ಜಂಬೋ ಸರ್ಕಸ್: ನಗರದಲ್ಲಿ  ಪ್ರದರ್ಶನ ಆಗಸ್ಟ್ 3ರಂದು ಕೊನೆ

ಕಾಸರಗೋಡು: ವಿಸ್ಮಯ ಸೃಷ್ಟಿಸಿ ಪ್ರದರ್ಶನ ಮುಂದುವರಿಯುತ್ತಿರುವ ಭಾರತದ ಅತ್ಯಂತ ದೊಡ್ಡ ಜಂಬೋ ಸರ್ಕಸ್ ಇನ್ನು ಕೆಲವೇ ದಿನಗಳಲ್ಲಿ ಕಾಸರಗೋಡು ನಗರದ ಪ್ರದರ್ಶನ ಕೊನೆಗೊಳಿಸಲಿದೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ. ಸುಮಾರು ಒಂದು ತಿಂಗಳಿನಿಂದ ನುಳ್ಳಿಪ್ಪಾಡಿ ಶ್ರೀ ಅಯ್ಯಪ್ಪ ದೇವಸ್ಥಾನದ ಬಳಿಯಲ್ಲಿ ದಿನಕ್ಕೆ ಮೂರು ಪ್ರದರ್ಶನ ನೀಡುತ್ತಿರುವ ಜಂಬೋ ಸರ್ಕಸ್‌ಗೆ ಈಗಾಗಲೇ ಜಿಲ್ಲೆಯ ವಿವಿಧ ಕಡೆಗಳಿಂದ ಜನ ತಲುಪಿ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 2 ಗಂಟೆಗಳ ಕಾಲದ ಪ್ರದರ್ಶನದಲ್ಲಿ ೩೦ಕ್ಕೂ ಹೆಚ್ಚು ವಿಸ್ಮಯ ಅಭ್ಯಾಸಗಳು ಇರುತ್ತದೆ. ಟಾನ್ಸಾನಿಯ, ಎಥಿಯೋಪಿಯ ಮೊದಲಾದ …

ಶ್ರೀ ಕಾಳಹಸ್ತೇಂದ್ರ ಸರಸ್ವತೀ ಸ್ವಾಮೀಜಿಯವರ  ಚಾತುರ್ಮಾಸ್ಯ ವ್ರತ ಆರಂಭ

ಕಟಪಾಡಿ: ಗುರುವಿನ ಅನುಗ್ರ ಹವೇ ಬದುಕಿನ ಹುಣ್ಣಿಮೆ, ಗುರುವಿನ ಅನುಗ್ರಹವಿಲ್ಲದ ಬದುಕು ಅಮಾವಾಸ್ಯೆ. ಬದುಕಿನಲ್ಲಿ ಸುಖ, ಶಾಂತಿ ಮತ್ತು ಆತ್ಮಾನಂದವನ್ನು ಪಡೆಯಲು ಪ್ರತಿ ಯೊಬ್ಬರಿಗೂ ಗುರುವಿನ ಅನುಗ್ರಹ ಹಾಗೂ ಸಾನ್ನಿಧ್ಯ ಅಗತ್ಯವಾಗಿದೆ ಎಂದು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ, ಕಟಪಾಡಿ-ಪಡುಕುತ್ಯಾರು ಪೀಠಾಧಿಪತಿ ಜಗದ್ಗುರು ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಸ್ವಾಮೀಜಿ ಆಶೀರ್ವಚನ ನೀಡಿದರು. ಪಡುಕುತ್ಯಾರಿನ ಶ್ರೀಮಠ ದಲ್ಲಿ ಬುಧವಾರ ಆರಂಭಗೊAಡ ೨೨ನೇ ಚಾತುರ್ಮಾಸ್ಯ ವ್ರತಾಚರಣೆಯ ಮೊದಲ ದಿನ ನಡೆದ ಧಾರ್ಮಿಕ ಸಭೆಯಲ್ಲಿ ಪ್ರತಿಷ್ಠಾನದ ಅಧ್ಯಕ್ಷ ವಡೇರಹೋಬಳಿ ಶ್ರೀಧರ …

ಕೊಂಡೆವೂರು ಮಠದಲ್ಲಿ ಗುರುಪೂರ್ಣಿಮೆ :ಶ್ರೀಗಳ ಚಾತುರ್ಮಾಸ್ಯ ಆರಂಭ

ಉಪ್ಪಳ: ಕೊಂಡೆವೂರು ಮಠ ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ಗುರುಪೂರ್ಣಿಮೆಯಂದು 23ನೇ ವರ್ಷದ ಚಾತುರ್ಮಾಸ್ಯ ವ್ರತ ಸಂಕಲ್ಪವನ್ನು ವಿವಿಧ ವೈದಿಕ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಕೈಗೊಂಡರು. ಶ್ರೀ ಮಠದಲ್ಲಿ ಗಣಹೋಮ, ಭಗವಾನ್ ಶ್ರೀ ನಿತ್ಯಾನಂದ ಗುರುದೇವರಿಗೆ ಪಂಚಾಮೃತ ಸಹಿತ 108 ಸೀಯಾಳಾಭಿಷೇಕ, ವ್ಯಾಸ ಪೂಜೆ, ಕ್ಷೇತ್ರದಲ್ಲಿ ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು. ಸಾಯಂಕಾಲ 6.30ಕ್ಕೆ ಕ್ಷೇತ್ರದಲ್ಲಿ ಮಹಾಪೂಜೆಯಾದ ನಂತರ ಶ್ರೀ ಗಾಯತ್ರಿ ಮಂಟಪದಲ್ಲಿ ಶ್ರೀ ಗುರುಪಾದುಕಾ ಪೂಜೆ ನಡೆಯಿತು.

ನಗರದ ಮೇಲ್ಸೇತುವೆಯ ಕೆಳಗೆ  ತ್ಯಾಜ್ಯ ಎಸೆದು ಪರಿಸರ ಮಾಲಿನ್ಯ ಸೃಷ್ಟಿಗೆ ಯತ್ನ

ಕಾಸರಗೋಡು:  ಕೋಟ್ಯಂತರ ರೂಪಾಯಿ ಖರ್ಚುಮಾಡಿ ನಿರ್ಮಿಸಿದ ರಾಷ್ಟ್ರೀಯ ಹೆದ್ದಾರಿ ಮೇಲ್ಸೇತುವೆಯ ಅಡಿಯಲ್ಲಿ ತ್ಯಾಜ್ಯ ಎಸೆದು ಪರಿಸರ ಮಾಲಿನ್ಯ ಸೃಷ್ಟಿಸಲು ಕೆಲವರು ಪ್ರಯತ್ನಿಸುತ್ತಿದ್ದಾರೆ.  ಕಾಸರಗೋಡು ನಗರದ ಹೊಸ ಬಸ್ ನಿಲ್ದಾಣ  ಸಮೀಪ ಮೇಲ್ಸೇತುವೆ ಅಡಿಯಲ್ಲಿ ಮೊಟ್ಟೆಯ ಚಿಪ್ಪುಗಳು, ಉಪಯೋಗಶೂನ್ಯ ಅನಾನಸು, ಕೊಳೆತ ನಿಂಬೆಹಣ್ಣು, ಪ್ಲಾಸ್ಟಿಕ್  ಸಹಿತ ವಿವಿಧ ತ್ಯಾಜ್ಯಗಳನ್ನು ಎಸೆದಿರುವುದು ಪತ್ತೆಯಾಗಿದೆ.  ನಗರದ ವಿವಿಧೆಡೆ ದುರ್ನಾತದಿಂದ ಸಂಚರಿಸಲಾಗದ ಸ್ಥಿತಿ ಸೃಷ್ಟಿಯಾಗಿದೆಯೆಂಬ ಆರೋಪ ಕೇಳಿಬರುತ್ತಿರುವಾಗಲೇ ಸ್ಪಲ್ಪವಾ ದರೂ ಶುಚಿಯಾಗಿ ಕಾಣುತ್ತಿದ್ದ ರಾಷ್ಟ್ರೀಯ ಹೆದ್ದಾರಿ ಮೇಲ್ಸೇತುವೆಯ ಅಡಿಭಾಗದಲ್ಲಿ ತ್ಯಾಜ್ಯ ಎಸೆದು ಈ …

ಬಾಯಿಕಟ್ಟೆ- ಕೋರಿಕ್ಕಾರ್ ಪೆಗ್ಗಕಟ್ಟೆ ರಸ್ತೆ ಶೋಚನೀಯ: ವಾಹನ ಸಂಚಾರ ದುಸ್ತರ

ಪೈವಳಿಕೆ: ಪೈವಳಿಕೆ ಪಂಚಾ ಯತ್‌ನ 21ನೇ ವಾರ್ಡ್ನ ಬಾಯಿಕ್ಕಟ್ಟೆ-ಕೊರಿಕ್ಕಾರ್ ಪೆಗ್ಗಕಟ್ಟೆ ರಸ್ತೆ ಅತ್ಯಂತ ಶೋಚನೀಯÁ ವಸ್ಥೆಯಲ್ಲಿದೆ. ವಾಹನ ಸಂಚಾರ ಮಾತ್ರವಲ್ಲದೆ ವಿದ್ಯಾರ್ಥಿಗಳ ಸಹಿತ ಸಾರ್ವಜನಿಕರು ಕಾಲ್ನಡಿಗೆಯಲ್ಲಿ ಸಂಚರಿಸಲು ಕೂಡಾ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಕಳೆದ ವರ್ಷ ಈ ರಸ್ತೆಯ ಮರು ಡಾಮರೀಕರಣಕ್ಕೆ ಹಣ ಮಂಜೂರು ಮಾಡಲಾಗಿದ್ದರೂ, ಪಂಚಾಯತ್ ಚುನಾವಣೆ ಹಾಗೂ ವಿಧಾನಸಭೆ ಚುನಾವಣೆಯ ಕಾರಣದಿಂದ ಕಾಮಗಾರಿಗೆ ಅಡಚಣೆ ಉಂಟಾಗಿತ್ತೆನ್ನಲಾಗಿದೆ. ಪೈವಳಿಕೆ ಮತ್ತು ಮೀಂಜ ಪಂಚಾಯತ್‌ಗಳನ್ನು ಸಂಪರ್ಕಿಸುವ ಪ್ರಮುಖ ರಸ್ತೆ ಇದಾಗಿದ್ದು, ಸುಮಾರು ೫೦ರಷ್ಟು ಮನೆಗಳ ನಿವಾಸಿಗಳು ಈ …