ಮನೆಯ ಹೊರಗೆ ಇರಿಸಿದ್ದ ಕೀಲಿ ಕೈ ಬಳಸಿ ಬಾಗಿಲು ತೆರೆದು 110 ಗ್ರಾಂ ಚಿನ್ನಾಭರಣ, 20 ಸಾವಿರ ರೂ. ಕಳವು

ಉಪ್ಪಳ:  ದಂಪತಿ ಕ್ಷೇತ್ರ ದರ್ಶನಕ್ಕೆ ಹಾಗೂ ಮಕ್ಕಳು ಶಾಲೆ,ಕಾಲೇಜಿಗೆ ಹೋದ ಸಮಯದಲ್ಲಿ  ಮನೆಯಿಂದ 110 ಗ್ರಾಂ ಚಿನ್ನಾಭರಣ ಮತ್ತು 20 ಸಾವಿರ ರೂಪಾಯಿ ಕಳವಿಗೀಡಾದ ಬಗ್ಗೆ ದೂರಲಾಗಿದೆ. ಪೈವಳಿಕೆ ಕುರುಡಪದ ವಿನ ಸುಬ್ರಾಯ ಸಾಯ ಎಂಬವರ ದೂರಿನಂತೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. 2026 ಮಾರ್ಚ್ 9ರಿಂದ 23ರ ಮಧ್ಯೆಗಿನ ದಿನಗಳಲ್ಲಿ ಕಳವು ನಡೆದಿರುವುದಾಗಿ ಸಂಶಯಿಸಲಾ ಗುತ್ತಿದೆ. ಸುಬ್ರಾಯ ಹಾಗೂ ಪತ್ನಿ ಮಾರ್ಚ್ ೯ರಂದು ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದರ್ಶನಕ್ಕಾಗಿ ತೆರಳಿದ್ದರು.  ಈ ವೇಳೆ ಮನೆಯಲ್ಲಿ ಮಕ್ಕಳು ಮಾತ್ರವೇ …

ಪರೀಕ್ಷಾ ಹಾಲ್‌ನಲ್ಲಿ ಮೊಬೈಲ್ ಫೋನ್ ಉಪಯೋಗಿಸಿ ಉತ್ತರ ಬರೆದ ಪೈವಳಿಕೆ ನಿವಾಸಿ ಬಂಧನ : ಉತ್ತರ ಕಳುಹಿಸಿ ಕೊಟ್ಟಾತನಿಗಾಗಿ ಶೋಧ

ಪೈವಳಿಕೆ:  ಪರೀಕ್ಷಾ ಹಾಲ್ ನಲ್ಲಿ ಮೊಬೈಲ್ ಫೋನ್ ಉಪ ಯೋಗಿಸಿ ಉತ್ತರ ಬರೆದ ಪೈವಳಿಕೆ ನಿವಾಸಿ ಸೆರೆಗೀಡಾಗಿದ್ದಾನೆ. ಪೈವಳಿಕೆ  ಕುರುಡಪದವು ಬಳಿಯ ಸಾದಂU ಯ ನಿವಾಸಿ ಎಸ್. ಜನಾರ್ದನ (36) ಎಂಬಾತನನ್ನು ಕೂತುಪರಂಬ ಎಸಿಪಿ ಸಿಬಿ ಟೋಂ ನೇತೃತ್ವದಲ್ಲಿ ಬಂಧಿಸಲಾಗಿದೆ. ಎಸ್. ಜನಾರ್ದನ ಕೆಎಸ್‌ಇಬಿ ವರ್ಕಾಡಿ ಸೆಕ್ಷನ್‌ನಲ್ಲಿ ತಾತ್ಕಾಲಿಕ ನೌಕರನಾಗಿದ್ದಾನೆ. ಜುಲೈ ೧ರಂದು ಮಟ್ಟನ್ನೂರು ಪಾಲಿಟೆಕ್ನಿಕ್‌ನಲ್ಲಿ ನಡೆದ ಕೇರಳ ಗವ. ಸರ್ಟಿಫಿಕೇಟ್ ಎಕ್ಸಾಮಿನೇಶನ್ (ಕೆಜಿಸಿಇ)ಗೆ ಮೊಬೈಲ್ ಫೋನ್ ಉಪಯೋಗಿಸಿ ಈತ ಪರೀಕ್ಷೆ ಬರೆದಿದ್ದಾನೆ. ತಾತ್ಕಾ ಲಿಕ ನೌಕರನಾದ …

ಆಟೋ ರಿಕ್ಷಾಗಳಿಂದ ಹಣ ಕಳವು ನಡೆಸುತ್ತಿದ್ದಾತ ಸೆರೆ

ಕಾಸರಗೋಡು:  ನಿಲ್ಲಿಸಿದ್ದ ಆಟೋ ರಿಕ್ಷಾಗಳಿಂದ ಕಳವು ನಡೆಸುತ್ತಿದ್ದಾತನನ್ನು ಪೊಲೀಸರು ಕೈಯಾರೆ ಸೆರೆಹಿಡಿದಿದ್ದಾರೆ.  ಚಿಟ್ಟಾರಿಕ್ಕಲ್ ನಿವಾಸಿಯಾದ ಶೈಜು ಜೋಸೆಫ್ (34) ಎಂಬಾತನನ್ನು ತಲಶ್ಶೇರಿ ಪೊಲೀಸರು ಬಂಧಿಸಿದ್ದಾರೆ.  ಆಟೋ ರಿಕ್ಷಾಗಳನ್ನು ಸ್ಟ್ಯಾಂಡ್‌ನಲ್ಲಿ ನಿಲ್ಲಿಸಿ ಚಾಲಕರು ಚಹಾ ಕುಡಿಯಲೋ ಅಥವಾ ಇತರ ಅಗತ್ಯಗಳಿಗೆ ತೆರಳಿದ ಸಂದರ್ಭದಲ್ಲಿ ವಾಹನಗಳಿಂದ ಹಣ ಮೊದಲಾದವು ಗಳನ್ನು ಶೈಜು ಜೋಸೆಫ್   ಕಳವು ನಡೆಸುತ್ತಿದ್ದನೆನ್ನಲಾಗಿದೆ. ಕಳವು ಬಗ್ಗೆ ಹಲವರಿಂದ ದೂರು ಲಭಿಸಿದ ಹಿನ್ನೆಲೆ ಯಲ್ಲಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಜುಲೈ ೮ರಂದು ತಲಶ್ಶೇರಿ  ಹಳೆ ಬಸ್ ನಿಲ್ದಾಣ ಸಮೀಪ …

ಹೊಟ್ಟೆನೋವು ವ್ಯಕ್ತಿ ಮೃತ್ಯು

ಕಾಸರಗೋಡು: ಹೊಟ್ಟೆನೋವಿನ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದ ಮಧ್ಯೆ ವ್ಯಕ್ತಿ ಮೃತಪಟ್ಟರು. ಮೇಲ್ಪರಂಬ ಮರವಯಲ್ ನಿವಾಸಿ ರವಿ (55) ಮೃತಪಟ್ಟವರು. ನಿನ್ನೆ ಬೆಳಿಗ್ಗೆ ಘಟನೆ ನಡೆದಿದೆ. ಮಕ್ಕೇರಿ ಗುಳಿಗ ದೈವಸ್ಥಾನದ ಪೂಜಾರಿಯಾಗಿದ್ದರು. ಮೃತರು ಪತ್ನಿ ಪ್ರಿಯ, ಮಕ್ಕಳಾದ ಪ್ರಸೀತ, ಪ್ರವೀಣ, ಪ್ರವೀಣ್, ಪ್ರಣಯ, ಅಳಿಯ ವಿಪಿನ್, ಸಹೋದರ ಸುರೇಶ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಸಹೋದರಿ ಬೇಬಿ ಈ ಹಿಂದೆ ನಿಧನ ಹೊಂದಿದ್ದಾರೆ.

ವೃದ್ದೆಯ ಮೃತದೇಹ ಬಾವಿಯಲ್ಲಿ ಪತ್ತೆ

ಬಂದಡ್ಕ: ಬೇಡಡ್ಕ ಚುಳ್ಳಿ ಉನ್ನತಿಯ ನಿವಾಸಿ ವೆಳ್ಳಚ್ಚಿ (90) ಬಾವಿಗೆ ಬಿದ್ದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ಬೇಡಗಂ ಪೊಲೀಸರು ಹಾಗೂ ಅಗ್ನಿಶಾಮಕ ದಳ ತಲುಪಿ ಮೃತದೇಹವನ್ನು ಮೇಲೆತ್ತಿ ಮರಣೋತ್ತರ ಪರೀಕ್ಷೆಗಾಗಿ ಜನರಲ್ ಆಸ್ಪತ್ರೆಯ ಶವಾಗಾರಕ್ಕೆ ಕೊಂಡೊಯ್ದಿದ್ದಾರೆ. ಬೇಡಗಂ ಪೊಲೀಸರು ಅಸಹಜ ಸಾವಿಗೆ ಕೇಸು ದಾಖಲಿಸಿದ್ದಾರೆ. ಮೃತರು ಮಕ್ಕಳಾದ ರಾಜನ್, ಮಾಧವಿ, ತೊಂಡಿಚ್ಚಿ, ಕುಂಞಿರಾಮನ್, ಕುಂಞಿಕ್ಕ, ನಾರಾಯಣಿ, ಅಳಿಯ ಮಾಣಿಕನ್, ಸೊಸೆಯಂದಿರಾದ ರಮಣಿ, ಕಾವೇರಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

2.81 ಗ್ರಾಂ ಎಂಡಿಎಂಎ ಪತ್ತೆ: ಓರ್ವ ಸೆರೆ

ಕುಂಬಳೆ: ಕುಂಬಳೆ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಮಾದಕದ್ರವ್ಯವಾದ 2.81 ಗ್ರಾಂ ಎಂಡಿಎಂಎ ಸಹಿತ ಓರ್ವನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂ ಡಿದ್ದಾರೆ. ಮೂಲತಃ ಪುತ್ತಿಗೆ ಮುಗು ರಸ್ತೆ ಬಳಿಯ ದಾರುಲ್ ಇಸ್ಲಾಂ ಮಂಜಿಲ್  ನಿವಾಸಿ ಹಾಗೂ ಈಗ ಮೊಗ್ರಾಲ್ ಪೇರಾಲ್‌ನಲ್ಲಿ ವಾಸಿಸುತ್ತಿರುವ ಅಬ್ದುಲ್ ಶಹಜಾಸ್ ಎಸ್ (30) ಬಂಧಿತ ಆರೋಪಿ. ಕುಂಬಳೆ ಪೊಲೀಸ್ ಠಾಣೆಯ ಎಸ್‌ಐ ಅನೂಪ್ ಎಂ, ಎಎಸ್‌ಐ ಅತುಲ್‌ರಾಮ್, ಅಜೆಯ್ ಎಸ್.ಪಿಯವರ  ಡಾನ್ಸಾಪ್ ತಂಡದ ಸದಸ್ಯರಾದ ನಿಜಿಲ್ ಕುಮಾರ್, ಅನೀಶ್ ಕುಮಾರ್ ಎಂಬಿವರನ್ನೊಳಗೊಂಡ ಪೊಲೀಸರ ತಂಡ …

ಹಣ ಕೇಳಿ ನೀಡದ ದ್ವೇಷ: ತಂದೆಯ ಸಹೋದರಿಯನ್ನು ಕಡಿದು ಕೊಲೆಗೈದು ಆರೋಪಿ ಠಾಣೆಯಲ್ಲಿ ಶರಣು

ಪಾಲಕ್ಕಾಡ್: ಹಣ ಕೇಳಿ ನೀಡದ ಹಿನ್ನೆಲೆಯಲ್ಲಿ ತಂದೆಯ ಸಹೋದರಿಯನ್ನು ಯುವಕ ಕಡಿದು ಕೊಲೆಗೈದ ಘಟನೆ ನಡೆದಿದೆ. ಮಣ್ಣಾರಕಾಡ್ ಚೆರುಕುಳಂ ಕರಿಂಬನ್‌ಕುನ್ನ್ ಬುಡಕಟ್ಟು ಉನ್ನತಿಯ ಮಾಧವಿ ಕುಟ್ಟಿ ಮೃತಪಟ್ಟ ಮಹಿಳೆ. ಕೊಲೆಕೃತ್ಯ ನಡೆಸಿದ ಬಳಿಕ ಆರೋಪಿ ಶಶಿ (42) ಮಣ್ಣಾರ್‌ಕಾಡ್ ಪೊಲೀಸ್ ಠಾಣೆಗೆ ತಲುಪಿ ಶರಣಾಗತನಾಗಿದ್ದಾನೆ. ನಿನ್ನೆ ಮಧ್ಯಾಹ್ನ ಈ ಧಾರುಣ ಘಟನೆ ನಡೆದಿದೆ. ಮಾಧವಿಯ ಕುತ್ತಿಗೆಗೆ ಶಶಿ ಕಡಿದಿದ್ದನು. ಗಂಭೀರ ಗಾಯಗೊಂಡ ಆಕೆಯನ್ನು ಪಾಲಕ್ಕಾಡ್ ಜಿಲ್ಲಾಸ್ಪತ್ರೆಗೆ ತಲುಪಿಸಲಾಯಿತಾದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಇವರಿಬ್ಬರೂ ಒಂದೇ ಮನೆಯಲ್ಲಿ ವಾಸವಾಗಿದ್ದರು. …

ಬಂದಡ್ಕ ಮಾಣಿಮೂಲೆಯಲ್ಲಿ ಕಾಡಾನೆಗಳಿಂದ ಕೃಷಿ ನಾಶ: ಕೃಷಿಕರು ಸಂಕಷ್ಟದಲ್ಲಿ

ಬಂದಡ್ಕ:  ಕೆಲವು ಸಮಯಗಳ ಬಳಿಕ ಮತ್ತೆ ಬಂದಡ್ಕ ಮಾಣಿಮೂಲೆ, ಶ್ರೀಮಲ ವಲಯಗಳಲ್ಲಿ ಕಾಡಾನೆ ಗಳು ಕೃಷಿನಾಶ ಉಂಟುಮಾಡಿವೆ. ಜನವಾಸ ಸ್ಥಳಗಳಲ್ಲಿ ಕಾಡಾನೆಗಳ ಹಿಂಡು ವ್ಯಾಪಕವಾಗಿ ರಾದ್ಧಾಂತ ನಡೆಸುತ್ತಿವೆ.  ನಿನ್ನೆ ರಾತ್ರಿ ಹಾಗೂ ಇಂದು ಮುಂಜಾನೆ ಶ್ರೀಮಲದಲ್ಲಿ ಎರಡು ಆನೆಗಳು ತಲುಪಿವೆ. ಕೃಷಿಕನಾದ ಜೋಸ್ ವರ್ಕಿಯವರ ತೋಟದಲ್ಲಿ ಇವು ನಾಶವುಂಟು ಮಾಡಿವೆ. ಕಂಗು ಹಾಗೂ ವಿವಿಧ ಸಸ್ಯಗಳನ್ನು  ನಾಶ ಮಾಡಿ ತಿಂದು ಭೀತಿ ಸೃಷ್ಟಿಸಿವೆ.  ಹಲವು ದಿನಗಳಿಂದ ಈ ಪ್ರದೇಶದಲ್ಲಿ ಬೀಡು ಬಿಟ್ಟಿರುವ  ಕಾಡಾನೆಗಳು ಕೃಷಿಕರ ಆದಾಯ ಮೂಲವನ್ನೇ …

ಉಪ್ಪಳ ಗ್ರಾಮ ಕಚೇರಿಯನ್ನು ವಿಭಜಿಸಲು ಸಚಿವರಿಗೆ ಜನಪರವೇದಿಯಿಂದ ಮನವಿ

ಉಪ್ಪಳ: ಉಪ್ಪಳ ವಿಲ್ಲೇಜ್ ಕಚೇರಿಯನ್ನು ವಿಭಜಿಸಿ, ಅಗತ್ಯದ ನೌಕರರನ್ನು ನೇಮಕ ಮಾಡಿ ಜನರ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಆಗ್ರಹಿಸಿ ಮಂಗಲ್ಪಾಡಿ ಜನಪರವೇದಿ ಕಂದಾಯ ಸಚಿವರಿಗೆ ಮನವಿ ನೀಡಿದೆ. ಪ್ರಸ್ತುತ ನಾಲ್ಕು ವಿಲ್ಲೇಜ್‌ಗಳು ಒಳಗೊಂಡಿರುವುದಾಗಿದೆ ಉಪ್ಪಳ ಗ್ರೂಪ್ ವಿಲ್ಲೇಜ್. ಉಪ್ಪಳ, ಮಂಗಲ್ಪಾಡಿ, ಕೋಡಿಬೈಲು, ಮುಳಿಂಜ ಎಂಬೀ ವಿಲ್ಲೇಜ್‌ಗಳು ಇದರಲ್ಲಿ ಒಳಗೊಂಡಿದೆ. ಇಲ್ಲಿನ ಜನಸಂಖ್ಯೆಗೆ ಹೊಂದಿಕೊಂಡು ನೌಕರರು ಇಲ್ಲದಿರುವುದು ದಿನಂಪ್ರತಿ ವಿಲ್ಲೇಜ್ ಕಚೇರಿಗೆ ಸಂಬಂಧಿಸಿ ಜನರ ಬೇಡಿಕೆಗಳನ್ನು ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ವಾರಗಳ ಕಾಲ ಕಾಯಬೇಕಾದ ಸ್ಥಿತಿ ಇದ್ದು, ದಿನಂಪ್ರತಿ ಕಚೇರಿಗೆ ಅಲೆದಾಡಬೇಕಾಗಿ …

ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಜಿಲ್ಲಾ ಮಟ್ಟದ ಸಭೆ: 2೦ ಪ್ರಕರಣಗಳಲ್ಲಿ ಇತ್ಯರ್ಥ

ಕಾಸರಗೋಡು: ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಜಿಲ್ಲಾ ಮಟ್ಟದ ಸಿಟ್ಟಿಂಗ್ ಕಲೆಕ್ಟ್ರೇಟ್ ಕಾನ್ಫರೆನ್ಸ್ ಹಾಲ್‌ನಲ್ಲಿ ಜರಗಿತು. ಅಧ್ಯಕ್ಷ ಕೆ.ವಿ. ಮನೋಜ್ ಕುಮಾರ್ ಅಧ್ಯಕ್ಷತೆ ವಹಿಸಿದರು. ಆಯೋಗದ ಸದಸ್ಯ ಕೆ.ಬಿ. ಮೋಹನ್ ಕುಮಾರ್ ಹಿಯರಿಂಗ್ ನಡೆಸಿದರು. ಪರಿಗಣಿಸಿದ 3೦ ದೂರುಗಳ ಪೈಕಿ 20 ದೂರುಗಳನ್ನು ಇತ್ಯರ್ಥಗೊಳಿಸಲಾಯಿತು.  ೧೦ ಪ್ರಕರಣಗಳನ್ನು ಆಯೋಗದ ಆದೇಶ ಹಾಗೂ ನಿರ್ದೇಶಕ್ಕಾಗಿ ಮುಂದೂಡಲಾಗಿದೆ. ಚೆಂಬರಿಕ ಜಿಎಲ್‌ಪಿ ಶಾಲೆಯ ಕಂಪೌಂಡ್ ನಿರ್ಮಿಸುವಂತೆ ಹೈಕೋರ್ಟ್ ಆದೇಶದಂತೆ ಆಯೋಗ ಚೆಮ್ನಾಡ್ ಪಂ. ಕಾರ್ಯದರ್ಶಿಗೆ ನಿರ್ದೇಶ ನೀಡಿದೆ. ಅದ್ರುಕಳಿ ಜಿಎಲ್‌ಪಿ …