ನಗರದ ಮೇಲ್ಸೇತುವೆಯ ಕೆಳಗೆ  ತ್ಯಾಜ್ಯ ಎಸೆದು ಪರಿಸರ ಮಾಲಿನ್ಯ ಸೃಷ್ಟಿಗೆ ಯತ್ನ

ಕಾಸರಗೋಡು:  ಕೋಟ್ಯಂತರ ರೂಪಾಯಿ ಖರ್ಚುಮಾಡಿ ನಿರ್ಮಿಸಿದ ರಾಷ್ಟ್ರೀಯ ಹೆದ್ದಾರಿ ಮೇಲ್ಸೇತುವೆಯ ಅಡಿಯಲ್ಲಿ ತ್ಯಾಜ್ಯ ಎಸೆದು ಪರಿಸರ ಮಾಲಿನ್ಯ ಸೃಷ್ಟಿಸಲು ಕೆಲವರು ಪ್ರಯತ್ನಿಸುತ್ತಿದ್ದಾರೆ.  ಕಾಸರಗೋಡು ನಗರದ ಹೊಸ ಬಸ್ ನಿಲ್ದಾಣ  ಸಮೀಪ ಮೇಲ್ಸೇತುವೆ ಅಡಿಯಲ್ಲಿ ಮೊಟ್ಟೆಯ ಚಿಪ್ಪುಗಳು, ಉಪಯೋಗಶೂನ್ಯ ಅನಾನಸು, ಕೊಳೆತ ನಿಂಬೆಹಣ್ಣು, ಪ್ಲಾಸ್ಟಿಕ್  ಸಹಿತ ವಿವಿಧ ತ್ಯಾಜ್ಯಗಳನ್ನು ಎಸೆದಿರುವುದು ಪತ್ತೆಯಾಗಿದೆ.  ನಗರದ ವಿವಿಧೆಡೆ ದುರ್ನಾತದಿಂದ ಸಂಚರಿಸಲಾಗದ ಸ್ಥಿತಿ ಸೃಷ್ಟಿಯಾಗಿದೆಯೆಂಬ ಆರೋಪ ಕೇಳಿಬರುತ್ತಿರುವಾಗಲೇ ಸ್ಪಲ್ಪವಾ ದರೂ ಶುಚಿಯಾಗಿ ಕಾಣುತ್ತಿದ್ದ ರಾಷ್ಟ್ರೀಯ ಹೆದ್ದಾರಿ ಮೇಲ್ಸೇತುವೆಯ ಅಡಿಭಾಗದಲ್ಲಿ ತ್ಯಾಜ್ಯ ಎಸೆದು ಈ ಪರಿಸರದಲ್ಲಿ ದುರ್ನಾತ ಸೃಷ್ಟಿಸಲು ಯತ್ನ ನಡೆಯುತ್ತಿದೆ. ಈ ತ್ಯಾಜ್ಯವನ್ನು ತಿನ್ನಲು ಬೀದಿ ನಾಯಿಗಳು ಕೂಡಾ ತಲುಪಲು ಸಾಧ್ಯತೆಯಿದ್ದು ಹಾಗಾದಲ್ಲಿ ಜನರಿಗೆ ನಡೆದಾಡಲು ಕೂಡಾ ಸಾಧ್ಯವಾಗದ ಸ್ಥಿತಿ ಉಂಟಾಗಲಿದೆಯೆಂದು ಸ್ಥಳೀಯರು ತಿಳಿಸುತ್ತಿದ್ದಾರೆ. ಇಲ್ಲಿ ತ್ಯಾಜ್ಯ ಎಸೆದವರನ್ನು ಪತ್ತೆಹಚ್ಚಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳು ಆಸಕ್ತಿ ವಹಿಸಬೇಕೆಂದು ನಾಗರಿಕರು ಒತ್ತಾಯಿಸುತ್ತಿದ್ದಾರೆ.

RELATED NEWS

You cannot copy contents of this page