ಪೆರುವೋಡಿಯಲ್ಲಿ ಮರ ಬಿದ್ದು ವಾಹನ ಸಂಚಾರಕ್ಕೆ ತಡೆ

ಬಾಯಾರು: ಭಾರೀ ಮಳೆಗೆ ಮುಳಿಗದ್ದೆ ಬಳ್ಳೂರು ರಸ್ತೆಯ ಪೆರ್ವೋಡಿಯಲ್ಲಿ ರಸ್ತೆ ಬದಿಯಲ್ಲಿದ್ದ ಬೃಹತ್ ಮರ ಮುರಿದು ರಸ್ತೆಗೆ ಬಿದ್ದ ಘಟನೆ ನಿನ್ನೆ ಬೆಳಿಗ್ಗೆ ನಡೆದಿದೆ.ಇದರಿಂದ ಅಲ್ಪ ಹೊತ್ತು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಬಳಿಕ ಪಂಚಾಯತ್ ಸದಸ್ಯ ರಾಮಕೃಷ್ಣ ಬಲ್ಲಾಳ್, ಅಶೋಕ, ಗಣೇಶ, ಶಕೀರ್, ಹರಿಪ್ರಸಾದ್, ಶೀನ ತಲುಪಿ ಮರವನ್ನು ತೆರವುಗೊಳಿಸಿದರು. ಬಳಿಕ ವಾಹನ ಸಂಚಾರ ಆರಂಭಿಸಿತು.

ಕನ್ನಡ ಪತ್ರಕರ್ತರ ಕುಟುಂಬ ಮಿಲನ ‘ಸ್ನೇಹತರಂಗ’ 16ರಂದು

ಕಾಸರಗೋಡು: ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆ.ಯು.ಡಬ್ಲ್ಯೂ.ಜೆ.) ಜಿಲ್ಲಾ ಘಟಕದ ಜಂಟಿ ಆಶ್ರಯದಲ್ಲಿ ‘ಸ್ನೇಹ ತರಂಗ’ ಪತ್ರಕರ್ತರ ಕುಟುಂಬ ಮಿಲನ ಕಾರ್ಯಕ್ರಮ ಆ.೧೬ರಂದು ಬೆಳಗ್ಗೆ 9.30ರಿಂದ ಕಾಸರಗೋಡು ಹೊಸ ಬಸ್ ನಿಲ್ದಾಣದ ಬಳಿಯ ಕಾಸರಗೋಡು ಸೇವಾ ಸಹಕಾರಿ ಬ್ಯಾಂಕ್ ಹಾಲ್‌ನಲ್ಲಿ ನಡೆಯಲಿದೆ.ಹಿರಿಯ ಪತ್ರಕರ್ತ, ಕನ್ನಡಪರ ಹೋರಾಟಗಾರ ಅಶೋಕ ಯಂಕಪ್ಪ ಚಂದರಗಿ ಬೆಳಗಾವಿ ಉದ್ಘಾಟಿಸುವರು. ಶಾಸಕ ಕಲ್ಲಟ್ರ ಮಾಹಿನ್ ಹಾಜಿ, ಧಾರ್ಮಿಕ ಮುಂದಾಳು ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು, ಗಡಿನಾಡ …

ಓಣಂ: ಬೆಲೆ ಏರಿಕೆ ನಿಯಂತ್ರಿಸಲು ಸಾರ್ವಜನಿಕ ವಿತರಣಾ ಕೇಂದ್ರಗಳ ಮೂಲಕ 1.65 ಲಕ್ಷ ಮೆಟ್ರಿಕ್ ಟನ್ ಅಕ್ಕಿ ವಿತರಣೆ-ಸಚಿವ

ಕಾಸರಗೋಡು: ಓಣಂ ಹಬ್ಬದ  ವೇಳೆ ತೆರೆದ ಮಾರುಕಟ್ಟೆಗಳಲ್ಲಿ ಅಕ್ಕಿ ಬೆಲೆ ಏರಿಕೆಯನ್ನು ನಿಯಂತ್ರಿಸಲು ಸಾರ್ವಜನಿಕ ವಿತರಣಾ ಕೇಂದ್ರಗಳ ಮೂಲಕ 1.65 ಲಕ್ಷ ಮೆಟ್ರಿಕ್ ಟನ್ ಅಕ್ಕಿ ವಿತರಿಸಲಾಗುವುದೆಂದು ರಾಜ್ಯ ಆಹಾರ-ಸಾರ್ವಜನಿಕ ಸರಬರಾಜು ಖಾತೆ ಸಚಿವ ಅನೂಪ್ ಜೇಕಬ್ ತಿಳಿಸಿದ್ದಾರೆ. ಗೋತ್ರ ವಿಭಾಗ ಉನ್ನತಿ ಯೋಜನೆಯಂತೆ ರೇಶನ್ ಸಾಮಗ್ರಿಗಳನ್ನು ಗೋತ್ರ ವಿಭಾಗದವರ ಮನೆಗಳಿಗೆ ನೇರವಾಗಿ ತಲುಪಿಸಲು ಆಂಭಿಸಲಾದ ‘ಸಂಚರಿಸುವ ರೇಶನ್‌ಅಂಗಡಿ’ ಇದರ ರಾಜ್ಯಮಟ್ಟದ ಉದ್ಘಾಟನೆಯನ್ನು ವೆಳ್ಳರಿಕುಂಡ್‌ನಲ್ಲಿ ನಿನ್ನೆ ನಿರ್ವಹಿಸಿ ಸಚಿವರು ಮಾತನಾಡುತ್ತಿದ್ದರು. ಆದ್ಯತಾ ರೇಶನ್ ಕಾರ್ಡ್‌ಗಳ ವಿತರಣೆಗೆ ರಾಜ್ಯ …

ಯುವಮೋರ್ಚಾ ಕಾರ್ಯಕರ್ತರಿಂದ ಕಲೆಕ್ಟ್ರೇಟ್ ಮಾರ್ಚ್:ಪಿಣರಾಯಿ ಸತೀಶನ್ ಸರ್ವೀಸ್ ಕಮಿಶನ್ ಆಗಿ ಪಿಎಸ್‌ಸಿ ಅಧಃಪತನ- ವರುಣ್ ಪ್ರಸಾದ್

ಕಾಸರಗೋಡು: ಉದ್ಯೋಗ ಅರಸುತ್ತಿರುವ ಯುವಕರನ್ನು, ಪಿಎಸ್‌ಸಿ ರ‍್ಯಾಂಕ್ ವಿಜೇತರನ್ನು ವಂಚಿಸುವ ವಿಷಯದಲ್ಲಿ ವಿ.ಡಿ. ಸತೀಶನ್ ಸರಕಾರ, ಪಿಣರಾಯಿ ಸರಕಾರದ ಹಾದಿಯಲ್ಲೇ ಸಾಗುತ್ತಿದೆ ಎಂದು ಪಿಎಸ್‌ಸಿ ಎಂದರೆ ಈಗ ‘ಪಿಣರಾಯಿ ಸತೀಶನ್ ಸರ್ವೀಸ್ ಕಮಿಶನ್’ ಆಗಿ ಬದಲಾಗಿದೆ ಎಂದು ಯುವಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ವರುಣ್ ಪ್ರಸಾದ್ ಆರೋಪಿಸಿದರು. ಪಿಎಸ್‌ಸಿ ಅವ್ಯವಹಾರ   ವಿರುದ್ಧ ಯುವಮೋರ್ಚಾ ಕಾಸರಗೋಡು ಜಿಲ್ಲಾ ಸಮಿತಿ ನಡೆಸಿದ ಕಲೆಕ್ಟ್ರೇಟ್ ಮಾರ್ಚ್ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಯೂತ್ ಕಾಂಗ್ರೆಸ್ ರಾಜ್ಯ ಅಧ್ಯಕ್ಷ ಹಾಗೂ ಪ್ರಸ್ತುತ ಯುವಜನಕ್ಷೇಮ ಸಚಿವರಾಗಿ …

ಎಂ.ಎ ಅಬ್ದುಲ್ ಬಶೀರ್ ನಿಧನ

ಕಾಸರಗೋಡು: ಚೆಮ್ನಾಡ್ ಪಂಚಾಯತ್ ಕಚೇರಿಯ ನಿವೃತ್ತ ಹೆಡ್ ಕ್ಲಾರ್ಕ್ ಚೆಮ್ನಾಡ್ ಮಾವಿಲ ರೋಡ್‌ನ ಎಂ.ಎ ಅಬ್ದುಲ್ ಬಶೀರ್ (9೦) ನಿಧನಹೊಂದಿದರು.  ಮಾವಿಲ ರೋಡ್ ಗಫ್‌ಫಾರಿ ಮಸೀದಿಯ ಅಧ್ಯಕ್ಷ, ಲೇಸಿಯತ್ ಮಹಲ್ ಮಸೀದಿಯ ಅಧ್ಯಕ್ಷ, ಚೆಮ್ನಾಡ್ ಜಮಾಅತ್ ಕಮಿಟಿ ಪದಾಧಿಕಾರಿಯಾಗಿದ್ದರು. ಪರವನಡ್ಕ ಆಲಿಯಾ ಅರಬಿಕ್ ಕಾಲೇಜಿನ ಅಕೌಂಟೆಂಟ್ ಆಗಿಯೂ ಕೆಲಸ ನಿರ್ವಹಿಸುತ್ತಿದ್ದರು. ಮೃತರು ಪತ್ನಿ ಎ.ಎಸ್.ಸಾಬಿರ, ಮಕ್ಕಳಾದ ರಜೀನ ಬೀಗಂ, ಖಮರುನ್ನೀಸ, ಸಂಶಾದ್ ಬೀಗಂ, ಅಳಿಯಂದಿರಾದ ಮೂಸ ಕೋಟಿಕುಳಂ, ಅಬ್ದುಲ್ ಹಮೀದ್ ಉದುಮ, ಅಬ್ದುಲ್ ಹಮೀದ್, ಸಹೋದರರಾದ ಎಂ.ಎ.ಮುಹಮ್ಮದಲಿ, …

ಅಚ್ಯುತ ದೇವಾಡಿಗ ನಿಧನ

ಉಪ್ಪಳ: ಬಾಯಾರು ಸುದೆಂಬಳ ನಿವಾಸಿ ಅಚ್ಯುತ ದೇವಾಡಿಗ (85) ನಿನ್ನೆ ಸಂಜೆ ಸ್ವ-ಗೃಹದಲ್ಲಿ ನಿಧನ ಹೊಂದಿದರು. ಇವರು ಈ ಹಿಂದೆ ಕಲ್ಲುಕಟ್ಟುವ ಮೇಸ್ತ್ರಿ ಕೆಲಸ ನಿರ್ವಹಿಸುತ್ತಿದ್ದರು.  ಮೃತರು ಪತ್ನಿ ಸುಲೋಚನ, ಮಕ್ಕಳಾದ ಯಶವಂತಿ, ರಂಜನ್, ಪ್ರಮೋದ್, ಅಳಿಯ ಮೋಹನ್, ಸೊಸೆ ಮಲ್ಲಿಕ, ಸಹೋದರಿಯರಾದ ಲೀಲ, ಸುಶೀಲ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.