್ಪ ಮುಂದೆ ನಿಲ್ಲಿಸುವುದು ಪ್ರಯಾಣಿಕರಿಗೆ ಸಮಸ್ಯೆಯನ್ನುಂಟು ಮಾಡುತ್ತಿರುವು ದಾಗಿ ದೂರಲಾಗಿದೆ. ಬಂದ್ಯೋಡು, ನಯಬಜಾರ್, ಕೈಕಂಬ, ಹೊಸಂಗಡಿ ಸಹಿತ ಹಲವು ಕಡೆಗಳಲ್ಲಿ ಬಸ್ ತಂಗುದಾಣವನ್ನು ನಿರ್ಮಿಸಲಾಗಿದೆ. ಆದರೆ ಖಾಸಗಿ ಸಹಿತ ಸರಕಾರಿ ಬಸ್‌ಗಳನ್ನು ತಂಗು ದಾಣದಲ್ಲಿ ನಿಲ್ಲಿಸದೆ ಅಲ್ಪ ದೂರ ನಿಲ್ಲಿಸುತ್ತಿರುವುದ ರಿಂದಾಗಿ ಪ್ರಯಾಣಿ ಕರು ಅಲ್ಲಿ ತನಕ ಓಡಿ ಹೋಗುವ ಅವಸ್ಥೆ ಉಂಟಾಗಿರುವುದಾಗಿ ದೂರಲಾಗಿದೆ. ಪ್ರಯಾಣಿಕರು ತಂಗುದಾಣದಲ್ಲಿ ನಿಂತರೂ ಬಸ್‌ಗಳನ್ನು …