ಮಣ್ಣು ಕೊಳ್ಳೆ ಹೊಡೆಯುವ ಪೈವಳಿಕೆ ಪಂ. ಸದಸ್ಯನ ವಿರುದ್ಧ ಕ್ರಮಕ್ಕೆ ಮಂಡಲ ಕಾಂಗ್ರೆಸ್ ಆಗ್ರಹ

ಪೈವಳಿಕೆ: ಪ್ರಾಕೃತಿಕ ಸಂಪತ್ತನ್ನು ಕೊಳ್ಳೆ ಹೊಡೆಯುವ ಪಂಚಾಯತ್ ಸದಸ್ಯನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪೈವಳಿಕೆ ಕಾಂಗ್ರೆಸ್ ಸಭೆ ಆಗ್ರಹಿಸಿದೆ. ಪಂಚಾಯತ್ ವ್ಯಾಪ್ತಿಯ ಪಾದೆಕಲ್ಲು, ಕರ್ನಾಟಕ ಕರೋಪಾಡಿ ಪಂಚಾಯತ್ ವ್ಯಾಪ್ತಿಯ ಮುಗುಳಿ ಪೊನ್ನೆಂಗಳದಲ್ಲಿ ಹಲವಾರು ವರ್ಷಗಳಿಂದ ಮಣ್ಣು ಗಣಿಗಾರಿಕೆ ನಡೆಯುತ್ತಿದ್ದು, ಅಧಿಕಾರಿ ಗಳು ಕಣ್ಣುಮುಚ್ಚಿ ಕುಳಿತಿದ್ದಾರೆಂದು ಕಾಂಗ್ರೆಸ್ ದೂರಿದೆ. ಇತ್ತೀಚೆಗೆ ಕರ್ನಾಟಕ ಪೊಲೀಸರು ಈ ಸ್ಥಳಕ್ಕೆ ದಾಳಿ ನಡೆಸಿ ಯಂತ್ರೋಪಕರಣ ವಶಪಡಿಸಿ ಕೇಸು ದಾಖಲಿಸಿದ್ದು, ಪೈವಳಿಕೆ ಪಂಚಾಯತ್ ಸಿಪಿಎಂ ಸದಸ್ಯ ಝಕರಿಯ ವಿರುದ್ಧ ಇದುವರೆಗೂ ಕ್ರಮ ಕೈಗೊಳ್ಳದಿರುವುದು ನಾಚಿಕೆಗೇಡು …

ಚುನಾವಣೆ ಮಾತ್ರ ಗುರಿಯಿರಿಸಿ ಕಾರ್ಯಾಚರಿಸುವ ಪಕ್ಷವಲ್ಲ ಬಿಜೆಪಿ- ಎಂ.ಟಿ. ರಮೇಶ್

ಕಾಸರಗೋಡು: ಚುನಾವಣೆಯ ಜಯ ಮಾತ್ರ ಉದ್ದೇಶಿಸಿ ಕಾರ್ಯಾಚರಿಸುವ ಪಕ್ಷವಲ್ಲ ಬಿಜೆಪಿ ಎಂದು ಮೂರು ದಶಕಗಳ ಕಾಲ ಅಧಿಕಾರದಿಂದ ಹೊರಗಿದ್ದರೂ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯ ಉಂಟಾಗದಿರುವುದಕ್ಕೆ ಕಾರಣ ಮುಖಂಡರು, ಕಾರ್ಯಕರ್ತರು ವ್ಯಕ್ತಿ ಆಸಕ್ತಿಗಳ ಹೊರತಾಗಿ ಪಕ್ಷ, ದೇಶಕ್ಕೆ ಪ್ರಾಮುಖ್ಯತೆ ನೀಡಿರುವುದಾಗಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಟಿ. ರಮೇಶ್ ನುಡಿದರು. ಪಂಡಿತ್ ದೀನ್‌ದಯಾಳ್ ಉಪಾಧ್ಯಾಯ ಕಾಸರಗೋಡು ಸಂಘಟನಾ ಮಂಡಲ ಪ್ರಶಿಕ್ಷಣ ಮಹಾ ಅಭಿಯಾನ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ವಿಶ್ವದ ಹಲವು ದೇಶಗಳಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಕ್ಷಾಮ ಎದುರಿಸುವಾಗಲೂ …