ಬಾಯಿಕಟ್ಟೆ- ಕೋರಿಕ್ಕಾರ್ ಪೆಗ್ಗಕಟ್ಟೆ ರಸ್ತೆ ಶೋಚನೀಯ: ವಾಹನ ಸಂಚಾರ ದುಸ್ತರ

ಪೈವಳಿಕೆ: ಪೈವಳಿಕೆ ಪಂಚಾ ಯತ್‌ನ ೨೧ನೇ ವಾರ್ಡ್ನ ಬಾಯಿಕ್ಕಟ್ಟೆ-ಕೊರಿಕ್ಕಾರ್ ಪೆಗ್ಗಕಟ್ಟೆ ರಸ್ತೆ ಅತ್ಯಂತ ಶೋಚನೀಯÁ ವಸ್ಥೆಯಲ್ಲಿದೆ. ವಾಹನ ಸಂಚಾರ ಮಾತ್ರವಲ್ಲದೆ ವಿದ್ಯಾರ್ಥಿಗಳ ಸಹಿತ ಸಾರ್ವಜನಿಕರು ಕಾಲ್ನಡಿಗೆಯಲ್ಲಿ ಸಂಚರಿಸಲು ಕೂಡಾ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಕಳೆದ ವರ್ಷ ಈ ರಸ್ತೆಯ ಮರು ಡಾಮರೀಕರಣಕ್ಕೆ ಹಣ ಮಂಜೂರು ಮಾಡಲಾಗಿದ್ದರೂ, ಪಂಚಾಯತ್ ಚುನಾವಣೆ ಹಾಗೂ ವಿಧಾನಸಭೆ ಚುನಾವಣೆಯ ಕಾರಣದಿಂದ ಕಾಮಗಾರಿಗೆ ಅಡಚಣೆ ಉಂಟಾಗಿತ್ತೆನ್ನಲಾಗಿದೆ. ಪೈವಳಿಕೆ ಮತ್ತು ಮೀಂಜ ಪಂಚಾಯತ್‌ಗಳನ್ನು ಸಂಪರ್ಕಿಸುವ ಪ್ರಮುಖ ರಸ್ತೆ ಇದಾಗಿದ್ದು, ಸುಮಾರು ೫೦ರಷ್ಟು ಮನೆಗಳ ನಿವಾಸಿಗಳು ಈ ರಸ್ತೆಯನ್ನೇ ಅವಲಂಬಿಸಿದ್ದಾರೆ.
ಈ ರಸ್ತೆಗೆ ಮರು ಡಾಮರೀ ಕರಣಗೊಳಿಸಿ ಸುಗಮ ಸಂ ಚಾರಕ್ಕೆ ವ್ಯವಸ್ಥೆ ಮಾಡಿಕೊಡ ಬೇಕೆಂದು ಆಗ್ರಹಿಸಿ ಊರವರು ಪಂಚಾಯತ್ ಅಧಿಕಾರಿಗಳಿಗೆ ಮನವಿ ಈಗಾಗಲೇ ನೀಡಿದ್ದು, ಈ ಭಾರಿಯÁದರೂ ರಸ್ತೆ ದುರಸ್ಥಿಗೆ ಕ್ರಮಗೊಳ್ಳಬೇಕೆಂದು, ಇಲ್ಲದಿದ್ದಲ್ಲಿ ಉಗ್ರ ಹೋರಾಟಕ್ಕೆ ಮುಂದಾಗುವುದಾಗಿ ಊರವರು ತಿಳಿಸಿದ್ದಾರೆ.

You cannot copy contents of this page