ಕಾಸರಗೋಡು: ಕಾಸರಗೋಡು ರೈಲ್ವೇ ನಿಲ್ದಾಣದಿಂದ ಪಾರ್ಸಲ್ ಸೇವೆಯನ್ನು ಸ್ಥಗಿತಗೊಳಿಸುವ ದಕ್ಷಿಣ ರೈಲ್ವೆಯ ನಿರ್ಧಾರವನ್ನು ಹಿಂಪಡೆಯಬೇ ಕೆಂದು ಆಗ್ರಹಿಸಿ ಕೇಂದ್ರ ರೈಲ್ವೇ ಸಚಿವರಿಗೆ ಮನವಿ ಸಲ್ಲಿಸಲಾಗುವುದು. ಅಲ್ಲದೆ ಈ ವಿಷಯವನ್ನು ಖುದ್ದಾಗಿ ಭೇಟಿಯಾಗಿ ಮಂಡಿಸಲಾಗುವುದೆಂದು ಬಿಜೆಪಿ ಜಿಲ್ಲಾ ಧ್ಯಕ್ಷೆ ಎಂ.ಎಲ್. ಅಶ್ವಿನಿ ತಿಳಿಸಿದ್ದಾರೆ. ಕಾಸರಗೋಡು ರೈಲ್ವೇ ನಿಲ್ದಾಣದಲ್ಲಿ ಪಾರ್ಸಲ್ ಸೇವೆಯನ್ನು ಸ್ಥಗಿತಗೊಳಿಸಿದರೆ ಜಿಲ್ಲೆಯ ವಾಣಿಜ್ಯ ಕ್ಷೇತ್ರಕ್ಕೆ ದೊಡ್ಡ ಹೊಡೆತ ಬೀಳಲಿದೆ. ಸಣ್ಣ ಮತ್ತು ಮಧ್ಯಮ ಪ್ರಮಾಣದ ವ್ಯಾಪಾರಿಗಳು ಹಾಗೂ ವಿವಿಧ ವಾಣಿಜ್ಯ ಸಂಸ್ಥೆಗಳು ಸರಕು ಸಾಗಾಟಕ್ಕೆ ರೈಲ್ವೇ ಪಾರ್ಸಲ್ ಸೇವೆಯನ್ನೇ ಅವಲಂಭಿಸುತ್ತಿದ್ದು, ಈ ಸೇವೆ ಇಲ್ಲದಂತಾ ದರೆ ವ್ಯಾಪಾರ ವಹಿವಾಟು ಹಾಗೂ ಸಾರ್ವಜನಿಕರ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ಅಶ್ವಿನಿ ತಿಳಿಸಿದ್ದಾರೆ. ಜಿಲ್ಲೆಯ ಅಭಿವೃದ್ಧಿ ಮತ್ತು ವಾಣಿಜ್ಯ ಹಿತಾಸಕ್ತಿಗೆ ನಿರ್ಣಾಯಕವಾಗಿರುವ ಈ ವಿಷಯದಲ್ಲಿ ಬಿಜೆಪಿ ಮಧ್ಯ ಪ್ರವೇಶಿಸಲಿದ್ದು, ಪಾರ್ಸಲ್ ಸೇವೆ ಮುಂದುವರಿಯುವಂತೆ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವು ದೆಂದೂ ಎಂ.ಎಲ್. ಅಶ್ವಿನಿ ತಿಳಿಸಿದ್ದಾರೆ.ಸಮಸ್ತ ಕೇರಳ





