ಹೊಸ ಬಸ್ ನಿಲ್ದಾಣದ ತ್ಯಾಜ್ಯ ಸಮಸ್ಯೆಯಲ್ಲಿ ಅಧಿಕೃತರ ಅನಾಸ್ಥೆ ವಿರುದ್ಧ ಪ್ರತಿಭಟನೆ

ಕಾಸರಗೋಡು: ನಗರದ ಪ್ರಧಾನ ಪ್ರಯಾಣ ಕೇಂದ್ರವಾದ ಹೊಸ ಬಸ್ ನಿಲ್ದಾಣದಲ್ಲಿ ಶೌಚಾಲಯದ ತ್ಯಾಜ್ಯ ವನ್ನು ಸಾರ್ವಜನಿಕ ಸ್ಥಳಕ್ಕೆ ಹರಿಯ ಬಿಡುತ್ತಿದ್ದು, ಹಲವು ಕಾಲಗಳಿಂದ ಮುಂದುವರಿಯುತ್ತಿರುವ ಸಂಕಷ್ಟಕ್ಕೆ  ಕೊನೆಗಾಣಿಸಬೇಕೆಂದು ಆಗ್ರಹಿಸಿ ತೀವ್ರ ಪ್ರತಿಭಟನೆ ನಡೆಸಲಾಗಿದೆ. ಸಾವಿರಾರು ಪ್ರಯಾಣಿಕರು, ವಿವಿಧ ಸಂಸ್ಥೆಗಳ ನೌಕ ರರು ನಿತ್ಯವೂ ಬಂದು ಸೇರುವ ಇಲ್ಲಿ ಶೌಚಾಲಯದ ತ್ಯಾಜ್ಯ ಟ್ಯಾಂಕ್ ಬ್ಲಾಕ್ ಆದ ಹಿನ್ನೆಲೆಯಲ್ಲಿ  ಮಲಿನ ಜಲ ಬಹಿರಂಗಸ್ಥಳಕ್ಕೆ ಹರಿಯುತ್ತಿದ್ದು, ಬಹಳ ದೊಡ್ಡ ಮಟ್ಟಿನ ಆರೋಗ್ಯ ಸಮಸ್ಯೆಗಳಿಗೆ, ದುರ್ವಾಸನೆಗೆ ಕಾರಣವಾಗುತ್ತಿದೆ.

ಸತತ ದೂರುಗಳ ಹಿನ್ನೆಲೆಯಲ್ಲಿ ಬಿಎಂಎಸ್ ಸಹಿತದ ಸಂಘಟನೆಗಳು ಹಾಗೂ ಸ್ಥಳೀಯರು ಪ್ರತಿಭಟನೆಗೆ ಇಳಿ ದಿದ್ದಾರೆ. ಈ ವಿಷಯದ ಗಂಭೀರತೆ ಯನ್ನು ಮನವರಿಕೆ ಮಾಡಿದ ಹಿನ್ನೆಲೆಯಲ್ಲಿ ನಗರಸಭಾ ಅಧಿಕಾರಿಗಳು ಸ್ಥಳಕ್ಕೆ ತಲುಪಿ ಪರಿಶೀಲನೆ ನಡೆಸಿದ್ದು, ಆದಷ್ಟು ಬೇಗ ಸಮಸ್ಯೆಗೆ ಶಾಶ್ವತ ಪರಿಹಾರ ಕಾಣಲಾಗುವುದೆಂಬ ಭರವಸೆ ನೀಡಿದ್ದಾರೆ. ಈ ಬಗ್ಗೆ ನಡೆದ ಪ್ರತಿಭಟ ನೆಗೆ ಬಿಎಂಎಸ್ ನಗರಸಮಿತಿ ಅಧ್ಯಕ್ಷ ಎ. ಕೇಶವ, ಆಟೋರಿಕ್ಷಾ ಮಜ್ದೂರ್ ಸಂಘ ನಗರ ಸಮಿತಿ ಅಧ್ಯಕ್ಷ ಉಮೇಶ್ ಎಸ್.ಕೆ, ಪ್ರಸಾದ್, ಜಯಪ್ರಕಾಶ್, ಮಾಜಿ ಕೌನ್ಸಿಲರ್ ಪಿ. ರಮೇಶ್,  ಈಗಿನ ಕೌನ್ಸಿಲರ್‌ಗಳಾದ ರವಿ ಕರಂದಕ್ಕಾಡ್, ಹರೀಶ್ ಕೆ.ಆರ್, ಗುರುಪ್ರಸಾದ್, ದಿವ್ಯ ನೇತೃತ್ವ ನೀಡಿದರು. ಆಟೋರಿಕ್ಷಾ ಟ್ಯಾಕ್ಸಿ ಚಾಲಕರು, ವ್ಯಾಪಾರಿಗಳು, ಪ್ರಯಾಣಿಕರು ಸಹಿತ ಎಲ್ಲರೂ ಅನುಭವಿಸುವ ಈ ಸಂಕಷ್ಟಕ್ಕೆ ತುರ್ತು ಪರಿಹಾರ ಕಾಣಲು ನಗರಸಭೆ ಕ್ರಮ ಸ್ವೀಕರಿಸಬೇಕೆಂದು ಆಗ್ರಹಿಸಲಾಯಿತು.

You cannot copy contents of this page