ಕಾಸರಗೋಡು: ಚುನಾವಣೆಯ ಜಯ ಮಾತ್ರ ಉದ್ದೇಶಿಸಿ ಕಾರ್ಯಾಚರಿಸುವ ಪಕ್ಷವಲ್ಲ ಬಿಜೆಪಿ ಎಂದು ಮೂರು ದಶಕಗಳ ಕಾಲ ಅಧಿಕಾರದಿಂದ ಹೊರಗಿದ್ದರೂ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯ ಉಂಟಾಗದಿರುವುದಕ್ಕೆ ಕಾರಣ ಮುಖಂಡರು, ಕಾರ್ಯಕರ್ತರು ವ್ಯಕ್ತಿ ಆಸಕ್ತಿಗಳ ಹೊರತಾಗಿ ಪಕ್ಷ, ದೇಶಕ್ಕೆ ಪ್ರಾಮುಖ್ಯತೆ ನೀಡಿರುವುದಾಗಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಟಿ. ರಮೇಶ್ ನುಡಿದರು.
ಪಂಡಿತ್ ದೀನ್ದಯಾಳ್ ಉಪಾಧ್ಯಾಯ ಕಾಸರಗೋಡು ಸಂಘಟನಾ ಮಂಡಲ ಪ್ರಶಿಕ್ಷಣ ಮಹಾ ಅಭಿಯಾನ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ವಿಶ್ವದ ಹಲವು ದೇಶಗಳಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಕ್ಷಾಮ ಎದುರಿಸುವಾಗಲೂ ಭಾರತದ ಯಾವುದೇ ಒಂದು ರಾಜ್ಯದಲ್ಲೂ ಇಂಧನ ಕ್ಷಾಮ ಉಂಟಾಗದಿರುವಂತೆ ನೋಡಿಕೊಳ್ಳಲು ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವಕ್ಕೆ ಸಾಧ್ಯ ವಾಗಿದೆ. ಕಾಂಗ್ರೆಸ್ ಮುಖಂಡನಾಗಿರು ವಾಗಲೇ ನರೇಂದ್ರ ಮೋದಿಯನ್ನು ವಿಶ್ವ ನಾಯಕ ಎಂದು ಹೆಸರಿಸಲು ಸಂಸದ ಶಶಿ ತರೂರ್ ಸಿದ್ಧರಾಗಿದ್ದಾರೆ. ಕಳೆದ ೧೨ ವರ್ಷದ ಮಧ್ಯೆ ಕೋಟ್ಯಂತರ ಜನರನ್ನು ಬಡತನದಿಂದ ಪಾರುಮಾಡಲು ಮೋದಿ ಸರಕಾರಕ್ಕೆ ಸಾಧ್ಯವಾಗಿರುವುದನ್ನು ಜನರು ತಿಳಿದುಕೊಂಡಿದ್ದಾರೆಂದು, ಆದುದರಿಂದಲೇ ರಾಹುಲ್ ಗಾಂಧಿ ಸಹಿತದ ವಿಪಕ್ಷ ಮುಖಂಡರು ಏನೆಲ್ಲ ರಾಜಕೀಯದಾಟ ನಡೆಸಿದರೂ ಬಿಜೆಪಿ ವಿರುದ್ಧ ಏನು ಮಾಡಲೂ ಸಾಧ್ಯವಾಗಿಲ್ಲವೆಂದು ಅವರು ನುಡಿದರು. ಬಿಜೆಪಿ ಮಂಡಲ ಅಧ್ಯಕ್ಷ ಗುರುಪ್ರಸಾದ್ ಪ್ರಭು ಅಧ್ಯಕ್ಷತೆ ವಹಿಸಿದರು. ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ, ಸವಿತಾ ಟೀಚರ್, ಪಿ.ಆರ್. ಸುನಿಲ್, ಪಿ. ರಮೇಶ್, ಪುಷ್ಪಾಗೋಪಾಲನ್, ಪ್ರಮೀಳಾ ಮಜಲ್, ವೀಣಾ ಅರುಣ್ ಶೆಟ್ಟಿ, ಸುಕುಮಾರ್ ಕುದ್ರೆಪ್ಪಾಡಿ, ಎನ್. ಸತೀಶ್, ಹರೀಶ್ ನಾರಂಪಾಡಿ, ಶ್ರೀಧರ ಕೂಡ್ಲು, ಅನಿತಾ ನಾಯ್ಕ್, ಹರೀಶ್ ಕೆ.ಆರ್, ಸುಜ್ಞಾನಿ ಶ್ಯಾನುಭೋಗ್, ಸೀನ ಶೆಟ್ಟಿ ಕಜೆ ಭಾಗವಹಿಸಿದರು.





