ಮಂಜೇಶ್ವರ: ಸಪ್ತ ಭಾಷಾ ಸಂಗಮ ಭೂಮಿಯಾದ ಮಂಜೇಶ್ವರದಲ್ಲಿ ಪ್ರಥಮ ಬಾರಿಗೆ ಹಲಸು ಹಣ್ಣಿನ ಮೇಳ ಇಂದಿನಿಂದ ಜುಲೈ 12 ರ ತನಕ ಮಂಜೇಶ್ವರ ಮೆಜೆಸ್ಟಿಕ್ ಮ್ಯಾನರ್ (ಕಲಾ ಸ್ಪರ್ಶಂ) ಸಭಾಂಗಣದಲ್ಲಿ ಜರಗಲಿದೆ. ಬೆನಕ ಇವೆಂಟ್ಸ್ ಕುಂದಾಪುರ ನೇತೃತ್ವದಲ್ಲಿ ರಾಯರ ಭಕ್ತರು ಮಂಜೇಶ್ವರ, ಜಾನ್ಸಿ ಫ್ರೆಂಡ್ಸ್ ಜಾನ್ಸಿ ನಗರ ಮಂಜೇಶ್ವರ, ಟೀಮ್ ಮಂಜೇಶ್ವರ, ಕಟ್ಟೆ ಫ್ರೆಂಡ್ಸ್ ಮಾಡ, ತಿಲಕ್ ಗೆಳೆಯರ ಬಳಗ, ಚಾಣಕ್ಯ ನಗರ ಮಂಜೇಶ್ವರ, ನೇತಾಜಿ ಫ್ರೆಂಡ್ಸ್ ಕ್ಲಬ್ ಗಾಂಧಿನಗರ, ಮಂಜೇಶ್ವರ. ಟೀಮ್ ಕಲ್ಕಿ ಮಂಜೇಶ್ವರ, ಪ್ರತಾಪ್ ಫ್ರೆಂಡ್ಸ್ ಹೊಸಬೆಟ್ಟು, ಮಂಜೇಶ್ವರ, ಸೌದಿ ಫ್ರೆಂಡ್ಸ್ ಮಂಜೇಶ್ವರ, ಕೀರ್ತಿ ಕಲಾವೃಂದ ಕೀರ್ತೇಶ್ವರ, ಶ್ರೀ ಶಾಸ್ತಾ ಕೃಪಾ ಮಂಜೇಶ್ವರ, ಕಾರ್ ಸ್ಟ್ರೀಟ್ ಫ್ರೆಂಡ್ಸ್ ಮಂಜೇಶ್ವರ, ಕೂಲ್ ಗೈಸ್ ಕೀರ್ತೇಶ್ವರ, ಫೇಮಸ್ ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್ ಹೊಸಬೆಟ್ಟು, ಮಂಜೇಶ್ವರ, ಲಕ್ಕಿ ಬ್ರದರ್ಸ್ ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್, ಬಂಗ್ರ ಮಂಜೇಶ್ವರ. ಫ್ರೆಂಡ್ಸ್ ಅರೇಂಜರ್ಸ್, ಮಂಜೇಶ್ವರ, ವಿಕ್ರಂ ಫ್ರೆಂಡ್ಸ್ ಮಂಜೇಶ್ವರ, ಶಾಸ್ತಾ ಫ್ರೆಂಡ್ಸ್ ಕಡಂಬಾರು, ರಾಯನ್ ಸರ್ವಿಸ್ ಸ್ಟೇಷನ್ ಮುರತ್ತನೆ, ವಿ.ವಿ ಏಜೆನ್ಸಿ ಹೆದ್ದಾರಿ ಕಡಂಬಾರು ಆಶ್ರಯದಲ್ಲಿ ನಡೆಯುವ ಮೇಳದಲ್ಲಿ ಹಲಸಿನ ಹಣ್ಣುಗಳು ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ. ಮಾವು ಮತ್ತು ಹಲಸಿನ ಹೋಳಿಗೆ, ಹಲಸಿನ ಜಿಲೇಬಿ, ಹಲಸಿನ ಅಪ್ಪ, ಕಬಾಬ್, ಮಂಚೂರಿ ಹಾಗೂ ಹಲಸಿನ ಬಿರಿಯಾನಿ ಸ್ಥಳದಲ್ಲೇ ಸಿದ್ಧಪಡಿಸಿ ನೀಡಲಾಗುತ್ತದೆ. ಬೆಂಗಳೂರು ರಾಮನಗರದ ವಿಶೇಷ ಹತ್ತು ಬಗೆಯ ಮಾವಿನ ಹಣ್ಣುಗಳು, ತುಮಕೂರು ಮತ್ತು ಪಾಂಡಿಚೇರಿಯ ಚಂದ್ರ ಹಲಸು ಸೇರಿದಂತೆ ವಿವಿಧ ತಳಿಯ ಹಣ್ಣುಗಳು, ಹಲಸಿನ ಹಪ್ಪಳ, ಚಿಪ್ಸ್, ಜಾಮ್, ಉಪ್ಪಿನಕಾಯಿ, ಹಲಸಿನ ಹಣ್ಣಿನ ಐಸ್‌ಕ್ರೀಮ್ ಹಾಗೂ ಅಪ್ಪೆಮಿಡಿ ಚಟ್ನಿ ಸೇರಿದಂತೆ ಹಲವು ಬಗೆಯ ಮೌಲ್ಯವರ್ಧಿತ ಉತ್ಪನ್ನಗಳು ಮೇಳದಲ್ಲಿ ಇರಲಿವೆ. ಇಳಕಲ್ ಮತ್ತು ಮೈಸೂರು ಸಿಲ್ಕ್ ಸೀರೆಗಳು, ಚೆನ್ನಪಟ್ಟಣದ ಬೊಂಬೆಗಳು, ಮಣ್ಣಿನ ಆಭರಣಗಳು, ಬೇಲೂರಿನ ಶಿಲಾಮೂರ್ತಿಗಳು ಹಾಗೂ ಆಯುರ್ವೇದಿಕ್ ಉತ್ಪನ್ನಗಳು ಲಭ್ಯವಿದೆ. ಆಸಕ್ತರಿಗೆ ವಿವಿಧ ತಳಿಯ ಹಣ್ಣಿನ ಗಿಡಗಳು, ತರಕಾರಿ ಬೀಜಗಳು ಹಾಗೂ ಹೂವಿನ ಗಿಡಗಳು ಇಲ್ಲಿ ದೊರೆಯಲಿವೆ. ಮೇಳವು ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ನಡೆಯಲಿದೆಯೆಂದು ಸಂಘಟಕರು ತಿಳಿಸಿದ್ದಾರೆ.






