ಬಿಜೆಪಿ ಕುಂಬಳೆ ಮಂಡಲ ಅಧ್ಯಕ್ಷರಾಗಿ ಬಿ. ವಿಕ್ರಮ್ ಪೈ ಆಯ್ಕೆ

ಕಾಸರಗೋಡು: ಬಿಜೆಪಿ ನೂತನ ಕುಂಬಳೆ ಮಂಡಲ ಅಧ್ಯಕ್ಷರಾಗಿ  ಬಿ. ವಿಕ್ರಮ್ ಪೈ  ಅವರನ್ನು ಆಯ್ಕೆ ಮಾಡಲಾಗಿದೆ. ಅದೇ ರೀತಿ ಉದುಮ ಮಂಡಲ ಅಧ್ಯಕ್ಷರಾಗಿ ಎಂ. ಪ್ರದೀಪ್ ಕೂಟಕ್ಕಣಿ ಆಯ್ಕೆ ಗೊಂಡಿದ್ದಾರೆ. ಈ ಹಿಂದೆ ಅಧ್ಯಕ್ಷರಾಗಿದ್ದ ಸುನಿಲ್ ಅನಂತಪುರ, ಶೈನಿ ಮೋಳ್ ಎಂಬಿವರನ್ನು ಪಕ್ಷದ ಜಿಲ್ಲಾ ಸಮಿತಿ ಸದಸ್ಯರಾಗಿ  ಅಧ್ಯಕ್ಷೆ ಅಶ್ವಿನಿ ಎಂ.ಎಲ್. ಘೋಷಿಸಿದ್ದಾರೆ.

ಜಂಇಯತ್ತುಲ್ ಉಲಮ ಪ್ರಧಾನ ಕಾರ್ಯದರ್ಶಿ ಪ್ರೊ. ಕೆ. ಆಲಿಕುಟ್ಟಿ ಮುಸ್ಲಿಯಾರ್ ನಿಧನ

ಕಾಸರಗೋಡು: ಸಮಸ್ತ ಕೇರಳ ಜಂಇಯತ್ತುಲ್ ಉಲಮ ಪ್ರಧಾನ ಕಾರ್ಯದರ್ಶಿ, ಕಾಸರಗೋಡು ಸಂಯುಕ್ತ ಮುಸ್ಲಿಂ ಜಮಾಯತ್ ಖಾಝಿಯಾಗಿದ್ದ  ಪ್ರೊ. ಆಲಿಕುಟ್ಟಿ ಮುಸ್ಲಿಯಾರ್ (81) ನಿಧನ ಹೊಂದಿದರು. ಪೆರಿಂದಲ್‌ಮಣ್ಣ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದರು. ನಿನ್ನೆ 2 ಗಂಟೆಗೆ ನಿಧನ ಸಂಭವಿಸಿದೆ. ವಿವಿಧ ಸಂಘಟನೆಗಳಲ್ಲಿ ಸಕ್ರಿಯರಾಗಿ ಸೇವೆ ಸಲ್ಲಿಸಿದ್ದರು. 2013ರಿಂದ ಕಾಸರಗೋಡು ಸಂಯುಕ್ತ ಖಾಝಿಯಾಗಿದ್ದರು.

ಕಾಸರಗೋಡು ರೈಲ್ವೇ ಪಾರ್ಸಲ್ ಸೇವೆ ಸ್ಥಗಿತಗೊಳಿಸದಂತೆ ಕೇಂದ್ರ ರೈಲ್ವೇ ಸಚಿವರಿಗೆ ಮನವಿ- ಎಂ.ಎಲ್. ಅಶ್ವಿನಿ

ಕಾಸರಗೋಡು: ಕಾಸರಗೋಡು ರೈಲ್ವೇ ನಿಲ್ದಾಣದಿಂದ ಪಾರ್ಸಲ್ ಸೇವೆಯನ್ನು ಸ್ಥಗಿತಗೊಳಿಸುವ ದಕ್ಷಿಣ ರೈಲ್ವೆಯ ನಿರ್ಧಾರವನ್ನು ಹಿಂಪಡೆಯಬೇ ಕೆಂದು ಆಗ್ರಹಿಸಿ ಕೇಂದ್ರ ರೈಲ್ವೇ ಸಚಿವರಿಗೆ ಮನವಿ ಸಲ್ಲಿಸಲಾಗುವುದು. ಅಲ್ಲದೆ ಈ ವಿಷಯವನ್ನು ಖುದ್ದಾಗಿ ಭೇಟಿಯಾಗಿ ಮಂಡಿಸಲಾಗುವುದೆಂದು ಬಿಜೆಪಿ ಜಿಲ್ಲಾ ಧ್ಯಕ್ಷೆ ಎಂ.ಎಲ್. ಅಶ್ವಿನಿ ತಿಳಿಸಿದ್ದಾರೆ. ಕಾಸರಗೋಡು ರೈಲ್ವೇ ನಿಲ್ದಾಣದಲ್ಲಿ ಪಾರ್ಸಲ್ ಸೇವೆಯನ್ನು ಸ್ಥಗಿತಗೊಳಿಸಿದರೆ ಜಿಲ್ಲೆಯ ವಾಣಿಜ್ಯ ಕ್ಷೇತ್ರಕ್ಕೆ ದೊಡ್ಡ ಹೊಡೆತ ಬೀಳಲಿದೆ. ಸಣ್ಣ ಮತ್ತು ಮಧ್ಯಮ ಪ್ರಮಾಣದ ವ್ಯಾಪಾರಿಗಳು ಹಾಗೂ ವಿವಿಧ ವಾಣಿಜ್ಯ ಸಂಸ್ಥೆಗಳು ಸರಕು ಸಾಗಾಟಕ್ಕೆ ರೈಲ್ವೇ ಪಾರ್ಸಲ್ …

ಐಲ ಮೈದಾನವನ್ನು ಯಾವುದೇ ಕಾರಣಕ್ಕೂ ಇತರ ಉಪಯೋಗಕ್ಕೆ ಬಿಟ್ಟುಕೊಡಲಾಗುವುದಿಲ್ಲ- ಸಾರ್ವಜನಿಕ ಮೊಸರುಕುಡಿಕೆ ಉತ್ಸವ ಸಮಿತಿ

ಉಪ್ಪಳ: ಹಿಂದೂಗಳ ಶ್ರದ್ಧಾ ಕೇಂದ್ರವಾಗಿ ದಿನನಿತ್ಯವೂ ಸಾವಿರಾರು ಭಕ್ತರು ಆಗಮಿಸಿ ದೇವಿಯ ಅನುಗ್ರಹ ಪಡೆಯುವ ಐಲ ಶ್ರೀ ದುರ್ಗಾ ಪರಮೇಶ್ವರೀ ಕ್ಷೇತ್ರ ಇತಿಹಾಸ ಪ್ರಸಿದ್ಧ ಮಾಗಣೆ ಕ್ಷೇತ್ರವಾಗಿದೆ. ಅನಾದಿ ಕಾಲದಿಂ ದಲೂ ಕ್ಷೇತ್ರದ ಮುಂಭಾಗದ ಐಲ ಮೈದಾನದಲ್ಲಿ ಉತ್ಸವ ನಡೆಯುತ್ತಿದೆ. ಬೆಡಿ ಕಟ್ಟೆ ಹಾಗೂ ಅಷ್ಟ ದಿಕ್ಪಾಲಕರ ಕಟ್ಟೆಯು ಇಲ್ಲಿ ಇದ್ದು ಪೂಜೆ, ಧಾರ್ಮಿಕ ವಿಧಿಗಳು ಪ್ರತಿ ತಿಂಗಳು ನೆರವೇರುತ್ತಿದೆ. ಸಾರ್ವಜನಿಕ ಮೊಸರು ಕುಡಿಕೆಯು ಐಲ ಮೈದಾನದಲ್ಲಿ ಹಲವಾರು ದಶಕಗಳಿಂದ ನಡೆಯುತ್ತಿದೆ. ಶ್ರೀ ಕೃಷ್ಣ ಜನ್ಮಾಷ್ಟಮಿಯಂದು ನಡೆಯುವ …

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ರೂಪಶ್ರೀ  ವರ್ಕಾಡಿಯವರಿಗೆ ಬಿಜೆಪಿ ಅಭಿನಂದನೆ

 ವರ್ಕಾಡಿ: ರಾಷ್ಟ್ರೀಯ ಚಲನ ಚಿತ್ರ ಪ್ರಶಸ್ತಿಗೆ ಭಾಜನರಾಗಿರುವ ರೂಪಶ್ರೀ ವರ್ಕಾಡಿಯವರನ್ನು ಬಿಜೆಪಿ  ವರ್ಕಾಡಿ ಸಮಿತಿ ವತಿಯಿಂದ ಅಭಿನಂದಿಸಲಾಯಿತು. ಬಿಜೆಪಿ ಜಿಲ್ಲಾ ಸಮಿತಿ ಉಪಾಧ್ಯಕ್ಷ ಮಣಿಕಂಠ ರೈ ಪಟ್ಲ, ರಾಜ್ಯ ಕೌನ್ಸಿಲ್ ಸದಸ್ಯ ಹರೀಶ್ ನಾರಂಪಾಡಿ, ಮಂಜೇಶ್ವರ ಮಂಡಲ ಪ್ರಧಾನ ಕಾರ್ಯದರ್ಶಿ ಯತಿರಾಜ್ ಶೆಟ್ಟಿ, ಪಂಚಾಯತ್ ಸದಸ್ಯೆ ತುಳಸಿ ಕುಮಾರಿ, ಪಂಚಾಯತ್ ಸಮಿತಿ ಅಧ್ಯಕ್ಷ ಭಾಸ್ಕರ್ ಪೊಯ್ಯೆ, ಪ್ರಧಾನ ಕಾರ್ಯದರ್ಶಿ ನಾಗೇಶ್ ಬಳ್ಳೂರು, ಕೃಷ್ಣಮೂರ್ತಿ ಪ್ರಶಾಂತ್, ರಕ್ಷಣ್ ಅಡೆಕಳಕಟ್ಟೆ, ಪ್ರಶಾಂತ್, ರವಿರಾಜ್ ಹಾಗೂ ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

ವಿವಿಧೆಡೆಗಳಲ್ಲಿ ಬಿಎಂಎಸ್ ಸ್ಥಾಪನಾ ದಿನಾಚರಣೆ

ಕುಂಬಳೆ: ಕುಂಬಳೆಯ ವಿವಿಧ ಘಟಕಗಳಲ್ಲಿ ಬಿಎಂಎಸ್ ಸ್ಥಾಪಕ ದಿನಾಚರಣೆ ಕಾರ್ಯಕ್ರಮ ಜರಗಿತು. ನಾಯ್ಕಾಪು ಶಾಸ್ತಾ ಆಟೋ ನಿಲ್ದಾಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಮಿತಿ ಅಧ್ಯಕ್ಷ ಲೋಹಿತಾಕ್ಷ ಧ್ವಜಾ ರೋಹಣ ಗೈದರು. ಬಿಎಂಎಸ್ ನಿರ್ಮಾಣ ಸಮಿತಿ ಜಿಲ್ಲಾ ಕೋಶಾಧಿ ಕಾರಿ ಐತ್ತಪ್ಪ ನಾರಾಯಣಮಂಗಲ ಮಾಹಿತಿ ನೀಡಿದರು. ಸಾಮಾಜಿಕ ಮುಂದಾಳು ಮುರಳೀಧರ ಯಾದವ್ ಶುಭ ಹಾರೈಸಿದರು. ಭಾಸ್ಕರ ಎನ್. ಸ್ವಾಗತಿಸಿ, ಲಕ್ಷ್ಮಣ ಒ. ವಂದಿಸಿದರು. ಬಿಎಂಎಲ್ ಟೈಲರ್ ಸಮಿತಿ ಕುಂಬಳೆ ಘಟಕದ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಧ್ಯಕ್ಷೆ ನಾಗವೇಣಿ ದಿನೇಶ್ ಧ್ವಜಾರೋಹಣ …

ಬಿಎಂಎಸ್ ಮಂಜೇಶ್ವರ ವಲಯ ಸಮ್ಮೇಳನ: ನೂತನ ಪದಾಧಿಕಾರಿಗಳ ಆಯ್ಕೆ

ಮಂಜೇಶ್ವರ: ಬಿಎಂಎಸ್ ಮಂಜೇಶ್ವರ ವಲಯ ಸಮಿತಿಯ ನೇತೃತ್ವದಲ್ಲಿ ವಲಯ ಸಮ್ಮೇಳನ ಹೊಸಂಗಡಿ ಯೂನಿಟ್ ಸಭಾಂ ಗಣದಲ್ಲಿ ಜರಗಿತು. ವಲಯಾಧ್ಯಕ್ಷ ರವಿ ಎಂ.ಕೆ. ಕೋಳ್ಯೂರುರವರ ಅಧ್ಯಕ್ಷತೆಯಲ್ಲಿ ನಡೆದ ಸಮ್ಮೇಳನವನ್ನು ಬಿಎಂಎಸ್ ಜಿಲ್ಲಾಧ್ಯಕ್ಷ ಉಪೇಂದ್ರನ್ ಕೋಟೆಕಣಿ ಉದ್ಘಾಟಿಸಿ ಮಾತನಾಡಿ, ನೀಟ್ ಪರೀಕ್ಷಾ ಪೇಪರ್ ಸೋರಿಕೆ ಹಾಗೂ ಅದಕ್ಕೆ ಕಾರಣರಾದವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಇದೇ ವೇಳೆ ಪರೀಕ್ಷಾ ಸೋರಿಕೆಯ ನೆಪದಲ್ಲಿ ಪಾರ್ಲಿಮೆಂಟ್ ಸೇರಿದಂತೆ ವಿವಿಧೆಡೆ ನಡೆಯುತ್ತಿರುವ ಪ್ರತಿಭಟನೆಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದರು. ಈ ವಿಷಯವನ್ನು ಮುಂದಿಟ್ಟುಕೊAಡು …