ಮಣ್ಣು ಕೊಳ್ಳೆ ಹೊಡೆಯುವ ಪೈವಳಿಕೆ ಪಂ. ಸದಸ್ಯನ ವಿರುದ್ಧ ಕ್ರಮಕ್ಕೆ ಮಂಡಲ ಕಾಂಗ್ರೆಸ್ ಆಗ್ರಹ

ಪೈವಳಿಕೆ: ಪ್ರಾಕೃತಿಕ ಸಂಪತ್ತನ್ನು ಕೊಳ್ಳೆ ಹೊಡೆಯುವ ಪಂಚಾಯತ್ ಸದಸ್ಯನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪೈವಳಿಕೆ ಕಾಂಗ್ರೆಸ್ ಸಭೆ ಆಗ್ರಹಿಸಿದೆ. ಪಂಚಾಯತ್ ವ್ಯಾಪ್ತಿಯ ಪಾದೆಕಲ್ಲು, ಕರ್ನಾಟಕ ಕರೋಪಾಡಿ ಪಂಚಾಯತ್ ವ್ಯಾಪ್ತಿಯ ಮುಗುಳಿ ಪೊನ್ನೆಂಗಳದಲ್ಲಿ ಹಲವಾರು ವರ್ಷಗಳಿಂದ ಮಣ್ಣು ಗಣಿಗಾರಿಕೆ ನಡೆಯುತ್ತಿದ್ದು, ಅಧಿಕಾರಿ ಗಳು ಕಣ್ಣುಮುಚ್ಚಿ ಕುಳಿತಿದ್ದಾರೆಂದು ಕಾಂಗ್ರೆಸ್ ದೂರಿದೆ.

ಇತ್ತೀಚೆಗೆ ಕರ್ನಾಟಕ ಪೊಲೀಸರು ಈ ಸ್ಥಳಕ್ಕೆ ದಾಳಿ ನಡೆಸಿ ಯಂತ್ರೋಪಕರಣ ವಶಪಡಿಸಿ ಕೇಸು ದಾಖಲಿಸಿದ್ದು, ಪೈವಳಿಕೆ ಪಂಚಾಯತ್ ಸಿಪಿಎಂ ಸದಸ್ಯ ಝಕರಿಯ ವಿರುದ್ಧ ಇದುವರೆಗೂ ಕ್ರಮ ಕೈಗೊಳ್ಳದಿರುವುದು ನಾಚಿಕೆಗೇಡು ಎಂದು ಪೈವಳಿಕೆ ಮಂಡಲ ಕಾಂಗ್ರೆಸ್ ಸಮಿತಿ ಸಭೆ ಆರೋಪಿಸಿದೆ. ಪ್ರಾಕೃತಿಕ ಸಂಪತ್ತನ್ನು ಕೊಳ್ಳೆ ಹೊಡೆಯುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು, ಇಲ್ಲದಿದ್ದರೆ ಕಾಂಗ್ರೆಸ್ ಪ್ರತ್ಯಕ್ಷ ಹೋರಾಟಕ್ಕೆ ಇಳಿಯುವುದಾಗಿ ಸಭೆಯಲ್ಲಿ ಎಚ್ಚರಿಸಲಾಯಿತು. ಮಂಡಲ ಅಧ್ಯಕ್ಷ ವಸಂತ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ರಾಘವೇಂದ್ರ ಭಟ್, ಶ್ರೀನಿವಾಸ ಮಾಸ್ತರ್, ನಾರಾಯಣ ಏದಾರ್, ಶಾಜಿ ಎನ್.ಸಿ, ಇಬ್ರಾಹಿಂ ಕುಡಾಲ್, ಸಿಬಿ ಕಯ್ಯಾರ್, ಶಿವಪ್ರಸಾದ್, ಇಬ್ರಾಹಿಂ, ಅಬ್ದುಲ್ಲ ಹಾಜಿ ಮಾತನಾಡಿದರು. ಶಿವರಾಮ ಶೆಟ್ಟಿ ಸ್ವಾಗತಿಸಿ, ಜೀವನ್ ಕ್ರಾಸ್ತ ವಂದಿಸಿದರು.

RELATED NEWS

You cannot copy contents of this page