ವೃದ್ಧ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು:?ಮುಳಿಯಾರು ಪಂಚಾಯತ್‌ನ ಕಾನತ್ತೂರಿನಲ್ಲಿ ವೃದ್ಧ  ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೂಡೇಂವೀಡ್ ಕುಂಞಿರಾಮನ್  (ತರಯಿಲಚ್ಚನ್-84) ಎಂಬವರು  ಮೃತಪಟ್ಟ ವ್ಯಕ್ತಿ. ನಿನ್ನೆ ರಾತ್ರಿ ಆಹಾರ ಸೇವಿಸಿದ ಬಳಿಕ ನಿದ್ರಿಸಿದ್ದರು. ಇಂದು ಬೆಳಿಗ್ಗೆ ಮನೆಯೊಳಗೆ ಇವರು ಕಾಣದ ಹಿನ್ನೆಲೆಯಲ್ಲಿ ಹುಡುಕಿದಾಗ ಮನೆಯ ಹಿಂಭಾಗದಲ್ಲಿ  ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿ ದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಲಾಗಿದೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಆದೂರು ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತರು ಪತ್ನಿ ಕಮಲಾಕ್ಷಿ, ಮಕ್ಕಳಾದ …

ಕಾರಿನಲ್ಲಿ ಮಾದಕವಸ್ತು ಸಹಿತ  ಸಂಚರಿಸುತ್ತಿದ್ದ ಮೂವರ ಬಂಧನ

ಕಾಸರಗೋಡು: ಕಾರಿನಲ್ಲಿ ಸಾಗಿಸುತ್ತಿದ್ದ ಎಂಡಿಎಂಎ ಸಹಿತ ಮೂವರನ್ನು  ಬಂಧಿಸಲಾಗಿದೆ. ಪಟ್ಲ ನಿವಾಸಿ  ಅಬ್ದುಲ್ ರೌಫ್, ಕರ್ನಾಟಕದ  ಸುಳ್ಯ ಕೋಣಡ್ಕಪದವು ನಿವಾಸಿ ಕೌಶಿಕ್, ಅಡೂರು ಪೇರಾಮರವ ನಿವಾಸಿ ಮುಹಮ್ಮದ್ ಜಸೀರ್ ಯು.ಕೆ ಎಂಬಿವರನ್ನು ಕಾಸರಗೋಡು ಎಕ್ಸೈಸ್ ರೇಂಜ್ ಆಫೀಸರ್ ಅಶ್ವಿನ್ ಟಿ.ಕೆ ನೇತೃತ್ವದ ತಂಡ ಬಂಧಿಸಿದೆ. ಆರೋಪಿಗಳ ಕೈಯಿಂದ  1.899 ಗ್ರಾಂ ಎಂಡಿಎಂಎ ವಶಪಡಿಸಲಾಗಿದೆ.  ಈ ಸಂಬಂಧ  ಎನ್‌ಡಿಪಿಎಸ್ ಪ್ರಕರಣ ದಾಖಲಿಸಲಾಗಿದೆ. ನಿನ್ನೆ ರಾತ್ರಿ 7.10ರ ವೇಳೆ ಚೆಂಗಳ ಸಂತೋಷ್‌ನಗರದಲ್ಲಿ ಆರೋಪಿಗಳು ಸಂಚರಿಸುತ್ತಿದ್ದ ಮಾರುತಿ ಆಲ್ಟೋ ಕಾರನ್ನು  ತಡೆದು …

ಸ್ಕೂಟರ್ ಅಪಘಾತದಲ್ಲಿ ಗಾಯಗೊಂಡ ಲಾಟರಿ ಏಜೆಂಟ್ ಮೃತ್ಯು

ಕಾಸರಗೋಡು:ಸ್ಕೂಟರ್ ಅಪಘಾತದಲ್ಲಿ ಗಂಭೀರ ಗಾಯ ಗೊಂಡು ಚಿಕಿತ್ಸೆಯಲ್ಲಿದ್ದ ಲಾಟರಿ ಮಾರಾಟಗಾರ ಮೃತಪಟ್ಟರು.  ಚೌಕಿ ಕಾವುಗೋಳಿ ಶ್ವೇತ ನಿವಾಸ್‌ನ ದಿ| ಆನಂದ ಎಂಬವರ ಪುತ್ರ ಲೋಕೇಶ್ (42) ಮೃತಪಟ್ಟ ದುರ್ದೈವಿ. ಇವರು ವಿದ್ಯಾನಗರ ಜಿಲ್ಲಾ ಕೈಗಾರಿಕಾ ಕೇಂದ್ರ ಸಮೀಪ ಲಾಟರಿ ಸ್ಟಾಲ್ ನಡೆಸುತ್ತಿದ್ದರು. ಒಂದು ತಿಂಗಳ ಹಿಂದೆ  ಇವರು ಸಂಚರಿಸುತ್ತಿದ್ದ ಸ್ಕೂಟರ್ ಮಂಗಲ್ಪಾಡಿ ಶಾಲೆ ಸಮೀಪ ರಸ್ತೆಯಲ್ಲಿ ಮಗುಚಿಬಿದ್ದು ಇವರು ಗಂಭೀರ ಗಾಯಗೊಂ ಡಿದ್ದರು. ಇದರಿಂದ ಎರಡು ವಾರ   ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿ ದ್ದರು. ಅನಂತರ ನುಳ್ಳಿಪ್ಪಾಡಿಯ ಖಾಸಗಿ …

ಕೆಲಸಕ್ಕೆಂದು ಯುವಕನನ್ನು ಕರೆದೊಯ್ದು ಮೊಬೈಲ್ ಫೋನ್ ಲಪಟಾವಣೆ: ಮೂವರ ವಿರುದ್ಧ ಕೇಸು

ಕಾಸರಗೋಡು: ಕೆಲಸ ಇದೆಯೆಂದು ತಿಳಿಸಿ  ಯುವಕನನ್ನು ಕರೆದೊಯ್ದು ಹಲ್ಲೆಗೈದ ಬಳಿಕ ಮೊಬೈಲ್ ಫೋನ್ ಲಪಟಾಯಿಸಿರು ವುದಾಗಿ ದೂರಲಾಗಿದೆ. ಚೆಂಗಳ ಇಂದಿರಾನಗರದ ಕ್ವಾರ್ಟರ್ಸ್‌ನಲ್ಲಿ ವಾಸಿಸುವ ಪಶ್ಚಿಮ ಬಂಗಾಲ ನಿವಾಸಿ ರಾಮನ್ ಬರ್ಮನ್ (33) ಎಂಬಾತನಿಗೆ ಹಲ್ಲೆಗೈಯ್ಯಲಾಗಿದೆ.  ಇವರು ನೀಡಿದ ದೂರಿನಂತೆ ಮೂರು ಮಂದಿ ವಿರುದ್ಧ ಮೇಲ್ಪರಂಬ ಪೊಲೀಸರು ಕೇಸು ದಾಖಲಿಸಿಕೊಂಡಿ ದ್ದಾರೆ. ಮೊನ್ನೆ ರಾತ್ರಿ 8.30ರ ವೇಳೆ ಇಂದಿರಾನಗರದ ಕ್ವಾರ್ಟರ್ಸ್‌ಗೆ ತಲುಪಿದ ಮೂರು ಮಂದಿ ಕೆಲಸವಿದೆಯೆಂದು ತಿಳಿಸಿ ರಾಮನ್ ಬರ್ಮನ್‌ರನ್ನು  ಕರೆದೊಯ್ದಿದ್ದರು. ಚಟ್ಟಂಚಾಲ್ ರಾಷ್ಟ್ರೀಯ ಹೆದ್ದಾರಿಯ ಫ್ಲೈಓವರ್  ಕೊನೆಗೊಳ್ಳುವ …

ಕುಂಬಳೆ ಶಾಲೆ  ವಿದ್ಯಾರ್ಥಿಗೆ  ವಿದ್ಯಾರ್ಥಿಗಳಿಂದ ರ‍್ಯಾಗಿಂಗ್: ಗಾಯಾಳು ಆಸ್ಪತ್ರೆಯಲ್ಲಿ

ಕುಂಬಳೆ: ಕುಂಬಳೆ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ 9ನೇ ತರಗತಿ ವಿದ್ಯಾರ್ಥಿಯನ್ನು ಪೇಟೆಯಲ್ಲಿ  ರ‍್ಯಾಗಿಂಗ್ ನಡೆಸಲು ಹಾಗೂ ಹಲ್ಲೆಗೈಯ್ಯಲು ಯತ್ನಿಸಿದ ಬಗ್ಗೆ ದೂರಲಾಗಿದೆ. ಗಾಯಗೊಂಡ ಒಳಯಂ ನಿವಾಸಿಯಾದ 9ನೇ ತರಗತಿ ವಿದ್ಯಾರ್ಥಿಯನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ನಿನ್ನೆ ಸಂಜೆ  ಶಾಲೆ ಬಿಟ್ಟು ಮನೆಗೆ ಮರಳುತ್ತಿದ್ದ ೯ನೇ ತರಗತಿ ವಿದ್ಯಾರ್ಥಿಯನ್ನು 10ನೇ ತರಗತಿಯ 10 ಮಂದಿ ವಿದ್ಯಾರ್ಥಿಗಳು ಸೇರಿ ಹಲ್ಲೆಗೈದಿರುವು ದಾಗಿ ದೂರಲಾಗಿದೆ. ವಾಹನದ ಕೀಲಿ ಕೈಯಿಂದ ವಿದ್ಯಾರ್ಥಿಗೆ ಇರಿದಿರುವುದಾಗಿಯೂ ದೂರಿನಲ್ಲಿ ತಿಳಿಸಲಾಗಿದೆ. ಇದೇ ವಿದ್ಯಾರ್ಥಿಗಳ ತಂಡ ಶಾಲೆಯಲ್ಲಿ  ವಿದ್ಯಾರ್ಥಿಗೆ …

ಎಟಿಎಂ ಕೌಂಟರ್‌ನ ಗಾಜು ದೇಹದ ಮೇಲೆ ಬಿದ್ದು ಮೃತಪಟ್ಟ ಬ್ಯಾಂಕ್ ನೌಕರನ ಮೃತದೇಹ  ಅಂತ್ಯಸಂಸ್ಕಾರ

ಕಾಸರಗೋಡು:  ಎಟಿಎಂ ಕೌಂಟರ್‌ನ ಗಾಜು ದೇಹದ ಮೇಲೆ ಬಿದ್ದು ಮೃತಪಟ್ಟ ಬ್ಯಾಂಕ್ ನೌಕರನ ಮೃತದೇಹವನ್ನು ಕಾಞಂಗಾಡ್‌ನ ಮನೆಗೆ ತಲುಪಿಸಿ ಅಂತ್ಯಸಂಸ್ಕಾರ ನಡೆಸಲಾಯಿತು. ಕಾಞಂಗಾಡ್ ಶ್ರೀ ನಿತ್ಯಾನಂದ ಆಶ್ರಮ ಸಮೀಪದ  ಬಾಲಕೃಷ್ಣನ್ (56) ಮೃತಪಟ್ಟ ದುರ್ದೈವಿಯಾಗಿದ್ದಾರೆ. ಕರ್ನಾಟಕದ ಕೋ-ಆಪರೇಟಿವ್  ಬ್ಯಾಂಕ್‌ನ ಮಂಗಳೂರು ಶಾಖೆಯಲ್ಲಿ ಇವರು ಅಟೆಂಡರ್ ಆಗಿದ್ದರು. ವಾರದಲ್ಲಿ ಒಂದು ದಿನ ಮಾತ್ರವೇ  ಕಾಞಂಗಾಡ್‌ನ ಮನೆಗೆ ಬರುತ್ತಿದ್ದ ಇವರು ಇತರ ದಿನಗಳಲ್ಲಿ ಮಂಗಳೂರಿನಲ್ಲಿ ವಾಸಿಸುತ್ತಿದ್ದರು. ಮೊನ್ನೆ ಕೆಲಸ ಮುಗಿದ ಬಳಿಕ ಬ್ಯಾಂಕ್‌ನ ಸಮೀಪದ ಎಟಿಎಂ ಕೌಂಟರ್‌ಗೆ ಬಾಲಕೃಷ್ಣನ್ ತೆರಳಿದ್ದರೆನ್ನಲಾಗಿದೆ. …

ಭಾರತೀಯ ನೌಕಾ ಸೇನೆಗೆ ಆಯ್ಕೆಯಾದ ದೀಕ್ಷಾಳಿಗೆ ಅಭಿನಂದನೆ

ಕುಂಬಳೆ: ಭಾರತೀಯ ನೌಕಾಸೇನೆಗೆ ಆಯ್ಕೆಯಾದ ಕಂಚಿಕಟ್ಟೆ ನಿವಾಸಿ ದೇವದಾಸ್- ಶಾಲಿನಿ ದಂಪತಿ ಪುತ್ರಿ ದೀಕ್ಷಾ ದೇವದಾಸ್‌ರನ್ನು ಬಿಜೆಪಿ ಕುಂಬಳೆ ಪಂಚಾಯತ್ ಸಮಿತಿ ವತಿಯಿಂದ ಅಭಿನಂದಿಸಲಾಯಿತು. ಬಿಜೆಪಿ ರಾಜ್ಯ ಸಮಿತಿ ಸದಸ್ಯ ವಿ. ರವೀಂದ್ರನ್ ಶುಭ ಹಾರೈಸಿದರು. ಮಂಡಲ ಉಪಾಧ್ಯಕ್ಷರಾದ ಪ್ರೇಮಾವತಿ, ವಿಕ್ರಮ್ ಪೈ, ಪಂಚಾಯತ್ ಸಮಿತಿ ಅಧ್ಯಕ್ಷ ಸುಜಿತ್ ರೈ, ಕಾರ್ಯದರ್ಶಿ ವಿವೇಕ್ ಶೆಟ್ಟಿ, ರಮೇಶ್ ಭಟ್, ಕಾಂಚಾರ, ಪ್ರೇಮ ಶೆಟ್ಟಿ, ಶೋಭಾ, ಗೋಪಾಲ, ಸುಮ, ಶಶಿ ಕುಂಬಳೆ ಉಪಸ್ಥಿತರಿದ್ದರು.

ರಸ್ತೆಗೆ ಬಾಗಿಕೊಂಡಿರುವ ಮರಗಳು ಮಂಜೇಶ್ವರ ಒಳರಸ್ತೆಯಲ್ಲಿ ಸಂಚಾರ ಭೀತಿ

ಮಂಜೇಶ್ವರ: : ಹೊಸಂಗಡಿ ರೈಲ್ವೇಗೇಟ್ ಮೂಲಕ ಹಾದುಹೋ ಗುವ ಮಂಜೇಶ್ವರ ಒಳರಸ್ತೆಯಲ್ಲಿ ಬೃಹತ್ ಮರಗಳು ರಸ್ತೆಗೆ ಬಾಗಿಕೊಂ ಡಿದ್ದು ವಾಹನ ಸವಾರಲ್ಲಿ ಆತಂಕ ಉಂಟುಮಾಡುತ್ತಿದೆ. ಮಂಜೇಶ್ವರ ಚರ್ಚ್ ಬಳಿಯಿಂದ ಬ್ಲೋಕ್ ಪಂಚಾಯತ್ ಜಂಕ್ಷನ್ ತನಕದ ಎರಡು ಬದಿಯಲ್ಲಿ ಬೃಹತ್ ಗಾತ್ರದ 20ರಷ್ಟು ಮರಗಳ ರೆಂಬೆಗಳು ಅಲ್ಲಲ್ಲಿ ರಸ್ತೆಗೆ ಬಾಗಿಕೊಂಡಿರುದರಿAದ ವಾಹನ ಸಂಚಾರಕ್ಕೆ ಆತಂಕ ಉಂಟಾ ಗಿದೆ. ಮಳೆ, ಗಾಳಿಗೆ ಮುರಿದು ಬೀ ಳುವ ಸಾಧ್ಯತೆ ಇದೆ ಎಂದು ಸಾರ್ವ ಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಇದೇ ಪರಿಸರದಿಂದ …

ಅಡೂರು ಸೇವಾ ಸಹಕಾರಿ ಬ್ಯಾಂಕ್‌ನ ಕಾನ್ಫರೆನ್ಸ್ ಹಾಲ್ ಉದ್ಘಾಟನೆ

ಅಡೂರು: ಅಡೂರು ಸೇವಾ ಸಹಕಾರಿ ಬ್ಯಾಂಕ್‌ನ ಪ್ರಿಯದರ್ಶಿನಿ ಕಾನ್ಫರೆನ್ಸ್ ಹಾಲ್, ಗೊಬ್ಬರ ಡಿಪ್ಪೋದ ಉದ್ಘಾಟನೆಯನ್ನು ಉದುಮ ಶಾಸಕ ಕೆ. ನೀಲಕಂಠನ್ ನಿರ್ವಹಿಸಿದರು. ಇದೇ ವೇಳೆ ವಿವಿಧ ಪರೀಕ್ಷೆಗಳಲ್ಲಿ ಉನ್ನತ ಜಯ ಗಳಿಸಿದವರನ್ನು ಅಭಿನಂದಿಸಲಾಯಿತು. ಬ್ಯಾಂಕ್ ಅಧ್ಯಕ್ಷ ಎ. ಗೋಪಾಲ ಮಣಿಯಾಣಿ ಅಧ್ಯಕ್ಷತೆ ವಹಿಸಿದರು. ಪಂಚಾಯತ್ ಅಧ್ಯಕ್ಷ ಎ. ಮುಸ್ತಫ ಹಾಜಿ, ಉಪಾಧ್ಯಕ್ಷೆ ಶಾರದಾ ಏವಂದೂರು, ಬ್ಲೋಕ್ ಪಂ. ಸದಸ್ಯ ಜಿ. ಗೋಪಾಲನ್, ಪಂಚಾಯತ್ ಸದಸ್ಯರಾದ ಗಂಗಾಧರ ಕಾಂತಡ್ಕ, ಸೈರ ಎ.ಬಿ, ಬಿಂದು ಕೆ.ವಿ, ರತನ್ ಕುಮಾರ್ ನಾಯ್ಕ್, …

ಜಂಬೋ ಸರ್ಕಸ್ ಪ್ರದರ್ಶನ ಕಾಸರಗೋಡಿನಲ್ಲಿ ಆರಂಭ

ಕಾಸರಗೋಡು: ಭಾರತದ ಅತ್ಯಂತ ದೊಡ್ಡ ಸರ್ಕಸ್ ಆದ ಜಂಬೋ ಸರ್ಕಸ್ ಕಾಸರಗೋಡು ಹೊಸ ಬಸ್ ನಿಲ್ದಾಣದ ಮುಂಭಾಗ, ನುಳ್ಳಿಪ್ಪಾಡಿ ಶ್ರೀ ಅಯ್ಯಪ್ಪ ಸ್ವಾಮಿ ಕ್ಷೇತ್ರ ಸಮೀಪ ಆರಂಭಗೊಂಡಿದೆ. 1೦ ವರ್ಷದ ಬಳಿಕ ಜಂಬೋ ಸರ್ಕಸ್ ಕಾಸರಗೋಡಿಗೆ ತಲುಪುತ್ತಿದೆ. ಆಶ್ಚರ್ಯಕರವಾದ ಅಭ್ಯಾಸ ಪ್ರದರ್ಶನಗಳು, ತಾನ್ಸಾನಿಯ, ಎತ್ಯೋಪ್ಯ ಮೊದಲಾದ ರಾಜ್ಯಗಳಿಂದಿರುವ ತರಬೇತಿ ಪಡೆದ ವಿದೇಶ ಕಲಾವಿದರು, ಮಣಿಪುರ ಸಹಿತ ಭಾರತದ ವಿವಿಧ ರಾಜ್ಯಗಳ ನೂರಾರು ಕಲಾವಿದರು ಪ್ರದರ್ಶನ ನೀಡುತ್ತಿದ್ದಾರೆ. ೨ ಗಂಟೆಯ ಶೋದಲ್ಲಿ ೩೦ಕ್ಕೂ ಹೆಚ್ಚು ವಿಸ್ಮಯ ಪ್ರದರ್ಶನಗಳಿವೆ. ಮೆಕ್ಸಿಕನ್ …