ಕಾಸರಗೋಡು: ಓಣಂ ಹಬ್ಬದ ವೇಳೆ ತೆರೆದ ಮಾರುಕಟ್ಟೆಗಳಲ್ಲಿ ಅಕ್ಕಿ ಬೆಲೆ ಏರಿಕೆಯನ್ನು ನಿಯಂತ್ರಿಸಲು ಸಾರ್ವಜನಿಕ ವಿತರಣಾ ಕೇಂದ್ರಗಳ ಮೂಲಕ 1.65 ಲಕ್ಷ ಮೆಟ್ರಿಕ್ ಟನ್ ಅಕ್ಕಿ ವಿತರಿಸಲಾಗುವುದೆಂದು ರಾಜ್ಯ ಆಹಾರ-ಸಾರ್ವಜನಿಕ ಸರಬರಾಜು ಖಾತೆ ಸಚಿವ ಅನೂಪ್ ಜೇಕಬ್ ತಿಳಿಸಿದ್ದಾರೆ. ಗೋತ್ರ ವಿಭಾಗ ಉನ್ನತಿ ಯೋಜನೆಯಂತೆ ರೇಶನ್ ಸಾಮಗ್ರಿಗಳನ್ನು ಗೋತ್ರ ವಿಭಾಗದವರ ಮನೆಗಳಿಗೆ ನೇರವಾಗಿ ತಲುಪಿಸಲು ಆಂಭಿಸಲಾದ ‘ಸಂಚರಿಸುವ ರೇಶನ್‌ಅಂಗಡಿ’ ಇದರ ರಾಜ್ಯಮಟ್ಟದ ಉದ್ಘಾಟನೆಯನ್ನು ವೆಳ್ಳರಿಕುಂಡ್‌ನಲ್ಲಿ ನಿನ್ನೆ ನಿರ್ವಹಿಸಿ ಸಚಿವರು ಮಾತನಾಡುತ್ತಿದ್ದರು.
ಆದ್ಯತಾ ರೇಶನ್ ಕಾರ್ಡ್‌ಗಳ ವಿತರಣೆಗೆ ರಾಜ್ಯ ಸರಕಾರದ ಮೊದಲ ಪರಿಗಣನೆ ನೀಡುತ್ತಿದೆ. ನೂರು ದಿನಗಳ ಯೋಜನೆಯಲ್ಲಿ ಒಳಪಡಿಸಿ ರಾಜ್ಯದ 5೦,೦೦೦ ದಷ್ಟು ಕುಟುಂಬಗಳಿಗೆ ಹೊಸದಾಗಿ ಆದ್ಯತಾ ವಿಭಾಗಕ್ಕೆ ರೇಶನ್ ಕಾರ್ಡ್‌ಗಳನ್ನು ವಿತರಿಸಲು ತೀರ್ಮಾನಿಸಲಾಗಿತ್ತು. ಆದರೆ ಈಗ ಅದಕ್ಕಿಂತಲೂ ಹೆಚ್ಚು ೭೩,೦೦೦ ರೇಶನ್ ಕಾರ್ಡ್‌ಗಳನ್ನು ವಿತರಿಸಲಾಗಿದೆ. ರೇಶನ್ ಅಂಗಡಿಗಳ ಇ-ಪೋಸ್ ಮೆಶಿನ್‌ನ್ನು ಇಲೆಕ್ಟ್ರೋನಿಕ್ ವೈಯಿಂಗ್ ಮೆಶಿನ್‌ಗಳೊಂದಿಗೆ ಶೀಘ್ರ ಜೋಡಣೆ ನಡೆಸಲಾಗುವುದು. ಓಣಂ ಸಮಯದಲ್ಲಿ ಜನರಿಗೆ ಅಗತ್ಯದ ಸಾಮಗ್ರಿಗಳನ್ನು ಸಬ್ಸಿಡಿ ದರದಲ್ಲಿ ಲಭಿಸುವಂತೆ ಮಾಡಲು ೨೫೩ ಕೋಟಿ ರೂ. ವನ್ನು ಸಪ್ಲೈಕೋಗೆ ನೀಡಲಾಗಿದೆ. ರಾಜ್ಯದಲ್ಲಿ ಸಾರ್ವಜನಿಕ ವಿತರಣಾ ವಲಯ ಆರ್ಥಿಕ ಸಂಕಷ್ಟದಲ್ಲಿ ಮುಂದುವರಿ ಯುತ್ತಿದ್ದರೂ, ಅತೀವ ಜಾಗ್ರತೆಯೊಂದಿಗೆ ತೆರೆದ ಮಾರುಕಟ್ಟೆಯಲ್ಲಿ ಬೆಲೆ ನಿಯಂತ್ರಿಸಲು ಸರಕಾರದ ಮಧ್ಯಸ್ಥಿಕೆ ಕ್ರಮ ಮುಂದು ವರಿಸುತ್ತಿದೆಯೆಂದು ಸಚಿವರು ಹೇಳಿದರು.
ಜಿಲ್ಲೆಯಲ್ಲಿ ಎಂಟು ಸಂಚಾರಿ ರೇಶನ್ ಅಂಗಡಿಗಳನ್ನು ಆರಂಭಿಸಲಾಗಿ ದೆಯೆಂದು ಸಚಿವರು ತಿಳಿಸಿದರು. ವೆಳ್ಳರಿಕುಂಡ್ ದರ್ಶನ ಅಡಿಟೋ ರಿಯಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಳಾಲ್ ಪಂಚಾಯತ್ ಅಧ್ಯಕ್ಷೆ ಎ. ಲತ ಅಧ್ಯಕ್ಷತೆ ವಹಿಸಿದರು. ಗೋತ್ರ ವಿಭಾಗದ ನೇತಾರ ಪಿ. ರಾಘವನ್ ರನ್ನು ಇದೇ ಕಾರ್ಯಕ್ರಮದಲ್ಲಿ ಅಭಿನಂದಿ ಸಲಾಯಿತು.
ಫಲಾನುಭವಿ ಆಯೋಗದ ಆಯುಕ್ತ ಕೆ. ಹಿಮ, ರೇಶನ್ ಇನ್‌ಸ್ಪೆಕ್ಟರ್ ಸಿ.ವಿ. ಮೋಹನ್ ಕುಮಾರ್, ಕಳ್ಳಾರು ಪಂಚಾಯತ್ ಅಧ್ಯಕ್ಷೆ ಕೆ. ರಜಿತ ಸೇರಿದಂತೆ ಹಲವರು ಮಾತನಾಡಿದರು.







