ಯುವ ತೇಜಸ್ ಸಂಘ ಬೆದ್ರಡ್ಕ ನೂತನ ಸಮಿತಿ ರೂಪೀಕರಣ

ಕಾಸರಗೋಡು: ಯುವ ತೇಜಸ್ ಸಂಘ ಬೆದ್ರಡ್ಕ ಇದರ ಮಹಾಸಭೆ ಇತ್ತೀಚೆಗೆ ನಡೆಯಿತು. ಈ ವೇಳೆ ಸಂಘದ ನೂತನ ಸಮಿತಿಯನ್ನು ರೂಪೀಕರಿಸಲಾಯಿತು. ಅಧ್ಯಕ್ಷರಾಗಿ ಪ್ರಭಾಕರ್ ಕಾರಂತ, ಉಪಾಧ್ಯ ಕ್ಷರಾಗಿ ವಿನೋದ್, ಕಾರ್ಯದರ್ಶಿ ಯಾಗಿ ಸೂರ್ಯನಾರಾಯಣ ಕಾರಂತ, ಸಹಕಾರ್ಯದರ್ಶಿಗಳಾಗಿ ನಿಕ್ಷಿತ್ ಶೆಟ್ಟಿ, ಹರಿಪ್ರಸಾದ್ ಶೆಟ್ಟಿ, ಕೋಶಾಧಿಕಾರಿಯಾಗಿ  ಶೇಖರ್ ಪೂಜಾರಿ, ಯೋಗೀಶ್ ಪೂಜಾರಿ, ಸಲಹಾ ಸಮಿತಿಗೆ ಶಿವಶಂಕರ ಆಳ್ವ ಕೋಟೆಕುಂಜ, ಭೋಜರಾಜ್ ಆಚಾರಿ ದೇಶಮಂಗಲ, ಕಾರ್ಯನಿ ರ್ವಾಹಕ ಸಮಿತಿ ಸದಸ್ಯರಾಗಿ ಪ್ರವೀಣ, ಕಿಶೋರ್, ಉದಯ, ವಿಕ್ರಂ, ಅನೀಶ್,ರಂಜಿತ್,ಅಕ್ಷಯ್, ರಾಕೇಶ್, ಚಂದ್ರಶೇಖರ, ಅರುಣೇಶ್, …

ನಗರದ ಹೊಸ ಬಸ್ ನಿಲ್ದಾಣದಲ್ಲಿ ಸಮಾಜದ್ರೋಹಿಗಳ,ಗೂಂಡಾಗಳ ಅಟ್ಟಹಾಸದಿಂದ ಪ್ರಯಾಣಿಕರಿಗೆ ಸಮಸ್ಯೆ

ಕಾಸರಗೋಡು: ನೂರಾರು ವಿದ್ಯಾರ್ಥಿಗಳು, ಪ್ರಯಾಣಿಕರು ತಲುಪುವ ಕಾಸರಗೋಡು ನಗರಸಭಾ ಹೊಸ ಬಸ್ ನಿಲ್ದಾಣದಲ್ಲಿ ರಾತ್ರಿ ವೇಳೆ ಸಮಾಜದ್ರೋಹಿಗಳು, ಮಾದಕ ಮಾಫಿಯಾಗಳ ಕೇಂದ್ರವಾಗಿ ಬದಲಾಗು ತ್ತಿದ್ದು, ಇದರಿಂದ ವ್ಯಾಪಾರಿಗಳು, ವಿದ್ಯಾರ್ಥಿಗಳು ಸಹಿತ ಪ್ರಯಾಣಿಕರಿಗೆ ಸಂಕಷ್ಟ ಉಂಟಾಗುತ್ತಿದೆ ಎಂದು ದೂರಲಾಗಿದೆ. ಹಗಲು ಹೊತ್ತಿನಲ್ಲಿ ಇದೇ ನಿಲ್ದಾಣದಲ್ಲಿ ಗೂಂಡಾಗಳ ಅಟ್ಟಹಾಸ ನಡೆಯುತ್ತಿರುವುದಾಗಿ ವ್ಯಾಪಾರಿಗಳು, ವಿದ್ಯಾರ್ಥಿಗಳು, ಪ್ರಯಾಣಿಕರಿಗೆ ಸಮಸ್ಯೆಯಾಗುತ್ತಿರುವುದಾಗಿಯೂ ದೂರಲಾಗಿದೆ. ಕೆಲವು ದಿನದ ಹಿಂದೆ ಈ ಬಸ್ ನಿಲ್ದಾಣದಲ್ಲಿ ಹಾಡಹಗಲೇ ಘರ್ಷಣೆ ಉಂಟಾಗಿದೆ. ಮೂರು ಮಂದಿಯನ್ನು ಪೊಲೀಸರು ಕಸ್ಟಡಿಗೆ ತೆಗೆದಿದ್ದರು. ಸಾರ್ವಜನಿಕ ಸ್ಥಳದಲ್ಲಿ …

ಕೆ.ಎ. ಮಹಮ್ಮೂದ್ ನಿಧನ

ಕಾಸರಗೋಡು: ನೆಲ್ಲಿಕುಂಜೆ ಬಂಗರಗುಡ್ಡೆ ನಿವಾಸಿ ಕೆ.ಎ. ಮಹಮ್ಮೂದ್ (75) ನಿಧನ ಹೊಂದಿ ದರು. ಕೊಲ್ಲಿ ಉದ್ಯೋಗಿ ಯಾಗಿದ್ದರು. ನಿನ್ನೆ ಬೆಳಿಗ್ಗೆ ಮನೆಯಲ್ಲಿ ಅಸ್ವಸ್ಥತೆ ಕಂಡು ಬಂದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ನಿಧನ ಹೊಂದಿದರು. ಮೃತರು ಪತ್ನಿ ಬೀಫಾತಿಮ, ಮಕ್ಕಳಾದ ಮೊಹಮ್ಮದ್ ಕುಂಞಿ, ಸುಲೈಖ, ಅಬ್ದುಲ್ ರಹ್ಮಾನ್, ಅಳಿಯ ಮೊಹಮ್ಮದ್ ಕುಂಞಿ, ಸೊಸೆ ಇರ್ಫಾನ, ಸಹೋದರ ಅಬ್ಬಾಸ್, ಸಹೋದರಿ ಆಸ್ಮಾ ಬಿ. ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಕುಂಞಂಬು ನಾಯರ್  ನಿಧನ

ಮುಳ್ಳೇರಿಯ: ನಾರಂತಟ್ಟ ಕುಂಞಂಬು ನಾಯರ್ (94) ನಿಧನ ಹೊಂದಿದರು. ಕಾಸರಗೋಡು ಟ್ಯುಟೋ ರಿಯಲ್ ಕಾಲೇಜಿನಲ್ಲಿ ಸುಮಾರು ವರ್ಷಗಳ ಕಾಲ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ಇವರ ಪತ್ನಿ ಕೋಡೋತ್ ಮೀನಾಕ್ಷಿ ಅಮ್ಮ ಈ ಹಿಂದೆ ನಿಧನರಾಗಿದ್ದಾರೆ. ಮೃತರು ಮಕ್ಕಳಾದ ಭಾಗ್ಯಲತ ಉದುಮ, ಚಿತ್ರಲೇಖ ಕಾಸರಗೋಡು, ಜ್ಯೋತಿ ಕರಿಪ್ಪೊಡಿ, ಶ್ರೀಕುಮಾರ್ ಕರಿಪ್ಪೊಡಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಲೀಲಾ ಶೆಟ್ಟಿ ನಿಧನ

ಮಧೂರು: ಬೈನಡ್ಕ ನಿವಾಸಿ ಲೀಲಾ ಶೆಟ್ಟಿ (68) ನಿಧನ ಹೊಂದಿದರು. ಮೃತರು ಮಕ್ಕಳಾದ ಪ್ರವೀಣ್ ಕುಮಾರ್ ಶೆಟ್ಟಿ (ಆಟೋ ಚಾಲಕ), ದಿವ್ಯ ಶೆಟ್ಟಿ, ಪುಷ್ಪಲತ, ಅಳಿಯ ಕಿರಣ್, ಸಹೋದರ ಬಾಲಕೃಷ್ಣ ಶೆಟ್ಟಿ, ಸಹೋದರಿ ಕುಮಾರಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಮಾನ್ಯ ವಿಷ್ಣುಮೂರ್ತಿ ನಗರದಲ್ಲಿ  ಪ್ರಾಚೀನ ದೇವಾಲಯ ಕುರುಹು ಪತ್ತೆ

ಬದಿಯಡ್ಕ: ನೀರ್ಚಾಲು ಸಮೀಪದ ಮಾನ್ಯ ವಿಷ್ಣುಮೂರ್ತಿ ನಗರದಲ್ಲಿ ನೂರಾರು ವರ್ಷಗಳಷ್ಟು ಪ್ರಾಚೀನವೆನ್ನಲಾದ ದೇವಾಲಯದ ಕುರುಹು ಪತ್ತೆಯಾಗಿದೆ. ವಿಷ್ಣುಮೂರ್ತಿ ನಗರದ ವಿಶಾಲ ಬಯಲಲ್ಲಿ ಎರಡು ಮರಗಳ ಎಡೆಯಲ್ಲಿ ದೇವಾಲಯ ದ್ದೆನ್ನಲಾದ ಪಾಣಿಪೀಠದ ಭಾಗಗಳು ಮತ್ತು ಬಾವಿಯ ಕುರುಹುಗಳು ಕಂಡುಬAದಿದೆ. ಈ ಪರಿಸರದಲ್ಲಿ ವಿಷ್ಣುಮೂರ್ತಿ ದೈವದ ಆರಾಧನೆ ನಡೆದುಬರುತ್ತಿದ್ದು, ಅದೇ ಪರಿಸರದಲ್ಲಿ ದೇವಾಲಯದ ಕುರುಹುಗಳು ಪತ್ತೆಯಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ.ಈಗ ದೇವಾಲಯದ ಪುನರುತ್ಥಾನಕ್ಕೆ ಸಂಬAಧಿಸಿ ದೈವಜ್ಞರ ಮೂಲಕ ಪ್ರಶ್ನಾಚಿಂತನೆ ಕೈಗೆತ್ತಿಕೊಳ್ಳಲಾಗಿದೆ. ದೈವಜ್ಞರಾದ ಮಹಾಲಿಂಗೇಶ್ವರ ಶರ್ಮ ಕೊಳಚ್ಚಪ್ಪೆ, ಉಣ್ಣಿಕೃಷ್ಣನ್ ನಂಬೀಶ ಸಹಕಾರದಲ್ಲಿ ಚಿಂತನೆ …