ಎಂ.ಎ ಅಬ್ದುಲ್ ಬಶೀರ್ ನಿಧನ

ಕಾಸರಗೋಡು: ಚೆಮ್ನಾಡ್ ಪಂಚಾಯತ್ ಕಚೇರಿಯ ನಿವೃತ್ತ ಹೆಡ್ ಕ್ಲಾರ್ಕ್ ಚೆಮ್ನಾಡ್ ಮಾವಿಲ ರೋಡ್‌ನ ಎಂ.ಎ ಅಬ್ದುಲ್ ಬಶೀರ್ (9೦) ನಿಧನಹೊಂದಿದರು.  ಮಾವಿಲ ರೋಡ್ ಗಫ್‌ಫಾರಿ ಮಸೀದಿಯ ಅಧ್ಯಕ್ಷ, ಲೇಸಿಯತ್ ಮಹಲ್ ಮಸೀದಿಯ ಅಧ್ಯಕ್ಷ, ಚೆಮ್ನಾಡ್ ಜಮಾಅತ್ ಕಮಿಟಿ ಪದಾಧಿಕಾರಿಯಾಗಿದ್ದರು. ಪರವನಡ್ಕ ಆಲಿಯಾ ಅರಬಿಕ್ ಕಾಲೇಜಿನ ಅಕೌಂಟೆಂಟ್ ಆಗಿಯೂ ಕೆಲಸ ನಿರ್ವಹಿಸುತ್ತಿದ್ದರು. ಮೃತರು ಪತ್ನಿ ಎ.ಎಸ್.ಸಾಬಿರ, ಮಕ್ಕಳಾದ ರಜೀನ ಬೀಗಂ, ಖಮರುನ್ನೀಸ, ಸಂಶಾದ್ ಬೀಗಂ, ಅಳಿಯಂದಿರಾದ ಮೂಸ ಕೋಟಿಕುಳಂ, ಅಬ್ದುಲ್ ಹಮೀದ್ ಉದುಮ, ಅಬ್ದುಲ್ ಹಮೀದ್, ಸಹೋದರರಾದ ಎಂ.ಎ.ಮುಹಮ್ಮದಲಿ, ಎಂ.ಎ. ಖಾಲಿದ್, ಎಂ.ಎ. ರಹೀಂ, ಎಂ.ಎ.ಸತ್ತಾರ್,ಸಹೋದರಿ ಬೀಫಾತಿಮ ಚೆಂಗಳ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page