ಕಡಲ್ಕೊರೆತ ತೀವ್ರಗೊಂಡ ಮಂಗಲ್ಪಾಡಿ ಪಂ. ವ್ಯಾಪ್ತಿಯ ಪ್ರದೇಶಗಳಿಗೆ ಜಿಲ್ಲಾಧಿಕಾರಿ ತುರ್ತು ಭೇಟಿಗೆ ಒಬಿಸಿ ಮೋರ್ಚಾ ಆಗ್ರಹ

ಉಪ್ಪಳ: ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ಶಿವಾಜಿ ನಗರ, ಶಾರದಾ ನಗರ ಮತ್ತು ಮೂಸೋಡಿ ಮುಂತಾದ ಸ್ಥಳಗಳಲ್ಲಿ ಸಮುದ್ರ ಕೊರೆತ ತೀವ್ರಗೊಂಡಿದೆ. ಜಿಲ್ಲಾಧಿಕಾರಿ ಈ ಸ್ಥಳಗಳಿಗೆ ತಕ್ಷಣ ಭೇಟಿ ನೀಡಿ ತುರ್ತು ನೆರವು ನೀಡಬೇಕು ಎಂದು ಒಬಿಸಿ ಮೋರ್ಚಾ ಕಾಸರಗೋಡು ಜಿಲ್ಲಾಧ್ಯಕ್ಷ ಕೆ.ಪಿ. ವಲ್ಸರಾಜ್ ಒತ್ತಾಯಿಸಿದರು. ಐಲ ಶಿವಾಜಿ ನಗರ ಕಡಲತೀರದಲ್ಲಿ ಮೀನುಗಾರರ ಬಲೆ ದುರಸ್ತಿ ಶೆಡ್ ಸಂಪೂರ್ಣವಾಗಿ ನಾಶವಾಗಿದ್ದು, ಕಡಲತೀರದಲ್ಲಿರುವ ಸಾರ್ವಜನಿಕ ಸ್ಮಶಾನವೂ ವಿನಾಶದ ಅಂಚಿನಲ್ಲಿದೆ. ಈ ಸ್ಥಳಗಳಲ್ಲಿನ ಮೀನುಗಾರರು ಭಯದಿಂದ ಬದುಕುತ್ತಿದ್ದಾರೆ. ರಾಜ್ಯ ಸರಕಾರ ಮತ್ತು …

ಮಂಜೇಶ್ವರದಲ್ಲಿ ಹಲಸುಹಣ್ಣಿನ ಮೇಳ ಇಂದಿನಿಂದ

ಮಂಜೇಶ್ವರ: ಸಪ್ತ ಭಾಷಾ ಸಂಗಮ ಭೂಮಿಯಾದ ಮಂಜೇಶ್ವರದಲ್ಲಿ ಪ್ರಥಮ ಬಾರಿಗೆ ಹಲಸು ಹಣ್ಣಿನ ಮೇಳ ಇಂದಿನಿಂದ ಜುಲೈ 12 ರ ತನಕ ಮಂಜೇಶ್ವರ ಮೆಜೆಸ್ಟಿಕ್ ಮ್ಯಾನರ್ (ಕಲಾ ಸ್ಪರ್ಶಂ) ಸಭಾಂಗಣದಲ್ಲಿ ಜರಗಲಿದೆ. ಬೆನಕ ಇವೆಂಟ್ಸ್ ಕುಂದಾಪುರ ನೇತೃತ್ವದಲ್ಲಿ ರಾಯರ ಭಕ್ತರು ಮಂಜೇಶ್ವರ, ಜಾನ್ಸಿ ಫ್ರೆಂಡ್ಸ್ ಜಾನ್ಸಿ ನಗರ ಮಂಜೇಶ್ವರ, ಟೀಮ್ ಮಂಜೇಶ್ವರ, ಕಟ್ಟೆ ಫ್ರೆಂಡ್ಸ್ ಮಾಡ, ತಿಲಕ್ ಗೆಳೆಯರ ಬಳಗ, ಚಾಣಕ್ಯ ನಗರ ಮಂಜೇಶ್ವರ, ನೇತಾಜಿ ಫ್ರೆಂಡ್ಸ್ ಕ್ಲಬ್ ಗಾಂಧಿನಗರ, ಮಂಜೇಶ್ವರ. ಟೀಮ್ ಕಲ್ಕಿ ಮಂಜೇಶ್ವರ, ಪ್ರತಾಪ್ …

ಕಾಲ್ನಡೆ ದಾರಿಗೆ ಮುರಿದು ಬಿದ್ದ ಮರ: ಸಂಚಾರ ಸಮಸ್ಯೆ:ತೆರವುಗೊಳಿಸಲು ಸಾರ್ವಜನಿಕರ ಒತ್ತಾಯ

ಮಂಜೇಶ್ವರ: ಮಂಜೇಶ್ವರ ರೈಲ್ವೇ ನಿಲ್ದಾಣ ಸಹಿತ ಮಂಜೇಶ್ವರ ಪೇಟೆ, ಶಾಲಾ-ಕಾಲೇಜುಗಳು, ಸ್ಥಳೀಯಾ ಡಳಿತ ಕಚೇರಿ, ಮೃಗಾಸ್ಪತ್ರೆಗಳಿಗೆ ತಲುಪಲು ಹತ್ತಿರದ ಕಾಲ್ನಡಿಗೆ ರಸ್ತೆಯಲ್ಲಿ ಸಂಪೂರ್ಣವಾಗಿ ಸಂಚಾರ ಮೊಟಕುಗೊಂಡಿದೆ. ರಸ್ತೆಗೆ ಅಡ್ಡವಾಗಿ ಬಿದ್ದಿರುವ ಬೃಹತ್ ಮರವನ್ನು ತೆರವುಗೊಳಿಸಲು ತಿಂಗಳು ಕಳೆದರೂ ಸಂಬAಧಪಟ್ಟವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿ ಗಳು, ಸರಕಾರಿ ಕಚೇರಿ ಸಿಬ್ಬಂದಿಗಳು ಹಾಗೂ ರೈಲ್ವೇ ಪ್ರಯಾಣಿಕರು ಸೇರಿ ದಂತೆ ನೂರಾರು ಮಂದಿ ಪ್ರತಿದಿನ ಬಳಸುವ ಕಿರುದಾರಿ ಇದಾಗಿದ್ದು, ಬಿದ್ದಿರುವ ಮರದಿಂದಾಗಿ ಸಂಚಾರಕ್ಕೆ ತೊಂದರೆಯಾಗುತ್ತಿದೆ. …

ಅನಾರೋಗ್ಯ: ಗೃಹಿಣಿ ನಿಧನ

ಬದಿಯಡ್ಕ: ಅನಾರೋಗ್ಯ ತಗಲಿ ಚಿಕಿತ್ಸೆಯಲ್ಲಿದ್ದ ಗೃಹಿಣಿ ನಿಧನ ಹೊಂದಿದರು. ಕುಂಬ್ಡಾಜೆ ಕೊಳಂಬೆ ನಿವಾಸಿ, ಹೋಟೆಲ್ ಮಾಲಕ ವಿಠಲ ರೈ ಯವರ ಪತ್ನಿ ಬೇಬಿ (52) ನಿಧನ ಹೊಂದಿದರು. ಕಳೆದ ಕೆಲವು ಸಮಯದಿಂದ ರೋಗ ತಗಲಿ ಚಿಕಿತ್ಸೆಯಲ್ಲಿದ್ದರು. ಮೃತರು ಪತಿ, ಮಕ್ಕಳಾದ ವಿಜಿತ್, ಸುಜಿತ್ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.