ಯುವಕನನ್ನು ದಾರಿಯಲ್ಲಿ ತಡೆದು ನಿಲ್ಲಿಸಿ ದೇಹಕ್ಕೆ ಸೀಮೆ ಎಣ್ಣೆ ಸುರಿದು ಕೊಲೆಗೈಯ್ಯಲೆತ್ನ: ಯುವತಿ ಸಹಿತ ನಾಲ್ಕು ಮಂದಿಯ ಕೃತ್ಯ

ಕುಂಬಳೆ: ಯುವಕನನ್ನು ತಡೆದು ನಿಲ್ಲಿಸಿ ದೇಹಕ್ಕೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲ್ಲಲು ಪ್ರಯತ್ನಿಸಿದ ಘಟನೆ ಮೊಗ್ರಾಲ್‌ನಲ್ಲಿ ನಡೆದಿದೆ.  ಇದರಿಂದ ಗಂಭೀರ ಗಾಯಗೊಂಡ ಯುವಕನನ್ನು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.  ಕರ್ನಾಟಕದ ಹುಬ್ಬಳ್ಳಿ ನಿವಾಸಿಯೂ ಹಲವು ವರ್ಷಗಳಿಂದ ಮೊಗ್ರಾಲ್ ಕೊಪ್ಪಳದ ಬಾಡಿಗೆ ಕ್ವಾರ್ಟರ್ಸ್‌ನಲ್ಲಿ ವಾಸಿಸುವ ಅಬ್ದುಲ್ ಗಫೂರ್ (45)  ಗಂಭೀರ ಸುಟ್ಟು ಗಾಯಗೊಂಡ ವ್ಯಕ್ತಿಯಾಗಿದ್ದಾರೆ.  ಇಂದು ಮುಂಜಾನೆ 5.30ರ ವೇಳೆ ಮೊಗ್ರಾಲ್ ರೈಲ್ವೇ ಕೆಳಸೇತುವೆಯಲ್ಲಿ ಈ ಘಟನೆ ನಡೆದಿದೆ. ಸಾರಣೆ ಮೇಸ್ತ್ರಿಯಾದ ಅಬ್ದುಲ್ ಗಫೂರ್ …

ಹೊಸಬೆಟ್ಟುವಿನ ಮನೆಯಿಂದ ಮೂರೂವರೆ ಪವನ್ ಚಿನ್ನ, 8 ಸಾವಿರ ರೂ. ಕಳವು

ಉಪ್ಪಳ: ಮಂಜೇಶ್ವರ ಹೊಸಬೆಟ್ಟುವಿನ ಮನೆಯೊಂದ ರಿಂದ ಮೂರೂವರೆ ಪವನ್ ಚಿನ್ನಾಭರಣ ಹಾಗೂ 8 ಸಾವಿರ ರೂಪಾಯಿ ಕಳವಿಗೀಡಾದ ಬಗ್ಗೆ ದೂರಲಾಗಿದೆ. ಹೊಸಬೆಟ್ಟು ಗುಡ್ಡೆಕೇರಿ ಸೀನತ್ ಮಂಜಿಲ್‌ನ ಸೌದ (41) ನೀಡಿದ ದೂರಿನಂತೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಜುಲೈ 2ರಂದು ಬೆಳಿಗ್ಗೆ 11 ಗಂಟೆಯಿಂದ 6ರಂದು ಸಂಜೆ 5 ಗಂಟೆ ಮಧ್ಯೆ ಮನೆಯಿಂದ ನಗ-ನಗದು ಕಳವಿಗೀಡಾಗಿರುವುದಾಗಿ  ಸೌದ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.  ಮನೆಯೊಳಗೆ ಕಪಾಟಿನಲ್ಲಿರಿಸಿದ್ದ ಚಿನ್ನ ಹಾಗೂ ಹಣವನ್ನು ಕಳವು ನಡೆಸಲಾಗಿದೆ.  ಈ ಬಗ್ಗೆ …

ಮೀನು ಮಾರಾಟ ಶೆಡ್‌ನಿಂದ 160ರಷ್ಟು ಪೆಟ್ಟಿಗೆ ಕಳವು: ಆರೋಪಿ ಸೆರೆ

ಕಾಸರಗೋಡು: ಚಟ್ಟಂ ಚಾಲು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಮೀನು ಮಾರಾಟ ಮಾಡುವ  ಶೆಡ್‌ನಲ್ಲಿ ತೆಗೆದಿರಿಸಿದ್ದ ಒಂದೂ ಮುಕ್ಕಾಲು ಲಕ್ಷಕ್ಕೂ ಹೆಚ್ಚು ಮೌಲ್ಯದ 160ರಷ್ಟು ಮೀನಿನ ಪೆಟ್ಟಿಗೆಗಳನ್ನು ಕಳವುಗೈದ ಪ್ರಕರಣದಲ್ಲಿ ಓರ್ವನನ್ನು ಸೆರೆ ಹಿಡಿಯಲಾಗಿದೆ. ಉದುಮ ಬಂಗರಕುನ್ನುನ ಸಿ.ಎ. ಸಲೀಂ (41) ನನ್ನು ಮೇಲ್ಪರಂಬ ಪೊಲೀಸರು ಸೆರೆ ಹಿಡಿದಿದ್ದಾರೆ. ಚಟ್ಟಂಚಾಲ್‌ನ ಟಿ.ಎಸ್. ರಹೀಂರ ದೂರಿನಂತೆ ಕೇಸು ದಾಖಲಿಸಿದ ಪೊಲೀಸರು ಗಂಟೆಗಳೊಳಗೆ ಆರೋಪಿಯನ್ನು ಸೆರೆಹಿಡಿದಿದ್ದಾರೆ. ೪೦ ಪೆಟ್ಟಿಗೆಗಳನ್ನು ನಿನ್ನೆ ಹಾಗೂ ಉಳಿದವುಗಳನ್ನು ಅದರ ಮುಂಚಿನ ದಿನಗಳಲ್ಲಿ ಕಳವು ನಡೆಸಲಾಗಿದೆ. ಸಿಸಿ …

ಶಾಲೆಗಳಲ್ಲಿ ಮತ್ತೆ ರ‍್ಯಾಗಿಂಗ್ ಪಿಡುಗು: ಎಡನೀರು, ಕುಂಬಳೆ ಬಳಿಕ ಬೆಳ್ಳೂರಿನಲ್ಲೂ ಪ್ಲಸ್‌ವನ್ ವಿದ್ಯಾರ್ಥಿಗೆ ಪ್ಲಸ್‌ಟು ವಿದ್ಯಾರ್ಥಿಗಳಿಂದ ಹಲ್ಲೆ

ಮುಳ್ಳೇರಿಯ: ಪ್ಲಸ್‌ವನ್ ತರಗತಿಗಳು ಆರಂಭಗೊಂಡ ಬೆನ್ನಲ್ಲೇ ಶಾಲೆಗಳಲ್ಲಿ ರ‍್ಯಾಗಿಂಗ್ ಪಿಡುಗು ತೀವ್ರಗೊಂಡಿದೆ. ಕುಂಬಳೆ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ೯ನೇ ತರಗತಿ ವಿದ್ಯಾರ್ಥಿ ಹಾಗೂ ಎಡನೀರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಪ್ಲಸ್‌ವನ್ ವಿದ್ಯಾರ್ಥಿ ಹಲ್ಲೆಯಿಂದ ಗಾಯಗೊಂಡ ಬೆನ್ನಲ್ಲೇ ಬೆಳ್ಳೂರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲೂ ರ‍್ಯಾಗಿಂಗ್ ನಡೆದಿದೆ. ಬೆಳಿಂಜ ನಿವಾಸಿಯೂ, ಬೆಳ್ಳೂರು ಶಾಲೆಯ ಪ್ಲಸ್‌ವನ್ ವಿದ್ಯಾರ್ಥಿಯಾದ 16ರ ಹರೆಯದ ಬಾಲಕನ ಮೇಲೆ ನಿನ್ನೆ ಬೆಳಿಗ್ಗೆ ರ‍್ಯಾಗಿಂಗ್ ನಡೆಸಲಾಗಿದೆ. ಅಂಗಿಯ ಮೇಲಿನ ಗುಬ್ಬಿ ಹಾಕಿಲ್ಲವೆಂದು ತಿಳಿಸಿ ನಾಲ್ವರು …

ಯುವಕ ಮತ್ತು ಸಂಬಂಧಿಕನನ್ನು ಅಪಹರಿಸಿ ಹಲ್ಲೆ ನಡೆಸಿದ ಪ್ರಕರಣ: ಸುಫಾರಿ ತಂಡದ ಕಾಸರಗೋಡು ನಿವಾಸಿ ಸೆರೆ

ಕಾಸರಗೋಡು: ಖಾಸಗಿ ಸಂಸ್ಥೆಗೆ ನೀಡಿದ ಒಂದು ಕೋಟಿ ರೂ.ವನ್ನು  ಹಿಂತಿರುಗಿಸದ ಬಗ್ಗೆ  ಪೊಲೀಸರಿಗೆ ದೂರು ನೀಡಿದ ಯುವಕ ಮತ್ತು ಆತನ ಸಂಬಂಧಿಕನನ್ನು ಅಪಹರಿಸಿ ಹಲ್ಲೆ ನಡೆಸಿದ ಸುಫಾರಿ ತಂಡಕ್ಕೆ ಸೇರಿದ ಕಾಸರಗೋಡು ನಿವಾಸಿಯನ್ನು ಕಣ್ಣೂರು ಟೌನ್ ಪೊಲೀಸರು ಬಂಧಿಸಿದ್ದಾರೆ. ಕಾಸರಗೋಡು ನಿವಾಸಿ ಅಬೂಬಕರ್ ಸಿದ್ದಿಕ್ (36) ಬಂಧಿತ ಆರೋಪಿ. ಕಣ್ಣೂರು ಪಳ್ಳಿಪ್ರಂ ಆದಿರಗಂ ನಿವಾಸಿ ಪಿ. ರಿಯಾಸ್ (42) ಮತ್ತು ಅವರ ಸಂಬಂಧಿನೋರ್ವನನ್ನು ಕಳೆದ ಎಪ್ರಿಲ್ 19ರಂದು ಕಾರಿನಲ್ಲಿ ಅಪಹರಿಸಿ ಮಂಗಳೂರಿನ ಅತ್ತಾವರಕ್ಕೆ  ತಲುಪಿಸಿ  ಹಲ್ಲೆ ನಡೆಸಿ …

ರಾಣಿಪುರಂ ರಸ್ತೆಯಲ್ಲಿ ಕಾರುಗಳಲ್ಲಿ ಸಾಹಸಿಕ ಪ್ರಯಾಣ: ನಾಲ್ವರು ಯುವಕರ ವಿರುದ್ಧ ಕೇಸು, ದಂಡ ವಸೂಲಿ

ಹೊಸದುರ್ಗ: ರಾಣಿಪುರಕ್ಕಿರುವ ರಸ್ತೆಯಲ್ಲಿ ಕಾರುಗಳಲ್ಲಿ ಅಪಾಯಕರವಾದ ರೀತಿಯಲ್ಲಿ ಸಾಹಸಿಕ ಪ್ರಯಾಣ ನಡೆಸಿದ ಯುವಕರ ವಿರುದ್ಧ ಕೇಸು ದಾಖಲಿಸಲಾಗಿದೆ. ನಾಲ್ಕು ಮಂದಿ ಕರ್ನಾಟಕ ನಿವಾಸಿಗಳ ವಿರುದ್ಧ ರಾಜಪುರಂ ಪೊಲೀಸರು ಕೇಸು ದಾಖಲಿಸಿದ್ದಾರೆ. ನಿನ್ನೆ ಬೆಳಿಗ್ಗೆ ಎರಡು ಕಾರುಗಳಲ್ಲಾಗಿ ತಲುಪಿದ ಯುವಕರು ರಾಣಿಪುರಂ ರಸ್ತೆಯಲ್ಲಿ ಸ್ಥಳೀಯರಲ್ಲಿ ಭೀತಿ ಮೂಡಿಸುವ ರೀತಿಯಲ್ಲಿ ಸಾಹಸಿಕ ಪ್ರಯಾಣ ನಡೆಸಿದ್ದಾರೆ. ಕಾರಿನ ಬಾಗಿಲುಗಳನ್ನು ತೆರೆದು ಅದರ ಮೇಲೆ ಕುಳಿತುಕೊಂಡು ಕಿಲೋ ಮೀಟರ್‌ಗಳಷ್ಟು ದೂರ ಪ್ರಯಾಣ ನಡೆಸಿದ್ದಾರೆನ್ನಲಾಗಿದೆ. ಇವರು ಪ್ರಯಾಣಿಸುವ ದೃಶ್ಯಗಳು ಇನ್ನೋರ್ವ ಪ್ರಯಾಣಿಕ ಮೊಬೈಲ್‌ನಲ್ಲಿ ಚಿತ್ರೀಕರಿಸಿ …

ರಾಜ್ಯ ಕೃಷಿ ಪ್ರಶಸ್ತಿಗೆ ಅರ್ಜಿ ಆಹ್ವಾನ: ಜುಲೈ 13 ಕೊನೆಯ ದಿನ

ಕಾಸರಗೋಡು: ರಾಜ್ಯ ಕೃಷಿ ಪ್ರಶಸ್ತಿಗಿರುವ ಅರ್ಜಿಗಳನ್ನು ಈತಿಂಗಳ 13ರವರೆಗೆ ಸಂಬಂಧಪಟ್ಟ ಕೃಷಿಭವನಗಳಲ್ಲಿ ಸಲ್ಲಿಸಬಹುದು. ಕೃಷಿವಲಯದ ಸಮಗ್ರ ಕೊಡುಗೆಗಳಿಗೆ ಗೌರವ ಸೂಚಿಸಿ 5 ಲಕ್ಷ ರೂ. ಬಹುಮಾನ ಮೊತ್ತವಿರುವ ಉಮ್ಮನ್‌ಚಾಂಡಿ ಸ್ಮಾರಕ ಪ್ರಶಸ್ತಿ ಸಹಿತ 39 ವಿಭಾಗಗಳಲ್ಲಾಗಿ 2025ರ ರಾಜ್ಯ ಕೃಷಿ ಪ್ರಶಸ್ತಿಗಳಿಗೆ ಸರಕಾರ ಅಂಗೀಕಾರ ನೀಡಿದೆ. ಇದರ ಜೊತೆಯಲ್ಲೇ ತಾರಸಿ ಕೃಷಿ ಮಾಡುವ ಉತ್ತಮ ಕೃಷಿಕನಿಗೆ (ಛಿbಟಿ ಖ್ಟ್ಟಜಿಡ್ಟಿo Ibme),  ಉದ್ಯಾನಶ್ರೇಷ್ಠ ಎಂಬೀ ಎರಡು ವಿಭಾಗಗಳು (5೦,೦೦೦ ರೂ.ನಂತೆ ಫಲಕ, ಪ್ರಮಾಣಪತ್ರ) ಒಳಗೊಂಡಿದೆ. ರಾಜ್ಯ ಕೃಷಿ ಪ್ರಶಸ್ತಿಗಳಲ್ಲಿ …

12ರ ಬಾಲಕನಿಗೆ ಸಲಿಂಗರತಿ ದೌರ್ಜನ್ಯ: ಯುವಕ ಸೆರೆ

ಹೊಸದುರ್ಗ: 12ರ ಹರೆಯದ ಬಾಲಕನನ್ನು ಸಲಿಂ ಗರತಿ ದೌರ್ಜನ್ಯಕ್ಕೀಡುಮಾಡಿದ ಪ್ರಕರಣದ ಆರೋಪಿ ಸೆರೆಯಾಗಿದ್ದಾನೆ. ಪಟ್ಟಾನ್ನೂರ್ ವರುವಕ್ಕಾಡ್ ಲಕ್ಷ್ಯಂವೀಡು ಉನ್ನತಿಯ ವಡಕ್ಕೇಕಂಡಿ ಹೌಸ್ ವಿ.ಕೆ. ವಿನೀಶ್ (39)ನನ್ನು ಮಟ್ಟನ್ನೂರು ಎಸ್‌ಐ ಫೈರೂಸ್ ಬಂಧಿಸಿದ್ದಾರೆ. ಮಟ್ಟನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸಿಸುವ ಬಾಲಕನಿಗೆ ಈತ ದೌರ್ಜನ್ಯಗೈದಿದ್ದು, ಈ ಬಗ್ಗೆ ಪೋಕ್ಸೋ ಪ್ರಕರಣ ದಾಖ ಲಿಸಲಾಗಿತ್ತು.

ಏಮ್ಸ್: ಪಟ್ಟಿಯಲ್ಲಿ ಕಾಸರಗೋಡನ್ನು ಒಳಪಡಿಸಬೇಕು-ಸಂಸದ

ಕಾಸರಗೋಡು: ಕೇರಳದಲ್ಲಿ ಸ್ಥಾಪಿಸಲಾಗುವ ಏಮ್ಸ್ ಆಸ್ಪತ್ರೆಯ ಪ್ರಸ್ತಾವನೆ ಪಟ್ಟಿಯಲ್ಲಿ ಕಾಸರಗೋಡು ಜಿಲ್ಲೆಯನ್ನು ಒಳಪಡಿಸಬೇಕೆಂದು ಸಂಸತ್‌ನ ಮಳೆಗಾಲದ ಅಧಿವೇಶನದ ಪೂರ್ವಭಾವಿಯಾಗಿ  ರಾಜ್ಯ ಸರಕಾರ ತಿರುವನಂತಪುರದಲ್ಲಿ ಕರೆದ ಕೇರಳದ ಸಂಸದರ ಸಭೆಯಲ್ಲಿ ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ಆಗ್ರಹಪಟ್ಟಿದ್ದಾರೆ. ಕಾಸರಗೋಡು ಜಿಲ್ಲೆಯನ್ನು ಒಳಪಡಿಸಿ ಪ್ರಸ್ತಾವನೆ ಯನ್ನು ಕೇಂದ್ರಕ್ಕೆ ಸಲ್ಲಿಸಬೇಕೆಂದು ಅವರು ಒತ್ತಾಯಿಸಿದ್ದಾರೆ. ಏಮ್ಸ್ ಪಟ್ಟಿಯಲ್ಲಿ ಕಾಸರಗೋ ಡನ್ನು ಒಳಪಡಿಸದೇ ಇರುವುದು ಜಿಲ್ಲೆಯೊಂದಿಗೆ ತೋರುತ್ತಿರುವ ಅವಗಣನೆಯ ಮುಂದುವರಿಕೆ ಯಾಗಿದೆ.  ಏಮ್ಸ್ ಸ್ಥಾಪಿಸಲು  ಅನುಕೂಲಕರವಾದ ೨೦೦೦ ಎಕ್ರೆಯಷ್ಟು ಸರಕಾರಿ ಭೂಮಿ ಪುಲ್ಲೂರುಪೆರಿಯ ಪಂಚಾಯತ್‌ನಲಿ ದೆಯೆಂದು …

ವರ್ಕಾಡಿ ಸೆಕ್ಷನ್ ವ್ಯಾಪ್ತಿಯಲ್ಲಿ ವಿದ್ಯುತ್ ಸಮಸ್ಯೆ ಪರಿಹರಿಸಲು ಮುಸ್ಲಿಂ ಲೀಗ್ ಪಂ. ಸಮಿತಿ ಸಭೆ ಒತ್ತಾಯ

ವರ್ಕಾಡಿ: ವರ್ಕಾಡಿ ವಿದ್ಯುತ್ ಸೆಕ್ಷನ್ ವ್ಯಾಪ್ತಿಯಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ವಿದ್ಯುತ್ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ವರ್ಕಾಡಿ ಪಂಚಾಯತ್ ಸಮಿತಿ ಸಭೆ ಒತ್ತಾಯಿಸಿದೆ. ವಿದ್ಯುತ್ ಇಲಾಖೆಯ ಸಿಬ್ಬಂದಿಗಳಲ್ಲಿ ಕೆಲವರು ತೋರುವ ನಿರ್ಲಕ್ಷ್ಯ ಕೂಡಲೇ ಕೊನೆಗೊಳಿಸ ಬೇಕು, ಇಲ್ಲದಿದ್ದರೆ ಸಾರ್ವಜನಿಕರನ್ನು ಸಂಘಟಿಸಿ ಹೋರಾಟ ನಡೆಸಲಾಗು ವುದು ಎಂದು ಸಭೆ ಎಚ್ಚರಿಕೆ ನೀಡಿದೆ.ಕೆಲವು ಪ್ರದೇಶಗಳಲ್ಲಿ ಹಲವು ದಿನಗಳಿಂದ ವಿದ್ಯುತ್ ಇಲ್ಲದಿದ್ದರೂ, ಗ್ರಾಹಕರಿಗೆ ಸಮರ್ಪಕ ಮಾಹಿತಿ ನೀಡದೆ ಮೋಸಗೊಳಿಸಲಾಗುತ್ತಿದೆ ಎಂದು ಸಭೆ ಆರೋಪಿಸಿತು. ಈ ಕುರಿತು …